Link copied!
Sign in / Sign up
2
Shares

ಎದೆಹಾಲುಣಿಸುವ ತಾಯಂದಿರು ಈ ತಪ್ಪುಗಳನ್ನು ಮಾಡಬಾದು!

ನೀವು ಗರ್ಭಾವಸ್ಥೆಯಲ್ಲಿ ಎಚ್ಚರಿಕೆ ವಹಿಸಿದಂತೆ ಹೆರಿಗೆ ನಂತರ ಕೂಡ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಈ ಸಮಯದಲ್ಲಿ ನೀವು ಸೇವಿಸುವ ಆಹಾರದಿಂದ ಇಡಿದು ಮಾಡುವ ಕೆಲಸದ ಮೇಲೆ ಪ್ರತಿಯೊಂದು ವಿಷಯವು ಕೂಡ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ನೀವು ಇಂತಹ ತಪ್ಪುಗಳನ್ನು ಮಾಡದಿರಿ.

೧.ಸರಿಯಾಗಿ ನೀರು ಕುಡಿಯದೆ ಇರುವುದು

ಸರಿಯಾದ ಪ್ರಮಾಣದಲ್ಲಿ ನಿಮ್ಮ ದೇಹಕ್ಕೆ ಅವಶ್ಯವಿರುವ ನೀರನ್ನು ಸೇವಿಸದೇ ಇದ್ದರೆ ಅದು ನಿಮ್ಮ ಎದೆಹಾಲು ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ನೀರು ಸೇವನೆ ಇಂದ ಎದೆಹಾಲು ಉತ್ಪತ್ತಿ ಕೂಡ ಕಡಿಮೆ ಆಗುತ್ತದೆ. ಅದಕ್ಕಾಗಿ ನಿಮಗೆ ಅವಶ್ಯವಿರುವ ನೀರನ್ನು ಕುಡಿಯಿರಿ.


೨.ಸರಿಯಾಗಿ ಆಹಾರ ಸೇವನೆ ಮಾಡದಿರುವುದು

ನೀವು ತೂಕವನ್ನು ಅಥವಾ ಉಬ್ಬಿದ ಹೊಟ್ಟೆಯನ್ನು ಬೇಗನೆ ಕಡಿಮೆ ಮಾಡಿಕೊಳ್ಳುವ ಆತುರದಲ್ಲಿ ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಬದಲು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಎದೆಹಾಲು ಹೆಚ್ಚು ಉತ್ಪತ್ತಿ ಆಗಲು ಸಹಾಯ ಆಗುವುದರ ಜೊತೆಗೆ ಮಗುವಿನ ಪೋಷಣೆಯು ಉತ್ತಮವಾಗಿರುತ್ತದೆ.


೩.ಮಾತ್ರೆಗಳ ಸೇವನೆ

ಗರ್ಭನಿರೋಧಕ ಮತ್ತು ಮುಂತಾದ ಕೆಲವು ಮಾತ್ರೆಗಳನ್ನು ಸೇವಿಸುವುದು ಎದೆಹಾಲು ಉತ್ಪತ್ತಿ ಆಗುವುದರ ಮೇಲೆ ಪರಿಣಾಮ ಬೀರಿ ಎದೆಹಾಲನ್ನು ಕಡಿಮೆ ಮಾಡಬಹುದು. ನೀವು ಮಾತ್ರೆ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.


೪.ಅತಿಯಾಗಿ  ಕೆಫೇನ್  ಸೇವನೆ ಮಾಡಬೇಡಿ

ಎದೆಹಾಲುಣಿಸುವ ಸಮಯ ನೀವು ಕಾಫಿ ಅಲ್ಲಿ ಕಾಣಿಸಿಕೊಳ್ಳುವ  ಕೆಫೇನಿನ ಅತಿಯಾದ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಮತ್ತು ನಿಮ್ಮ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ನೀವು ಕಾಫಿ ಸೇವನೆ ಮಾಡಲೇಬೇಕು ಎಂದಾದರೆ ದಿನಕ್ಕೆ ಒಂದು ಲೋಟ ಕಾಫಿ ಸೇವನೆ ಮಾತ್ರ ಸಾಕು.


೫.ಮೀನು

ಪಾದರಸದ ಅಂಶ ಅತಿಯಾಗಿರುವ ಬಂಗುಡೆ ಮತ್ತು ಇತರೆ ಮೀನುಗಳನ್ನು ಸೇವಿಸುವುದು ಅಪಾಯ.


೬.ಅತಿಯಾದ ಬೆಳ್ಳುಳ್ಳಿ

ಇದು ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬಿರದೇ ಇದ್ದರೂ, ಹಾಲಿನ ರುಚಿ ಮತ್ತು ವಾಸನೆಯನ್ನು ಬದಲಿಸುವ ಕಾರಣ ಮಗುವು ಕಡಿಮೆ ಹಾಲನ್ನು ಸೇವಸುವಂತೆ ಆಗಬಹುದು ಎಂಬ ಕಾರಣದಿಂದ ಅತಿಯಾದ ಬೆಳ್ಳುಳ್ಳಿಯನ್ನು ಸೇವಿಸಬೇಡಿ ಎಂದು ಹೇಳುವರು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon