Link copied!
Sign in / Sign up
18
Shares

ಎದೆಹಾಲುಣಿಸುವ ತಾಯಂದಿರು ಸೇವಿಸಲೇಬೇಕಾದ 6 ಆಹಾರ ಪದಾರ್ಥಗಳು

ತಾಯಿಯ ಎದೆಹಾಲು, ಸಮುದ್ರ ಮಂಥನದಿಂದ ಹೊರಬಂದ ಅಮೃತದಷ್ಟೇ ಶ್ರೇಷ್ಟವಾದುದು ಎಂದರೆ ತಪ್ಪಾಗುವುದಿಲ್ಲ. ಮಗುವಿನ ಸರ್ವತೋಮುಖ ಬೆಳವಣಿಗೆಗೆ, ತಾಯಿಯ ಹಾಲಿಗಿಂತ ಬೇರೆ ಔಷಧಿ ಬೇಕ್ಕಿಲ್ಲ.

ಆದ್ದರಿಂದ ತಾಯಂದಿರೇ, ಪ್ರತಿನಿತ್ಯ ನೀವು ಸೇವಿಸುವ ಆಹಾರ ಪದಾರ್ಥಗಳ ಮೇಲೆ ಗಮನವಿರಲಿ. ನೀವು ಜಂಕ್ ಫುಡ್ಸ್(ಚಿತಿತಿನಿಸು)ಗಳ ದಾಸರಾಗಿದ್ದರೆ, ನಿಮಗೆ ಇದೊಂದು ಕಹಿ ಸುದ್ದಿ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಯಾವ ತಾಯಂದಿರು ಅತಿ ಹೆಚ್ಚಿನ ಪ್ರಮಾಣದ ಜಂಕ್ ಫುಡ್ಸ್ಗಳ್ಳನ್ನು, ಪ್ರತಿನಿತ್ಯ ಸೇವಿಸುತ್ತಾರೆಯೋ, ಅವರ ಎದೆಹಾಲಿನ ಗುಣಮಟ್ಟ, ಆರೋಗ್ಯಕರ ತಾಯಂದಿರ ಹಾಲಿನ ಗುಣಮಟ್ಟಕ್ಕಿಂತ, ಶೇಕಡ ೩೦% ಕಡಿಮೆ ಇರುತ್ತದೆ.  ಇದು ಮಗುವಿನ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಿ, ನಿಮ್ಮ ಕಂದಮ್ಮಗಳ್ಳನ್ನು ಅನಾರೋಗ್ಯಕ್ಕೆ ತುತ್ತಾಗುವಂತೆ  ಮಾಡುತ್ತದೆ.

ಕೆಲಸದ ಒತ್ತಡ, ಸಮಯದ ಕೊರತೆ ಮುಂತಾದ ಕಾರಣಗಳಿಂದ ಸರಿಯಾದ ಸಮಯಕ್ಕೆ ಆರೋಗ್ಯಕರವಾದ ಆಹಾರಗಳ್ಳನ್ನು ಸೇವಿಸುವುದು, ಈಗಿನ ತಾಯಂದಿರಿಗೆ ಕಷ್ಟಸಾದ್ಯವಾಗಿದೆ. ಆದರೆ, ನಿಮ್ಮ ಮಗುವಿನ ಆರೋಗ್ಯದ ಮುಂದೆ, ಇದೆಲ್ಲಾ ಕಷ್ಟದ ಕೆಲಸವೇ?

ನಿಮ್ಮ ವೇಳಾಪಟ್ಟಿಯ ಅನುಸಾರ ನೀವು ಊಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದಿದ್ದರು ಚಿಂತೆಯಿಲ್ಲ, ಆದರೆ ಕೆಳಗೆ ಹೇಳಿರುವ ೬ ಪ್ರಯೋಜನಕಾರಿ ಆಹಾರಗಳ್ಳನ್ನು ನೀವು ಸೇವಿಸಲೇ ಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ, ಆ  ೬ ಆಹಾರ ಪದಾರ್ಥಗಳು ಯಾವುದೆಂದು ತಿಳಿಯೋಣ ಬನ್ನಿ.

೧. ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಔಷಧಿಗಳ ರಾಜ ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ವಯಸ್ಸಿನವರು, ಬೆಳ್ಳುಳ್ಳಿಯನ್ನು ಪ್ರತಿನಿತ್ಯ ತಮ್ಮಆಹಾರದಲ್ಲಿ ಬಳಸುತ್ತಾರೆ. ಬಾಣಂತಿಯ ಎದೆಹಾಲನ್ನು ಹೆಚ್ಚಿಸಲು, ಪ್ರಸವದ ನಂತರದ ರಕ್ತಸ್ರಾವವನ್ನು ಕಡಿಮೆಗೊಳಿಸಲು ಇದನ್ನು ಬಳಸುತ್ತಾರೆ. ಬಾಣಂತಿಯರ ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತದೆ ಹಾಗು ಸಂಧಿವಾತದಂತಹ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ.

೨.ಶುಂಟಿ

ಶುಂಟಿಯನ್ನು ಬಳಸದ ಮನೆಯಿಲ್ಲ. ನಿಮ್ಮ ರೋಗ-ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ ಹಾಗು ಸೂಕ್ಶ್ಮಜೀವಿಗಳಿಂದಾಗುವ ಆರೋಗ್ಯದ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಮಗುವಿಗೆ ಜನ್ಮ ನೀಡಿದ ಮೊದಲ ತಿಂಗಳಿನ್ನಲ್ಲಿ, ಬಾಣಂತಿಯರು ಇದನ್ನು ಹೆಚ್ಚಾಗಿ ಸೇವಿಸಬೇಕು. ಪ್ರಸವ ನಂತರದ ರಕ್ತಸ್ರಾವವನ್ನು ಕಡೆಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿದೆ. ಬಾಣಂತಿಯರು ಪ್ರತಿನಿತ್ಯ ಶುಂಟಿಯನ್ನು ಸೇವಿಸುವುದರಿಂದ ಸ್ಥಾನಗಳಿಗೆ ರಕ್ತ ಸಂಚಾರ ಸುಗಮವಾಗಿ, ಹೆಚ್ಚು ಹಾಲು ಉತ್ಪಾದಿಸಲು ಸಹಕಾರಿಯಾಗಿದೆ.

೩. ತುಪ್ಪ

ತುಪ್ಪವನ್ನು ಇಷ್ಟಪಡದವರಿಲ್ಲ. ಪುರಾತನ ಕಾಲದಿಂದಲೂ ತುಪ್ಪದ ಮಹತ್ವದ ಬಗ್ಗೆ ನಾವೆಲ್ಲರು ಸಾಕಷ್ಟು ತಿಳಿದಿದ್ದೇವೆ. ದೇವರ ನೈವೇದ್ಯದಿಂದ, ಸಿಹಿ ತಿಂಡಿಗಳ ತಯಾರಿಕೆಯವರೆಗೂ ತುಪ್ಪವನ್ನು ನಾವು ಬಳಸುತ್ತೇವೆ. ಗರ್ಭಿಣಿ ಹಾಗು ಬಾಣಂತಿಯರ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ತುಪ್ಪ ಪ್ರಯೋಜನಕಾರಿಯಾಗಿದೆ. ತುಪ್ಪದಲ್ಲಿರುವ ಒಳ್ಳೆಯ ಜಿಡ್ಡಿನಾಂಶವು, ನಾವು ಸೇವಿಸುವ ವಿಟಮಿನ್ ಗಳ್ಳನ್ನು ದೇಹವು ಹೀರಿಕೊಳ್ಳುವಂತೆ ಮಾಡುತ್ತದೆ ಹಾಗು ದೇಹದ ತೂಕವನ್ನು ಸಹ ಕಡಿಮೆ ಮಾಡುತ್ತದೆ.

೪. ದಾಳಿಂಬೆ ಹಣ್ಣು

ಪೋಷಕಾಂಶಗಳ ಚೆಂಡು ಎಂದರೆ ತಪಾಗುವುದಿಲ್ಲ. ಹೌದು! ಇದು ನಿಮ್ಮ ಎದೆಹಾಲಿನ ಉತ್ಪಾದನೆಯನ್ನು ವೃದ್ಧಿಸುತ್ತದೆ. ಕೆಂಪು ಹವಳದಂತಿರುವ ದಾಳಿಂಬೆ ಹಣ್ಣು, ನಿಮ್ಮ ಆರೋಗ್ಯ, ಸಂತಾನ ಹಾಗು ನಿಮ್ಮ ಕಂದಮ್ಮಗಳ ಆರೋಗ್ಯವನ್ನು ಇಮ್ಮಡಿಗೊಳಿಸುತ್ತದೆ. ಇದಲ್ಲದೆ, ದಾಳಿಂಬೆ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ, ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿದೆ.

೫. ಗೋಧಿ ನುಚ್ಚು

 

ಬಾಣಂತಿಯರ ಅಚ್ಚು ಮೆಚ್ಚಿನ ಆಹಾರಗಳ್ಳಲ್ಲಿ ಗೋಧಿ ನುಚ್ಚು ಸಹ ಒಂದು. ಇದನ್ನು ಮೆತ್ತಗಾಗುವ ವರೆಗೆ ಬೇಯಿಸಿ, ಹಾಲಿನೊಂದಿಗೆ ಮಿಶ್ರಣ ಮಾಡಿ ಪ್ರತಿನಿತ್ಯ ಬಾಣಂತಿಯರು ಸೇವಿಸಿದರೆ, ಎದೆ ಹಾಲಿನ ಪ್ರಾಮಾಣವು ಕ್ರಮೇಣವಾಗಿ ವೃದ್ಧಿಸುತ್ತದೆ.

೬. ಮೆಂತೆ ಕಾಳು

 

ಮನೆಮದ್ದುಗಳ್ಳಲ್ಲಿ ಒಂದಾದ ಈ ಮೆಂತೆ ಕಾಳುಗಳು , ಮೆಂತೆ ಎಲೆಗಳ್ಳನ್ನು ಪ್ರತಿನಿತ್ಯ ಆಹಾರದ್ದಲ್ಲಿ ಬಳಸಿದರೆ, ಎದೆ ಹಾಲು ಕ್ರಮೇಣವಾಗಿ ಜಾಸ್ತಿಯಾಗುತ್ತದೆ. ಮೆಂತೆ ಕಾಳುಗಳು ನಮ್ಮನ್ನು, ಜ್ವರ, ಸಂಧಿ ನೋವು, ಶ್ವಾಸಕೋಶದ ಸಮಸ್ಯೆಗಳಿಂದ ದೂರವಿಡುತ್ತದೆ.

ಹಾಗಾದರೆ ಬನ್ನಿ. ಇನ್ನು ತಡ  ಏಕೆ! ಮೇಲೆ ಹೇಳಿರುವ ೬ ಆಹಾರದ ಪಟ್ಟಿಯನ್ನು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಬಳಸಿ, ನಿಮ್ಮ ಮಗುವಿನ ಆರೋಗ್ಯವನ್ನು ಇಮ್ಮಡಿಗೊಳಿಸಿ.

ಇಲ್ಲಿ ಉಲ್ಲೇಕಿಸಿರುವ ಆಹಾರಗಳ್ಳಲ್ಲದೆ, ಎದೆ ಹಾಲನ್ನು ಹೆಚ್ಚಿಸುವ ಯಾವುದಾದರು ಆಹಾರಗಳು ನಿಮಗೆ ತಿಳಿದಿದ್ದರೆ, ದಯವಿಟ್ಟು comment ಗಳ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon