Link copied!
Sign in / Sign up
11
Shares

ಎದೆಹಾಲುಣಿಸುವಾಗ ನೀವು ಈ ಹಣ್ಣುಗಳನ್ನ ತಿನ್ನಲೇ ಬಾರದು !

ಹಣ್ಣುಗಳು ನೈಸರ್ಗಿಕವಾದರೂ, ಆರೋಗ್ಯಕ್ಕೆ ಒಳ್ಳೆಯದೇ ಆದರೂ, ನೀವು ಎದೆಹಾಲುಣಿಸುವ ಸಮಯದಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ನೀವು ಎದೆಹಾಲುಣಿಸುವ ಸಮಯದಲ್ಲಿ ಈ ಹಣ್ಣುಗಳನ್ನು ಸೇವಿಸದೆ ಇರುವುದು ಉತ್ತಮ.

ಗರ್ಭಾವಸ್ಥೆ ಮತ್ತು ಹೆರಿಗೆ ಮಹಿಳೆಯ ಜೀವನದ ಬದಲಾವಣೆಯ ಅತ್ಯಂತ ವಿಶೇಷ ಭಾಗವಾಗಿದ್ದು, ಆ ಸಮಯದಲ್ಲಿ ಎಲ್ಲರು ಎಚ್ಚರಿಕೆಯಿಂದ ಇರುವರು ಮತ್ತು ತಮ್ಮ ಆಹಾರ ಕ್ರಮವನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುವರು. ಆದರೆ ಇದು ಇಲ್ಲಿಗೆ ಮುಗಿಯುದಿಲ್ಲ ನಿಮ್ಮ ಆರೋಗ್ಯ ದೃಷ್ಟಿಯಿಂದ ನೀವು ಎದೆಹಾಲುಣಿಸುವ ಸಮಯದಲ್ಲೂ ಉತ್ತಮ ಆರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಕ್ರಮವನ್ನು ಅನುಸರಿಸುವುದು ಒಳ್ಳೆಯದು.

ಎದೆಹಾಲುಣಿಸುವಾಗ ನಿಷೇದಿಸಬೇಕಾದಂತಹ ಹಣ್ಣುಗಳು

ನೀವು ಸೇವಿಸುವ ಆಹಾರ ನೇರವಾಗಿ ನಿಮ್ಮ ಸ್ತನದ ಹಾಲಿನ ಮೇಲೆ ಪರಿಣಾಮ ಬೀರುವುದರಿಂದ ನಿಮ್ಮ ಆಹಾರ ಕ್ರಮದಲ್ಲಿ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.

೧.ಆಮ್ಲಿಯ ಹಣ್ಣುಗಳು

ಆಮ್ಲಿಯ ಹಣ್ಣುಗಳು ಅದರಲ್ಲೂ ಸಿಟ್ರಸ್ ಆಮ್ಲ ಇರುವ ಹಣ್ಣುಗಳು ಹೆಚ್ಚು ರಸಮಯವಾಗಿದ್ದು, ತಿನ್ನಲು ರುಚಿಯಾಗಿರುತ್ತವೆ. ಸಾಮಾನ್ಯವಾಗಿ ಈ ಹಣ್ಣುಗಳನ್ನು ಎಲ್ಲರು ಇಷ್ಟ ಪಡುವರು ಮತ್ತು ಹಣ್ಣುಗಳನ್ನು ಕೊಳ್ಳುವಾಗ ಈ ಹಣ್ಣು ಇದ್ದೆ ಇರುತ್ತದೆ. ಅದು ಏನೇಯಾದರು ಎದೆಹಾಲುಣಿಸುವ ತಾಯಿಯಂದಿರು ಈ ಹಣ್ಣುಗಳನ್ನು ಅಥವಾ ಹಣ್ಣಿನ ರಸವನ್ನು ಸೇವಿಸುವುದನ್ನು ನಿಲ್ಲಿಸಬೇಕು.

ನಿಂಬೆ, ಕಿತ್ತಳೆ, ಕಿವಿ, ಸ್ಟ್ರಾಬೆರ್ರಿಸ್, ಅನಾನಸ್, ದ್ರಾಕ್ಷಿ ಮತ್ತು ಮೂಸಂಬಿ ಹಣ್ಣುಗಳು ಆಮ್ಲಿಯ ಹಣ್ಣುಗಳಾಗಿದ್ದು, ಇವು ನಿಮ್ಮ ಎದೆಹಾಲನ್ನು ತೀಕ್ಷ್ಣ ವಾಸನೆಯನ್ನು ನೀಡುವುದು, ಇದನ್ನು ಶಿಶುವು ಕುಡಿದಾಗ ಕೆಲವು ಮಕ್ಕಳು ಅಲರ್ಜಿಯನ್ನು ಅನುಭವಿಸಿದರೆ, ಕೆಲವು ಮಕ್ಕಳು ವಾಂತಿಯನ್ನು ಮಾಡಿಕೊಳ್ಳುವರು. ಇವುಗಳು ಮಗುವಿನಲ್ಲಿ ಕಿರಿಕಿರಿ ಮತ್ತು ಗ್ಯಾಸ್ ಅನ್ನು ಉಂಟು ಮಾಡಬಹುದು.

೨.ಚೆರ್ರಿ ಮತ್ತು ಒಣದ್ರಾಕ್ಷಿ

ಚೆರ್ರಿಗಳು ಮಗುವಿನಲ್ಲಿ ಗ್ಯಾಸ್ ಸಮಸ್ಯೆಯನ್ನು ಉಂಟು ಮಾಡಬಹುದು. ನವಜಾತ ಶಿಶುಗಳು ತಮ್ಮ ಜೀರ್ಣ ಶಕ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿರುವುದರಿಂದ ಅವರಲ್ಲಿ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ನೀವು ಸ್ತನ್ಯಪಾನ ಮಾಡುವ ಸಂದರ್ಭದಲ್ಲಿ ಮಗುವಿನಲ್ಲಿ ಗ್ಯಾಸ್ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ನೀವು ಸೇವಿಸಿರುವ ಆಮ್ಲಿಯ ಅಥವಾ ಒಣದ್ರಾಕ್ಷಿ ಅಥವಾ ಚೆರ್ರಿ ಹಣ್ಣುಗಳು ಕಾರಣ ಇರಬಹುದು.

೩.ಕೆಫಿನ್ ಮತ್ತು ಚಾಕೋಲೇಟ್

ಮೇಲೆ ತಿಳಿಸಿರುವ ಹಣ್ಣುಗಳು ಮತ್ತು ಆಹಾರ ಪದಾರ್ಥಗಳ ಜೊತೆಗೆ, ಕೆಫಿನ್, ಚಾಕೋಲೇಟ್,ಮೊಟ್ಟೆ, ಸೋಯಾ ಮತ್ತು ಮೀನನ್ನು ಸೇವನೆ ಮಾಡದೆ ಇರುವುದು ಒಳ್ಳೆಯದು, ಅಥವಾ ಇವುಗಳನ್ನು ಸೇವನೆ ಮಾಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon