Link copied!
Sign in / Sign up
1
Shares

ಡಯಪರ್ ಬದಲಾಯಿಸುವಾಗ ಮಾಡಬಹುದಾದ ಮತ್ತು ಮಾಡಬಾರದ ಕೆಲವು ವಿಷಯಗಳು.


ಡಯಪರ್ ಬದಲಾಯಿಸುವ ಕೆಲಸವನ್ನು ಮಕ್ಕಳಾಟದಂತೆ ತಿಳಿದುಕೊಂಡರೆ, ಅದು ತ್ರಾಸದಾಯಕವಾಗಿ ತಲೆದೋರದು. ನೀವಿಬ್ಬರೂ ಪರಸ್ಪರ ಮಗುವನ್ನು ಶುಚಿಯಾಗಿಟ್ಟುಕೊಳ್ಳುವಲ್ಲಿ ಪರಸ್ಪರರ ಜಾಣ್ಮೆ ಯನ್ನು ಅಳೆಯಬಹುದು. ಮಗುವಿನ ಡಯಪರನ್ನು ಬದಲಾಯಿಸುವಲ್ಲಿ ಹಾಗೂ ತೊಡಿಸುವುದರಲ್ಲಿ ಅತ್ಯಂತ ವೇಗವಾಗಿ ಮಾಡುವವರು ಯಾರು ಎಂದು ಕೂಡಾ ಕಂಡುಕೊಳ್ಳಬಹುದು.. ಆದರೂ ರಿಸರ್ಚುಗಳ ಪ್ರಕಾರ ಸ್ತ್ರೀಯರು ಪ್ರತಿ ೩೧೫ ಮಿನುಟುಗಳ‍ಲ್ಲಿ ಬದಲಾಯಿಸಿದರೆ, ಗಂಡಸರು ೧.೫ ಮಿನುಟುಗಳನ್ನು ತೆಗೆದುಕೊಳ್ಳುತ್ತಾರೆಂದು ಅಂದಾಜಿಸಲಾಗಿದೆ.

ಡಯಾಪರ್ ಬದಲಾಯಿಸುವಾಗ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಮಗುವಿಗೆ ಅಲರ್ಜಿ ಉಂಟಾಗದಂತೆ ಗಮನಿಸಬೇಕಾದದ್ದು ಅಗತ್ಯ.

ಡಯಪರ್ ಬದಲಾಯಿಸುವಾಗ ಪರಿಗಣಿಸಬೇಕಾದ ಅಂಶಗಳು

1 ಡಯಪರ್ ಬದಲಾಯಿಸಲೆಂದು ಪ್ರತ್ಯೇಕವಾದ ಸ್ಥಳವೊಂದನ್ನು ನಿಗದಿಪಡಿಸಿಕೊಳ್ಳಿ

ಹೀಗೆ ಮಾಡುವುದರಿಂದ ರೋಗಾಣುಗಳ ಹರಡುವಿಕೆಯನ್ನು ತಡೆಯಬಹುದು ಮಾತ್ರವಲ್ಲದೆ; ಈ ಜಾಗವು ಬಚ್ಚಲ ಮನೆಯ ಆಸುಪಾಸಿನಲ್ಲಿದ್ದರೆ

ಡಯಾಪರ್ ಬದಲಾಯಿಸಿದ ತಕ್ಷಣವೇ ನೀವು ಕೈತೊಳೆದುಕೊಳ್ಳಲು ಕೂಡ ಅನುಗುಣವಾಗುತ್ತದೆ. ಅಡುಗೆ ಟೇಬಲ್ ಅಥವಾ ಊಟದ ಕೋಣೆಯ ಮೇಲೆ ಡಯಪರ್ ಬದಲಾಯಿಸದಿರಿ

2 ಮುಂಭಾಗದಿಂದ ಹಿಂಭಾಗಕ್ಕೆ ಉಜ್ಜಿ ತೆಗೆಯಿರಿ.

ಪ್ರತ್ಯೇಕವಾಗಿ ಹೆಣ್ಣು ಮಗುವಾಗಿದ್ದರೆ ಶುಚಿ ಮಾಡುವ ಸಮಯದಲ್ಲಿ ಮುಂದಿನ ಭಾಗದಿಂದ ಹಿಂಭಾಗಕ್ಕೆ ಉಜ್ಜಿ ತೆಗೆಯುವುದು ಯುರಿನರಿ ಟ್ರ್ಯಾಕ್ ಗಳಿಗುಂಟಾಗುವ ಸೋಂಕು ರೋಗಗಳನ್ನು ತಡೆಯಬಹುದು. ಗಂಡು ಮಕ್ಕಳಲ್ಲಿ ಶಿಶ್ನದ ಭಾಗದಲ್ಲಿ ಕಂಡು ಬರುವಂತಹ ಮಲವನ್ನು ಉಜ್ಜಿ ತೆಗೆಯಿರಿ. ಡಯಾಪರ್ ಬದಲಾಯಿಸುವಾಗ ಶರೀರದಲ್ಲಿ

ಕಾಣಲ್ಪಡುವ ಚಿಕ್ಕ ಬದಲಾವಣೆಯನ್ನು ಕೂಡ ಗಮನಿಸಿ.

3 ಡಯಪರ್ ಬದಲಾಯಿಸುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ

ಪ್ರತಿ ಬಾರಿಯೂ ಡಯಾಪರ್ ಬದಲಾಯಿಸುವಾಗ, ಡಯಾಪರ್ ಬದಲಾಯಿಸಿದ ಜಾಗೆಯನ್ನು ಕೂಡ ಶುಚಿಗೊಳಿಸುವತ್ತ ಗಮನಿಸಿ ಮಾತ್ರವಲ್ಲದೆ ಮುಂದಿನ ಡಯಾಪರ್ ಬದಲಾಯಿಸಲು ಬೇಕಾದ ಸಾಮಗ್ರಿಗಳಾದ ಶುಚಿಯಾದ ನೆಲ ಒರೆಸುವ ಬಟ್ಟೆ ಹಾಗೂ ಡಯಪರ್ಗಳನ್ನು ರೆಡಿ ಮಾಡಿಟ್ಟುಕೊಳ್ಳಿ.

4 ಕೈ ತೊಳೆಯಿರಿ



ಡಯಾಪರ್ ಬದಲಾಯಿಸುವಾಗ ಮಗುವು ಹೋರಾಡುವುದರಿಂದ ಮೂತ್ರ ಹಾಗೂ ಮಲವು ಶರೀರದ ಇತರ ಭಾಗಗಳಿಗೆ ಹರಡುವುದು ಕೂಡ ಸಾಮಾನ್ಯ. ಆದ ಕಾರಣ ಡಯಾಪರ್ ಬದಲಾಯಿಸುವಾಗ ಮಕ್ಕಳನ್ನು ಸ್ವಚ್ಛವಾಗಿರಿಸುವುದು ಕೂಡ ತುಂಬಾ ಪ್ರಾಮುಖ್ಯ. ಡಯಾಪರ್ ಬದಲಾಯಿಸುವ ಸಮಯದಲ್ಲಿ ಮಗುವಿನ ಕೈಕಾಲುಗಳನ್ನು ತೊಳಿಸುವುದರೊಂದೀಗೆ, ನಿಮ್ಮ ಕೈಗಳನ್ನು ಕೂಡ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ.

ಡಯಪರ್ ಬದಲಾಯಿಸುವಾಗ ಮಾಡಬಾರದ ಕಾರ್ಯಗಳು

1 ಕಾಠಿಣ್ಯವೇರಿದ ಸಾಬೂನಿನ ಬಳಕೆ

ಉಗುರು ಬೆಚ್ಚಗಿನ ನೀರಿನಿಂದ ಮಗುವನ್ನು ತೊಳೆಯಿರಿ. ಸಾಬೂನಿನ ಬಳಕೆಯು ಮಗುವಿನ ತ್ವಚೆಯನ್ನು ಹಾನಿ ಗೊಳಿಸುವುದರಿಂದ ಅದನ್ನು ವ್ಯರ್ಜಿ ಸಬಹುದು. ಸಾಬೂನಿನ ಬಳಕೆ ಇಲ್ಲದೆ ನೀವು ಸಂತೃಪ್ತರಾಗದಿದ್ದರೆ, ಮಗುವಿಗಾಗಿಯೇ ಮೀಸಲಾದ ಸಾಬೂನು ಅಥವಾ ಲೋಷನ್ನುಗಳನ್ನು ಬಳಸಿರಿ.

2 ಡಯಾಪರ್‍ನ ಕೊರತೆ

ಮನೆಯಲ್ಲಿ ಯಾವತ್ತೂ ಡಯಾಪರ್ ಸಂಗ್ರಹ ಇಟ್ಟುಕೊಳ್ಳಿರಿ. ನವಜಾತ ಶಿಶುಗಳು ಪ್ರತಿ ದಿನವೂ ಕನಿಷ್ಠ ಪಕ್ಷ ಹತ್ತು ಡಯಪರ್ ಆದರೂ

ಉಪಯೋಗಿಸುವರು. ಆದಕಾರಣ ಅಗತ್ಯಕ್ಕೆ ಬೇಕಾದಷ್ಟು ಡಯಾಪರ್ ಅನ್ನು ಸಂಗ್ರಹ ಮಾಡಿಟ್ಟುಕೊಳ್ಳಿ. ಡಯಾಪರ್ ಸಂಗ್ರಹ ಮುಗಿಯುವ ಎರಡು ದಿನಗಳ ಮೊದಲೇ ಪುನಃ ಅವುಗಳನ್ನು ತಂದಿಟ್ಟು ಕೊಳ್ಳಿರಿ. ವಾರಗಳಿಗೆ ಅನುಗುಣವಷ್ಟು ಡಯಾಪರ್ ಅನ್ನು ಒಮ್ಮೆಗೇ ತಂದಿಟ್ಟುಕೊಳ್ಳಿರಿ

.

3 ತರಾತುರಿ

ನೀವು ಡಯಾಪರ್ ಬದಲಾಯಿಸಲು ಸದಾ ಸಿದ್ಧರಾಗಿರಬೇಕು. ಬದಲಾಯಿಸುವ ಸ್ಥಳವನ್ನು ಸ್ವಚ್ಛವಾಗಿರಿಸಿ ಮತ್ತು ಎಲ್ಲಾ ಅಗತ್ಯ ವಸ್ತುಗಳನ್ನು ತಲುಪುವಲ್ಲಿ ಇರಿಸಿ. ನಿಮ್ಮ ಮಗುವನ್ನು ಒಂದು

ಸೆಕೆಂಡಿಗೆ ಬಿಟ್ಟುಹೋಗುವ ಅಗತ್ಯ ಬೀಳದಂತೆ ಎಲ್ಲಾ ಸಾಧನಗಳನ್ನೂ ನಿಮ್ಮ ಕೈಗೆಟುವಂತಿಡಿ. ಎಲ್ಲಾ ಸಮಯದಲ್ಲೂ ನಿಮ್ಮ ಮಗುವಿನ ಮೇಲೆ ಒಂದು ಕೈಯನ್ನು ಇರಿಸಿ. ನಿಮ್ಮ ಮಗು ಮೇಜಿನಿಂದ ಬೀಳುವ ಅಪಾಯವನ್ನು ನೀವು ಉಂಟುಮಾಡಬಹುದು.

4 ಬಿಗಿಯಾದ ಡಯಪರ್

ನೀವು ಡಯಾಪರ್ ಅನ್ನು ತುಂಬಾ ಬಿಗಿಯಾಗಿ ಇರಿಸಿದರೆ, ಅದು ಉಸಿರಾಡಲು ಯಾವುದೇ ಎಡೆಗಳು ಸಿಗಲಾರದು.. ಇದು ನಿಮ್ಮ ಮಗುವಿನ ಚರ್ಮದ ಮೇಲೆ ಗುರುತುಗಳನ್ನು

ಉಂಟುಮಾಡುವುದು. ಮತ್ತು ಶಿಶುಗಳು ನೋವಿನಿಂದ ಕೊಸರಾಡುವಾಗ ಚರ್ಮ ನೋಯುತ್ತಿರುವಂತಾಗುತ್ತದೆ. ಇದನ್ನು ತಪ್ಪಿಸಲು, ನಿಮ್ಮ ಮಗುವಿಗೆ ಸುಖವಾಗಿ ಕೈಕಾಲುಗಳನ್ನು ಅಲುಗಾಡಿಸುವಂತೆ ಸಾಕಷ್ಟು ಜಾಗವನ್ನು ಬಿಟ್ಟು ಒಂದು ಅನುಕೂಲಕರ ಬಿಗಿತದಲ್ಲಿ ಇಟ್ಟುಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon