Link copied!
Sign in / Sign up
4
Shares

ಟಾಪ್ ೧೦ ಹೆಣ್ಣು ಶಿಶು ಹೆಸರುಗಳು - ಡಿಸೆಂಬರ್ ಆವೃತ್ತಿ

ಭಾರತದಲ್ಲಿ ಮಗುವಿಗೆ ನಾಮಕರಣ ಮಾಡುವುದು ಪ್ರತಿ ಪೋಷಕರಿಗೂ ಮಹತ್ವದ ವಿಷಯ, ಮತ್ತು ಇದನ್ನು ಅವರು ಅವರದೇ ಸಂಸ್ಕೃತಿಯಲ್ಲಿ ತುಂಬಾ ಖುಷಿಯಿಂದ ಆಚರಿಸುತ್ತಾರೆ. ಮಗುವು ಜನಿಸಿದ ತಕ್ಷಣವೇ ಕುಟುಂಬದವರು ಮಗುವಿಗೆ ತಮ್ಮ ತಮ್ಮ ನೆಚ್ಚಿನ ಹೆಸರನ್ನು ಇಡಲು ಸೂಚಿಸುವರು. ಆದರೆ ಪ್ರತಿ ಹೆಸರು ತನ್ನದೇ ಆದ ಅರ್ಥ ಮತ್ತು ಮಹತ್ವವನ್ನು ಹೊಂದಿರಬೇಕು ಎಂಬುದು ಪೋಷಕರ ಆಸೆ. ಆದ್ದರಿಂದ ಪೋಷಕರು ಮಗುವಿಗೆ ಅವನ/ಳ ವ್ಯಕ್ತಿತ್ವಕ್ಕೆ ಸರಿಹೊಂದುವ ಹೆಸರನ್ನು ಇಡಲು ಹಲವು ಕಡೆ ಹೆಸರನ್ನು ಹಡುಕುವರು. ನಿಮ್ಮ ಮಗುವಿಗೆ ಅರ್ಥಪೂರ್ಣ ಮಹತ್ವದ ಕೆಲವು ಹೆಸರುಗಳನ್ನು ನಾವು ನಿಮಗೆ ಸಲಹೆ ನೀಡುತ್ತಿದ್ದೇವೆ.

೧.ಆದರ್ಶಿನಿ

ಆದರ್ಶಿನಿ ಎಂದರೆ, ಆದರ್ಶವಾದಿ, ಆದರ್ಶಪ್ರಾಯ, ಆದರ್ಶಾತ್ಮಕ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ. ನವ ಭಾರತೀಯರಾಗಿ ಅವರಿಗೆ ಸರಿಹೊಂದುವ ವಿಶಿಷ್ಟ ಹೆಸರು ಇದಾಗಿದೆ.

೨.ಅನ್ವಿ

ಅನ್ವಿ ಎಂದರೆ ಕಾಡಿನ ದೇವತೆ ಎಂದರ್ಥ.

೩.ಅನಿಕ

ನಿಮ್ಮ ಮುದ್ದು ಮಗಳಿಗೆ ವಿಭಿನ್ನವಾದ ಅನನ್ಯ ಹೆಸರನ್ನು ನೀವು ಇಡಲು ಇಚ್ಛಿಸಿದರೆ, ಇದು ಸೂಕ್ತ ಹೆಸರು. ಇದು ದುರ್ಗಾ ಮಾತೆಯ ಇನ್ನೊಂದು ಹೆಸರು. ಪ್ರೀತಿ, ವಿಶ್ವಾಸ, ಘನತೆ, ದೈವಾನುಗ್ರಹ ಇರುವ ಮತ್ತು ರಮ್ಯತೆ ಎಂಬ ಅರ್ಥವನ್ನು ಈ ಹೆಸರು ನೀಡುತ್ತದೆ.

೪.ದಯಾನಿತ

ಈ ಹೆಸರಿನ ಅರ್ಥ ದಯೆ ಇರುವ, ಕರುಣಾಮಯಿ, ಕರುಣೆ ಇರುವ ವ್ಯಕ್ತಿ ಎಂದರ್ಥ.

೫.ಇನಿಕ

ನಿಮ್ಮ ಸುಂದರ ಮುದ್ದು ರಾಜಕುಮಾರಿಗೆ ಮುದ್ದಾದ ಹೆಸರು ಇದು, ಇದರ ಅರ್ಥ “ಸಣ್ಣ ಭೂಮಿ”.

೬.ರಿಯಾಂಕ

ನಿಮ್ಮ ಮಗುವು ತುಂಬಾ ಮುದ್ದಾಗಿದ್ದರೆ, ಇದು ಸೂಕ್ತವಾದ ಹೆಸರು, ರಿಯಾಂಕ ಎಂದರೆ, ಸುಂದರ, ಸೊಗಸಾದ, ಚೆಲುವಿನ, ಮನೋಹರವಾದ ಎಂಬ ಅರ್ಥವನ್ನು ನೀಡುತ್ತದೆ.

೭.ಪದ್ಮಪ್ರಿಯಾ

ತಾವರೆ ಹೂವಿನ ಪ್ರಿಯೆ, ಲಕ್ಷ್ಮಿ ದೇವಿಯ ಇನ್ನೊಂದು ಹೆಸರು.

೮.ಪೂರ್ವಿ

ಮಧುರ, ಸುಮಧುರ, ಶಾಸ್ತ್ರೀಯ ಸಂಗೀತದ ಮದುರ ಭಾಗ ಎಂಬ ಅರ್ಥವನ್ನು ಈ ಹೆಸರು ಹೊಂದಿದೆ.

೯.ಪೂರ್ಣಿಮ

ಪೂರ್ಣ ಚಂದ್ರ, ಸುಂದರ ಮುಖ ಎಂಬ ಅರ್ಥವನ್ನು ಈ ಹೆಸರು ಹೊಂದಿದೆ.

೧೦.ನಭಿತ

ಅಂಜಿಕೆ ಇಲ್ಲದ, ಧೈರ್ಯಶಾಲಿ, ನಿರ್ಭಿತ, ಭಯ ಇರದ ವ್ಯಕ್ತಿ, ಎಂಬ ಅರ್ಥವನ್ನು ಈ ಹೆಸರು ಹೊಂದಿದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon