Link copied!
Sign in / Sign up
12
Shares

ದಿನದ ಯಾವ ಸಮಯ ಸೆಕ್ಸ್ ಗೆ ಬೆಸ್ಟ್? : ಸಂಶೋಧನೆ

ನಾವು ಬದುಕುತ್ತಿರುವ ಜಗತ್ತು ಮೈಥುನದ ಮೋಡಿಗೆ ಒಳಗಾಗಿರುವ ಜಗತ್ತು. ಈಗ ಸಂಶೋಧನಕಾರರು ಸಂಭೋಗ ನಡೆಸಲು ದಿನದ ಯಾವ ವೇಳೆ ಬೆಸ್ಟ್ ಎಂಬುದನ್ನು ಪತ್ತೆ ಮಾಡಿದ್ದಾರೆ. ಗೊತ್ತಿರುವ ಒಂದು ವಿಷಯ ಅಂದರೆ ಈ ಸಮಯವು ನೀವು ಅಂದುಕೊಂಡ ಸಮಯವಂತೂ ಅಲ್ಲ! ಈಗ ಲೈಂಗಿಕ ಕ್ರಿಯೆಯ ಬಗ್ಗೆ ನಡೆಯುವ ಸಂಶೋಧನೆಗಳಿಗೆ ಕೊರತೆ ಇಲ್ಲ. ತಮ್ಮ ಸಂಬಂಧದ ಪ್ರತಿ ಹಂತದಲ್ಲೂ ದಂಪತಿಗಳು ಎಷ್ಟು ಲೈಂಗಿಕ ಕ್ರಿಯೆಯಲ್ಲಿ ತೊಡಗುವರು ಎನ್ನುವುದರಿಂದ ಹಿಡಿದು ಅದರಲ್ಲಿ ತೊಡಗಿದ ಮೇಲೆ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳವರೆಗೆ ಎಲ್ಲದರ ಬಗ್ಗೆ ಈಗ ಸಂಶೋಧನೆಗಳು ನಡೆದಿವೆ.

ಈಗ ನಡೆದಿರುವ ಸಂಶೋಧನೆಯಲ್ಲಿ ದಿನದ ಒಂದು ವಿಶೇಷ ಸಮಯದಲ್ಲಿ ಸೆಕ್ಸ್ ಎಂದಿಗಿಂತ ಚೆನ್ನಾಗಿರುವುದು ಎಂಬುದನ್ನ ಪತ್ತೆ ಮಾಡಿದ್ದರೆ.

ಬೆಳಗ್ಗೆ ಸಮಯ ಇಷ್ಟೊಂದು ಸರಸಮಯ ಎಂದು ಯಾರಿಗೆ ತಿಳಿದಿತ್ತು!

ಹೌದು! ಬ್ರಿಟನ್ನಿನ ಫೋರ್ಜ ಸಪ್ಲಿಮೆಂಟ್ ಕಂಪನಿಯ ಸಂಶೋಧಕರು ಮಾಡಿದ ಅಧ್ಯಯನದ ಪ್ರಕಾರ, ಸೆಕ್ಸ್ ಮಾಡಲು ದಿನದ ಅತ್ಯುತ್ತಮ ಸಮಯ ಎಂದರೆ ಅದು ಬೆಳಗಿನ ಜಾವ 7:30 ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಬಹುತೇಕ ಮಂದಿ ಬೆಳಗ್ಗೆ ತಮಗೆ ಮೊದಲು ಖುಷಿ ನೀಡುವ ವಿಷಯ ಎಂದರೆ ಅದು ಸೆಕ್ಸ್ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಅಧ್ಯಯನವು ಮತ್ತಷ್ಟು ಆಳವಾಗಿದೆ. ಅಕಸ್ಮಾತ್ ನೀವು ಬೆಳಗ್ಗೆ ಬೇಗ ಏಳದೆ ಇರುವವರಾಗಿದ್ದರೆ, ಚಿಂತೆ ಬೇಡ!

ಮೂಲಭೂತವಾಗಿ, ಅವರ ಅಧ್ಯಯನದಿಂದ ತಿಳಿದು ಬಂದಿರುವುದು ಏನು ಎಂದರೆ, ಸೆಕ್ಸ್ ಮಾಡಲು ಅತ್ಯುತ್ತಮ ಸಮಯ ಎಂದರೆ ಅದು ನೀವು ನಿದ್ದೆಯಿಂದ ಎದ್ದ 45 ನಿಮಿಷಗಳ ಒಳಗೆ. ನೀವು 6:30ಕ್ಕೆ ಆದರೂ ಎದ್ದೇಳಿ ಅಥವಾ 10:30ಕ್ಕೆ ಎದ್ದೇಳಿ, ನೀವು ಇಬ್ಬರು ರಸಮಯ ಮೂಡ್ ಅಲ್ಲಿ ಇರುವುದಷ್ಟೇ ಮುಖ್ಯ.

ಫೊರ್ಜ ಕಂಪನಿಯ ಸಂಶೋಧಕರು ಇದಕ್ಕೆ ಕಾರಣ ಏನು ಎಂಬುದು ಕೂಡ ತಿಳಿಸಿ ಕೊಟ್ಟಿದ್ದಾರೆ. ಅವರು ಹೇಳುವ ಪ್ರಕಾರ, ಒಳ್ಳೆಯ ರಾತ್ರಿಯ ಸವಿನಿದ್ದೆಯ ನಂತರ ದೇಹದ ಶಕ್ತಿ ಗತಿಯು ಗರಿಷ್ಟಮಟ್ಟದಲ್ಲಿ ಇರುತ್ತದೆ. ಅಲ್ಲದೆ, ಸೆಕ್ಸ್ ಇಂದ ಬಿಡುಗಡೆ ಹೊಂದುವ ಎಂಡೋರ್ಫಿನ್ ಗಳಿಂದ ನಮ್ಮ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ಕಮ್ಮಿ ಮಾಡಿಸಿ, ದಿನವೆಲ್ಲ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಅದೇನೇ ಇರಲಿ, ದಿನದ ಯಾವುದೇ ಸಮಯದಲ್ಲೂ ಸೆಕ್ಸ್ ಉಲ್ಲಾಸದಾಯಕ ಆಗಿರುತ್ತದೆ. ಆದರೆ ಸಂಶೋಧಕರು ಬಹಳಷ್ಟು ಅಂಶಗಳನ್ನ ಪರಿಗಣನೆಗೆ ತೆಗೆದುಕೊಂಡಿದ್ದರು. ಹಾಗಾಗಿ ತಲೆ ಕೆಡಿಸಿಕೊಳ್ಳದೆ, ನಿಮಗೆ ಅನಿಸಿದಾಗಲೆಲ್ಲ ಮುಂದುವರೆಯಿರಿ. ಆದರೆ ಒಮ್ಮೆ ಬೆಳಗ್ಗೆ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸಿ, ಯಾರಿಗೆ ಗೊತ್ತು ನಿಮಗೆ ಅದು ತುಂಬಾ ಇಷ್ಟ ಆದರೂ ಆಗಬಹುದು! 

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon