Link copied!
Sign in / Sign up
8
Shares

ಎಲ್ಲೆಡೆ ಹಬ್ಬುತ್ತಿರುವ ಡೆಂಗೀ ಮಾರಿಯಿಂದ ನಿಮ್ಮ ಮಗುವನ್ನು ರಕ್ಷಿಸಿಕೊಳ್ಳುವುದು ಹೇಗೆ?

ಸಾಮಾನ್ಯವಾಗಿ ಇತ್ತೀಚಿಗೆ ಹರಡುತ್ತಿರುವ ಡೆಂಗ್ಯೂ ಜ್ವರದ ಬಗ್ಗೆ ನಿಮಗೆ ತಿಳಿದೇ ಇದೆ, ಮತ್ತು ಇದು ಮಾರಣಾಂತಿಕ ಕಾಯಿಲೆ ಎಂಬುದು ಸಹ ನಿಮಗೆ ತಿಳಿದಿದೆ. ಆದರೆ ಇದಕ್ಕೆ ಕಾರಣ, ಪರಿಹಾರ ಅನೇಕರಿಗೆ ತಿಳಿದಿರುವುದಿಲ್ಲ. ಸೊಳ್ಳೆ ಕಡಿತದಿಂದ ಬರುವ ಈ ರೋಗ ದೇಹಕ್ಕೆ ಹೆಚ್ಚು ಹಾನಿಕಾರಕವಾಗಿದ್ದು, ಮಕ್ಕಳಲ್ಲಿ ಕಡಿಮೆ ಪ್ರತಿರಕ್ಷಣಾ ವ್ಯವಸ್ಥೆ ಇರುವುದರಿಂದ ಅವರು ಬೇಗನೆ ಈ ರೋಗಕ್ಕೆ ಗುರಿಯಾಗಬಹುದು. ಇದರ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಮಾಹಿತಿಗಳು ಇಲ್ಲಿವೆ.

ಇದು ಡೆಂಗ್ಯೂ ವೈರಸ್ನಿಂದ ಉಂಟಾಗುತ್ತದೆ ಮತ್ತು ಸೋಂಕಿತ ಎಡೆಸ್ ಸೊಳ್ಳೆಯ ಕಡಿತದ ಮೂಲಕ ಈ ಜ್ವರ ಬರುತ್ತದೆ.

ಡೆಂಗ್ಯೂ ನಿಂದ ದೂರವಿರಲು ಕೆಲವು ಸಲಹೆಗಳು

೧.ನಿಮಗೆ ತಿಳಿದಿರುವ ಹಾಗೆ ಇದು ಹರಡುವುದು ಸೊಳ್ಳೆಯಿಂದ, ಆದ್ದರಿಂದ ಸೊಳ್ಳೆಗಳು ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಿ.

೨.ಸೊಳ್ಳೆಗಳು ಜನಿಸುವುದು ಹೆಚ್ಚಾಗಿ ನೀರಿನಲ್ಲಿ, ಆದ್ದರಿಂದ ನಿಮ್ಮ ಮನೆಯ ಸುತ್ತಮುತ್ತ ಯಾವುದೇ ನೀರು ನಿಂತುಕೊಳ್ಳದಂತೆ ಶುಚಿಯಾಗಿ ಇರಿಸಿಕೊಳ್ಳಿ.

೩.ನಿಮ್ಮ ನೀರಿನ ಡ್ರಮ್, ಸಂಪ್ ಮುಂತಾದ ನೀರು ಶೇಖರಣಾಗಳನ್ನು ಗಾಳಿಗೆ ತೆರೆದುಕೊಳ್ಳದಂತೆ ಮುಚ್ಚಿ ಮತ್ತು ಅದನ್ನು ಆಗಾಗ್ಗೆ ಶುಚಿ ಮಾಡಿಕೊಳ್ಳಿ.

೪.ನಿಮ್ಮ ಕಿಟಕಿ, ಬಾಗಿಲುಗಳಿಂದ ಸೊಳ್ಳೆ ಬರದಂತೆ ಆದಷ್ಟು ಜಾಗ್ರತೆವಹಿಸಿ.

೫.ಸೊಳ್ಳೆ ನಿವಾರಕಗಳು ಅಥವಾ ಕೀಟನಾಶಕಗಳನ್ನು ನಿಮಗೆ ತೊಂದರೆಯಾಗದ ರೀತಿಯಲ್ಲಿ ಬಳಸಿ.

೬.ರಾತ್ರಿ ಮಲಗುವಾಗ ಸೊಳ್ಳೆ ಪರದೆಯನ್ನು ಕಟ್ಟಿಕೊಂಡು ಮಲಗಿ.

೭.ನಿಮ್ಮ ಕೈ ಕಾಲುಗಳನ್ನು ಸಂಪೂರ್ಣ ಬಟ್ಟೆಯಿಂದ ಮುಚ್ಚಿಕೊಳ್ಳಿ. ಪೂರ್ಣ ತೋಳುಗಳ ಬಟ್ಟೆ ಮತ್ತು ಪೂರ್ಣ ಪ್ಯಾಂಟ್ ಗಳನ್ನು ಬಳಸಿ.

೮.ನಿಮ್ಮ ಕಸದಬುಟ್ಟಿಯನ್ನು ಮುಚ್ಚ್ಚಿರುವಂತೆ ನೋಡಿಕೊಳ್ಳಿ.

೯.ಸೊಳ್ಳೆಗಳನ್ನು ಮನೆಯೊಳಗೇ ಬರದಂತೆ ಮಾಡುವ ನೈಸರ್ಗಿಕ ವಿಧಾನವೆಂದರೆ, ನಿಮ್ಮ ಕಿಟಕಿ ಅಥವಾ ಬಾಗಿಲು ಬಳಿ ತುಳಸಿ ಗಿಡವನ್ನು ಬೆಳೆಸುವುದು.

೧೦.ಸೊಳ್ಳೆಗಳನ್ನು ಓಡಿಸುವ ಇನ್ನೊಂದು ವಿಧಾನವೆಂದರೆ, ಕೋಣೆಯ ಎಲ್ಲಾ ಕಿಟಕಿ, ಬಾಗಿಲುಗಳನ್ನು ಹಾಕಿ ಕರ್ಪೂರ ಹಚ್ಚಿ ೧೦-೨೦ ನಿಮಿಷಗಳ ಕಾಲ ಬಿಡುವುದು, ನಂತರ ಆ ಜಾಗ, ಸೊಳ್ಳೆರಹಿತ ವಾತಾವರಣವಾಗುವುದು.

ಎಡೆಸ್ ಸೊಳ್ಳೆಯ ಕಡಿತದಿಂದ ಈ ರೋಗಕ್ಕೆ ತುತ್ತಾಗಬಹುದು. ಒಂದು ಬಾರಿ ಕಡಿತಕ್ಕೊಳಗಾದ ಮೇಲೆ ರೋಗ ಲಕ್ಷಣಗಳನ್ನು ತೋರಿಸಲು ೪-೧೦ದಿವಸಗಳು ಬೇಕು. ಕೆಲವು ಸಾಮಾನ್ಯ ಗುಣಲಕ್ಷಣಗಳೆಂದರೆ,

೧. ಜ್ವರ

೨. ಹೆಚ್ಚು ತಲೆನೋವು

೩. ಕಣ್ಣಿನ ಹಿಂಬಾಗ ನೋವು

೪. ಅಸ್ವಸ್ಥತೆ ಮತ್ತು ವಾಂತಿ

೫.  ಗ್ರಂಥಿ ಊದಿಕೊಳ್ಳುವುದು

೬. ಸ್ನಾಯು ಮತ್ತು ಜಂಟಿ(ಜಾಯಿಂಟ್/joint pain) ನೋವು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon