Link copied!
Sign in / Sign up
15
Shares

ಡಯಾಪರ್ ಅನ್ನು ನೀವು ಹೀಗೆಯೇ ಬದಲಿಸಬೇಕು

ನವಜಾತ ಶಿಶುಗಳ ಡಯಾಪರ್ ಅನ್ನು ಬದಲಾಯಿಸುವುದು ಹೊಸ ಪೋಷಕರಿಗೆ ಒಂದು ಭಯಪಡುವ ಅಥವಾ ಗಾಬರಿ ಆಗುವಷ್ಟು ನಾಜೂಕಾಗಿ ಮಾಡಬೇಕಾದ ಕೆಲಸ ಆಗಿರುತ್ತದೆ. ಆದರೆ ಒಳ್ಳೆ ವಿಷಯ ಏನು ಅಂದರೆ, ನೀವು ಇದನ್ನ ಸ್ವಲ್ಪ ಬಾರಿ ಸರಿಯಾಗಿ ಮಾಡಿದರೂ, ಪರಿಣಿತರಾಗುತ್ತೀರ. ನಿಮ್ಮ ಮಗುವಿನ ಡಯಾಪರ್ ಸರಿಯಾಗಿ ಮತ್ತು ಸುಲಭವಾಗಿ ಹೇಗೆ ಬದಲಿಸಬಹುದು ಎಂಬುದನ್ನ ಈ ೭ ಹೆಜ್ಜೆಗಳಲ್ಲಿ ತಿಳಿಸಿದ್ದೇವೆ ಓದಿ :

೧. ನೀವು ಶುರು ಮಾಡುವ ಮುನ್ನ ನಿಮಗೆ ಬೇಕಾಗಿರುವ ಎಲ್ಲಾ ಸಾಮಾಗ್ರಿಗಳು ನಿಮ್ಮ ಕೈಗೆ ಸಿಗುವಂತೆಯೇ ಇದೆಯೇ ಎಂದು ನೋಡಿಕೊಳ್ಳಿ : ಹೊಸ ಡಯಾಪರ್, ಹತ್ತಿ, ಬೆಚ್ಚಗಿನ ನೀರು, ಒರೆಸುವ ಬಟ್ಟೆ, ಡಯಾಪರ್ ಆಯಿಂಟ್ಮೆಂಟ್ ಅಥವಾ ಕ್ರೀಂ ಹಾಗು ಇನ್ನಿತರೆ.

೨. ನಿಮ್ಮ ಮಗುವನ್ನು ಒಂದು ಮೆತ್ತನೆಯ ಬೆಡ್ ಮೇಲೆ ಅಥವಾ ಮಡಿಸಿಟ್ಟ ಟವೆಲ್ ಮೇಲೆ ಬೆನ್ನು ಕೆಳಗೆ ಮಾಡಿ ಮಲಗಿಸಿ. ಹೊಸ ಡಯಾಪರ್ ಅನ್ನು ಹೊರಗೆ ತೆಗೆದು, ನಿಮ್ಮ ಮಗುವಿನ ಕೆಳಭಾಗದ ಕೆಳಗೆ ಇಟ್ಟುಕೊಳ್ಳಿ. ನಿಮ್ಮ ಮಗುವು ಉರುಳುವುದಿಕ್ಕೆ ಇನ್ನು ಕೆಲವು ತಿಂಗಳುಗಳ ಸಮಯ ಬೇಕಿದ್ದರೂ, ನೀವು ಯಾವಾಗಲು ಅವರ ಮೇಲೆ ಒಂದು ಕೈ ಇಟ್ಟಿರಲೇ ಬೇಕು. ಮಗುವನ್ನ ಒಂದೇ ಬಿಡಲೇ ಕೂಡದು!

೩. ಹಳೆ ಡಯಾಪರ್ ತೆಗೆದೊಡನೆ ನಿಮ್ಮ ಮಗುವಿನ ಮೇಲೆ ಮುಕ್ತವಾಗಿ ಗಾಳಿ ಆಡುವುದರಿಂದ, ಅವರ ಕರುಳಿನ ಚಲನೆಗಳಿಗೆ ಉತ್ತೇಜನ ಸಿಗುತ್ತದೆ, ಆಗ ಅವರು ಪುನಃ ತ್ಯಾಜ್ಯ ವಿಸರ್ಜನೆ ಮಾಡಬಹುದು. ಹೀಗಾಗಿ ನೀವು ಇನ್ನು ಒಂದು ಹೆಚ್ಚುವರಿ ಡಯಾಪರ್ ಅನ್ನು ಪಕ್ಕದಲ್ಲೇ ಇಟ್ಟುಕೊಂಡಿರಬೇಕು. ಡಯಾಪರ್ ಬಿಚ್ಚುವ ವೇಳೆ ಮಗುವಿನ ಗಮನ ಬೇರೆಡೆ ಸೆಳೆಯಲು ಹಾಡುವುದು, ಮಾತಾಡಿಸುವುದು ಅಥವಾ ವಿವಿಧ ಮುಖಭಾವಗಳನ್ನ ಮಾಡುತ್ತಿರಿ.

೪. ಮುಂದಿನಿಂದ ಹಿಂದಿನವರೆಗೆ ಸರಿಯಾಗಿ ಒರೆಸಿ. ನಿಮ್ಮ ಮಗುವು ಮಲವಿಸರ್ಜನೆ ಮಾಡಿದ್ದರೆ, ಹಳೆ ಡಯಾಪರ್ ಅಲ್ಲಿ ಕಲೆ ಆಗದ ಭಾಗಳಿಂದ ಎಷ್ಟು ಆಗುತ್ತೋ ಅಷ್ಟು ನಿಮ್ಮ ಮಗುವನ್ನು ಶುಚಿಗೊಳಿಸಿ. ಮೆಕಾನಿಯಂ (ನಿಮ್ಮ ಮಗುವಿನ ಮೊದಲ ಮಲ) ತುಂಬಾ ಅಂಟಂಟು ಆಗಿರುತ್ತದೆ, ಹಾಗಾಗಿ ನೀವು ಇದನ್ನ ಒರೆಸಲು ಕಷ್ಟಪಡಬಹುದು. ಕೆಲವು ಪೋಷಕರು ಕೇವಲ ನೀರು ಮತ್ತು ಒರೆಸುವ ಬಟ್ಟೆ ಇದ್ದರೆ ಸಾಕು ಎನ್ನುತ್ತಾರೆ, ಇನ್ನು ಕೆಲವು ಪೋಷಕರು ಹತ್ತಿಯ ಮೇಲೆ ಬೇಬಿ ಆಯಿಲ್ ಹಚ್ಚಿ ಒರೆಸಿದರೆ ಮಾತ್ರ ಕೆಲಸ ಆಗುತ್ತದೆ ಎನ್ನುವರು.

೫. ಡಯಾಪರ್ ರಾಷೆಸ್ ಆಗುವುದನ್ನ ತಡೆಯಲು ನಿಮ್ಮ ಮಗುವಿನ ತ್ವಚೆಯು ಸಂಪೂರ್ಣವಾಗಿ ಒಣಗುವವರೆಗೂ ನೀವು ಡಯಾಪರ್ ಕ್ರೀಂ ಹಚ್ಚಬೇಡಿ. ಬೇಗ ಒಣಗಿಸಬೇಕೆಂದರೆ ನೀವು ಶಿಶುಗಳಿಗೆಂದೆ ಇರುವ ಒರೆಸುವ ಬಟ್ಟೆಯಲ್ಲಿ ಮೆತ್ತಗೆ ಒರೆಸಿ ಅಥವಾ ಆ ಭಾಗದ ಮೇಲೆ ಗಾಳಿ ಊದಿ. ಎಲ್ಲೆಲ್ಲಿ ಕೆಂಪಾಗಿದೆಯೋ ಅಥವಾ ರಾಷೆಸ್ ಆಗಿದೆಯೋ, ಅಲ್ಲೆಲ್ಲ ಡಯಾಪರ್ ಕ್ರೀಂ ಅನ್ನು ಹೇರಳವಾಗಿ ಹಚ್ಚಿ.

೬. ನಿಮ್ಮ ಮಗುವಿನ ಕಾಲುಗಳನ್ನ ಮೆಲ್ಲನೆ ಮೇಲೆ ಎತ್ತಿ, ಅವಾಗಲೇ ನಿಮ್ಮ ಮಗುವಿನ ಕೆಳಗೆ ಇಟ್ಟಿದ್ದ ಹೊಸ, ಶುಚಿಯಾದ ಡಯಾಪರ್ ಅನ್ನು ಮಗುವಿಗೆ ಹಾಕಿ. ನಿಮಗೆ ಗಂಡು ಮಗುವಿದ್ದರೆ, ಅದರ ಶಿಶ್ನ ಕೆಳಗೆ ಮುಖ ಮಾಡಿರುವಂತೆ ನೋಡಿಕೊಳ್ಳಿ. ಡಯಾಪರ್ ಅನ್ನು ಮಗುವಿನ ಕಾಲುಗಳ ಮಧ್ಯೆಯಿಂದ ಎಳೆದು, ಸರಿಯಾಗಿ ಕೂರಿಸಿ.

೭. ವಾಸನೆ ಅಥವಾ ಗಲೀಜನ್ನು ನಿವಾರಿಸಲು ನೀವು ಹಳೆಯ ಡಯಾಪರ್ ಅನ್ನು ಬಿಸಾಡುವ ಮುನ್ನ ಅದನ್ನ ಸುತ್ತಿ ಬಿಸಾಡಿ. ಮುಗಿದ ನಂತರ ನಿಮ್ಮ ಕೈಗಳನ್ನ ಸೋಪ್ ಮತ್ತು ಬಿಸಿ ನೀರಿನಿಂದ ತೊಳೆದುಕೊಳ್ಳುವುದು ಮರೆಯಬೇಡಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon