Link copied!
Sign in / Sign up
35
Shares

ನಿಮಗೆ ಮಕ್ಕಳು ಬೇಕೆಂದರೆ, ನೀವು ಮತ್ತು ನಿಮ್ಮ ಪತಿ ಈ 5 ಆಹಾರಗಳನ್ನ ಸೇವಿಸಲೇ ಬೇಕು!

ನೀವು ಗರ್ಭಧರಿಸಲು ಪ್ರಯತ್ನಿಸುತ್ತಿದ್ದು, ಗರ್ಭ ಧರಿಸಲು ಆಗುತ್ತಿಲ್ಲವೆಂದರೆ, “ನಾನು ಏನೋ ತಪ್ಪು ಮಾಡುತ್ತಿದ್ದೇನೆ” ಎಂದು ಅಂದುಕೊಳ್ಳುವುದು ಸಹಜ. ನೀವು ನಿಮ್ಮ ಪ್ರೆಗ್ನನ್ಸಿ ಟೆಸ್ಟ್ ಪಾಸಿಟಿವ್ ಆಗಿ ಹೊರಬರಬೇಕೆಂದು ಎಷ್ಟೇ ಪ್ರಯತ್ನಿಸುತ್ತಿರುವಾಗ ಇಂತಹ ನೆಗೆಟಿವ್ ಯೋಚನೆಗಳು, ವಿಷಯಗಳು ನಿಜಕ್ಕೂ ನಿಮ್ಮ ಆತ್ಮಬಲ ಕುಗ್ಗಿಸಿ ಬಿಡುತ್ತವೆ. ಹಾಗಿದ್ದರೆ ನೀವು ಮಾಡಬಹುದು? ಕೇವಲ “ಅದನ್ನು” ಮಾಡುವುದರ ಹೊರತಾಗಿ, ಈ ಪ್ರಕ್ರಿಯೆಯು ವೇಗವಾಗಿ ಆಗಲು ನೀವು ಏನು ಮಾಡಬಹುದು? ವಿಷಯ ಏನಪ್ಪಾ ಎಂದರೆ, ನೀವು ನಿಮ್ಮ ಆಹಾರಪದ್ದತಿಯಲ್ಲಿ ಕೆಲವೊಂದು ಚಿಕ್ಕ-ಪುಟ್ಟ ತಿದ್ದುಪಡಿಗಳನ್ನ ಮಾಡಿಕೊಂಡರೆ, ನೀವು ನಿಮ್ಮ ಫಲವತ್ತತೆಯನ್ನ ಹೆಚ್ಚಿಸಿಕೊಳ್ಳಬಹುದು.

ಹಾಗಿದ್ದರೆ ನೀವು ಗರ್ಭಧರಿಸಬೇಕು ಎಂತಿದ್ದರೆ ನೀವು ಸೇವಿಸಬೇಕಾದ ಆಹಾರಗಳು ಯಾವುದೆಂದು ತಿಳಿಯೋಣ ಬನ್ನಿ :


೧. ಬಟರ್ ಫ್ರೂಟ್/ ಅವಕ್ಯಾಡೊ


ಫೋಲೇಟ್ ಎಂಬ ಫೋಲಿಕ್ ಆಮ್ಲದ ಒಂದು ರೂಪವು, ಗಂಡಸರು ಮತ್ತು ಹೆಂಗಸರು ಇಬ್ಬರ ಫಲವತ್ತತೆಯೂ ಹೆಚ್ಚಿಸುತ್ತದೆ. ಅಧ್ಯಯನಗಳ ಪ್ರಕಾರ ಇದು ಹೆಂಗಸರಲ್ಲಿ ಅಂಡೋತ್ಪತ್ತಿ (ಒವುಲೇಷನ್) ಅನ್ನು ವೃದ್ಧಿಸಿದರೆ, ಹೆಚ್ಚೆಚ್ಚು ಫೋಲೇಟ್ ಸೇವಿಸುವ ಗಂಡಸರ ವೀರ್ಯಾಣು ಗುಣಮಟ್ಟ ಹೆಚ್ಚಿರುತ್ತದೆ ಎಂಬುದು ತಿಳಿದು ಬಂದಿದೆ. ಈ ಫೋಲೇಟ್ ನಿಮಗೆ ಬಟರ್ ಫ್ರೂಟ್ ಅಲ್ಲಿ ಯಥೇಚ್ಛವಾಗಿ ಸಿಗುತ್ತದೆ.


೨. ಒಯೆಸ್ಟರ್ (ಸಿಂಪು)


ಇದು ಕೇವಲ ನೈಸರ್ಗಿಕವಾದ ಕಾಮೋತ್ತೇಜಕ ಅಲ್ಲದೆ, ಇದರಲ್ಲಿ ಅಪಾರ ಪ್ರಮಾಣದ ಜಿಂಕ್ ಕೂಡ ಇರುತ್ತದೆ. ಒಂದು ವೇಳೆ ನಿಮ್ಮ ದೇಹದಲ್ಲಿ ಜಿಂಕ್ ಕೊರತೆ ಉಂಟಾದರೆ, ಅದು ಉತ್ತಮ ಗುಣಮಟ್ಟದ ಅಂಡಾಣುಗಳ ಉತ್ಪತ್ತಿಗೆ ತೊಂದರೆ ಉಂಟು ಮಾಡುತ್ತದೆ. ಇಷ್ಟೇ ಅಲ್ಲದೆ ಜಿಂಕ್ ಇಂದ ನಿಮ್ಮ ಪತಿಯ ಟೆಸ್ಟೋಸ್ಟೆರಾನ್ ಹಾರ್ಮೋನ್ ಪ್ರಮಾಣ ಮತ್ತು ವೀರ್ಯಾಣು ಗುಣ, ಪ್ರಮಾಣ ಕೂಡ ಹೆಚ್ಚುತ್ತದೆ.


೩. ಕೊಬ್ಬಿನಾಂಶ ಉಳ್ಳ ಹಾಲಿನ ಉತ್ಪನ್ನಗಳು


ಕೆನೆ ತೆಗೆದ ಹಾಲಿಗಿಂತ, ಕೆನೆ, ಕೊಬ್ಬಿನಂಶ ಉಳ್ಳ ಹಾಲಿನ ಉತ್ಪನ್ನಗಳು ನಿಮಗೆ ಗರ್ಭ ಧರಿಸಲು ಹೆಚ್ಚು ಸಹಾಯ ಮಾಡುತ್ತವೆ ಎಂಬುದು ತಿಳಿದು ಬಂದಿದೆ. ನೀವು ಫ್ಯಾಟ್-ಫ್ರೀ (ಕೊಬ್ಬಿನಾಂಶ ರಹಿತ) ಹಾಲಿನ ಉತ್ಪನ್ನಗಳನ್ನ ಸೇವಿಸಿದರೆ, ನಿಮ್ಮಲ್ಲಿನ ಹೆಣ್ಣು ಹಾರ್ಮೋನ್ ಆದ ಈಸ್ಟ್ರೋಜೆನ್ (ಮದಜನಕ) ಪ್ರಮಾಣ ಕಡಿಮೆ ಆಗಿ, ಗಂಡಸರ ಹಾರ್ಮೋನ್ ಆದ ಆಂಡ್ರೋಜೆನ್ ಪ್ರಾಬಲ್ಯ ಮೆರೆಯುತ್ತದೆ. ಹೀಗಾಗಿ ನೀವು ಕೊಬ್ಬಿನಾಂಶ ಉಳ್ಳ ಹಾಲಿನ ಉತ್ಪನ್ನಗಳಾದ ಚೀಸ್, ಬೆಣ್ಣೆ, ಯೋಗರ್ಟ್ ಮತ್ತು ಇತರೆ ಪದಾರ್ಥಗಳನ್ನ ಸೇವಿಸಬೇಕು.


೪. ಸಾಲ್ಮನ್ ಮೀನು


ಸಂತಾನೋತ್ಪತ್ತಿ ಎಂಬ ವಿಷಯ ಬಂದಾಗ, ಅಲ್ಲಿ ಮುಖ್ಯ ಪಾತ್ರ ವಹಿಸುವುದೇ ಒಮೇಗಾ-3 ಕೊಬ್ಬಿನಾಮ್ಲ (ಫ್ಯಾಟಿ ಆಸಿಡ್ಸ್). ವೈಲ್ಡ್ ಸಾಲ್ಮನ್ ಅಥವಾ ಕಾಡು ಸಾಲ್ಮನ್ ಒಮೇಗಾ-3 ಕೊಬ್ಬಿನಾಮ್ಲದ ಒಂದು ಒಳ್ಳೆಯ ಮೂಲ. ಒಂದು ವೇಳೆ ನೀವು ಸಸ್ಯಾಹಾರಿಗಳು ಆಗಿದ್ದರೆ, ನೀವು ಇದನ್ನು ಅಗಸೆ ಬೀಜದ ಮೂಲಕ ಪಡೆಯಬೇಕಾಗುತ್ತದೆ.

ಒಮೇಗಾ-3 ನಮ್ಮ ದೇಹದಲ್ಲಿನ ಹಾರ್ಮೋನುಗಳನ್ನ ನಿಭಾಯಿಸಲು ಸಹಾಯ ಮಾಡಬಹುದು. ಅಷ್ಟೇ ಅಲ್ಲದೆ, ಇದರಿಂದ ಒಳ್ಳೆಯ ಗುಣಮಟ್ಟದ ಗರ್ಭಕಂಠದ ಲೋಳೆ ಹೆಚ್ಚು ಆಗುತ್ತ್ತದೆ ಮತ್ತು ಅಂಡೋತ್ಪತ್ತಿಗೆ ಉತ್ತೇಜನ ನೀಡುತ್ತದೆ.


೫. ವಿಟಮಿನ್ D


ವಿಟಮಿನ್ D ಅನ್ನು ನೀವು ನಾಟಿ ಕೋಳಿ ಮೊಟ್ಟೆ ಮತ್ತು ಹಸುವಿನ ಬೆಣ್ಣೆಯಲ್ಲಿ, ಕಾಡ್ ಲಿವರ್ ಆಯಿಲ್, ದೇಹಾಂಗದ ಮಾಂಸದಲ್ಲಿ ಮತ್ತು ಇವೆಲ್ಲವುಗಳಿಗಿಂತ ಮುಖ್ಯವಾಗಿ ಸೂರ್ಯನ ಬಿಸಿಲಿನಲ್ಲಿ ಕಾಣುತ್ತೀರಿ. ಸಂಶೋಧನೆಗಳ ಪ್ರಕಾರ ವಿಟಮಿನ್ D ಇಂದ ವೀರ್ಯಾಣುವಿನ ಚಲನೆಯು ವೃದ್ಧಿಸುತ್ತದೆ ಮತ್ತು ಹೆಂಗಸರಲ್ಲಿ ಅಂಡೋತ್ಪತ್ತಿಯನ್ನ ಸುಧಾರಿಸುತ್ತದೆ ಎಂಬುದು ತಿಳಿದು ಬಂದಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon