Link copied!
Sign in / Sign up
6
Shares

ಯೋನಿಗೆ ಸೆಕ್ಸ್ ಇಂದ ಬಹುಕಾಲ ದೂರ ಉಳಿದರೆ ಏನೆಲ್ಲಾ ಆಗುತ್ತದೆ?

ಸೆಕ್ಸ್ ನಾವು ಊಹಿಸಲಾಗದಷ್ಟು ದಾರಿಗಳಲ್ಲಿ ನಮ್ಮ ದೇಹಕ್ಕೆ ಉಪಕಾರಿ. ಉತ್ತಮ ನಿದ್ದೆಯಿಂದ ಹಿಡಿದು, ನಮ್ಮ ಕ್ಯಾಲೋರಿಗಳನ್ನ ಕರಗಿಸುವುದಷ್ಟೇ ಅಲ್ಲದೆ, ನಮ್ಮ ಚಿತ್ತವನ್ನ ತಿಳಿಯಾಗಿಸಿ ನಮ್ಮನ್ನ ಮಾನಸಿಕವಾಗಿಯೂ ಖುಷಿಯಾಗಿಸುತ್ತದೆ. ಹೀಗಿದ್ದಾಗ, ಸೆಕ್ಸ್ ಇಂದ ಬಹಳ ಕಾಲದವರೆಗೆ ದೂರ ಉಳಿದುಕೊಂಡಾಗ ಕೆಲವೊಂದು ಬದಲಾವಣೆಗಳು ಆಗಲೇಬೇಕು. ಹೀಗೆಂದ ಮಾತ್ರಕ್ಕೆ ನಿಮಗೆ ಬೇಕೆನಿಸಿದಾಗ ಸ್ವಲ್ಪ ದಿನಗಳ ಕಾಲ ಸೆಕ್ಸ್ ಇಂದ ದೂರವಿರುವುದು ತಪ್ಪು ಎಂದಲ್ಲ. ಆದರೆ ಅದರಿಂದ ತುಂಬಾ ಕಾಲ ದೂರ ಉಳಿದುಕೊಂಡರೆ ನಮ್ಮ ದೇಹದಲ್ಲಿ ಅತಿ ಹೆಚ್ಚು ಬದಲಾವಣೆ ಹೊಂದುವ ಭಾಗ ಎಂದರೆ ಅದು ಯೋನಿಯೇ. ಹಾಗಿದ್ದರೆ, ನೀವು ಬಹುಕಾಲ ಸೆಕ್ಸ್ ಇಂದ ದೂರ ಉಳಿದರೆ ನಿಮ್ಮ ಯೋನಿಗೆ ಆಗುವ ವಿಷಯಗಳನ್ನ ತಿಳಿಯೋಣ ಬನ್ನಿ :

 

೧. ಅದು ಪುನಃ ಟೈಟ್ ಆಗುವುದಿಲ್ಲ - ಇದೊಂದು ಸುಳ್ಳು ನಂಬಿಕೆ

ನೀವು ಸೆಕ್ಸ್ ಇಂದ ಬಿಡುವು ತೆಗೆದುಕೊಂಡ ಮಾತ್ರಕ್ಕೆ ನಿಮ್ಮ ಪೆಲ್ವಿಕ್ ಫ್ಲೋರ್ ಟೋನ್ ಆಗುವುದಿಲ್ಲ, ನಿಮ್ಮ ಯೋನಿಯು ಟೈಟ್ ಆಗುವುದಿಲ್ಲ ಅಥವಾ ನಿಮ್ಮ ಹೈಮೆನ್ ಪುನಃ ವಾಪಸ್ ಬರುವುದಿಲ್ಲ. ಒಂದು ವೇಳೆ ನಿಮಗೇನಾದರೂ ಸೆಕ್ಸ್ ಇಂದ ದೂರ ಉಳಿದಿದ್ದು, ಈಗ ಪುನಃ ತೊಡಗಿಕೊಂಡಾಗ ನಿಮ್ಮ ಯೋನಿ ಟೈಟ್ ಆಗಿದೆ ಎಂಬ ಭಾವನೆ ಬಂದರೆ, ಅದು ಕೇವಲ ನೀವು ಬಹಳ ದಿನಗಳ ಬಿಡುವಿನ ನಂತರ ಸೆಕ್ಸ್ ಅಲ್ಲಿ ತೊಡಗಿಕೊಳ್ಳುತ್ತಿರುವುದಕ್ಕೆ ನಿಮ್ಮಲ್ಲಿನ ಒಂದು ರೀತಿಯ ಆತಂಕ ಅಥವಾ ಪ್ರಚೋದನೆಯ ಕೊರತೆ ಕಾರಣ ಆಗಿರಬಹುದು ಅಷ್ಟೇ.


೨. ನೀವು ಒರ್ಗ್ಯಾಸಮ್ (ಲೈಂಗಿಕ ಪರಾಕಾಷ್ಠೆ) ಹೊಂದುವುದು ಕಷ್ಟವಾಗಬಹುದು

ನೀವು ಬಹುಕಾಲ ಸೆಕ್ಸ್ ಇಂದ ದೂರ ಉಳಿದಿದ್ದು ಈಗ ಮರಳುತ್ತಿದ್ದರೆ, ನೀವು ಪುನಃ ಸರಿಯಾದ ಟ್ರ್ಯಾಕಿಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ಹೀಗಾಗಿ ನಿಮ್ಮ ಮೆದುಳು ಲೈಂಗಿಕ ಕ್ರಿಯೆಯಲ್ಲಿ ಸಂಪೂರ್ಣವಾಗಿ ಮಗ್ನರಾಗಲು ಸ್ವಲ್ಪ ವಿಳಂಬವಾಗುತ್ತದೆ. ಇದರಿಂದ ಲೈಂಗಿಕ ಪರಾಕಾಷ್ಠೆ ಹೊಂದುವುದರಲ್ಲಿ ವಿಳಂಬವಾಗುತ್ತದೆ.


೩. ನಿಮ್ಮ ಲೈಂಗಿಕ ಪ್ರತಿಕ್ರಿಯೆಗಳು ಬದಲಾಗುತ್ತವೆ

ಹೌದು ನೀವು ಮುಂಚೆ ಯಾವ ಟಚ್ ಗೆ ಅಥವಾ ಚಟುವಟಿಕೆಗೆ ಲೈಂಗಿಕವಾಗಿ ಉದ್ರೇಕಗೊಂಡು ವದ್ದೆ ಆಗುತ್ತಿದ್ದಿರೋ, ಈಗ ಅವುಗಳೆಲ್ಲವಿಕ್ಕೂ ಹಾಗೆಯೇ ಸ್ಪಂದಿಸುತ್ತೀರ ಎಂಬ ಗ್ಯಾರಂಟಿ ಇಲ್ಲ.


೪. ನಿಮ್ಮ ಯೋನಿಯು ಸ್ವಲ್ಪ ಚಿಕ್ಕದಾಗುತ್ತದೆ

ಈ ಕಾರಣದಿಂದಲೇ ಬಹಳಷ್ಟು ಹೆಂಗಸರು ಸೆಕ್ಸ್ ಅಲ್ಲಿ ಮರಳಿ ಪುನಃ ತೊಡಗಿಕೊಂಡಾಗ ನೋವು ಉಂಟಾಗುತ್ತದೆ ಎಂದು ತಿಳಿಸುತ್ತಾರೆ. ಇದಕ್ಕೆ ಕಾರಣ ಆತಂಕವು ಆಗಿರಬಹುದು. ಹೀಗಾಗಿ ನೀವು ಮೊದಲಿಗೆ ಮೌಖಿಕ ಲೈಂಗಿಕತೆ ಅಥವಾ ಮುಂಕೇಳಿ ಅಲ್ಲಿ ನಿಮ್ಮ ಸಂಗಾತಿಯೊಂದಿಗೆ ಪಾಲ್ಗೊಂಡು, ಆನಂತರ ಸಂಭೋಗದಲ್ಲಿ ತೊಡಗಿ.


೫. ಅದು ಶುಷ್ಕತೆ (ಡ್ರೈನೆಸ್) ಅನುಭವಿಸಬಹುದು

ಲೈಂಗಿಕ ಪ್ರಚೋದನೆಯು ಹೆಣ್ಣಿನ ಯೋನಿಯು ವದ್ದೆ ಆಗುವಂತೆ ಮಾಡುತ್ತದೆ. ಸೆಕ್ಸ್ ಕೊರತೆ ಇಂದ ನಯವಾಗಿಸುವಿಕೆ (ಲೂಬ್ರಿಕೇಷನ್) ಕೂಡ ಕಡಿಮೆ ಆಗುವುದರಿಂದ, ನೀವು ಸೆಕ್ಸ್ ಅಲ್ಲಿ ಪುನಃ ತೊಡಗಿಕೊಳ್ಳುವ ಮುನ್ನ ಮುಂಕೇಳಿಯಲ್ಲಿ ತೊಡಗಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon