Link copied!
Sign in / Sign up
2
Shares

ಎದೆಹಾಲುಣಿಸುವಾಗ ಈ ೫ ಆಹಾರಗಳನ್ನು ಸೇವಿಸಬಾರದು, ಏಕೆ?

ಗರ್ಭಾವಸ್ಥೆಯಂತೆ, ಮಗುವಿನ ಪೋಷಣೆ ಅಥವಾ ಎದೆಹಾಲುಣಿಸುವುದು ತುಂಬಾ ಕಷ್ಟಕರವಾದ ವಿಷಯ. ಎದೆಹಾಲುಣಿಸುವ ತಾಯಿ ಅದರಲ್ಲೂ ಈ ಸಮಯದಲ್ಲಿ, ನಿರಾಕರಿಸದೆ ಆರೋಗ್ಯಕರ ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು. ಈ ಸಮಯದಲ್ಲಿ ಅವರಿಗೆ ಹೆಚ್ಚು ಹಸಿವಾಗುವಂತೆ ಮತ್ತು ಬಳಲಿಕೆಯಾಗುವಂತೆ ಅನಿಸುವುದು ಸ್ವಾಭಾವಿಕ. ಅದು ಏನೇ ಇರಲಿ, ತಾಯಿ ಸೇವಿಸುವ ಆಹಾರ ಪದಾರ್ಥ ಅಥವಾ ದ್ರವಗಳು ಯಾವುದೇ ಇರಲಿ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ(ಅದು ನೇರವಾಗಿ ಅಥವಾ ಪರೋಕ್ಷವಾಗಿ ಆಗಿರಬಹುದು). ಕೆಲವು ಆಹಾರ ಪದಾರ್ಥಗಳಿಂದ ಮಗುವಿಗೆ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎದೆಹಾಲುಣಿಸುವ ತಾಯಿ ತಾನು ತಿನ್ನುವ ಆಹಾರ ಪದಾರ್ಥಗಳ ಮೇಲೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಹಾಲುಣಿಸುವ ಸಮಯದಲ್ಲಿ ಕೆಳಗಿನ ಆಹಾರಗಳು ಮತ್ತು ಪಾನೀಯಗಳನ್ನು ತಪ್ಪಿಸುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.

೧.ಚಾಕೊಲೇಟ್(ಮಿಠಾಯಿ)

ಎದೆಹಾಲುಣಿಸುವ ತಾಯಿಗೆ, ಮಗುವು ಎದೆಹಾಲುಕುಡಿಯುದನ್ನು  ಬಿಡುವವರೆಗೂ, ಇದರ ಸೇವನೆಯನ್ನು ಬಿಡುವುದು ಮಹಾದುಃಖಕರ ವಿಷಯವಾಗಬಹುದು. ಮಹಿಳೆಯ ಮನಸ್ಥಿತಿ ಏರುಪೇರು ಇಂದ ಆಹಾರ ಸೇವಿಸುವ ಕಡು ಬಯಕೆಗಳವರೆಗೂ ಚಾಕೊಲೇಟ್ ಗಳು ಅವರ ಆಹಾರ ಕ್ರಮದಲ್ಲಿ, ತಮ್ಮ ಗರ್ಭಾವಸ್ಥೆಯ ಸಮಯದಿಂದಲೂ ಇರುತ್ತದೆ. ಇದು ಗರ್ಭಾವಸ್ಥೆಯ ದಿನಗಳನ್ನು ಸುಲಭವಾಗಿಸಲು ಸಹಾಯವಾಗುತ್ತದೆ. ಆದರೆ ಎದೆಹಾಲುಣಿಸುವ ಸಂದರ್ಭದಲ್ಲಿ ಇದನ್ನು ಅತಿಯಾಗಿ ಸೇವಿಸುವುದರಿಂದ ಮಗುವಿಗೆ ವಿರೇಚಕ(ಮಲವಿಸರ್ಜನೆ) ಪರಿಣಾಮ ಆಗಬಹುದು. ನೀವು ಹೆಚ್ಚು ಚಾಕೊಲೇಟ್ ಗಳನ್ನೂ ಹೊಂದಿದ್ದರು ಅದರ ಮಿತಿಯಾದ ಸೇವನೆಯಿಂದ, ನಿಮ್ಮ ಮಗುವಿನ ಖುಷಿ ಬುತ್ತಿಯ ಮೇಲೆ ಯಾವ ಪರಿಣಾಮವು ಬೀರುವುದಿಲ್ಲ.

೨.ಹಾಲು ಉತ್ಪನ್ನಗಳು (ಹಸುವಿನ ಹಾಲು)

ಅನೇಕ ಎದೆಹಾಲುಕುಡಿಯುವ ಶಿಶುಗಳು ಡೈರಿ (ಹಾಲು) ಉತ್ಪನ್ನಗಳಿಂದ ಅಲರ್ಜಿಯಂತಹ ತೊಂದರೆಗಳಿಗೆ ಗುರಿಯಾಗುತ್ತಾರೆ. ಅದರ ಪ್ರತಿಕ್ರಿಯೆ ಮತ್ತು ಗುಣಲಕ್ಷಣಗಳು ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಹಸುವಿನ ಹಾಲಿನ ಪ್ರೋಟೀನ್ ಅಸಹಿಷ್ಣುತೆಗೆ ಸಂಬಂಧಿಸಿದ ಕೆಲವು ಸಾಮಾನ್ಯ ಲಕ್ಷಣಗಳು ಎಸ್ಜಿಮಾ, ಅತಿಸಾರ, ವಾಂತಿ, ಮಲಬದ್ಧತೆ, ಉಸಿರುಕಟ್ಟಿಕೊಳ್ಳುವ ಮೂಗು ಮತ್ತು ಆಯಾಸ. ಇಲ್ಲಿ ಹೆಸರಿಸಿರುವ ಲಕ್ಷಣಗಳು ನಿಮ್ಮ ಮಗುವಿನಲ್ಲಿ ಕಂಡುಬಂದರೆ ಕೂಡಲೇ ವೈದ್ಯರ ಬಳಿ ಹೋಗಿ. ಹಲವು ವೈದ್ಯರು ಕೆಲವು ದಿನಗಳ ಕಾಲ ಯಾವುದೇ ಹಸುವಿನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಬೇಡ ಎಂದು ಹೇಳುತ್ತಾರೆ.

೩.ಮೀನು

ವೈದ್ಯರು ಎದೆಹಾಲುಣಿಸುವ ತಾಯಿಯರಿಗೆ ಸಮುದ್ರ ಮೀನು ಸೇವನೆಯನ್ನು ನಿಷೇಧಿಸಲು ಹೇಳುತ್ತಾರೆ.ಟ್ಯೂನ, ಶಾರ್ಕ್, ಮತ್ತು ಮ್ಯಾಕೆರೆಲ್ ನಂತಹ ಸಮುದ್ರ ಮೀನುಗಳು ಪಾದರಸದ ಅಂಶವನ್ನು ಹೆಚ್ಚಾಗಿ ಒಳಗೊಂಡಿರುತ್ತವೆ. ಎದೆಹಾಲುಣಿಸುವ ತಾಯಿ ಈ ತರಹದ ಮೀನನ್ನು ಸೇವಿಸುವುದರಿಂದ, ಪಾದರಸವು ಎದೆಹಾಲಲ್ಲಿ ಮಿಶ್ರಿತವಾಗುತ್ತದೆ. ಪಾದರಸವನ್ನು ಹೆಚ್ಚು ವಿಷಕಾರಿ ಅಂಶ ಎಂದು ಕರೆಯಲಾಗುತ್ತದೆ. ಎದೆಹಾಲಿನ ಮೂಲಕ ಪಾದರಸವು ಮಗುವಿನ ದೇಹ ಸೇರಿದರೆ, ಮಗುವಿನ ಬೆಳೆವಣಿಗೆಯ ಮೇಲೆ ಪರಿಣಾಮಬೀರುತ್ತದೆ. ಸಮುದ್ರ ಮೀನುಗಳನ್ನು ಬಿಟ್ಟು ಎದೆಹಾಲುಣಿಸುವ ತಾಯಿಯರು ಬೇರೆ ಚೆನ್ನಾಗಿ ಬೇಯಿಸಿದ ಮೀನುಗಳನ್ನು ಸೇವಿಸಬಹುದು.

೪.ಮಧ್ಯಪಾನ

ಎದೆಹಾಲುಣಿಸುವ ತಾಯಿಯು ಮಧ್ಯಪಾನ ಮಾಡುವುದರಿಂದ ಮಗುವಿನ ಬೆಳವಣಿಗೆಗೆ ಕುತ್ತಾಗಬಹುದು. ಎದೆಹಾಲಿನಲ್ಲಿ ಸೇರುವ ಮಧ್ಯಸಾರ ಪಾನೀಯ, ಮಗುವಿನ ಸಾಮಾನ್ಯ ಮತ್ತು ಆರೋಗ್ಯಕರ ಬೆಳವಣಿಗೆಗೆ ತಡೆಯೊಡ್ಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಮಗುವು ಅತಿಯಾಗಿ ದುರ್ಬಲಗೊಳ್ಳಬಹುದು, ಮತ್ತು ಹೆಚ್ಚು ಮೃದುತ್ವವನ್ನು ಪಡೆಯಬಹುದು. ನೀವು ಯಾವುದೋ ಕಾರಣದಿಂದ ಮಧ್ಯಪಾನವನ್ನು ಮಾಡಿದರೆ, ಮಾಡಿದ ನಂತರಡಾ ೩-೪ತಾಸುಗಳು ಮಗುವಿಗೆ ಎದೆಹಾಲುಣಿಸಬೇಡಿ(ಅಥವಾ ನಿಮ್ಮ ದೇಹದಲ್ಲಿ ಮಧ್ಯಸಾರ ಪಾನೀಯ ಸಂಪೂರ್ಣ ಖಾಲಿಯಾಗುವವರೆಗೆ). ಇದರ ಜೊತೆಗೆ ಮಹಿಳೆಯು ಧೂಮಪಾನ ಮಾಡುವುದನ್ನು ನಿಲ್ಲಿಸಬೇಕು.

೫.ಸಂಸ್ಕರಿಸಿದ ಆಹಾರ

ನಿಮಗೆ ಇಷ್ಟವಾದ ಸಂಸ್ಕರಿಸಿದ(ಪ್ಯಾಕ್ಡ್) ಆಹಾರ ಪದಾರ್ಥಗಳನ್ನು ತರಿಸಿಕೊಂಡು ಸೇವಿಸುವುದು ಒಳ್ಳೆಯ ಉಪಾಯವಲ್ಲ, ಇದರಿಂದ ನಿಮ್ಮ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಇರುವ ಸರ್ಪಡೆಗಳು ಮತ್ತು ಆಹಾರ ಕೆಡದಂತೆ ಇರಲು ಸೇರಿಸಿರುವ ಸಂರಕ್ಷಕಗಳು ನಿಮ್ಮ ಮಗುವಿಗೆ ಪ್ರತಿಕೂಲವಾಗಿ ಅಪಾಯವನ್ನುಂಟುಮಾಡುತ್ತವೆ. ಆಹಾರಕ್ಕೆ ಸೇರಿಸಿರುವ ಕೆಲವು ಸೇರ್ಪಡೆ ವಸ್ತುಗಳು ಮಗುವಿನ ಅಲರ್ಜಿಗೆ ಸಹಾಯವಾಗಬಹುದು. ಇದರಿಂದ ಮಗುವಿನ ಮನಸ್ಥಿತಿಯಲ್ಲಿ ಏರುಪೇರಾಗಬಹುದು. ಮತ್ತು ಮಗುವು ಉದ್ದಟತನ, ಚಡಪಡಿಸುವಿಕೆ, ಅತಿರೇಕಕ್ಕೆ ಒಳಗಾಗಬಹುದು.

ಇದರ ಜೊತೆಗೆ ಎದೆಹಾಲುಣಿಸುವ ತಾಯಿಯಂದಿರು, ಕಾಫಿ, ಮಸಾಲೆಯುಕ್ತ ತಿನಿಸುಗಳು, ಆಮ್ಲಿಯತೆ ಆಹಾರಗಳು(ಅದರಲ್ಲೂ ವಿಟಮಿನ್ ಸಿ), ಸೋಯಾ, ಬಟಾಣಿ, ಟಮೋಟ, ಮತ್ತು ಎಲೆಕೋಸುಗಳನ್ನೂ ಸೇವನೆಯನ್ನು ತಡೆಯಬೇಕು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon