Link copied!
Sign in / Sign up
1
Shares

ನೀವು ಪರಿಗಣಿಸಲೇಬೇಕಾದ ಎದೆಹಾಲಿನ 6 ಮಹತ್ವದ ಉಪಯೋಗಗಳು

ಒಂದು ಹೆಣ್ಣು ಗರ್ಭಿಣಿ ಆದೊಡನೆ, ಎದೆಹಾಲು ನೀಡುವುದರ ಬಗ್ಗೆ  ಪ್ರಶ್ನೆಗಳು, ಚರ್ಚೆಗಳು ಹುಟ್ಟುಕೊಳ್ಳುತ್ತುವೆ. ಎಲ್ಲರು ಎದೆಹಾಲು ತುಂಬಾ ಉಪಯೋಗಕಾರವಾದದ್ದು, ತುಂಬಾ ಮುಖ್ಯವಾದದ್ದು ಎಂದು ಹೇಳುತ್ತಾರೆ. ಆದರೆ ಯಾರಿಗೆ ಮುಖ್ಯವಾದದ್ದು, ಯಾರಿಗೆ ಉಪಯೋಗಕಾರವಾದದ್ದು?

ಹೀಗಾಗಿಯೇ, ಎದೆಹಾಲು ನೀಡುವಿಕೆಯ ಬಗ್ಗೆ ಇಲ್ಲಿಯವರೆಗೆ ಹಲವಾರು ಸಂಶೋಧನೆಗಳು, ಅಧ್ಯಯನಗಳು ನಡೆದಿವೆ. ಅಲ್ಲದೆ ಅವುಗಳೆಲ್ಲವೂ ಎದೆಹಾಲು ನೀಡುವುದರಿಂದ ಆಗುವ ಅನೇಕಾನೇಕ ಉಪಯೋಗಗಳನ್ನು ನಮ್ಮ ಮುಂದೆ ಇಟ್ಟಿವೆ. ಅಂಥವುಗಳಲ್ಲಿ ನಾವು ಆಯ್ದ 7 ಅತ್ಯುತ್ತಮ ಉಪಯೋಗಗಳ ಪಟ್ಟಿ ಇಲ್ಲಿ ಮಾಡಿದ್ದೇವೆ ನೋಡಿ :

೧. ಎದೆಹಾಲು ಪರಿಪೂರ್ಣ ಆಹಾರವನ್ನು ನೀಡುತ್ತದೆ

ಮಾನವನ ದೇಹವು ಹಲವು ಚಮತ್ಕಾರಿ ಕೆಲಸಗಳನ್ನು ಮಾಡುತ್ತದೆ, ಅಂಥವುಗಳಲ್ಲಿ ಎದೆಹಾಲಿನ ಉತ್ಪತ್ತಿಯು ಒಂದು. ಇದು ನವಜಾತ ಶಿಶುವಿಗೆಂದೇ ಹೇಳಿ ಮಾಡಿಸಿರುವಂತೆ ಇದ್ದು, ಮಗುವು ಆರೋಗ್ಯಕರವಾಗಿ ಮತ್ತು ಸದೃಢವಾಗಿ ಬೆಳವಣಿಗೆ ಹೊಂದಲು ಬೇಕಿರುವ ಎಲ್ಲಾ ಪೋಷಕಾಂಶಗಳ ಸರಿಯಾದ ತುಲನೆಯುಳ್ಳ ಮಿಶ್ರಣವು ಎದೆಹಾಲಿನಲ್ಲಿ ದೊರೆಯುತ್ತದೆ.


೨. ಇದು ಅನಾರೋಗ್ಯದ ವಿರುದ್ಧ ನೈಸರ್ಗಿಕವಾಗಿ ರಕ್ಷಣೆ ನೀಡುತ್ತದೆ

ಕೆಲವೊಂದು ಅಧ್ಯಯನಗಳು ಎದೆಹಾಲಿನಲ್ಲಿ ಪೋಷಕಾಂಶಗಳ ಜೊತೆಗೆ ಪ್ರತಿಕಾಯಗಳು ಕೂಡ ಇದ್ದು, ಇವುಗಳು ನಿಮ್ಮ ಮಗುವಿಗೆ ಅನಾರೋಗ್ಯದ ವಿರುದ್ಧ ಹೊರಡುವ ಶಕ್ತಿ ನೀಡುತ್ತವೆ ಎಂದು ತಿಳಿಸಿವೆ. ಇದು ತುಂಬಾನೇ ಮಹತ್ವದ ಉಪಯೋಗ, ಏಕೆಂದರೆ ಅಷ್ಟು ಚಿಕ್ಕ ವಯಸ್ಸಿನ ಮಕ್ಕಳಿಗೆ ಔಷಧಿಗಳನ್ನು ನೀಡುವುದು ಬಹುತೇಕ ನಿಷಿದ್ಧ.


೩. ಪೋಷಣೆಯು SIDS (ದಿಢೀರನೆ ಶಿಶುಗಳು ಸಾವನ್ನಪ್ಪುವ ಸಿಂಡ್ರೋಮ್) ಆಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ

ಮಗುವನ್ನು ಮಾಡಿಕೊಳ್ಳುವುದರ ಜೊತೆಗೆ ಬರುವ ಒಂದು ಭಯ ಹುಟ್ಟಿಸುವ ವಿಷಯ ಎಂದರೆ ಅದನ್ನು SIDS ಇಂದ ಕಳೆದುಕೊಳ್ಳುವ ಸಾಧ್ಯತೆ. ಒಂದು ಅಧ್ಯಯನವು ಎದೆಹಾಲು ನೀಡಿ ಪೋಷಣೆ ಮಾಡುವುದರಿಂದ ಈ SIDS ಉಂಟಾಗುವ ಸಾಧ್ಯತೆಗಳನ್ನು ಸುಮಾರು 50% ವರೆಗೂ ಕಡಿಮೆ ಮಾಡಬಹುದು ಎಂಬುದು ತಿಳಿಸಿದೆ. ಅಷ್ಟೇ ಅಲ್ಲದೆ ಆ ಅಧ್ಯಯನವು ಪೋಷಕರಿಗೆ ಎದೆಹಾಲಿನ ಪೋಷಣೆಯನ್ನು ಆರು ತಿಂಗಳುಗಳವರೆಗೆ ಮಾಡಲು ತಿಳಿಸಿದ್ದಾರೆ.


೪. ಅಸ್ತಮಾವನ್ನು ದೂರವಿಡುತ್ತದೆ

ಅಸ್ಥಮದೊಂದಿಗೆ ಬದುಕುವುದು ಸುಲಭದ ಮಾತಲ್ಲ. ಅದೃಷ್ಟವಶಾತ್, ಕೆಲವು ದಿನಗಳ ಹಿಂದೆಯಷ್ಟೇ ಯಾವ ಮಕ್ಕಳಿಗೆ ಅನುವಂಶಿಕವಾಗಿ (ಅಂದರೆ ಪೀಳಿಗೆಯಿಂದ ಪೀಳಿಗೆಗೆ) ಅಸ್ತಮಾ ಉಂಟಾಗುವ ಸಾಧ್ಯತೆಗಳು ಇರುತ್ತವೋ, ಅವರಿಗೆ ಎದೆಹಾಲು ನೀಡುವ ಮೂಲಕ ರಕ್ಷಣೆ ನೀಡಬಹುದು ಎಂಬುದು ತಿಳಿದು ಬಂದಿದೆ.


೫. ಎದೆಹಾಲು ನೀಡುವುದು ದುಂದುವೆಚ್ಚವನ್ನು ಕಡಿಮೆ ಮಾಡಿಸುತ್ತದೆ

ಅಮ್ಮನ ದೇಹವೇ ಎದೆಹಾಲನ್ನು ಉತ್ಪತ್ತಿ ಮಾಡುವುದರಿಂದ, ಇದು ದುಡ್ಡು ಕೂಡ ಉಳಿಸುವಂತಹ ಒಂದು ಅತ್ಯುದ್ಭುತ ಪ್ರಕ್ರಿಯೆಯಾಗಿದೆ. ಜಗತ್ತಿನ ಎಲ್ಲಾ ತಾಯಂದಿರು ವೈದ್ಯರು ಹೇಳುವಷ್ಟು ಸಮಯದವರೆಗೆ ಎದೆಹಾಲನ್ನು ನೀಡಿದರೆ, ಸುಮಾರು 36೦ ಶತಕೋಟಿ ಡಾಲರ್ ಅಷ್ಟು ದುಡ್ಡು ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ.


೬. ಎದೆಹಾಲನ್ನು ಉತ್ಪತ್ತಿ ಮಾಡುವುದು ಕೊಬ್ಬನ್ನು ಕರಗಿಸುತ್ತದೆ

ಒಂದು ಮಗುವಾದ ಮೇಲೆ, ನೀವು ಪುನಃ ವ್ಯಾಯಾಮ ಎಲ್ಲಾ ಮಾಡಿ ತೂಕ ಕಳೆದುಕೊಳ್ಳುವಷ್ಟು ಸಮಯ ನಿಮಗೆ ಸಿಗಲಾರದು. ಎದೆಹಾಲು ನೀಡುವುದರಿಂದ ನೀವು ದಿನಕ್ಕೆ 450-700 ಕ್ಯಾಲೊರಿಗಳನ್ನ ಕರಗಿಸುವುದರಿಂದ, ಬಹಳಷ್ಟು ಹೆಂಗಸರು ತಾವು ಪುನಃ ಮುಂದಿನ ಮೈಕಟ್ಟಿಗೆ ವಾಪಸ್ ಆಗಲು ಎದೆಹಾಲು ನೀಡುವುದು ನೆರವು ನೀಡಿತೆಂದು ಹೇಳುವರು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon