Link copied!
Sign in / Sign up
1
Shares

ಎದೆಹಾಲುಣಿಸುವಾಗ ಈ ೪ ವಿಷಯಗಳನ್ನು ನೀವು ಮಾಡಿದರೆ ಮಗುವಿಗೆ ತೊಂದರೆ ಆಗುತ್ತದೆ

ಸ್ತನ್ಯಪಾನವು ಸ್ವತಃ ಒಂದು ಸವಾಲನ್ನು ಹೊಂದಿದೆ ಮತ್ತು ನೀವು ಹೊಸ ತಾಯಿಯಾಗಿದ್ದರೆ, ನಾವು ಯಾವುದರ ಬಗ್ಗೆ  ಮಾತನಾಡುತ್ತಿದ್ದೇವೆ ಎಂದು ನಿಮಗೆ ತಿಳಿದಿದೆ. ನೀವು ನೋಯುತ್ತಿರುವ, ಬಿರುಕು ಮತ್ತು ನೋವಿನಿಂದ ಕೂಡಿದ ಮೊಲೆತೊಟ್ಟುಗಳನ್ನು ಒಳಗೊಂಡಿದ್ದೀರಿ , ಆದರೆ ಇದು ನಿಮ್ಮ ಮಗುವಿಗೆ ಸ್ತನ್ಯಪಾನ ಮಾಡುವುದನ್ನು ಮುಂದುವರೆಸುವುದನ್ನು ತಡೆಯುವುದಿಲ್ಲ. ಯಾಕೆ? ಇದು ನಿಮ್ಮ ಮಗುವಿನ ಪೋಷಣೆಯ ಏಕೈಕ ಮೂಲವಾಗಿದೆ. ಹಾಗಾಗಿ, ಎಲ್ಲವೂ ಪರಿಪೂರ್ಣವಾಗುವುದಕ್ಕಾಗಿ ಎಲ್ಲವನ್ನೂ ಮಾಡಲು ನೀವು ಬಯಸುವುದಿಲ್ಲವೇ? ನೀವು ಕೆಲವು ಸ್ತನ್ಯಪಾನ ಪದ್ಧತಿಗಳನ್ನು ಇಲ್ಲಿ ನೀವು ಅರಿವಿಲ್ಲದೆ ಮಾಡುತ್ತಿರುವಿರಿ ಆದರೆ ಅವು ನಿಮ್ಮ ಮಗುವಿನ ಮೇಲೆ ನಿಜವಾದ ಪರಿಣಾಮ ಬೀರುತ್ತವೆ.

೧.ಒಂದು ವೇಳಾಪಟ್ಟಿಗೆ ಅಂಟಿಕೊಂಡಿರುವುದು

ನೀವು ಕೆಲಸ ಮಾಡುವ ತಾಯಿ ಅಥವಾ ನಿಜವಾಗಿಯೂ ಬಿಡುವಿಲ್ಲದ  ವ್ಯಕ್ತಿಯಾಗಿದ್ದರೂ, ಹಾಲುಣಿಸುವ ವೇಳಾಪಟ್ಟಿಗೆ ಅಂಟಿಕೊಂಡಿರುವುದು ಒಂದು ಪ್ರಾಯೋಗಿಕ ಮತ್ತು ಅನುಕೂಲಕರ ಆಯ್ಕೆಯಾಗಿ ತೋರುತ್ತದೆ ಆದರೆ ನಿಮ್ಮ ಮಗುವು  ಅದನ್ನು ಅಗತ್ಯವಾಗಿ ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಮಗು ನಿಮ್ಮಂತೆಯೇ ಮನುಷ್ಯ ಮತ್ತು ಅವಳು / ಅವನು ಪ್ರತಿದಿನ ಅದೇ ಸಮಯದಲ್ಲಿ ಹಸಿವಿನಿಂದ ಇರುವುದಿಲ್ಲ. ಆದ್ದರಿಂದ ನೀವು ಒಂದು ವೇಳಾಪಟ್ಟಿಗೆ ಅಂಟಿಕೊಳ್ಳುವಾಗ, ನಿಮ್ಮ ಮಗುವು ಹಸಿವಿನಿಂದ ಇರಲು  ಅಥವಾ ನಿಮ್ಮ ಮಗುವಿಗೆ ಹಸಿವು ಇಲ್ಲದಿರುವಾಗ ಹಾಲು ಕುಡಿಯಲು ಒತ್ತಾಯಿಸುವ ಸಾಧ್ಯತೆಗಳಿವೆ ,ಇವೆರಡೂ ಸೂಕ್ತವಲ್ಲ.

೨.ಕಣ್ಣಿನ ಸಂಪರ್ಕ ಇಲ್ಲದಿರುವುದು

ಹಾಲುಣಿಸುವ ಅಂಶದ ಹೊರತಾಗಿ, ಸ್ತನ್ಯಪಾನವು ನಿಮ್ಮ ಮಗುವಿನೊಂದಿಗೆ ನಿಮ್ಮೊಂದಿಗೆ ಸಂಬಂಧವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಶಿಶುಗಳಿಗೆ ಭಾವನಾತ್ಮಕವಾಗಿ ಈ ಸಂವಹನವು ತುಂಬಾ ಅವಶ್ಯಕವಾಗಿದೆ, ಆದ್ದರಿಂದ ನೀವು ಸ್ತನ್ಯಪಾನ ಮಾಡುವಾಗ ನಿಮ್ಮ ಮೊಬೈಲ್ ಫೋನ್ ಗಳಲ್ಲಿ  ನಿರತರಾಗದಿರಿ ಇದರಿಂದ, ನೀವು ಅಮೂಲ್ಯ ಗುಣಮಟ್ಟದ ಮಗು -ತಾಯಿಯ  ಸಮಯವನ್ನು ಕಳೆದುಕೊಳ್ಳುತ್ತೀರಿ. ಮುಂದಿನ ಬಾರಿ ನೀವು ಸ್ತನ್ಯಪಾನ ಮಾಡಿಸುವಾಗ , ಆ ಸ್ಮಾರ್ಟ್ ಫೋನ್  ಅನ್ನು ಕಿತ್ತುಕೊಂಡು ನಿಮ್ಮನ್ನು ಆರಾಧಿಸುತ್ತಿರುವ ಆ ಮಗುವಿನ ದೊಡ್ಡ  ಕಣ್ಣುಗಳಿಗೆ ನಿಮ್ಮ ದೃಷ್ಟಿಯನ್ನು ಸೇರಿಸಿ .

೩.ಗಡಿಯಾರದ ಮೇಲೆ ಕಣ್ಣು ಇಟ್ಟುಕೊಳ್ಳುವುದು

ಹಾಲುಣಿಸುವ ಮೊದಲ ಕೆಲವು ನಿಮಿಷಗಳಲ್ಲಿ ನಿಮ್ಮಲ್ಲಿ ಉತ್ಪತ್ತಿಯಾಗುವ ಹಾಲು ಕೊನೆಯ ಸ್ತನ ಹಾಲಿಗಿಂತ ಭಿನ್ನವಾಗಿರುವುದು ನಿಮಗೆ ಗೊತ್ತೇ?ಮತ್ತು ನಿಮ್ಮ ಮಗುವಿಗೆ ತಮ್ಮ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸಲು ಮೊದಲ ಹಾಗೂ ಕೊನೆಯ ಹಾಲು ಎರಡರ ಅವಶ್ಯಕತೆಯಿದೆ .ಇದರರ್ಥ  ನೀವು ನಿಜವಾಗಿಯೂ ನಿಶ್ಚಿತ ಸಮಯಕ್ಕೆ ಸ್ತನ್ಯಪಾನ ಮಾಡಬಾರದು , ನಿಮ್ಮ ಸ್ತನ ಖಾಲಿಯಾಗುವವರೆಗೆ ಅಥವಾ ನಿಮ್ಮ ಮಗುವಿನ ಚಿಕ್ಕ ಹೊಟ್ಟೆಯನ್ನು ತುಂಬಲು ತೆಗೆದುಕೊಳ್ಳುವಷ್ಟು ಸಮಯ ಇರಬೇಕು.

೪.ಆದೇಶಿಸಿದ ಔಷಧಿಗಳನ್ನು ತೆಗೆದುಕೊಳ್ಳುವುದು

ನೀವು ಹಾಲುಣಿಸುವ ಸಮಯದಲ್ಲಿ, ನೀವು ಸೇವಿಸುತ್ತಿರುವ ವಸ್ತುಗಳ ಬಗ್ಗೆ ಕಣ್ಣಿಡುವುದು ಬಹಳ ಮುಖ್ಯ. ಕೆಲವು ಔಷಧಿಗಳು ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ, ಅದು ನಿಮ್ಮ ಸ್ಥಾನಹಾಲಿನ  ಸಂಯೋಜನೆ, ರುಚಿ ಅಥವಾ  ವಾಸನೆಯನ್ನು ಮಾರ್ಪಡಿಸುತ್ತದೆ. ಆದ್ದರಿಂದ ನೀವು ಯಾವುದೇ ಔಷಧಿಗಳನ್ನು (ಆಯುರ್ವೇದಿಕ್, ಹೋಮಿಯೋಪತಿ ಅಥವಾ ಅಲೋಪತಿ) ಆಯ್ಕೆ ಮಾಡುವ ಮೊದಲು, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ನೀವು ಹಾಲುಣಿಸುವ ತಾಯಿ ಎಂದು ಸೂಚಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon