Link copied!
Sign in / Sign up
0
Shares

ಈ ಹವ್ಯಾಸಗಳಿಂದ ಬುದ್ದಿಯನ್ನು ಚುರುಕುಗೊಳಿಸಬಹುದು..


ಬುದ್ದಿಯನ್ನು ಚುರುಕುಗೊಳಿಸುವುದು ಹೇಗೆ ಇಲ್ಲಿದೆ

ಅರೋಗ್ಯ ದೇಹದ ಜೊತೆ ಆರೋಗ್ಯಕರ ಮನಸ್ಸು ಅತ್ಯಗತ್ಯ. ಆದರೆ, ನಾವು ವಯಸ್ಸಾದಂತೆ, ನಾವು ಸಾಮಾನ್ಯವಾಗಿ ನಮ್ಮ ಮಾನಸಿಕ ಬೋಧನೆಯನ್ನು ಕಳೆದುಕೊಳ್ಳುತ್ತೇವೆ ಮತ್ತು ಗೊಂದಲಗಳಿಗೆ ಒಳಗಾಗುತ್ತೇವೆ. ನಿಮ್ಮ ಮೆದುಳಿನ ಆರೈಕೆಯನ್ನು ಬಹು ಮುಖ್ಯ ನಾವು ಹೇಗೆ ನಮ್ಮ ಬುದ್ದಿ ಶಕ್ತಿಯನ್ನು ಮತ್ತು ಜ್ಞಾಪಕ ಶಕ್ತಿಯನ್ನು ವೃದ್ಧಿಗೊಳಿಸಬಹುದೆಂದು ಈ ಕೆಳಗಿನ ವಿಧಾನ ಗಲ್ಲಿ ತಿಳಿಸಲಾಗಿದೆ.

ಪುಸ್ತಕ ಓದಿ





ನೀವು ಇಂಟಲಿಜೆಂಟ್ ಆಗಬೇಕಾದರೆ ನಮಗೆ ಜ್ಞಾನದ ಅಗತ್ಯತೆ ಇರುತ್ತದೆ, ಜ್ಞಾನಸಂಪಾದಿಸಲು ನಾವು ಪುಸ್ತಕಗಳನ್ನು ಓದಬೇಕು, ನಮ್ಮ ಇಷ್ಟದ ವಿಷಯದ ಯಾವುದೇ ಪುಸ್ತಕವಾದರೂ ಸರಿ ನೀವು ಓದಿದಸ್ತು ನೀವು ತಿಳಿದುಕೊಳ್ಳುತ್ತೀರಿ

ದಿನವೂ ವ್ಯಾಯಾಮ ಮಾಡಿ

ದಿನವೂ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತಚಲನೆ ಚೆನ್ನಾಗಿ ಆಗುತ್ತದೆ ಮತ್ತು ದೇಹದಲ್ಲಿರುವ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ, ದೇಹಕ್ಕೆ ಬೇಕಾದ ಹಾರ್ಮೋನ್ಸ್ ಗಳು ಸರಾಗವಾಗಿ ಬಿಡುಗಡೆ ಗೊಳ್ಳುತ್ತವೆ, ಹೀಗಾಗಿ ನಮ್ಮ ಮೆದುಳು ಚುರುಕಾಗುತ್ತದೆ.

ಉತ್ತಮ ಆಹಾರ ಸೇವಿಸಿ

ನಮ್ಮ ಮೆದುಳಿಗೆ ಬೇಕಾದ ಪೋಷಕಾಂಶಗಳನ್ನು ನಮ್ಮ ದಿನ ನಿತ್ಯದ ಆಹಾರದಲ್ಲಿ ಒದಗಿಸಬೇಕು. ಆಹಾರದಲ್ಲಿ ತರಕಾರಿಗಳು, ವಿಟಮಿನ್ಸ್ ಗಳು, ಕಾರ್ಬೋಹೈಡ್ರೇಟ್ಸ್ ಗಳು ಮತ್ತು ಅಮೈನೋ ಆಸಿಡ್ಸ್ ಗಳು ಇರಬೇಕು, ಈ ಆಹಾರಗಳು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.

ಧೂಮಪಾನ ಮತ್ತು ಮದ್ಯಪಾನ ಸೇವನೆ ಕಡಿಮೆಗೊಳಿಸಿ

ಧೂಮಪಾನ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ,ವಿಷಕಾರಿ ಅಂಶಗಳು ನಿಮ್ಮ ದೇಹವನ್ನು ಸೇರಬಹುದು ಇದು ಮೆದುಳಿನ ಕಾರ್ಯಕ್ಕೆ ತೊಂದರೆಯಂನ್ನುಟು ಮಾಡುತ್ತದೆ. ನೀವು ಆಗಾಗ್ಗೆ ಮದ್ಯಪಾನ ಮಾಡಿದರೆ ಅಂತದ್ದೇನು ತೊಂದರೆ ಆಗುವುದಿಲ್ಲ ಆದರೆ ಅತಿಯಾಗಿ ದಿನವೂ ಸೇವಿಸಿದರೆ ತೊಂದರೆಯಾಗುತ್ತದೆ.

ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳಿ



ಧ್ಯಾನದಿಂದ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ ಎಂದು ಹಲವಾರು ಸಂಶೋಧನೆಗಳಿಂದ ತಿಳಿದುಬಂದಿದೆ. ಧ್ಯಾನ ಮಾಡುವುದರಿಂದ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಮತ್ತು ಕಾನ್ಸಂಟ್ರೇಶನ್ ಉತ್ತಮಗೊಳ್ಳುತ್ತದೆ ಮತ್ತು ನೆನಪಿನಶಕ್ತಿ ವೃದ್ಧಿಸುತ್ತದೆ.

ಬುದ್ದಿವಂತ ವ್ಯಕ್ತಿಗಳ ಸ್ನೇಹಬೆಳಸಿ

ನಿಮ್ಮ ಸುತ್ತಮುತ್ತಲಿನ ಜನ ಬುದ್ದಿವಂತರಿದ್ದರೆ ನೀವು ಬುದ್ದಿವಂತರಾಗುತ್ತೀರಿ. ಬುದ್ದಿವಂತರ ಸೇಂಹಾಬೆಳಸಿ, ಆಗಾಗ್ಗೆ ಅವರಜೊತೆ ಮಾತುಕತೆ ನಡೆಸಿ, ವಿಚಾರ ವಿನಿಮಯ ಮಾಡಿಕೊಳ್ಳಿ ನಿಮ್ಮ ಆಲೋಚನೆ ಮತ್ತು ನೀವು ನೋಡುವ ರೀತಿ ಬೇರೆಯಾಗಬಹುದು.

ಟಿವಿ ಮತ್ತು ಇಂಟರ್ನೆಟ್ ನಲ್ಲಿ ಒಳ್ಳೆಯ ವಿಚಾರ ಓದಿ

ನಾವು ನಮ್ಮ ದಿನದ ಹೆಚ್ಚು ಸಮಯವನ್ನು ಟಿವಿ ಹಾಗು ಇಂಟರ್ನೆಟ್ ನಲ್ಲಿ ಕಳೆಯುತ್ತೇವೆ, ಹೀಗಿರುವಾಗ ನಾವು ಟಿವಿ ಯಲ್ಲಿ ಮತ್ತು ಇಂಟರ್ನೆಟ್ ನಲ್ಲಿ ಒಳ್ಳೆಯ ವಿಷಯಗಳನ್ನು ನೋಡಬೇಕು ಮತ್ತು ಅದನ್ನೇ ಫಾಲೋ ಮಾಡಬೇಕು.

ಸಮಸ್ಯೆಗಳನ್ನು ಬಗೆಹರಿಸಿ

ಕಷ್ಟಕರ ಲೆಕ್ಕಗಳನ್ನು ಬಗೆಹರಿಸುವುದರಿಂದ ಅಥವಾ ಬೇರೆಯಾವುದಾದರೂ ಸಮಸ್ಯೆಯನ್ನು ಬಗೆಹರಿಸುದರಿಂದ ಮೆದುಳು ಚುರುಕಾಗಿರುತ್ತದೆ. ಆಗಾಗ್ಗೆ ಸಮಸ್ಯೆ ಅಥವಾ ಸುಡೋಕೋ ಅಂತಹ ಗೇಮ್ ಗಳನ್ನು ಆಡುವುದರಿಂದ ಮೆದುಳಿಗೆ ಒಳ್ಳ್ಳೆಯ ವ್ಯಾಯಾಮವಾದಂತಾಗುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon