Link copied!
Sign in / Sign up
31
Shares

ಕಣ್ಣಿನ ಕೆಳಗೆ ಆಗಿರುವ ಕಪ್ಪುಕಲೆ ಮತ್ತು ಸೌಂದರ್ಯ ಹೆಚ್ಚಿಸಲು ಸುಲಭ ಮತ್ತು ತ್ವರಿತ ಉಪಾಯಗಳು

ಮುಖದ ಚರ್ಮ ದೇಹದ ಬೇರೆ ಭಾಗದ ಚರ್ಮಕ್ಕಿಂತ ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ನೀವು ಇದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು. ಅದರಲ್ಲೂ ಕಣ್ಣಿನ ಸುತ್ತ ಇರುವ ತ್ವಚೆ ತುಂಬಾ ಸೂಕ್ಷ್ಮವಾಗಿದ್ದು, ಹಲವು ಕಾರಣಗಳಿಗೆ ಕಣ್ಣಿನ ಸತ್ತ ಕಪ್ಪು ಕಲೆಗಳಾಗುತ್ತದೆ. ಇದಕ್ಕೆ ನಿದ್ರೆಯ ಅಭಾವ, ಪೌಷ್ಟಿಕ ಅಂಶದ ಕೊರತೆ, ಪೋಷಣೆಯ ಕೊರತೆ ಮುಂತಾದ ಕಾರಣ ಇರಬಹುದು, ಇದನ್ನು ತಡೆಯಲು ನೀವು ಚರ್ಮಕ್ಕೆ ಸರಿಯಾದ ಪೋಷಣೆ ನೀಡಿ, ನಿದ್ರೆ ಮಾಡುವುದು ಮತ್ತು ಹೆಚ್ಚು ನೀರನ್ನು ಕುಡಿಯುವುದರಿಂದ ಇದನ್ನು ತಪ್ಪಿಸಬಹುದು, ಆದರೆ ಇದು ನಿಮಗೆ ಸಮಸ್ಯೆ ಆಗಿದ್ದರೆ ಈ ಕೆಳಗಿನ ಸುಲಭ ಉಪಾಯಗಳನ್ನು ಪ್ರಯತ್ನಿಸಿ.

೧.ಕೊಬ್ಬರಿ ಎಣ್ಣೆ ಮತ್ತು ಅರಿಶಿಣ ಪುಡಿ

ಅರ್ಧ ಚಮಚ ಕೊಬ್ಬರಿ ಎಣ್ಣೆ ಜೊತೆಗೆ ಚಿಟಕಿ ಅರಿಶಿಣ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಇದನ್ನು ಕಣ್ಣಿನ ಸುತ್ತ ಆಗಿರುವ ಕಪ್ಪು ಅಥವಾ ಸುಕ್ಕ ಕಲೆಗಳ ಮೇಲೆ ನಿಧಾನವಾಗಿ ಅನ್ವಯಿಸಿ.

೧೫ನಿಮಿಷಗಳ ಕಾಲ ಇದನ್ನು ತ್ವಚೆಯೆ ಮೇಲೆ ಬಿಡಿ.

ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ಬೇಗನೆ ಫಲಿತಾಂಶವನ್ನು ಕಾಣಲು ವಾರದಲ್ಲಿ ಮೂರು ಬಾರಿ ಇದನ್ನು ಮಾಡಿ.

೨.ಕಾಫಿ ಬೀಜ ಮತ್ತು ಕೊಬ್ಬರಿ ಎಣ್ಣೆ

ಅರ್ಧ ಚಮಚ ಕಾಫಿ ಬೀಜ ಮತ್ತು ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ನಿಧಾನವಾಗಿ ತ್ವಚೆಗೆ ಹಚ್ಚಿರಿ.

೧೫ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಹಚ್ಜುವ ಮೊದಲು ತ್ವಚೆಯನ್ನು ಶುದ್ಧಗೊಳಿಸಿರಿ.

೩.ಹಾಲಿನ ಪುಡಿ ಮಾತ್ತು ಮೊಸರು

ಒಂದು ಚಮಚ ತಾಜಾ ಮೊಸರಿನ ಜೊತೆಗೆ ಅರ್ಧ ಚಮಚ ಹಾಲಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಳ್ಳಿ

ಈ ಪೇಸ್ಟ್ ಅನ್ನು ತ್ವಚೆಯ ಮೇಲೆ ನಿಧಾನವಾಗಿ ಅನ್ವಯಿಸಿ.

೧೦-೧೫ ನಿಮಿಷಗಳ ಕಾಲ ಇದನ್ನು ತ್ವಚೆಯ ಮೇಲೆ ಬಿಡಿ.

ಒಂದು ಮೃದುವಾದ (ಹತ್ತಿ) ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಹದ್ದಿ ಹಿಂಡಿ ತ್ವಚೆಯ ಮೇಲಿನ ಪೇಸ್ಟ್ ಅನ್ನು ಒರೆಸಿ.

೪.ಮೆಂತೆ ಕಾಳು ಮತ್ತು ಸೌತೆಕಾಯಿ ರಸ ಮಿಶ್ರಣ

ಮೆಂತೆ ಕಾಳು ತಿನ್ನಲು ಕಹಿಯಾದರು ಆರೋಗ್ಯಕ್ಕೆ ಸಿಹಿ.

ಮೆಂತೆಯನ್ನು ಪುಡಿಮಾಡಿಕೊಳ್ಳಿ.

ಇದನ್ನು ೩ ಚಮಚ ಸೌತೆಕಾಯಿ ರಸದ ಜೊತೆಗೆ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ.

೧೦ನಿಮಿಷಗಳ ಕಾಲ ಇದನ್ನು ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

೫.ಲೋಗಸರ

ನೀವು ಇದನ್ನು ನೇರವಾಗಿ ತ್ವಚೆಯ ಮೇಲೆ ಅನ್ವಯಿಸಬಹುದು.

ಅಥವಾ ಇದನ್ನು ಸ್ವಲ್ಪ ಬೆಚ್ಚಗೆ ಇರುವ ಕೊಬ್ಬರಿ ಎಣ್ಣೆ ಜೊತೆ ಸೇರಿಸಿ ತ್ವಚೆಗೆ ಅನ್ವಯಿಸಿ.

ಕೆಲವು ಸಮಯ ಇದನ್ನು ತ್ವಚೆಯ ಮೇಲೆ ಬಿಟ್ಟು ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon