Link copied!
Sign in / Sign up
4
Shares

ಈಗಷ್ಟೇ ಹುಟ್ಟಿರುವ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದಕ್ಕೆ 10 ಸಲಹೆಗಳು

ಮಗು ಹುಟ್ಟಿದೆ ಎಂದು ಒಂದು ಕಡೆ ಸಂತೋಷವಾದರೆ, ಮತ್ತೊಂದು ಕಡೆ ಜವಾಬ್ಧಾರಿ ಹೆಚ್ಚಾಯಿತು ಎಂದು ಕೊರಗಬೇಡಿ. ಮಗುವಿನ ಮುದ್ದು ನಗು ನಿಮ್ಮ ಎಲ್ಲಾಆಯಾಸವನ್ನು ಮರೆಸುತ್ತದೆ. ನಿಮ್ಮ ಆರೈಕೆಯ ಜೊತೆಗೆ ಮಗುವಿನ ಪಾಲನೆ ಪೋಷಣೆಯ ಬಗ್ಗೆ ಹೆಚ್ಚು ತಲೆಯನ್ನು  ಕೆಡಿಸಿಕೊಳ್ಳಬೇಡಿ. ಸ್ಮಾರ್ಟ್ ತಾಯಂದಿರಾಗಲು, ನಾವು ನಿಮಗೆ ಸಹಾಯವಾಗುವ ಕೆಲವು ಮಾಹಿತಿಯನ್ನು ಸಿದ್ದ ಪಡಿಸಿದ್ದೇವೆ. ಇದನ್ನು ತಿಳಿಯಲು ಕಾತುರರಾಗಿದ್ದೀರಾ? ಮುಂದೆ ಓದಿ.


೧. ನಿಗದಿತ ಸಮಯಕ್ಕೆ ಹಾಲುಣಿಸಿ

ಮಗುವಿಗೆ ಸರಿಯಾದ ಸಮಯಕ್ಕೆ ಹಾಲುಣಿಸುವ ಅಭ್ಯಾಸವನ್ನು ನೀವು ಮೊದಲಿನಿಂದ ಪಾಲಿಸಿದರೆ ಮಗು ಆ ವೇಳಾಪಟ್ಟಿಗೆ ಹೊಂದಿಕೊಳ್ಳುತ್ತದೆ. ಆದರಿಂದ ಪ್ರತಿನಿತ್ಯ ಒಂದೇ ವೇಳಾಪಟ್ಟಿಗೆ ಅಂಟಿಕೊಳ್ಳಿ. ಇದರಿಂದ ಮಗುವಿನ ಬೆಳವಣಿಗೆಯ ಮೇಲೆ ಆಗುವ ಬದಲಾವಣೆಗಳು, ನಿಮಗೆ ಬೇಗನೆ ತಿಳಿದುಬರುತ್ತದೆ. ತೂಕದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.


೨. ಬೆನ್ನನ್ನು ತಟ್ಟಿ

ನಿಮ್ಮ ಮುದ್ದು ಕಂದಮ್ಮಗಳು ಹಾಲಿನೊಂದಿಗೆ ಗಾಳಿಯನ್ನು ಸೇವಿಸುವುದರಿಂದ, ಮಗುವಿನ ಹೊಟ್ಟೆ ಊದಿಕೊಂಡಂತೆ ಆಗಿ, ಹಾಲು ಜೀರ್ಣವಾಗಲು ತಡವಾಗುತ್ತದೆ. ಆದ್ದರಿಂದ ಹಾಲು ಕುಡಿಸಿದ ನಂತರ ಮಗುವನ್ನು ಹೆಗಲಿನ ಮೇಲೆ ಹಾಕಿ ನಿಧಾನವಾಗಿ ಬೆನ್ನನ್ನು ತಟ್ಟಿ. ಪ್ರತಿಬಾರಿ ಹಾಲು ಕುಡಿಸಿದ ನಂತರ ಹೀಗೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.


೩. ಮಗುವಿನ ತಲೆಯನ್ನು ಸಪೋರ್ಟ್ ಮಾಡಿ

ನಿಮ್ಮ ಪುಟ್ಟ ಕೂಸಿನ ಬೆನ್ನಿನ ಮೂಳೆ, ತಲೆಯನ್ನು ಸಪೋರ್ಟ್ ಮಾಡುವಷ್ಟು ಗಟ್ಟಿಯಾಗಿರುವುದಿಲ್ಲ. ಆದ್ದರಿಂದ ಮಗುವಿಗೆ ಹಾಲುಣಿಸುವಾಗ ಹಾಗು ಮಗುವನ್ನು ಎತ್ತಿಕೊಳ್ಳುವಾಗ ಮಗುವಿನ ತಲೆಯನ್ನು ನಿಮ್ಮ ಮತ್ತೊಂದು ಕೈನಿಂದ ಸಪೋರ್ಟ್ ಮಾಡಿ. ಹೀಗೆ ನೀವು ೬-೭ ತಿಂಗಳುಗಳು ಮಾಡಬೇಕು.


೪. ಅಳುವಿನ ಕಾರಣವನ್ನು ತಿಳಿಯಿರಿ

ಮಗು ಹಸಿವಾದಾಗ ಅಳುತ್ತದೆ, ನಿದ್ರೆ ಬಂದಾಗ ಅಳುತ್ತದೆ, ಜ್ವರ, ಹೊಟ್ಟೆ ನೋವು ಬಂದಾಗ ಸಹ ಅಳುತ್ತದೆ. ಮೊದಲು ನಿಮ್ಮ ಮಗವಿನ ಅಳುವಿನ ಕಾರಣವನ್ನು ತಿಳಿದುಕೊಳ್ಳಬೇಕು. ಊಟದ ಸಮಯ, ನಿದ್ರೆಯ ಸಮಯವನ್ನು ಹೊರತು ಪಡಿಸಿ ಬೇರೆ ಸಮಯದಲ್ಲಿ  ಅತ್ತರೆ, ಅದು ಮಗುವಿಗೆ ತನ್ನ ದೇಹದಲ್ಲಾಗುತ್ತಿರುವ ಹಿಂಸೆಯಿಂದ ಎಂದು ನೀವು ತಿಳಿಯಬೇಕು. ಕೆಲವೊಂದು ಬಾರಿ ಊಟ ಮಾಡಿಸಿದ, ಸ್ವಲ್ಪ ಗಂಟೆಗಳ ನಂತರ ಅತ್ತರೆ, ಅದಕ್ಕೆ ಕಾರಣ ಹೊಟ್ಟೆ ನೋವಾಗಿರುತ್ತದೆ. ಆದ್ದರಿಂದ ಮಗುವಿನ ಅಳುವಿನ ಕಾರಣವನ್ನು ಮೊದಲಿಗೆ ಪತ್ತೆ ಹಚ್ಚಿ.


೫. ಮಗುವನ್ನು ಅಲುಗಾಡಿಸದಿರಿ

ನಿಮ್ಮ ಮನೆಯಲ್ಲಿ ಬೇರೆ ಮಕ್ಕಳಿದ್ದರೆ, ನಿಮ್ಮ ಪುಟ್ಟ ಮಗುವನ್ನು ಅವರಿಂದ ದೂರವಿಡಿ. ಮಕ್ಕಳು ಆಟವಾಡುತ್ತ, ಮಗುವನ್ನು ಅಲುಗಾಡಿಸಿ ಬಿಡುತ್ತಾರೆ. ಹೀಗೆ ಮಾಡಿದರೆ ಮಗುವಿನ ಮೆದುಳಿನಲ್ಲಿ ರಕ್ತ ಸ್ರಾವವಾಗುವ ಸಾಧ್ಯತೆಗಳು ಹೆಚ್ಚು. ಮಗುವನ್ನು ಯಾವುದೇ ಕಾರಣಕ್ಕೂಮೇಲೆ ಎಸೆದು ಹಿಡಿಯುವುದು, ಜೋರಾಗಿ ತಿರಿಗಿಸುವುದು, ಅಲ್ಲಾಡಿಸುವುದನ್ನು ಮಾಡಬೇಡಿ.


೬. ಸ್ನಾನ ಮಾಡಿಸುವಾಗ

ಮಗುವಿನ ಚರ್ಮ ತುಂಬಾ ಸೂಕ್ಶ್ಮ ಹಾಗು ಮೃದುವಾಗಿರುತ್ತದೆ. ಆದ್ದರಿಂದ ಮೃದುವಾದ ಮಗುವಿನ ಸೋಪ್, ಶಂಪೂವನ್ನು ಮಾತ್ರ ಉಪಯೋಗಿಸಿ. ಸ್ನನ್ನ ಮಾಡಿಸುವಾಗ ಜಾಗರೂಕತೆಯಿಂದ ಮಗುವಿಗೆ ಸ್ನಾನ ಮಾಡಿಸಿ, ಕೆಲವೊಮ್ಮೆ ಮಗು ಜಾರುವ ಸಾಧ್ಯತೆಗಳು ಹೆಚ್ಚು. ಸ್ನಾನದ ನಂತರ ಹಾಲುಣಿಸಿ ಮಲಗಿಸಿ.


೭. ಉಗುರುಗಳ್ಳನ್ನು ಕತ್ತರಿಸಿ

ಮಕ್ಕಳ ಉಗುರುಗಳು ಬಹು ಬೇಗನೆ ಬೆಳೆಯುತ್ತವೆ. ನೀವು ಅದನ್ನು ಆಗಗ ಕತ್ತರಿಸದಿದ್ದರೆ ನಿಮ್ಮ ಕಂದಮ್ಮಗಳು ತಮ್ಮ ದೇಹದ ಪೂರ್ತಿ ಗಾಯ ಮಾಡಿಕೊಳ್ಳುತ್ತವೆ. ಆದ್ದರಿಂದ baby ನೈಲ್ ಕ್ಲಿಪ್ಪೆರ್ಸ್ ಅನ್ನು ಅಂಗಡಿಯಿಂದ ಖರೀದಿಸಿ. ಇದಲ್ಲದೆ, ಮಗುವಿಗೆ mittens ಅಥವಾ ಕೈ ಚೀಲವನ್ನುಹಾಕಿ.


೮. ಹೊಕ್ಕುಳ ಬಳ್ಳಿ

ಹೊಕ್ಕುಳ ಬಳ್ಳಿಯನ್ನು ನೀವು ಕತ್ತರಿಸುವ ಅಗತ್ಯವಿಲ್ಲ. ಅದು, ತಾನಾಗಿಯೇ ಬಿದ್ದು ಹೋಗುತ್ತದೆ. ಅದಕ್ಕಾಗಿ ಮಗುವನ್ನು ಹೆಚ್ಚು ಸಮಯ ನೀರಿನಲ್ಲಿ ಸ್ನಾನ ಮಾಡಿಸುವುದನ್ನು ಕಡಿಮೆ ಮಾಡಿ. ಹೊಕ್ಕುಳ ಬಳ್ಳಿಯಲ್ಲಿ ಸ್ರಾವ, ಅಥವಾ ವಾಸಿನೆಯೇನಾದರು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon