Link copied!
Sign in / Sign up
31
Shares

ಗಂಡಸರು ಬಹುಕಾಲ ಸೆಕ್ಸ್ ಇಂದ ದೂರ ಉಳಿದರೆ ಅವರ ದೇಹಕ್ಕೆ ಆಗುವ 5 ವಿಷಯಗಳು

2016ರಲ್ಲಿ ನಡೆದ ಒಂದು ಸಂಶೋಧನೆಯು ಈ ಪೀಳಿಗೆಯ ಮಧ್ಯವಯಸ್ಕರು ಮತ್ತು ಹರೆಯದವರು 1920ರಿಂದ ಜನಿಸಿರುವ ಯಾವುದೇ ಪೀಳಿಗೆಯವರಿಗಿಂತ ಕಡಿಮೆ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ. ಇದು ಖಂಡಿತವಾಗಿ ಒಳ್ಳೆಯ ವಿಷಯ ಅಲ್ಲ. ಏಕೆಂದರೆ, ಮೊದಲನೆಯದಾಗಿ ಸೆಕ್ಸ್ ಒಂದು ಖುಷಿಯ, ಸುಖದ ವಿಷಯ, ಇದರಲ್ಲಿ ಹೆಚ್ಚೆಚ್ಚಾಗಿ ತೊಡಗಬೇಕು ಮತ್ತು ಎರಡನೆಯದಾಗಿ ನೀವು ಸೆಕ್ಸ್ ಅಲ್ಲಿ ತೊಡಗಿಕೊಳ್ಳದಿದ್ದರೆ, ಅದರಿಂದ ಸಿಗುತ್ತಿದ್ದ ಎಷ್ಟೊಂದು ಆರೋಗ್ಯಕರ ಲಾಭಗಳಿಂದ ವಂಚಿತರಾಗುತ್ತೀರಾ.

ಆದರೆ ಗಂಡಸರು ಬಹುಕಾಲ ಸೆಕ್ಸ್ ಇಂದ ದೂರ ಉಳಿದರೆ ಅವರ ದೇಹಕ್ಕೆ ಏನಾಗುತ್ತದೆ? ಇಲ್ಲಿವೆ ನೋಡಿ ಅಂತಹ 6 ಅಚ್ಚರಿ ಮೂಡಿಸುವ ಅಡ್ಡ ಪರಿಣಾಮಗಳು :

೧. ತಾಳವೇ ತಪ್ಪಿ ಹೋಗುತ್ತದೆ

2008ರಲ್ಲಿ ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್ ನಡೆಸಿದ ಒಂದು ಸಂಶೋಧನೆಯಲ್ಲಿ 50,60,70ರ ವಯಸ್ಸಿನ ಲೈಂಗಿಕ ಕ್ರಿಯೆಯಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳದೆ ಇರುವ ಗಂಡಸರು ನಿಮಿರುವಿಕೆಯ ತೊಂದರೆಗೆ ಒಳಗಾಗುತ್ತಾರೆ ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ, ಈ ಸಂಶೋಧನೆಯು ಒಂದು ವೇಳೆ ಗಂಡಸರು ಸಂಗಾತಿ ಇಂದ ದೂರ ಉಳಿದಿದ್ದರೂ ಕಾಲಕಾಲಕ್ಕೆ ಹಸ್ತಮೈಥುನದಲ್ಲಿ ತೊಡಗಿ ವಿಸರ್ಜನೆ ಮಾಡಿದರೆ, ಈ ಅಡ್ಡಪರಿಣಾಮವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಕೂಡ ಸೂಚಿಸಿದೆ.


೨. ಹಸ್ತಮೈಥುನದಲ್ಲಿ ತೊಡಗದಿದ್ದರೆ, ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗೋ ಸಾಧ್ಯತೆ ಹೆಚ್ಚುತ್ತವೆ

ಒಂದು ವೇಳೆ ನೀವು ಈಗಾಗಲೇ ಸಂಭೋಗ ಕಾರ್ಯದಲ್ಲಿ ಹೆಚ್ಚು ತೊಡಗದೇ ಇದ್ದು, ಹಸ್ತಮೈಥುನದಿಂದಲೂ ದೂರ ಉಳಿದರೆ ಅದು ತುಂಬಾನೇ ಹಾನಿಕಾರಕ. ಬಹಳಷ್ಟು ಅಧ್ಯಯನಗಳು ಯಾರು ಹೆಚ್ಚು ಬಾರಿ ವೀರ್ಯ ಹೊರಹಾಕುತ್ತಾರೋ (ವಾರಕ್ಕೆ ಕನಿಷ್ಠ 4.6 ಬಾರಿ ), ಅಂತಹ ಗಂಡಸರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಿವೆ.


೩. ರಕ್ತದೊತ್ತಡ ಹೆಚ್ಚುತ್ತದೆ

ಒಂದು ರಸಮಯ ರಾತ್ರಿಯ ಲೈಂಗಿಕ ಕ್ರಿಯೆಯು ಗಂಡಿನ ಮುಂದಿನ ದಿನವನ್ನೆಲ್ಲಾ ಬೆಳಗುತ್ತದೆ. ಇದು ಕೇವಲ ಕಾಕತಾಳೀಯ ಅಲ್ಲ. ವಾಸ್ತವದಲ್ಲಿ 2006ರಲ್ಲಿ ನಡೆದ ಬಯೋಲಾಜಿಕಲ್ ಸೈಕೊಲಾಜಿ ಎಂಬ ಥೀಸಿಸ್ ಅಲ್ಲಿದ್ದ ಒಂದು ಅಧ್ಯಯನವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಜನರು ಇತರರಿಗಿಂತ ಕಡಿಮೆ ರಕ್ತದೊತ್ತಡ ಹೊಂದಿದ್ದರು ಎಂದು ತಿಳಿದು ಬಂದಿದೆ.


೪. ನೀವು ಹೆಚ್ಚು ಒತ್ತಡ ಅನುಭವಿಸುತ್ತೀರಾ

ಮೊದಲೇ ಹೇಳಿದ ಹಾಗೆ ಒಂದು ರಸಮಯ ರಾತ್ರಿಯು ಗಂಡಸಿನ ಮುಂದಿನ ದಿನವನ್ನೆಲ್ಲಾ ತಾಜಮಯವಾಗಿ, ತಿಳಿಯಾಗಿ ಇಡುತ್ತದೆ. ಮೇಲ್ನೋಟಕ್ಕೆ ಅದಕ್ಕೆ ವೈಜ್ಞಾನಿಕ ಕಾರಣವೂ ಇದೆ. ನರತಜ್ಞರಾದ ಡಾ ।। ಡೆಬ್ರಾ ಅವರ ಪ್ರಕಾರ ಲೈಂಗಿಕ ಪರಾಕಾಷ್ಠೆ ಹೊಂದಿದಾಗ ದೇಹವು ಎಂದೋರ್ಫಿನ್ ಬಿಡುಗಡೆ ಮಾಡಿ ಮಾನಸಿಕ ಸ್ಥಿತಿಯನ್ನು ಹಿತಗೊಳಿಸುತ್ತದೆ.


೫. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ (ಇಮ್ಮ್ಯೂನಿಟಿ ಸಿಸ್ಟಮ್) ದುರ್ಬಲವಾಗಬಹುದು

ಲೈಂಗಿಕ ಪರಾಕಾಷ್ಠೆಗಳು ಪ್ರತಿರಕ್ಷಣಾ ವ್ಯವಸ್ಥೆಗೆ ಬಹಳಷ್ಟು ಉಪಕಾರಿ ಎಂದು ಹೇಳುತ್ತಾರೆ ಮನೋವೈದ್ಯರಾದ ಕಾರ್ಲ್ ಮತ್ತು ಫ್ರಾನ್ಸಿಸ್. ಇವರು ಒಂದು ಅಧ್ಯಯನ ನಡೆಸಿದ್ದರು. ಈ ಅಧ್ಯಯನದಲ್ಲಿ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ರೋಗಿಗಳ ಲಾಲಾರಸದ ಸ್ಯಾಂಪಲ್ ಗಳನ್ನು ಪಡೆಯಲಾಯಿತು. ಈ ಸ್ಯಾಂಪಲ್ ಅಲ್ಲಿ ಶೀತದ ವಿರುದ್ಧ ಹೋರಾಡುವ ಪ್ರತಿಕಾಯಗಳಾದ ಇಮ್ಮುನೊಗ್ಲೋಬ್ಯುಲಿನ್ - A ಪ್ರಮಾಣ ತುಂಬಾನೇ ಇತ್ತು.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon