Link copied!
Sign in / Sign up
11
Shares

ಮಕ್ಕಳಲ್ಲಿ ಉಂಟಾಗುವ ಡಯಾಪರ್ ರಾಷೆಸ್ ಅನ್ನು ಹೋಗಲಾಡಿಸಲು ಸುಲಭ ಮನೆಮದ್ದುಗಳು!

ಡಯಾಪರ್ ರಾಷೆಸ್ ಉಂಟು ಮಾಡುವ ಸಂಗತಿಗಳು ಅಹಿತಕರವಾಗಿರಬಹುದು, ಆದರೆ ಈ ರಾಷೆಸ್ ಅನ್ನು ಹೋಗಲಾಡಿಸಲು ಇರುವ ಪರಿಹಾರಗಳು ಮತ್ತು ಚಿಕಿತ್ಸೆಗಳು ತುಂಬಾ ನೇರವಾದವು ಮತ್ತು ಮನೆಮದ್ದುಗಳಿಂದಲೇ ಇವುಗಳಿಗೆ ಚಿಕಿತ್ಸೆ ಮಾಡಿಕೊಳ್ಳಬಹುದು. ಹೀಗಾಗಿ ನೀವು ಡಯಾಪರ್ ರಾಷೆಸ್ ಅನ್ನು ಕಡಿಮೆ ಶ್ರಮದೊಂದಿಗೆ ಕೆಲವು ದಿನಗಳಲ್ಲಿ ಮನೆಮದ್ದುಗಳ ಮೂಲಕ ಹೋಗಲಾಡಿಸಬಹುದು. ನವಜಾತ ಶಿಶುಗಳಲ್ಲಿ ಮತ್ತು ಚಿಕ್ಕ ಮಕ್ಕಳಲ್ಲಿ ಡಯಾಪರ್ ರಾಷೆಸ್ ಹೋಗಲಾಡಿಸಲು ಇರುವ ಅತ್ಯಂತ ಪರಿಣಾಮಕಾರಿ ಮನೆಮದ್ದುಗಳು ಯಾವುದೆಂದು ತಿಳಿಸುತ್ತೇನೆ ಓದಿ :

 

೧. ಪ್ರೇರೇಪಣೆ ಉಂಟು ಮಾಡುವ ಕೆಲಸಗಳನ್ನ ನಿಲ್ಲಿಸಿ

ಡಯಾಪರ್ ರಾಷೆಸ್ ಹೋಗಲಾಡಿಸಲು ಇರುವ ಮನೆಮದ್ದುಗಳನ್ನು ತಿಳಿಯುವ ಮುನ್ನ, ನಿಮ್ಮ ಮಗುವಿನ ರಾಷೆಸ್ ಅನ್ನು ಹೆಚ್ಚು ಮಾಡುವಂತಹ ಟ್ರಿಗರ್ ಕೆಲಸಗಳನ್ನ ನೀವು ಮಾಡುವುದು ಅಥವಾ ಟ್ರಿಗರ್ ಮಾಡುವಂತಹ ಸಂದರ್ಭಗಳನ್ನು ನಿಲ್ಲಿಸಬೇಕು. ಈ ಟ್ರಿಗರ್ ಕೆಲಸಗಳು ಅಥವಾ ಸಂದರ್ಭಗಳಿಗೆ ಒಂದೊಂದು ಮಗುವು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಆ ಕೆಲಸಗಳ ಮತ್ತು ಸಂದರ್ಭಗಳ ಪಟ್ಟಿ ಇಲ್ಲಿದೆ ನೋಡಿ. ಈ ಪಟ್ಟಿಯಲ್ಲಿರುವುದು ಮಗುವಿಗೆ ಉಂಟಾಗಬಾರದು.

 

1. ಚರ್ಮವನ್ನು ಉಜ್ಜುವುದು ಅಥವಾ ಕೆರೆಯುವುದು

2. ಮಗುವಿನ ಜೊಲ್ಲು ಅಥವಾ ಎದೆಹಾಲಿನಿಂದ ಚರ್ಮವು ತುಂಬಾ ತೇವಾಂಶದಿಂದ ಕೂಡಿರಲು ಬಿಡುವುದು

3. ಅತಿಯಾದ ಶುಷ್ಕತೆ (dryness)

4. ಉಣ್ಣೆ ಅಥವಾ ಇತರೆ ತೆರೆಚುವ ವಸ್ತ್ರ

5. ಉರಿತ ಉಂಟುಮಾಡುವ ಡಿಟರ್ಜೆಂಟ್ ಇಂದ ತೊಳೆದ ಬಟ್ಟೆಯನ್ನು ಮಗುವಿಗೆ ತೊಡಿಸುವುದು

6. ಮನೆಯಲ್ಲಿನ ಧೂಳು

7. ಚಳಿ ಗಾಳಿ

8. ತೀವ್ರ ಬಿಸಿ

9. ಹಸುವಿನ ಹಾಲು, ಸೋಯಾ, ಶೇಂಗಾ, ಗೋಧಿ, ಮೊಟ್ಟೆ ಅಂತಹ ಆಹಾರ

10. ಸೋಪ್

 

೨. ಎಷ್ಟು ಬೇಕೋ ಅಷ್ಟೇ ತೇವಾಂಶದಿಂದ (moisturization) ಅನ್ನು ನೀಡಿ

ಮಗುವಿನ ಚರ್ಮದಲ್ಲಿ ಜಾಸ್ತಿಯೂ ಅಲ್ಲ, ತುಂಬಾ ಕಡಿಮೆಯೂ ಅಲ್ಲದಷ್ಟು ತೇವಾಂಶವನ್ನು ಕಾಪಾಡುವುದೇ ಸೂಕ್ತವಾದ ಪರಿಹಾರ. ಮಗುವಿನ ಚರ್ಮದ ಆರೋಗ್ಯವನ್ನು ಕಾಪಾಡಲು ದೀರ್ಘಾವಧಿಯ ಸ್ನಾನಗಳನ್ನ ಮಾಡಿಸುವುದು ನಿಲ್ಲಿಸಿ ಮತ್ತು ಟ್ರಿಗರ್ ಮಾಡುವಂತಹ ಕೆಲಸಗಳಾದ ಚರ್ಮವನ್ನು ತುಂಬಾ ಒರೆಸುವುದು, ಉಜ್ಜುವುದು ಮಾಡಬೇಡಿ. ಸ್ನಾನವನ್ನು ಸಣ್ಣ ಸಣ್ಣ ಅವಧಿಯದ್ದು ಆಗಿಸಿ, ತುಂಬಾ ನೀರು ಬಳಸಬೇಡಿ ಮತ್ತು ತುಂಬಾ ಬಿಸಿ ಇರುವ ನೀರನ್ನು ಬಳಸಬೇಡಿ. ಹೆಚ್ಚು ನೀರನ್ನು ಅಥವಾ ಹೆಚ್ಚು ಬಿಸಿ ನೀರನ್ನು ಬಳಸಿದರೆ, ಮಗುವಿನ ಚರ್ಮದ ಮೇಲಿರುವ ನೈಸರ್ಗಿಕ ತೇವಾಂಶವು ಮಾಯವಾಗಿ, ಮಗುವಿನ ಚರ್ಮವನ್ನು ಶುಷ್ಕತೆ ಇಂದ ಕೂಡಿರುವಂತೆ ಮಾಡುತ್ತದೆ. ಸ್ನಾನದ ನಂತರ ಮಗುವಿನ ಚರ್ಮವನ್ನು ಮೊಯಿಶ್ಚರೈಸ್ ಮಾಡಲು ತೆಂಗಿನ ಎಣ್ಣೆ ಅಥವಾ ಬೇಬಿ ಆಯಿಲ್ ಬಳಸಿ ಮಸಾಜ್ ಮಾಡಿ.

 

೩. ಮನೆಯಲ್ಲೇ ನೀವೇ ಮುಲಾಮನ್ನು ತಯಾರಿಸಿ ಬಳಸಿ

ರಾಷೆಸ್ ಉಂಟಾಗಲು ಕಾರಣಗಳು ಮತ್ತು ಅದಕ್ಕೆ ಪರಿಹಾರಗಳು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಬೇರೆಯದ್ದಾಗಿರುತ್ತದೆ. ಈ ಕಾರಣದಿಂದ ಪೋಷಕರು ಮನೆಯಲ್ಲೇ ಹಲವು ಮುಲಾಮುಗಳನ್ನು ತಾವೇ ತಯಾರಿಸಿ ಪರೀಕ್ಷಿಸಬಹುದು. ಅಂತಹದೊಂದು ಮನೆಯಲ್ಲೇ ಮಾಡಬಹುದಾದ ಮುಲಾಮು ಒಂದು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ಓದಿ.

1. ಮುಕ್ಕಾಲು ಕಪ್ ಅಷ್ಟು ತೆಂಗಿನ ಎಣ್ಣೆಯನ್ನು ಬೆಚ್ಚಗಾಗುವವರೆಗೆ ಕಾಯಿಸಿಕೊಳ್ಳಿ

2. ನಂತರ, ಹಲವು ಹನಿಗಳಷ್ಟು ರೋಸ್ಮರಿ ಆಯಿಲ್ ಅನ್ನು ಬೆರೆಸಿ

3. ನಂತರ, ಕಾಲು ಕಪ್ ಅಷ್ಟು ಓಟ್ಸ್ ಅನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ

4. ನಂತರ ಒಂದು ಸ್ಪೂನ್ ಅಷ್ಟು ಆಲಿವ್ ಆಯಿಲ್ ಅನ್ನು ಬೆರೆಸಿ

5. ನಂತರ, ಈ ಮಿಶ್ರಣವನ್ನು ಒಂದು ಬಟ್ಟಲಿನೊಳಗೆ ಹಾಕಿ ಗಟ್ಟಿಯಾಗಲು ಹಾಗೆಯೇ ಬಿಡಿ.

6. ಗಟ್ಟಿಯಾಗಿರುವ ಮಿಶ್ರಣವನ್ನು ಮಗುವಿನ ಡಯಾಪರ್ ರಾಷೆಸ್ ಮೇಲೆ ಹಚ್ಚಿರಿ.

 

೪. ಮಗುವಿನ ಡಯಾಪರ್ ಅನ್ನು ಆಗಾಗ ಬದಲಿಸುತ್ತಲೇ ಇರಿ

ಡಯಾಪರ್ ರಾಷೆಸ್ ಅನ್ನು ಬೇಗನೆ ವಾಸಿ ಮಾಡಲು ಮತ್ತು ಅವುಗಳನ್ನು ನಿವಾರಿಸ ಬೇಕು ಎಂದರೆ, ನೀವು ನಿಮ್ಮ ಮಗುವಿನ ಡಯಾಪರ್ ಅನ್ನು ಆಗಿಂದ ಆಗ ಬದಲಿಸುವುದರ ಮೇಲೆ ಗಮನ ಹರಿಸಬೇಕು. ಇದು ಹೊಸದಾಗಿ ಉಂಟಾಗಬಹುಡಿದ್ದ ರಾಷೆಸ್ ಅನ್ನೂ ತಡೆಯುತ್ತದೆ ಮತ್ತು ನಿಮ್ಮ ಮಗುವಿನ ತಳಭಾಗವು ಸ್ವಚ್ಛವಾಗಿ ಮತ್ತು ಡ್ರೈ ಆಗಿ ಇರುವಂತೆ ಮಾಡುತ್ತದೆ. ನಿಮ್ಮ ಮಗುವಿನ ಡಯಾಪರ್ ಅನ್ನು ಅವಾಗವಾಗ ನೋಡುತ್ತಲೇ ಇರುತ್ತಿರಿ ಮತ್ತು ಸ್ವಲ್ಪ ವದ್ದೆ ಆಗಿದ್ದರೂ ಅದನ್ನು ಬದಲಿಸಿ.

 

೫. ಮೃದುವಾದ ಬೇಬಿ ವೈಪ್ಸ್  ಅನ್ನು ಮಾತ್ರ ಬಳಸಿ

ಬಹಳಷ್ಟು ಬೇಬಿ ವೈಪ್ಸ್ ಆಲ್ಕೋಹಾಲ್ ಮತ್ತು ಇನ್ನಿತರೇ ಕಟುವಾದ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇವುಗಳು ಮಗುವಿನ ಚರ್ಮಕ್ಕೆ ಹಾನಿ ಮಾಡಬಹುದು ಮತ್ತು ಚರ್ಮವನ್ನು ಮೃದುವಾಗಿರಿಸುವ ಮಗುವಿನ ಚರ್ಮದ ಮೇಲಿರುವ  ನೈಸರ್ಗಿಕ ತೈಲಗಳನ್ನ ಹೋಗಲಾಡಿಸುತ್ತವೆ. ನಿಮ್ಮ ಮಗುವಿಗೆ ಡಯಾಪರ್ ರಾಷೆಸ್ ಉಂಟಾದರೆ ನೀವು ಸೂಕ್ತವಾದ ಬೇಬಿ ವೈಪ್ಸ್ ಅನ್ನು ಖರೀದಿಸುವ ಕಡೆ ಹೆಚ್ಚು ಗಮನಹರಿಸಬೇಕು. ಒಂದು ವೇಳೆ ನೀವು ವೈಪ್ಸ್ ಬದಲು ಕೇವಲ ಸೋಪ್ ಅನ್ನು ಬಳಸುತ್ತಿದ್ದರೆ, ಹೆಚ್ಚೆಚ್ಚು ನೀರು ಬಳಸಿ ಸೋಪಿನ ಯಾವುದೇ ಅಂಶವು ಚರ್ಮದ ಮೇಲೆ ಹಾಗೆಯೇ ಉಳಿಯದಿರುವ ಹಾಗೆ ತೊಳೆಯಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon