Link copied!
Sign in / Sign up
4
Shares

ಈ ಶುಭ ಶುಕ್ರವಾರ ಯಾರಿಗೆ ಅದೃಷ್ಟ ತಂದಿದೆ ?


 ಮೇಷ 

ಇಂದು ನಿಮ್ಮ ಹಣಕಾಸಿನ ವ್ಯವಹಾರ ಸುಧಾರಿಸುವುದು, ತಂದೆಗೆ ಹಣಕಾಸಿನ ಸಹಾಯ ಮಾಡುವಿರಿ. ಕೆಲಸದಲ್ಲಿ ವಿಳಂಬವಾದರೂ ಸರಿಯಾದ ಸಮಯಕ್ಕೆ ಕೆಲಸವನ್ನು ಮುಗಿಸುವಿರಿ. ಬೇರೆಯವರನ್ನು ಹೇಗೆ ಮಾತಿನಲ್ಲಿ ಗೆಲ್ಲಬೇಕೆಂದು ಚಿಂತಿಸುವಿರಿ. 

ವೃಷಭ 

ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಅವಧಿ ಮಂದವಾಗಿರುವುದರಿಂದ ನೀವು ತಿನ್ನುವುದರ ಬಗೆಗೆ ಜಾಗರೂಕರಾಗಿರಿ. ನೀವು ಶಾಪಿಂಗ್ ಹೋಗುತ್ತಿದ್ದಲ್ಲಿ ದುಂದುವೆಚ್ಛವನ್ನು ತಪ್ಪಿಸಿ. ಈ ದಿನ ನಿಮ್ಮ ಸಂಗಾತಿಗೆ ಬೇಸರವಾಗಿ ನಿಮ್ಮ ಸಂಬಂಧದ ಬೆಚ್ಚಗಿನ ಭಾವ ಹೋಗಬಹುದು.ಬಹುದಿನದ ನಿರೀಕ್ಷೆ ಕನಸು ಕೈಗೂಡುವುದು

ಮಿಥುನ 

 ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ಪ್ರೀತಿಪಾತ್ರರೊಡನೆ ನೀವು ಸಮಯ ಕಳೆಯದಿದ್ದರೆ ಅವರಿಗೆ ಕೋಪ ಬರಬಹುದು. ಆದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಜಯಶಾಲಿಗಳಾಗಿ.

ಕಟಕ 

ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ, ನಿಮ್ಮ ವಿರೋಧಿಗನ್ನೂ ಗೆಲ್ಲಲು ಪ್ರಯತ್ನಿಸುವಿರಿ.  ಮುಂದಿನ ಕೆಲವು ದಿನಗಳಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ.

ಸಿಂಹ 

ಮನರಂಜನೆಗಾಗಿ ಕಚೇರಿ ಇಂದ ಬೇಗ ಹೊರಡಿ, ನಿಮ್ಮ ಮನೆಯ ಪರಿಸರದಲ್ಲಿ ಒಳ್ಳೆಯ ಬದಲಾವಣೆಗಳನ್ನು ಮಾಡುತ್ತೀರಿ. ಇಂದು ನಿಮ್ಮ ಅಚ್ಚುಮೆಚ್ಚಿನವರನ್ನು ಕ್ಷಮಿಸಲು ಮರೆಯಬೇಡಿ. ಅತಿ ವೇಗದ ಚಾಲನೆ ಮತ್ತು ಅಪಾಯ ರಸ್ತೆ ಸಂದರ್ಭದಲ್ಲಿ ಸೇವಿಸಬಾರದು. ನೀವು ನಿಮ್ಮ ಸಂಗಾತಿಯ ಜೊತೆ ಒಂದು ಆರಾಮವಾದ ದಿನವನ್ನು ಕಳೆಯುತ್ತೀರಿ.

ಕನ್ಯಾ 

ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ, ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ.  ಆಫೀಸ್ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ನಿಮಗೆ ಗೊತ್ತಿರುವ ಯಾರೋ ಒಬ್ಬ ವ್ಯಕ್ತಿ ಇಂದು ನಿಮ್ಮನ್ನು ಮೂರ್ಖನನ್ನಾಗಿಸಲು ಪ್ರಯತ್ನಿಸುತ್ತಾನೆ.

ತುಲಾ 

ನಿಮ್ಮ ಸಹನೆ ಇಂದ ಎಲ್ಲರ ಮೆಚ್ಚುಗೆ ಗಳಿಸುವಿರಿ. ವಾರಾಂತ್ಯದಲ್ಲಿ ಪ್ರವಾಸಹೋಗಲು ಸಿದ್ಧತೆ ನಡೆಸುವಿರಿ. ಇಂದು ಒಳ್ಳೆಯ ಭೋಜನವನ್ನು ಸವಿಯುವಿರಿ.ದಿನವಿಡೀ  ಉತ್ಸಹದಿಂದ ಕಳೆಯಲು ಪ್ರಯತ್ನಿಸಿ.ಬರಬೇಕಿದ್ದ ಹಣವು ಕೈಸೇರುವುದು.  

ವೃಶ್ಚಿಕ     

ದೈಹಿಕ ಚಟುವಟಿಕೆಯೊಂದಿಗೆ ಮನದ ಚಿಂತೆಯನ್ನು  ತೊಡೆದುಹಾಕಿ. ಕಿರಿಕಿರಿಯುಂಟುಮಾಡುವ ಪರಿಸ್ಥಿತಿಯಿಂದ ಹೊರಬರುವುದು ಉತ್ತಮ. ಒಳ್ಳೆಯ ಕಾರ್ಯಗಳಿಗೆ ಹಣವನ್ನು ಕರ್ಚುಮಾಡಿ. ಪ್ರವಾಸ ಕೈಗೊಳ್ಳುವಿರಿ.

ಧನಸ್ಸು 

ಹಳೆಯ ಗೆಳೆಯರನ್ನು ಭೇಟಿ ಮಾಡುವಿರಿ, ವಾಹನ ಚಲನೆಯಲ್ಲಿ ಜಾಗ್ರತೆ, ನಿಮ್ಮ ವಸ್ತುಗಳ ಬಗ್ಗೆ ಅಸಡ್ಡೆ ಹೊಂದಿದ್ದಲ್ಲಿ ನಷ್ಟ ಅಥವಾ ಕಳ್ಳತನ ಆಗಬಹುದು. ಪ್ರೇಮ ವಿಚಾರಗಳಲ್ಲಿ ಗೆಲುವು, ಬ್ರಹ್ಮಚಾರಿಗಳಿಗೆ ಕೆಲಸಗಳಲ್ಲಿ ಮುನ್ನಡೆ.

ಮಕರ 

ಅತಿ ವೇಗದ ಚಾಲನೆ ಬೇಡ, ಪ್ರೀತಿ ಪಾತ್ರರಜೊತೆ ವಾದಗಳಿಂದ ಮನಸ್ತಾಪಉಂಟಾಗುವುದು, ನಿಮಗೆ ಯಾವುದು ಸರಿ ಎನಿಸುತ್ತದೆ ಅದನ್ನೇ ಮಾಡಿ, ಕರಿದ ಮತ್ತು ಅತಿ ಎಣ್ಣೆಯ ಪದಾರ್ಥಗಳನ್ನು ಮಿತಿಯಾಗಿ ತಿನ್ನಿ.

ಕುಂಭ 

ನಿಮ್ಮ ವಿರೋಧಿಗಳು ವಿನಾಕಾರಣ ಜಗಳತರುವರು, ಯಾರಿಗೂ ಹೆದರಬೇಡಿ, ನಿಮ್ಮ ಕೆಲಸದಲ್ಲಿ ಹಿನ್ನಡೆ, ಸಂಜೆ ವೇಳೆಗೆ ಮನ್ಸಸ್ಸಿಗೆ ನೆಮ್ಮದಿ, ವಾರಾಂತ್ಯ ಪ್ರವಾಸ ಕೈಗೊಳ್ಳುವಿರಿ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ 

ಮೀನಾ 

ಮನೋಲ್ಲಾಸ ಮತ್ತು ಮನೋರಂಜನೆ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ, ನೀವು ಪ್ರೀತಿಸುವ ವ್ಯಕ್ತಿಯನ್ನು  ಬೇಟಿಯಾಗುವಿರಿ. ನಿಮ್ಮ ಇಂದ್ರಿಯಗಳು ಇಂದು ಪ್ರೀತಿಯ ಭಾವಪರವಶತೆಯನ್ನು ಅನುಭವಿಸುತ್ತವೆ. ವದಂತಿಗಳಿಗೆ ಕಿವಿಕೊಡಬೇಡಿ . 

   Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon