Link copied!
Sign in / Sign up
12
Shares

ಸಂಜೆಯವೇಳೆ ನಿಮ್ಮ ಕಂದಮ್ಮಗಳು ಏಕೆ ಅಳುತ್ತವೆ?

ಮಕ್ಕಳು ಸದಾಕಾಲ ನಗುತ್ತಿದ್ದರೆ ಚೆಂದ. ಆದರೆ ಕೆಲವೊಂದು ಬಾರಿ, ಮಕ್ಕಳು ಅಳಲಾರಂಭಿಸಿದರೆ, ಪೋಷಕರು ಮಗುವಿನ ಅಳುವಿನ ಕಾರಣವನ್ನು ಹುಡುಕದೆ, ಕೇವಲ ಮಗುವಿನ ಅಳುವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಸಂಜೆಯ  ವೇಳೆ ಸಾಮಾನ್ಯವಾಗಿ ಮಕ್ಕಳು ಅಳಲಾರಂಭಿಸುತ್ತಾರೆ. ಆದರೆ ಮಗುವಿಗೆ ಕೆಟ್ಟ ದೃಷ್ಟಿ ತಾಕಿದೆ ಎಂದು ತಾಯಂದಿರು ದೃಷ್ಟಿ ತೆಗೆಯುತ್ತಾರೆ. ಮಗುವಿಗೆ ಪ್ರತಿ ದಿನವೂ ಹೊಸ ದಿನ, ಏನಾದರು ಹೊಸತನ್ನು ನೋಡುತ್ತದೆ ಅಥವಾ ಗ್ರಹಿಸುತ್ತಿರುತ್ತದೆ.

ಕೆಲವೊಂದು ಬಾರಿ ನೋವಿನಿಂದ, ಮತ್ತೆ ಕೆಲವು ಬಾರಿ ಹಸಿವಿನಿಂದ ಅಳುವ ಸಾಧ್ಯತೆಗಳಿವೆ. ಹೀಗೆ ಪ್ರತಿನಿತ್ಯ ಸಂಜೆಯ ವೇಳೆ ಮಗುವು ಏಕೆ ಅಳುತ್ತದೆ ಎಂಬುದಕ್ಕೆ ಹೆಚ್ಚಿನ ಕಾರಣಗಳೇನೆಂದು ವೈದ್ಯರಿಂದ ತಿಳಿಯೋಣ ಬನ್ನಿ.

೧.ಎಲ್ಲೆಡೆ ತಿರುಗಾಡಲು ಅಳುತ್ತಿರಬಹುದು

ಮಕ್ಕಳೆಂದರೆ ಹಾಗೆ! ಕೂತಲ್ಲಿ ಒಂದು ಕಡೆ ಕೂರದೇ, ಎಲ್ಲವನ್ನು ತಿಳಿಯಬೇಕು ಎಂಬ ಹುಮ್ಮಸ್ಸು. ನಿಮಗೆ ಹೇಗೆ ಒಂದೇ ಜಾಗದಲ್ಲಿ ಕುಳಿತ್ತಿದ್ದರೆ , ಬೇಸರವೆನಿಸುತ್ತದೆಯೋ ಹಾಗೆಯೇ ಮಕ್ಕಳಿಗೂ ಸಹ ಒಂದೇ ಜಾಗ ಬೇಸರವೆನಿಸುತ್ತದೆ. ಆದ್ದರಿಂದ ಮಕ್ಕಳಿಗೆ ಪ್ರತಿದಿನ ಸಂಜೆ ವಾಯುವಿಹಾರಕ್ಕೋ ಅಥವಾ ಮನೆಯ ಹೊರಗೆ ಆಟವಾಡಲೋ ಕರೆದುಕೊಂಡು ಹೋಗಿ. ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳಿಗೆ ಹೊಸ ಹೊಸ ಅನುಭವವಾಗಿ, ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

೨.ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬಂದಾಗ

ದಿನನಿತ್ಯದ ಅಭ್ಯಾಸಗಳ್ಳಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದರೂ, ಮಕ್ಕಳ ಮನಸ್ಸಿನ್ನಲ್ಲಿ ಬದಲಾವಣೆಗಳು ಕಂಡುಬರುತ್ತದೆ. ಉದಾ: ಮಗುವನ್ನು ಪ್ರತಿದಿನ ಸಂಜೆ ಹೊರಗೆ ಕರೆದುಕೊಂಡು ಹೋಗುವ ಅಭ್ಯಾಸವನ್ನು ಹೊಂದಿದ್ದರೆ, ಅದನ್ನು  ಮರೆಯದೆ ಪಾಲಿಸಿ. ಕೆಲವೊಂದು ಬಾರಿ ಕೆಲಸದ ಒತ್ತಡ ಅಥವಾ ಮಳೆ ಬರುತ್ತಿದ್ದರೆ ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯಿರಿ. ಆದರೆ ದೈನಂದಿನ ಚಟುವಟಿಕೆ ಅಥವಾ ಅಭ್ಯಾಸದ್ದಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗದ  ಹಾಗೆ ನೋಡಿಕೊಳ್ಳಿ.

೩.ಹೊಟ್ಟೆ ಹಸಿದಿರಬಹುದು

ಸಾಮಾನ್ಯವಾಗಿ ಮಕ್ಕಳಿಗೆ ಹೊಟ್ಟೆ ಹಸಿವಾದಾಗ ಸಾಯಂಕಾಲ ಅಳುತ್ತವೆ ಹಾಗು ಕೊಪೋದ್ರೇಕಗೊಳ್ಳುತ್ತವೆ. ಹೀಗಾಗದಂತೆ ನೋಡಿಕೊಳ್ಳಬೇಕಾದರೆ, ಮಗುವಿಗೆ ಸಮಯಕ್ಕೆ ಸರಿಯಾಗಿ ಸ್ತನಪಾನ ಮಾಡುವುದನ್ನು ಮರೆಯಬೇಡಿ. ಇದರೊಂದಿಗೆ ಪೋಷಕಾಂಶಯುಕ್ತ ಆಹಾರಗಳು, ಹಣ್ಣು ಹಂಪಲುಗಳ್ಳನ್ನು ನೀಡಿ.

೪.ಶಾರೀರಿಕ ಖಾಯಿಲೆಯಿಂದಾಗಿ

ಆಹಾರ, ನಿದ್ರೆ ಎಲ್ಲವು ಸರಿಯಾಗಿದ್ದು, ಮಕ್ಕಳು ಅಳಲಾರಂಭಿಸುತ್ತಾರೆ. ಯಾಕೆ ಎಂದು ಕಾರಣ ಹುಡುಕುತ್ತಾ ಹೋದರೆ, ಮಕ್ಕಳಿಗೆ ಅವರ ದೇಹದೊಳಗಾಗುವ ನೋವನ್ನು ಹೇಗೆ ವ್ಯಕ್ತ ಪಡಿಸಬೇಕು ಎಂದು ತಿಳಿಯದೆ ಅಳಲಾರಂಭಿಸಿರುತ್ತಾರೆ. ಹೊಟ್ಟೆ ನೋವು, ಜ್ವರ ಇತ್ಯಾದಿ ಸಮಸ್ಯೆಗಳಿಂದ ಅಳುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳ ಅಳುವಿಗೆ ಕಾರಣ ತಿಳಿಯದೆ ಹೋದರೆ, ಕೂಡಲೇ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ.

೫.ವಾತಾವರಣ ಬದಲಾವಣೆಯಿಂದ

ಹೊರಗಿನ ವಾತಾವರಣದ್ದಲ್ಲಿ ಕೊಂಚ ಬದಲಾವಣೆ ಕಂಡುಬಂದರೂ, ಮಕ್ಕಳ ಆರೋಗ್ಯ ಹಾಗು ಚಟುವಟಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ತೀವ್ರ ಚಳಿ ಅಥವಾ ತೀವ್ರ ಬಿಸಿಲಿನ ಬೇಗೆಯಿಂದ  ಸಹ ಮಕ್ಕಳು ಅಳುತ್ತಾರೆ. ರಾತ್ರಿಯಲ್ಲಿ ಮಲಗಿದ್ದ ವೇಳೆ ಹವಾಮಾನ ಬದಲಾವಣೆಯಾದರು ಸಹ, ಮಕ್ಕಳು ಅಳಲಾರಂಭಿಸುತ್ತಾರೆ.

ಮಗುವನ್ನು ಸಮಾಧಾನ ಮಾಡುವ ವಿಧಾನಗಳು.

೧. ಮಗುವನ್ನು ತನ್ನ ಪಾಡಿಗೆ ತಾನು ಆಟವಾಡಲು ಬಿಡಿ, ಮುಸ್ಸಂಜೆಯ ತಣ್ಣನೆಯ ಗಾಳಿಯನ್ನು ಸೇವಿಸುವಂತೆ ಮಾಡಿ. ಕತ್ತಲಾಗಿದೆ ಎಂದು ಮಗುವನ್ನು ಮನೆಯೊಳಗೂ ಸಹ, ಆಟವಾಡದ ಹಾಗೆ ಕಟ್ಟಿ ಹಾಕಬೇಡಿ.

೨. ಮಗುವನ್ನು ಹೊರಗೆ ಕರೆದುಕೊಂಡು ಹೋಗಲಾಗದ ಸಮಯದ್ದಲ್ಲಿ, ನೀವೇ ಮಗುವಿನೊಂದಿಗೆ ಆಟವಾಡಿ, ಮಕ್ಕಳ್ಳನ್ನು ಹುರಿದುಂಬಿಸಿ.

೩. ಮಗುವಿನ diaper ಒದ್ದೆಯಾಗಿದೆಯೇ ಎಂದು ಆಗಾಗ ಗಮನಿಸಿ. ಇಲ್ಲವಾದಲ್ಲಿ ಮಗುವಿಗೆ ಚರ್ಮದ ದದ್ದುಗಳಾಗುವ ಸಂಭವವಿರುತ್ತದೆ.

೬.ಸಂಜೆಯ ವೇಳೆ ಸ್ಥನಪಾನ ಮಾಡುವುದನ್ನು ಮರೆಯದಿರಿ

ಹಾಗಾಗಿ ಮೇಲೆ ಹೇಳಿದ ಎಲ್ಲಾ ವಿಷಯಗಳ್ಳನ್ನು ಗಮನದ್ದಲ್ಲಿ ಇಟ್ಟುಕೊಂಡರೆ, ನಿಮ್ಮ ಮಗು ಏಕೆ ಅಳುತ್ತಿದೆ ಎಂದು ನಿಮಗೆ ಕ್ಷಣಮಾತ್ರದ್ದಲ್ಲಿ ತಿಳಿಯುತ್ತದೆ. ಹಲವು ಬಾರಿ ಮಗುವಿನ ಅಳು ನೋಡಲಾರದೆ, ತಾಯಂದಿರು ಅಳಲಾರಂಭಿಸುತ್ತಾರೆ. ಹೆಚ್ಚು ಚಿಂತಿಸಬೇಡಿ, ಒಂದೊಂದು ಮಗುವು ವಿಭಿನ್ನ ಹಾಗು ವಿಶಿಷ್ಟ. ಮಕ್ಕಳ ದಿನಚರಿಯನ್ನು ಸರಿಯಾದ ರೀತಿ ಪಾಲಿಸಿದ್ದಲ್ಲಿ, ನಿಮ್ಮ ಮಗು ಸದಾ ಕಾಲ ಹಸನ್ಮುಖಿಯಾಗಿರುತ್ತದೆ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon