Link copied!
Sign in / Sign up
1
Shares

ಆಪರೇಷನ್ ಮಾಡುವಾಗ ಆಸ್ಪತ್ರೆಯಲ್ಲಿ ಪವರ್ ಕಟ್ ಆಯಿತು ಅಂತ ಈ ಡಾಕ್ಟರ್ ಮಾಡಿದ್ದೇನು ಗೊತ್ತಾ?!!

ನಮ್ಮ ಊರಿನ ಎಲ್ಲಾ ಆಸ್ಪತ್ರೆಗಳಲ್ಲಿಯೂ ಜಗತ್ಪ್ರಸಿದ್ದ ಸವಲತ್ತುಗಳು ಇಲ್ಲದೆ ಇರಬಹುದು ನಿಜ. ಆದರೆ, ಬಿಹಾರದ ಊರೊಂದರ ಆಸ್ಪತ್ರೆಯಲ್ಲಿ ನಡೆದ ಈ ಘಟನೆಯು ನಿಮಗೆ ಇಲ್ಲಿ ಸಿಗುವ ಸವಲತ್ತುಗಳನ್ನ ನೆನೆದು ನೀವು ಭಾಗ್ಯಶಾಲಿಗಳು ಎಂದು ಅನಿಸುವಂತೆ ಮಾಡುತ್ತದೆ. ಅಲ್ಲಿ ನಡೆದ ಅಂತಹ ಘಟನೆ ಆದರೂ ಏನು ಎಂದು ಕೇಳುತ್ತೀರಾ? ಹಾಗಿದ್ದರೆ, ಆಶ್ಚರ್ಯ ಪಡಲು ಅಥವಾ ಬೆಚ್ಚಿ ಬೀಳಲು ಸಿದ್ಧರಾಗಿರಿ.

ಅಂದಹಾಗೆ ಬಿಹಾರದ ಸಹರಸಾ ನಗರದ ಸರ್ದಾರ್ ಆಸ್ಪತ್ರೆಗೆ ಅದೊಂದು ದಿನ ಹೆಂಗಸೊಬ್ಬಳು ಅಫಘಾತಕ್ಕೆ ಈಡಾಗಿ ಗಾಯಗೊಂಡು ಚಿಕಿತ್ಸೆಗೆಂದು ಬಂದಳು. ಆ ಆಸ್ಪತ್ರೆಯಲ್ಲಿದ್ದ ವೈದ್ಯನನ್ನ ನೀವು ಯಾವ ಕಡೆಯಿಂದ ನೋಡಿದರೂ ವೈದ್ಯನ ರೀತಿಯಲ್ಲಿ ಇಲ್ಲ. ಖಾಕಿ ಬಟ್ಟೆ ತೊಟ್ಟು, ಅಂಗಿಯ ಮೊದಲೆರೆಡು ಗುಂಡಿಗಳನ್ನು ಬಿಚ್ಚಿಕೊಂಡು, ಒಬ್ಬ ಪ್ರೊಫೆಷನಲ್ ವೈದ್ಯನಲ್ಲಿ ಇರಬೇಕಾದ ಯಾವುದೇ ಲಕ್ಷಣಗಳು ಆತನಲ್ಲಿ ಕಾಣುತ್ತಿಲ್ಲ. ಆ ವೈದ್ಯನು ಈ ಜ್ಞಾನ ತಪ್ಪಿರುವ ಅಪಘಾತಕ್ಕೆ ಒಳಗಾದ ಹೆಂಗಸನ್ನು ನೋಡಿ, ಆಕೆಯನ್ನು ಸ್ಟ್ರೆಚರ್ ಮೇಲೆ ಮಲಗಿಸಲು ಹೇಳುತ್ತಾನೆ. ಆ ಹೆಂಗಸಿನ ಬಲಗೈಗೆ ಏಟು ಬಿದ್ದಿರುತ್ತದೆ ಮತ್ತು ಅದರ ಚರ್ಮ ಹರಿದಿರುತ್ತದೆ.

ಇದನ್ನು ಕಂಡ ಆ ವೈದ್ಯನು ಆ ಹೆಂಗಸಿನ ಕೈ ಚರ್ಮವನ್ನು ಹೊಲಿಯಲು ಮುಂದಾಗುತ್ತಾನೆ. ಅಷ್ಟೊತ್ತಿಗೆ ಬಿಹಾರದಲ್ಲಿ ಪ್ರತಿದಿನದ ವಿದ್ಯಮಾನ ಆಗಿರುವ ಪವರ್ ಕಟ್ ಪುನಃ ಕಾಣಿಸಿಕೊಂಡಿತು. ಬೇರೆ ಕಡೆ ಎಲ್ಲಾ ಆಸ್ಪತ್ರೆಯಲ್ಲಿ ಪವರ್ ಕಟ್ ಉಂಟಾದರೆ ಜನರೇಟರ್ ಉಪಯೋಗಿಸಿ ಸರ್ಜರಿ ಅಥವಾ ಶಸ್ತ್ರಚಿಕಿತ್ಸೆಯನ್ನ ಮುಂದುವರೆಸುತ್ತಾರೆ. ಆದರೆ, ಈ ಆಸ್ಪತ್ರೆಯಲ್ಲಿ ಆ ವೈದ್ಯ ಪವರ್ ಕಟ್ ಆಗಿದ್ದರೂ, ಜನರೇಟರ್ ಬಳಸದೇ ಹೊಲಿಗೆ ಹಾಕುವುದನ್ನ ಮುಂದುವರೆಸುತ್ತಾನೆ. ಅದು ಹೇಗೆ ಗೊತ್ತೇ? ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ!


ಇದನ್ನು ನೀವು ಕೆಳಗಡೆ ಇರುವ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಈಗ ಇದು ಬಿಹಾರದ ಅರೋಗ್ಯ ಮಂತ್ರಿಗೂ ತಲುಪಿದೆ. ಇದನ್ನು ನೋಡಿದ ಬಿಹಾರದ ಅರೋಗ್ಯ ಮಂತ್ರಿಯಾದ ಮಂಗಲ್ ಪಾಂಡೆ ತಬ್ಬಿಬ್ಬಾಗಿದ್ದಾರೆ. ಇದರ ಮೇಲೆ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಆ ವೈದ್ಯನು ಮೊಬೈಲ್ ಬೆಳಕಿನಲ್ಲಿ ಹೆಂಗಸಿನ ಮೇಲೆ ಆಪರೇಷನ್ ಮಾಡುತ್ತಿರುವುದನ್ನ ನೀವೇ ನೋಡಿ ಇಲ್ಲಿ :

 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon