Link copied!
Sign in / Sign up
106
Shares

ದಂಪತಿಗಳು ಸೆಕ್ಸ್ ಮತ್ತು ತೊಂದರೆಗಳನ್ನ ಹೇಗೆ ಮಾತಾಡಬಹುದು

ನಾಣ್ಯಗಳಿಗೆ ಎರೆಡು ಮುಖಗಳಿರುತ್ತವೆ, ಹಾಗೆಯೇ ದಂಪತಿಗಳ ನಡುವಿನ ಪ್ರತಿಯೊಂದು ವಿಷಯಕ್ಕೂ ಎರಡು ದೃಷ್ಟಿಕೋನ ಇರುತ್ತವೆ. ಒಂದು ನಿಮ್ಮ ಲೈಂಗಿಕ ಜೀವನವು ಅಳಿದು ಹೋಗಿರಬೇಕು ಇಲ್ಲವಾ ಯಾವುದೋ ಒಂದು ಮುಖ್ಯವಾದ ಕಾರಣವು ನೀವಿಬ್ಬರು ಸೇರುವುದನ್ನ ತಡೆಯುತ್ತಿರಬಹುದು.

ಎಲ್ಲವನ್ನೂ ಮನಸಿನ್ನಲ್ಲೇ ಹಿಡಿದಿಟ್ಟುಕೊಳ್ಳುವುದು ಕಷ್ಟಸಾಧ್ಯ. ಆದರೆ ತೊಂದರೆಗಳು ಒಂದರ ಮೇಲೆ ಒಂದು ಕೂಡಿಕೊಳ್ಳುತ್ತಾ ಹೋದ ಹಾಗೆ, ಒಂದು ದಿನ ಎಲ್ಲವೂ ನಿಮ್ಮ ನಾಲಿಗೆಯ ಅಂಚಿಗೆ ಬಂದು ಬಿಡುತ್ತವೆ. ನೀವು ಈಗ ಮಾಡಬಹುದಾಗಿರುವುದು ಏನು ಅಂದರೆ, ಒಮ್ಮೆಯೇ ಎಲ್ಲಾ ಮಾತುಗಳನ್ನ ಹರಿಬಿಟ್ಟು, ದೊಡ್ಡ ಪ್ರಳಯವನ್ನೇ ಸೃಷ್ಟಿ ಮಾಡುವುದು. ಅಥವಾ ತಾಳ್ಮೆಯಿಂದ ನಿಮ್ಮನ್ನ ನೀವು ಸಂಪೂರ್ಣವಾಗಿ ಹಿಡಿತದಲ್ಲಿ ತಂದಿಟ್ಟುಕೊಂಡು, ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳುವುದು.

ದಂಪತಿಗಳು ಏಕೆ ಒಬ್ಬರ ಮೇಲೆ ಒಬ್ಬರು ಆಕರ್ಷಣೆ ಕಳೆದುಕೊಳ್ಳುವರು ಎಂಬುದಕ್ಕೆ ಅನೇಕ ಕಾರಣಗಳಿವೆ. ಅದು ಅತೀವ ಒತ್ತಡ ಇರಬಹುದು, ಕೆಲಸ ಕಳೆದುಕೊಳ್ಳುವುದು ಅಥವಾ ಕೆಲಸ ಬದಲಾವಣೆ ಆಗುವುದರಿಂದ ಇರಬಹುದು, ಬೇರೊಂದು ಊರಿಗೆ ವರ್ಗಾವಣೆ ಆಗುವುದಿರಬಹುದು, ಮಗುವಿನ ಆಗಮನ ಇರಬಹುದು, ಅಥವಾ ಯಾರೋ ಸತ್ತಿರುವುದರಿಂದ ಇರಬಹುದು ಅಥವಾ ಇನ್ನ್ಯಾವುದೋ ಕಾರಣ ಇರಬಹುದು.

ನೀವು ಒಂದು ವೇಳೆ, ನಿಮ್ಮ ಈ ಸಮಸ್ಯೆಗಳನ್ನ ನಿಮ್ಮ ಸಂಗಾತಿಯೊಂದಿಗೆ ಹೇಗೆ ಮಾತಾಡಬೇಕು ಎಂದು ಯೋಚಿಸುತ್ತಿದ್ದರೆ, ಇಲ್ಲಿರುವ ಅಂಶಗಳನ್ನ ನೆನಪಲ್ಲಿಡಿ :

೧. ನಿಮ್ಮ ಸಂಗಾತಿಯು ಏನು ಮಾಡದ ಗುಮ್ಮನಾದರೆ

ನಿಮ್ಮ ಸಂಗಾತಿಯು ಮುಂಚಿನ ರೀತಿಯಲ್ಲಿ ಮಂಚದ ಮೇಲೆ ಯಾವುದೇ ಮಜವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿಲ್ಲ ಎಂದೆನಿಸಿದರೆ, ಅವರಿಗೆ ಈ ಅಂಶವು ತಿಳಿಯುವಂತೆ ನಾಜೂಕಾಗಿ ಮಾತನಾಡಿ. ನಿಮ್ಮ ಸಂಗಾತಿಯ ಅಹಂ ಗೆ ಹಾನಿಯಾಗದಂತೆ ಮಾತನಾಡಿ. ನೀವೇ ಎಳೆ ಹುಡುಗಿಯ ಥರ ಮುದ್ದು ಮುದ್ದಾಗಿ ಆಡಿ, ನಿಮ್ಮ ಸಂಗಾತಿಗೆ ಮುದ ನೀಡಬಹುದು. ನಂತರ ನೀವು ಏನೇ ಹೇಳಿದರು ಅದು ವಿಕೋಪಕ್ಕೆ ಹೋಗುವುದಿಲ್ಲ.

೨. ಸೆಕ್ಸ್ ಬಗ್ಗೆಯೇ ಮಾತನಾಡಿ

ನೀವು ಬಹಳ ವರ್ಷಗಳಿಂದ ಒಂದು ಸಂಬಂಧದಲ್ಲಿ ಇದ್ದು ಅಥವಾ ಮದುವೆಯಾಗಿದ್ದು ನೀವು ಇಲ್ಲಿಯವರೆಗೂ ನಿಮ್ಮ ಸಂಗಾತಿಯೊಡನೆ ಸೆಕ್ಸ್ ಬಗ್ಗೆ ಮಾತಾಡಿಲ್ಲ ಎಂದರೆ ಅಲ್ಲಿ ಏನೋ ಸಮಸ್ಯೆ ಇದೆ ಎಂದು ಅರ್ಥ. ನೀವು ಎಲ್ಲಿ ಮೂರ್ಖಳಂತೆ ಕಾಣುವೆ ಎಂದೋ ಅಥವಾ ನಿಮ್ಮ ಸಂಗಾತಿಯ ಮನಸ್ಸಿಗೆ ನೋವುಂಟು ಮಾಡುವೆನೋ ಎಂಬ ಭಯದಿಂದಲೋ, ಇದರ ಬಗ್ಗೆ ಮಾತಾಡದೆ ಇರಬಹುದು.

ಸೆಕ್ಸ್ ಅನ್ನುವುದು ತುಂಬಾನೇ ವಯಕ್ತಿಕ ಹಾಗು ನಿಕಟವಾದ ವಿಷಯವಾದರಿಂದ, ನೀವು ಇದರ ಬಗ್ಗೆ ಮಾತಾಡುವುದು ನಿಮ್ಮ ಸಂಬಂಧವನ್ನ ಮತ್ತಷ್ಟು ಗಟ್ಟಿ ಮಾಡಬಹುದು. ನೀವು ಇದರ ಬಗ್ಗೆ ನಿಮ್ಮ ಸಂಗಾತಿಯೊಡನೆ ಹೇಗೆ ಮಾತಾಡಬೇಕು ಎಂದು ಸಂಕೋಚ ಪಟ್ಟುಕೊಳ್ಳುತ್ತಿದ್ದರೆ, ಸೆಕ್ಸ್ ಮತ್ತು ಮದುವೆಯ ಬಗೆಗಿನ ಪುಸ್ತಕ ಅಥವಾ ಲೇಖನವನ್ನ ರೂಮಿನಲ್ಲಿ ಓದಿ. ಇದನ್ನ ನೋಡಿದ ನಿಮ್ಮ ಸಂಗಾತಿಯು ಅದರ ಬಗ್ಗೆ ಕೇಳುತ್ತಾರೆ, ಆಗ ನಿಮಗೆ ಈ ವಿಷಯಗಳನ್ನ ಬಿಚ್ಚಿಡಲು ಸುಲಭ ಆಗುತ್ತದೆ.

೩. ಗರ್ಭನಿರೋಧಕಗಳು

ನಿಮಗೆ ಬೇಡದ ಗರ್ಭಧಾರಣೆ ಬಗ್ಗೆ ಭಯ ಪಟ್ಟುಕೊಂಡಾಗ ನಿಮಗೆ ಸೆಕ್ಸ್ ಮೇಲಿನ ಆಸಕ್ತಿ ಕುಂದುತ್ತದೆ. ಸೆಕ್ಸ್ ಅನ್ನುವುದು ಒಂದು ಮನರಂಜನಾ ವಿಷಯವಾಗಿದ್ದು, ಇದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಖುಷಿ ನೀಡುತ್ತದೆ. ಸಂಭೋಗದ ವೇಳೆ ನಿಮ್ಮ ಸಂಗಾತಿಯು ಕಾಂಡೋಮ್ ಧರಿಸಬೇಕು ಎಂದು ನಿಮಗೆ ಅನಿಸಿದರೆ, ಅವರಿಗೆ ಇದನ್ನ ತಿಳಿಸಿ.

ಹೊರಗೆಳೆಯುವ ತಂತ್ರವು ಬೇಡದ ಗರ್ಭಧಾರಣೆಯನ್ನ ನಿವಾರಿಸಲಿಕ್ಕೆ ಅತ್ಯುತ್ತಮ ಆಯ್ಕೆ ಅಲ್ಲ. ನೀವು ಮದುವೆ ಆಗಿದ್ದರೆ ಏನಂತೆ, ನೀವು ಸೆಕ್ಸ್ ಅನ್ನು ಆನಂದಿಸಬಹುದು ಹಾಗು ನಿಮಗೆ ಯಾವಾಗ ಬೇಕೆನಿಸುವುದೋ ಆಗ ಮಗುವನ್ನ ಪಡೆಯಬಹುದು.

೪. ಮಾತುಗಳನ್ನ ಆಲಿಸಿ

ಒಂದು ವಿವಾಹ ಬಂಧವು ಚೆನ್ನಾಗಿ ಇರಬೇಕೆಂದರೆ, ನೀವು ಸತತವಾಗಿ ಸಂಭಾಷಣೆಯನ್ನು ಹೊಂದುತ್ತಿರಲೇ ಬೇಕು. ನಿಮ್ಮ ಸಂಗಾತಿಯು ಅವರಿಗೆ ಕಾಡುತ್ತಿರುವ ಯಾವುದೋ ಒಂದು ವಿಷಯದ ಬಗ್ಗೆ ನಿಮ್ಮ ಬಳಿ ಹೇಳಲು ಬಂದರೆ, ನೀವು ಅವರ ಮಾತುಗಳನ್ನ ಕಿವಿ ಕೊಟ್ಟು ಕೇಳಬೇಕು. ಇದು ಒಂದು ಸೂಕ್ಷ್ಮವಾದ ವಿಷಯವಾದರಿಂದ ನೀವು ತುಂಬಾ ತಾಳ್ಮೆಯಿಂದ ವ್ಯವಹರಿಸಬೇಕು.

ನಿಮ್ಮ ಪತಿಯು ಮಾತಾಡುವಾಗ, ಮಧ್ಯೆ ನೀವು ಬಾಯಿ ಹಾಕದೆ ಅವರು ಹೇಳುವುದನ್ನ ಪೂರ್ಣವಾಗಿ ಕೇಳಿಸಿಕೊಳ್ಳಬೇಕು. ನಿಮ್ಮ ಪತಿಗೆ ಗೌರವ ತೋರಿಸಲು ಇರುವ ಅತ್ಯಂತ ಒಳ್ಳೆಯ ವಿಧಾನ ಇದು. ಯಾರಿಗೆ ಗೊತ್ತು, ನೀವು ನೀಡುವ ಮರ್ಯಾದೆಯನ್ನ ನೋಡಿ, ಸಮಸ್ಯೆಗಳು, ಮನಸ್ತಾಪಗಳು ತಾವಾಗಿಯೇ ತೊಲಗಬಹುದು.

೫. ಅಡಚಣೆಗಳಿಂದ ದೂರವಿರಿ

ನೀವು ನಿಮ್ಮ ಸಂಗಾತಿಯೊಂದಿಗೆ ಕಳೆಯುವ “ಹಾಟ್ ಟೈಮ್” ಅಲ್ಲಿ ನಿಮಗೆ ಅಡಚಣೆ ಉಂಟು ಮಾಡುವ, ನಿಮ್ಮ ಗಮನವನ್ನ ಬೇರೆಡೆ ಸೆಳೆಯುವ ವಸ್ತುಗಳನ್ನ ದೂರವಿಟ್ಟರೆ, ಅಲ್ಲಿಗೆ ಎಷ್ಟೊಂದು ಸಮಸ್ಯೆಗಳು ಕಮ್ಮಿ ಆಗುತ್ತವೆ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಮಜವಾದ ಕ್ಷಣಗಳನ್ನ ಕಳೆಯಬೇಕೆಂಬ ಒಂದು ಸೂಚನೆ ನೀಡಿದೊಡನೆ, ಆ ಮೊಬೈಲ್ ಅನ್ನು ದೂರ ಇಟ್ಟುಬಿಡಿ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon