Link copied!
Sign in / Sign up
2
Shares

ಪ್ರತಿದಿನವೂ ದಿನವಿಡೀ ಜಾಲಿ ಆಗಿ ಕಳೆಯಬೇಕೆ? ಹಾಗಿದ್ದರೆ ಇದನ್ನು ಮಾಡಿ!

ಸಾಮಾನ್ಯವಾಗಿ ನಾವಂದುಕೊಂಡ ಸಮಯಕ್ಕೆ  ಎಲ್ಲ ಕೆಲಸಗಳನ್ನು ಮುಗಸಬಹುದೆಂದು ನಾವು ಬಯಸುತ್ತೇವೆ ,ಆದರೆ ಅನೇಕ ಕಾರನಾಂತರಗಳಿಂದ ಅದು ಸಾಧ್ಯವಾಗುವುದಿಲ್ಲ,ಏಕೆಂದರೆ ದಿನದ  ಅಂತ್ಯದಲ್ಲಿ ನಾವು ದಣಿದಿರುತ್ತೇವೆ. ಕೆಲಸದಲ್ಲಿನ ಒತ್ತಡ ಮತ್ತು ಕುಟುಂಬದ ಜವಾಬ್ದಾರಿ ನಮ್ಮ ಮೇಲಿರುತ್ತದೆ,ರಾತ್ರಿಯಾಗುತ್ತಿದ್ದಂತೆಯೇ ಆಯಾಸವಾಗಿ ನಿದ್ರೆಗೆ ಜಾರುತ್ತೆವೆ . ನಿಮ್ಮ ದಿನವನ್ನು ಹೇಗೆ ಸಂಪೂರ್ಣವಾಗಿ  ಚಟುವಟಿಕೆಯಿಂದ ಬಳಸಿಕೊಳ್ಳುವುದು ಹೇಗೆಂದು ನಾವು ಪಟ್ಟಿ ಮಾಡಿದ್ದೇವೆ. 

1. ನಿದ್ರೆಗೆ ನಿಗದಿತ ಸಮಯವನ್ನು ಮೀಸಲಿಡಿ 

ಪ್ರತಿ ದಿನ ಒಂದೇ ಸಮಯದಲ್ಲಿ ಎಚ್ಚರ ಗೊಂಡು ಮತ್ತು ಅದೇ ಸಮಯದಲ್ಲಿ ಮಲಗುತ್ತ್ತಾ ಹೋದಂತೆ ನಿಮ್ಮ ದೇಹದ 'ಮಾಸ್ಟರ್ ಗಡಿಯಾರ' 24 ಗಂಟೆಗಳ ದಿನದ ಕೆಲಸದಲ್ಲಿ ತೊಡಗಲು ಅನುವು ಮಾಡಿಕೊಡುತ್ತದೆ. ನೀವು ಚೆನ್ನಾಗಿ ವಿಶ್ರಾಂತಿ ಮತ್ತು ರಿಫ್ರೆಶ್(Refresh ) ಹೊಂದುತ್ತೀರಿ. ಈ ವೇಳಾಪಟ್ಟಿಯಿಂದ ಸ್ವಲ್ಪ ವಿಚಲಿತ ವಾದರೂ ದಿನದುದ್ದಕ್ಕೂ ನಮಗೆ ಕಿರಿಕಿರಿಯುಂಟಾಗಬಹುದು .ರಾತ್ರಿ ಮಲಗುವ ವೇಳೆಯಿಂದ ೭ ಗಂಟೆಗಳ ನಿದ್ರೆ, ಅಂದರೆ ಪ್ರತಿ ದಿನ ಕನಿಷ್ಟ 7 ಗಂಟೆಗಳ ನಿದ್ರೆ ಅತ್ಯಗತ್ಯ.

2. ನಿಮ್ಮ ಮೇಲೆ ಬೆಳಗಿನ ಸೂರ್ಯನ ಬೆಳಕು ಬೆಳಗಲಿ

 

ನೀವು ಎಚ್ಚರವಾಗುತ್ತಿದ್ದಂತೆ, ಸೂರ್ಯನ ಬೆಳಕಿನಲ್ಲಿ ನಿಮ್ಮನ್ನು ಒಡ್ಡಿರಿ. ಇದು ನಿಮ್ಮ ಮೆದುಳಿಗೆ ಉತ್ತೇಜಿಸುವ ಪರಿಣಾಮವನ್ನು ಉಂಟುಮಾಡುತ್ತದೆ, ನಿಮ್ಮ ದಿನದ ಆರಂಭದಲ್ಲೇ ಬಲವನ್ನು ಹೆಚ್ಚಿಸುತ್ತದೆ. ನೀವು ಮುಂಚಿನ ರೈಸರ್ ಆಗಿದ್ದರೆ, ಸೂರ್ಯನ ತರಹದ ಬೆಳಕನ್ನು ಹೊಂದಿರುವ ನಿಮ್ಮ ಮನೆಯನ್ನು ಬೆಳಗಿಸಿ ಅದು ಬೆಳಗ್ಗೆ ಎಂದು ನಿಮ್ಮ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ.

3. ಬೆಳಗಿನ ಕಾಫಿ ನಿಮ್ಮನ್ನು ಚುರುಕುಗೊಳಿಸುತ್ತದೆ 

 ಮುಂಜಾನೆ ಎಡ್ಡಾ ನಂತರ ಕಾಫಿ ಸೇವಿಸುವುದರಿಂದ ಮೆದುಳಿಗೆ ಶಕ್ತಿ ಹೆಚ್ಚುತ್ತದೆ ಮಾತು ಕ್ರಿಯಾಶೀಲರಾಗಿರುವಂತೆ ಮಾಡುತ್ತದೆ ,ಕಾ ನಿಮಗೆ ತಾಜಾತನ ವನ್ನು ಕೊಡುತ್ತದೆ ಮತ್ತು ಹೆಚ್ಚು ಚಟುವಟಿಕೆಯಿಂದಿರಿಸುತ್ತದೆ. ಕಾಫಿಯಲ್ಲಿರುವ ಕೆಫೀನ್ ಪ್ರಸ್ತುತವಾಗಿ ಚಹಾದಲ್ಲಿ ಸಣ್ಣ ಪ್ರಮಾಣದಲ್ಲಿ ಕಂಡುಬರುತ್ತದೆ. ನೀವು ಆರೋಗ್ಯಕರವಾದ ಆಯ್ಕೆಯನ್ನು ಬಯಸಿದರೆ, ನಿಮ್ಮ ದಿನವನ್ನು ಪ್ರಾರಂಭಿಸಲು ಚಹಾವನ್ನ್ನೂ ವಿಸಬಹುದು

4. ಸರಿಯಾದ ಆಹಾರ ಕ್ರಮ

 

 ಕಾರ್ಬೋಹೈಡ್ರೇಟ್ಗಳು(Corbohydrates) ಮತ್ತು ಪ್ರೋಟೀನ್ಗಳನ್ನು(protiens) ಒಳಗೊಂಡಿರುವ ಆರೋಗ್ಯಕರ ಶಕ್ತಿಯುತ ಉಪಹಾರ ನಿಮ್ಮ ದೇಹದ ಶಕ್ತಿಯನ್ನು ಕಾಪಾಡುತ್ತದೆ . ಮೊಟ್ಟೆಗಳು, ತರಕಾರಿಗಳು, ಹಣ್ಣುಗಳು, ಸಂಪೂರ್ಣ ಗೋಧಿ ಬ್ರೆಡ್ಹಾ,ಲು,ಹಾಗು ಉಪ್ಮಾ, ಪೊಹಾ, ದೋಸಾ ಅಥವಾ ಇಡ್ಲಿ ಮುಂತಾದ ಭಾರತೀಯ ಉಪಾಹಾರ ಪದಾರ್ಥಗಳನ್ನು ಸೇವಿಸುವಾಗ ಶುದ್ಧವಾದ ಆಲಿವ್ ಎಣ್ಣೆಯಂತಹ ಉತ್ತಮ ಗುಣಮಟ್ಟದ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದು ಉತ್ತಮ .

3 ಸಲ ಹೊಟ್ಟೆ ತುಂಬ ಊಟಮಾಡುವ ಬದಲು , 'ಸ್ಮಾರ್ಟ್ ಸ್ನ್ಯಾಕಿಂಗ್'(smart snacking) ದಿನವಿಡೀ ಆಯ್ಕೆ ಮಾಡಿಕೊಳ್ಳಿ. ಒಣ ಹಣ್ಣುಗಳು , ಶುಷ್ಕ ಹಣ್ಣುಗಳು, ಹಣ್ಣಿನ ಹೋಳುಗಳು ಮತ್ತು ಮೊಸರು ನೀವು ಊಟಕ್ಕೆ ಮಧ್ಯೆ ಹಸಿದಿರುವಾಗ ಸೇವಿಸಿ . ಹೆಚ್ಚಿನ ಸಕ್ಕರೆ ಅಂಶದೊಂದಿಗೆ ಸಂಸ್ಕರಿಸಿದ ಆಹಾರಗಳನ್ನು ಸೇವಿಸದಿರುವುದು ಉತ್ತಮ

5. ವ್ಯಾಯಾಮ

ಪ್ರತಿದಿನವೂ, ವಿಶೇಷವಾಗಿ ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ನಿಮಗೆ ಜಗತ್ತನ್ನೇ ಗೆಲ್ಲುವ ಹುಮ್ಮಸುಂಟುಮಾಡುತ್ತದೆ. ನೀವು ಪ್ರತಿ ದಿನವು ವ್ಯಾಯಾಮ ಮಾಡದಿದ್ದರೆ ಯೋಗ, ಈಜು ,ಧ್ಯಾನವನ್ನು ರೂಡಿ ಮಾಡಿಕೊಳ್ಳಬಹುದು.ಪ್ರತಿ ದಿನವೂ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಅರೋಗ್ಯವಾಗಿರುತ್ತದೆ.

6.ಸಂಗೀತವನ್ನು ಕೇಳಿ ಆನಂದಿಸಿ

ಸಂಗೀತವು ನಿಮ್ಮ ಮನಸ್ಥಿತಿಯ ಮೇಲೆ ಭಾರೀ ಪ್ರಭಾವವನ್ನು ಬೀರುತ್ತದೆ. ಪ್ರೇರೇಪಿಸುವ ಹಾಡುಗಳ ಪ್ಲೇಪಟ್ಟಿಯನ್ನು(playlist ) ನೀವು ಇರಿಸಿಕೊಳ್ಳಿ ಮತ್ತು ರಾತ್ರಿಯಲ್ಲಿ ನಿದ್ರೆ ಮಾಡುವಾಗ ನಿಮಗೆ ಕ್ಲಾಸಿಕ್ (classic) ಇಂಪಾದ ಹಾಡುಗಳನ್ನು ಕೇಳಿ. ಆದರೆ ಪ್ರತಿದಿನ ಅದೇ ಹಾಡುಗಳನ್ನು ಕೇಳಬೇಡಿ ಏಕೆಂದರೆ ಅದು ಪುನರಾವರ್ತನೆಯಾಗುತ್ತದೆ,ಅದರಿಂದ ನಿಮ್ಮ ಹುಮಸ್ಸು ಕಡಿಮೆಯಾಗಲೂಬಹುದು.

ಇದೆಲ್ಲವುದರ ಜೊತೆಗೆ ನೀವು ಇಷ್ಟಪಡುವ ಕೆಲಸಗಳನ್ನು ನೀವು ಮಾಡುತ್ತಿದ್ದರೆ, ನಿಮ್ಮ ಶಕ್ತಿಯು ದೈಹಿಕವಾಗಿ ಆಯಾಸವಾದಂತೆ ನೀವು ನಿಜವಾಗಿಯೂ ಭಾವಿಸುವುದಿಲ್ಲ. ಸಕಾರಾತ್ಮಕ ಜನರು ಮತ್ತು ಹಾಸ್ಯದೊಂದಿಗೆ ನಿಮ್ಮನ್ನು ಸುತ್ತುವರೆದಿರಿ ಹೇಗಿದ್ದಾರೆ ನಿಮಗೆ ಆಯಾಸವಾಗದೆ ದಿನವನ್ನು ಉಲ್ಲಾಸದಿಂದ ಕಳಿಯುತ್ತೀರಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon