Link copied!
Sign in / Sign up
1
Shares

ತನ್ನ ನವಜಾತ ಶಿಶುವಿಗೆ ಎದೆಹಾಲು ಉಣಿಸಿದ ಪ್ರಥಮ ತಂದೆ!

ತನ್ನ ಪತ್ನಿ ಏಪ್ರಿಲ್ ಗೆ C-ಸೆಕ್ಷನ್ ನಂತರ ಪ್ರಿ-ಎಕ್ಲ್ಯಾಮ್ಪ್ಸಿಯ ಇಂದ ಉಂಟಾದ ಅಡಚಣೆಗಳಿಂದ ಸೆಳೆವು ಉಂಟಾದಾಗ, ಮ್ಯಾಕ್ಸಿಮಿಲಿಯನ್ ತನ್ನ ಹೆಂಡತಿ ಜ್ಞಾನ ಇಲ್ಲದೆ ಮಲಗಿರುವಾಗ, ತನ್ನ ಮಗುವಿನ ಪೋಷಣೆಯನ್ನು ಹೇಗೆ ಮಾಡಬೇಕು ಎಂಬುದು ತುಂಬಾ ಸ್ಪಷ್ಟವಾಗಿ ಗೊತ್ತಿತ್ತು. ಹೊಸದಾಗಿ ತಂದೆಯಾಗುವ ಗಂಡಸರು ಕೇವಲ ಮಗುವನ್ನು ಸ್ಪರ್ಶಿಸಿ, ಕೈಗಳಲ್ಲಿ ಇಟ್ಟುಕೊಳ್ಳುವುದರಲ್ಲಿ ತೃಪ್ತಿ ಕಂಡುಕೊಂಡು ಬಿಡುತ್ತಾರೆ. ಆದರೆ, ಮ್ಯಾಕ್ಸಿಮಿಲಿಯನ್ ಒಂದು ಹೆಜ್ಜೆ ಮುಂದೆ ಹೋಗಿ, ಕೃತಕವಾದ ನಿಪ್ಪಲ್ ಬಳಸಿ ತನ್ನ ಮಗುವಿಗೆ “ಎದೆಹಾಲು” ನೀಡಿದ್ದಾನೆ.

ಮ್ಯಾಕ್ಸ್ ಪ್ರಕಾರ ತಾನು ತನ್ನ ಮಗಳ ಮುಖವನ್ನು ಮೊದಲ ಬಾರಿ ನೋಡಿದೊಡನೆಯೇ ತನ್ನಲ್ಲಿದ್ದ ತಂದೆ ಎಚ್ಚೆತ್ತುಕೊಂಡ. ಅಂದಹಾಗೆ ಮ್ಯಾಕ್ಸಿಯ ನವಜಾತ ಮಗಳ ಹೆಸರು ರೋಸಲಿಯಾ.

“ಆ ಕ್ಷಣ ನನಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ನನ್ನ ಹೆಂಡತಿ ಸೆಳೆವು ಉಂಟಾಗಿ ಜ್ಞಾನ ತಪ್ಪುವುದನ್ನು ನಾನೇ ಕಣ್ಣಾರೆ ನೋಡುತ್ತಿದ್ದೆ. ಆದರೆ ನನಗೆ ಮತ್ತಷ್ಟು ಯೋಚನೆ ಉಂಟಾಗಿದ್ದು, ನನ್ನ ಹೆಂಡತಿಯ ಜೊತೆ ರೂಮಿನಲ್ಲಿ ಇನ್ನೊಂದು ಜೀವ ಇತ್ತು. ಅದು ನನ್ನ ಮಗಳು. ನಂತರ ವೈದ್ಯರು ಮಗುವನ್ನು ನನ್ನ ಬಳಿ ತಂದರು. ಆಕೆಯು ನಾನೇ ಸೃಷ್ಟಿ ಮಾಡಿದ ಒಂದು ಖುಷಿಯ ಬುತ್ತಿ ಆಗಿದ್ದಳು. ಈಗ ಅವಳ ಜವಾಬ್ದಾರಿ ನನ್ನದು.”

ಫೀಡಿಂಗ್ ಬಾಟಲಿಯನ್ನು ಬಳಸಿ ಮಗುವಿಗೆ ಹಾಲು ನೀಡುವ ಬದಲು, ಮಗುವಿಗೆ ಆದಷ್ಟು ನೈಜ್ಯವಾದ ಎದೆಹಾಲು ಕುಡಿಯುವ ಅನುಭವವನ್ನು ಹೊಂದಲಿ ಎಂಬ ಆಶಯದಿಂದ, ಮ್ಯಾಕ್ಸಿ ತನ್ನ ಎದೆಗೆ ಕೃತಕ ನಿಪ್ಪಲ್ ಅನ್ನು ಅಂಟಿಸಿಕೊಂಡು, ಆ ಕೃತಕ ನಿಪ್ಪಲಿಗೆ ಸಿರಿಂಜ್ ಇಂದ ಫಾರ್ಮುಲಾ ಹಾಲನ್ನು ಸಪ್ಲೈ ಮಾಡಿ ಮಗುವಿಗೆ ಕುಡಿಸಿದ್ದಾನೆ. ಮ್ಯಾಕ್ಸಿ ಮಗು ಜನಿಸಿದ ಆಸ್ಪತ್ರೆ ಸಿಬ್ಬಂದಿಯ ಪ್ರಕಾರ, ಇದು ಮ್ಯಾಕ್ಸಿಯ ಆವಿಷ್ಕಾರವಾಗಿದ್ದು, ಮಗುವಿಗೆ ಒಂದು ತಂದೆ ಈ ವಿಧಾನದಲ್ಲಿ ಹಾಲು ಕುಡಿಸಿರುವುದು ಮೊದಲು ಎನ್ನುತ್ತಾರೆ.

ಮ್ಯಾಕ್ಸಿಗೆ ಇದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಅಷ್ಟಾಗಿ ಅರಿವಿಲ್ಲದೆ ಇದ್ದದ್ದುರಿಂದ, ಆಸ್ಪತ್ರೆಯ ಸಿಬ್ಬಂದಿ ಮ್ಯಾಕ್ಸಿಯ ಆಶಯ ಸತ್ಯವನ್ನಾಗಿಸಲು ಬೇಕಿರುವ ಎಲ್ಲಾ ಸಹಾಯವನ್ನು ನೀಡಿದರು ಎಂದು ಸ್ವತಃ ಮ್ಯಾಕ್ಸಿ ಹೇಳುತ್ತಾನೆ. “ನಾನೇನು ಈ ವಿಷಯದಲ್ಲಿ ಪರಿಣಿತ ಆಗಿರದ ಕಾರಣ, ನನಗೆ ಸಾಕಷ್ಟು ಮಾರ್ಗದರ್ಶನ ಮತ್ತು ನೆರವಿನ ಕೈಗಳು ಬೇಕಾಗಿದ್ದವು. ಇದು ನೈಜ್ಯವಾದ ಎದೆಹಾಲುಣಿಸುವಿಕೆಗೆ ಅತ್ಯಂತ ಹತ್ತಿರವಾದ ವಿಧಾನವಾಗಿದ್ದು, ಇದು ಯಶಸ್ವೀ ಆಗಿದ್ದೆ ನನಗೆ ಖುಷಿ” ಎನ್ನುತ್ತಾನೆ ಮ್ಯಾಕ್ಸಿ.

ಎಲ್ಲವೂ ಸರಿಯಾಗಿ, ಈಗ ತಾಯಿ ಏಪ್ರಿಲ್ ಚೇತರಿಸಿಕೊಳ್ಳುತ್ತಿದ್ದು, ಆಕೆಯನ್ನು ಮನೆಗೆ ಕರೆತರಲಾಗಿದೆ. ಇನ್ನು ಮುದ್ದು ಮಗು ರೋಸಲಿಯಾ ಅಂತೂ ನೀವು ಊಹಿಸಲಾರದಷ್ಟು ಮುದ್ದಾಗಿದ್ದಾಳೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon