Link copied!
Sign in / Sign up
8
Shares

ಎದೆಹಾಲು ನೀಡುವಾಗ ನೀವು ಸೇವಿಸುವ ಊಟ ಮಗುವಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ

ಗರ್ಭಾವಸ್ಥೆಯಲ್ಲಿ ಮತ್ತು ನಂತರದ ದಿನಗಳಲ್ಲಿ ಉತ್ತಮ ಆಹಾರವನ್ನು ನಿರ್ವಹಿಸುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ನೀವು ಈಗಾಗಲೇ ಕೇಳಿದ್ದೀರಿ. ಇದು ಕೇವಲ ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಅಲ್ಲ, ನಿಮ್ಮ ಚಿಕ್ಕಮಕ್ಕಳ ಮೇಲೆ ಸಹ ಪ್ರಭಾವ ಬೀರುತ್ತದೆ. ಹಾಲುಣಿಸುವ ಸಮಯದಲ್ಲಿ ನಿಮ್ಮ ಮಗು ಚಡಪಡಿಸುತ್ತಿದೆಯೆಂದು ನೀವು ಕಂಡುಕೊಂಡರೆ, ನೀವು ಏನನ್ನು ತಿನ್ನುತ್ತಿದ್ದೀರಿ ಎಂಬುದರಲ್ಲಿ ಏನೋ ತಪ್ಪು ಇದೆಯೆಂದು  ಅರ್ಥೈಸಬಹುದು.

ಕೆಲವೊಂದು ತಾಯಂದಿರು ತಾವು ತಿನ್ನುವ  ಆಹಾರವು ,ಮಗುವು ತಮ್ಮ ಸ್ತನ ಹಾಲಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುವುದರ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬುತ್ತಾರೆ.ಕೆಲವರು  ತಾವು  ಯಾವುದೇ ಹಾಲಿನ ಉತ್ಪನ್ನಗಳನ್ನು ಸೇವಿಸದ ದಿನ ತಮ್ಮ ಮಗುವು ಕಡಿಮೆ ಹೊಟ್ಟೆ ನೋವನ್ನು ಹೊಂದಿತ್ತು ಎಂದು ಹೇಳುತ್ತಾರೆ ,ಆದರೆ ಇದರರ್ಥ ನೀವು ಹಸಿರು ಎಲೆಗಳ ತರಕಾರಿಗಳಂತಹ, ಸೊಪ್ಪುಗಳಂತಹ ಇತರ ವಿಷಯಗಳಿಂದ ಕ್ಯಾಲ್ಸಿಯಂ ಅನ್ನು ಪಡೆಯಬೇಕಾಗಿದೆ ಎಂದು ಸಹ ಅರ್ಥೈಸಿಕೊಳ್ಳಬೇಕಾಗಿದೆ.

ಹಾಲುಣಿಸುವ ಸಮಯದಲ್ಲಿ ನಿಮ್ಮ ಮಗುವು ಚಡಪಡಿಸುತ್ತಿದ್ದರೆ ಅಥವಾ ಕಿರಿಕಿರಿ ಉಂಟಾಗಿದ್ದರೆ, ಮೊದಲಿಗೆ ಅದು ನಿಮ್ಮ ಮೊಲೆತೊಟ್ಟನ್ನು ಹಿಡಿದುಕೊಳ್ಳುವ ರೀತಿಯನ್ನು ಗಮನಿಸಿ ,ಮತ್ತು ನಿಮ್ಮ ಮಗುವನ್ನು ನಿಮ್ಮ ತೋಳುಗಳಲ್ಲಿ ಹೇಗೆ ಹಿಡಿದಿಡುತ್ತೀರಿ ಎಂಬುದರ ಬಗ್ಗೆ ನೋಡಿ. ಎಲ್ಲವನ್ನೂ ಪರಿಪೂರ್ಣವೆಂದು ನೀವು ಕಂಡುಕೊಂಡರೆ ಬಹುಶಃ ಇದು ನಿಮ್ಮ ಆಹಾರವನ್ನು ಪರಿಗಣಿಸುವ ಸಮಯ. ನಿಮ್ಮ ಮಗು ಎಷ್ಟು ತಿಂದು ಬಿಡುತ್ತದೆ  ಮತ್ತು ಮಲದ  ಬಣ್ಣವನ್ನೂ ಸಹ ನೀವು ಗಮನಿಸಬೇಕು.

ಯಾವ ಆಹಾರವನ್ನು ತಪ್ಪಿಸಬೇಕೆಂಬುದನ್ನು ಗಮನಿಸುವುದು ಬಹಳ ಕಷ್ಟ, ಏಕೆಂದರೆ ಇದು ಪ್ರತಿ ತಾಯಿಯಲ್ಲೂ ವಿಶಿಷ್ಟವಾಗಿದೆ. ಸಾಮಾನ್ಯ ನಿಯಮದಂತೆ,ಹಾಳುಮೂಳು ಮತ್ತು ಕೊಬ್ಬಿನ ಆಹಾರಗಳು,ಮದ್ಯ,ಮತ್ತು ಕೊಬ್ಬಿನ ಆಹಾರಗಳು,ಹೆಚ್ಚಿನ ಮಟ್ಟದ ಪಾದರಸವನ್ನು ಒಳಗೊಂಡಿರುವ ಮೀನುಗಳು ಇವುಗಳಿಂದ ದೂರ ಉಳಿಯುವುದು ಉತ್ತಮ. ಆದರೆ ಇದಲ್ಲದೆ, ಕೆಲವು (ಪ್ರಾಯಶಃ ಆರೋಗ್ಯಕರ) ಆಹಾರಗಳು ಸಹ  ನಿಮ್ಮ ಎದೆ ಹಾಲಿನ ಮೇಲೆ ಪರಿಣಾಮ ಬೀರಬಹುದು. ಕೆಲವು ತಾಯಂದಿರು ಈರುಳ್ಳಿಗಳನ್ನು  ಅಪರಾಧಿಗಳು ಎಂದು ನಂಬುತ್ತಾರೆ ಮತ್ತು ಇತರರು ಇದು ಆಲೂಗಡ್ಡೆಯಿಂದ ಪಿಷ್ಟವೆಂದು ಹೇಳುತ್ತಾರೆ. ನೀವು ಯಾವುದಾದರೂ ಆಹಾರವನ್ನು ಅನುಮಾನಿಸಿದರೆ, ನಿಮ್ಮ ಆಹಾರದಿಂದ ಅದನ್ನು ಕಡಿತಗೊಳಿಸಲು ಪ್ರಯತ್ನಿಸಿ ಮತ್ತು ಹಾಲೂಡುವಾಗ ನಿಮ್ಮ ಮಗು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಿ.

ನಿಮ್ಮ ಮಗುವಿಗೆ ಹಾಲುಣಿಸುವಾಗ ನೀವು ನೆನಪಿನಲ್ಲಿರಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ:

೧..ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಪಡೆದ  ಕೆಲವು ಕಿಲೋಗಳನ್ನು ಕಳೆದುಕೊಳ್ಳಲು ನಿಮ್ಮ ಆಹಾರ ಸೇವನೆಯನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿದ್ದರೆ, ಕ್ಯಾಲೋರಿ-ಎಣಿಕೆಯ ವಿಧಾನಕ್ಕೆ ಹೋಗಬೇಡಿ. ಪ್ರತಿ ಬಾರಿ ಹಸಿವಾದಾಗ ತಿನ್ನಿ,ನೀವು ತಿನ್ನುವ ಆಹಾರವು ರೋಗ್ಯಕರ ಭಾಗದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ.

೨.ನೀರು, ರಸಗಳು, ಶೇಕ್ಸ್ ಮತ್ತು ಚಹಾಗಳು - ಹೀಗೆ ಬಹಳಷ್ಟು ದ್ರವಗಳನ್ನು ಸೇವಿಸಿ. ನಿಮ್ಮ ಮಗುವಿಗೆ ಆನಂದಿಸಲು ಸಾಕಷ್ಟು ಹಾಲು ಸರಬರಾಜು ಮಾಡುವಲ್ಲಿ ಎಲ್ಲವೂ  ಕೆಲಸ ಮಾಡುತ್ತವೆ.

೩.ನಿಮ್ಮ ಕುಟುಂಬದಲ್ಲಿ ಅಲರ್ಜಿಯ ಇತಿಹಾಸವನ್ನು ನೀವು ಹೊಂದಿದ್ದರೆ, ನೀವು ಹಾಲುಣಿಸುವ ಸಮಯದಲ್ಲಿ ಅವುಗಳನ್ನು ಸೇವಿಸುವುದರಿಂದ ಅಪಾಯಕ್ಕೆ ಒಳಗಾಗಬೇಡಿ.

ಇದೆಲ್ಲವೂ  ನಿಮ್ಮ ಹಾಲುಣಿಸುವ ಸಮಯದಲ್ಲಿ  ಆಹಾರವನ್ನು ತಲೆಕೆಳಗಾಗಿ ತಿರುಗಿಸಬೇಕೆಂದು ಹೇಳಲು ಹೋಗುತ್ತಿಲ್ಲ, ನೀವು ಈಗಾಗಲೇ ಏನು ಮಾಡುತ್ತಿರುವಿರಿ ಅದನ್ನು ಮುಂದುವರಿಸಿ ಆದರೆ ಸ್ವಲ್ಪ ಹೆಚ್ಚು ಕಾಳಜಿ ವಹಿಸಿರಿ. ನೀವು ಎಲ್ಲವನ್ನೂ ಪಡೆಯದಿದ್ದರೂ ಸಹ ನಿಮ್ಮ ಮಗುವಿಗೆ ಎಲ್ಲ ಅಗತ್ಯ ಪೋಷಕಾಂಶಗಳನ್ನು ನೀಡುವುದಕ್ಕಾಗಿ ಪ್ರಕೃತಿ ಅದ್ಭುತ ಮಾರ್ಗವನ್ನು ಹೊಂದಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon