Link copied!
Sign in / Sign up
11
Shares

ದಂಪತಿ ಜಗಳ ಮಾಡಿದರೆ ಮಕ್ಕಳಿಗೆ ಏನಾಗುತ್ತದೆ ಗೊತ್ತಾ?

ಜಗಳವಾಡದ ದಂಪತಿಗಳಿಲ್ಲ. ಸಂಸಾರವೆಂದರೆ ಹಾಗೆ, ಸುಖ-ದುಖ, ನೋವು ನಲಿವು ಎಲ್ಲವು ಇರುತ್ತದೆ. ಆದರೆ ನೀವು ಜಗಳವಾಡುವಾಗ ಅದು ನಿಮ್ಮ ಮಕ್ಕಳ ಮೇಲೆ ಹೇಗೆ ಪರಿಣಾಮ ಬೇರುತ್ತದೆ ಎಂದು ಯೋಚಿಸಿದ್ದೀರ? ಮಕ್ಕಳ ಮಾನಸಿಕ ಬೆಳವಣಿಗೆಗೆ ನಿಮ್ಮಿಬರ ಜಗಳವೇ ಹೆಚ್ಚು ಕಾರಣವೆಂದರೆ ನಂಬುತ್ತೀರಾ? ಹೌದು, ತಂದೆ ತಾಯಿಯನ್ನೇ ಅನುಕರಿಸುವ ಮಕ್ಕಳು, ಅವರು ಆಡುವ ಜಗಳವನ್ನು ಸಹ ಅನುಕರಿಸುತ್ತಾರೆ. ನಿಮ್ಮ ಪ್ರತಿಯೊಂದು, ಹಾವಾ-ಭಾವ, ನಡೆಯನ್ನು ಪಾಲಿಸುವ ಮಕ್ಕಳು ನಿಮ್ಮ ಜಗಳದಿಂದ ಹೆಚ್ಚು ನೋವು ಅನುಭವಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಜಗಳವಾಡದೆ, ಒಬ್ಬರಿಗೊಬ್ಬರು ಮುಖ ತಿರುಗಿಸಿ ಮನೆಯಲ್ಲಿ ಬದುಕಬೇಕು ಎಂದಲ್ಲ. ಮಕ್ಕಳಿಗೆ ಜಗಳ ಯಾಕೆ ಆಡುತ್ತಿದ್ದೀರ ಎಂದು ಅರ್ಥವಾಗುವ ಹಾಗೆ ಹೇಳಿ. ಅಂದರೆ ಜಗಳವಾಗುವುದು ಸಹಜ, ಆದರೆ ಹೀಗೆ ಮಾಡುವುದು ಸಂಸಾರದ ಒಳ್ಳೆಯದಕ್ಕೆ ಎಂದು ತಿಳಿಸಿ.

ಜಗಳವಾಡಿದಾಗ ಕೆಟ್ಟ ಶಬ್ದಗಳಿಂದ ಒಬ್ಬರನ್ನು ಒಬ್ಬರು ನಿಂದಿಸದಿರ. ಮಕ್ಕಳ್ಳು ಕೆಟ್ಟ ಶಬ್ಧಗಳನ್ನು ಬೇಗನೆ ಗ್ರಹಿಸುತ್ತಾರೆ. ನೀವು ಮಗುವಿಗೆ ಗೊತ್ತಾಗಬಾರದೆಂದು ಕೋಣೆಯ ಒಳಗೆ ಹೋಗಿ ಜಗಳವಾಡಿದರೂ, ಮಕ್ಕಳಿಗೆ ತಂದೆ-ತಾಯಿ ಮಧ್ಯೆ ಏನೋ ಸರಿಯಿಲ್ಲ ಎಂಬುದು ತುಂಬಾ  ಸುಲಭವಾಗಿ ತಿಳಿದು ಬರುತ್ತದೆ. ನೀವು ಏನು ಮಾಡುತ್ತೀರ, ನಿಮ್ಮ ಮಕ್ಕಳು ಸಹ ಅದನ್ನೇ ತಮ್ಮ ಮುಂದಿನ ಜೀವನದಲ್ಲಿ ಪಾಲಿಸುತ್ತಾರೆ. ತಂದೆ-ತಾಯಿ ಜಗಳ ವಾಡುವ ಸಮಯದಲ್ಲಿ ಗಂಡು ಮಕ್ಕಳು ಜಗಳದಿಂದ ದೂರ ಉಳಿಯುತ್ತಾರೆ, ಆದರೆ ಹೆಣ್ಣು ಮಕ್ಕಳು ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಮಕ್ಕಳು ಸ್ವಲ್ಪ ದೊಡ್ದವರಾಗಿದ್ದರೆ, ನಿಮ್ಮ ಸಮಸ್ಯೆಗೆ ಅವರಿಂದ ಪರಿಹಾರ ಕೇಳಿ, ಇಲ್ಲವಾದಲ್ಲಿ ನಿಮ್ಮ ಜಗಳವನ್ನು ಕೇವಲ ಮಾತಿನ ಚಕಮಕಿಯಾಗಿ ಮಾತ್ರ ಸೀಮಿತಗೊಳಿಸಿ.

ಶಾರೀರಿಕವಾಗಿ ಒಬ್ಬರಿಗೊಬ್ಬರು ಹಲ್ಲೆ ಮಾಡ ಬಾರದು, ಇದು ಮಕ್ಕಳು ಕಲಿಯುವ ಮೊದಲ ಗುಣ. ಮನೆಯ ವಸ್ತುಗಳನ್ನು ಎಲ್ಲಾ ಕಡೆ ಎಸೆಯುವುದು, ಕಿರುಚಾಡುವುದು ಇವೆಲ್ಲವನ್ನೂ ಮಕ್ಕಳ ಮುಂದೆ ಮಾಡಬೇಡಿ.ಕೇವಲ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಶಾಲೆಯಲ್ಲಿ ಮಾತ್ರವಲ್ಲ, ಮನೆಯಲ್ಲಿಯೂ ಸಹ ನೀವು ಕಲಿಸಬೇಕು. ಜಗಳದ ಸಂದರ್ಭ ಎದುರಾದರೆ, ಸ್ವಲ್ಪ ಯೋಚಿಸಿ, ನಿಮ್ಮ ಮಗುವಿನ ಜೀವನ ನಿಮ್ಮಿಬರ ಕೈಯಲ್ಲಿದೆ. ಮಕ್ಕಳು ಶಾಲೆಗೇ ಹೋದ ನಂತರವಷ್ಟೇ ಜಗಳವನ್ನು ಪ್ರಾರಂಭಿಸಿ, ಮುಗಿಸಿ ಬಿಡಿ.

ಎಲ್ಲದಕಿಂತ ಹೆಚ್ಚಾಗಿ ನೀವು ಜಗಳ ಆಡಿದ ವಿಷಯ ನಿಮ್ಮ ಮಕ್ಕಳಿಗೆ ತಿಳಿದು ಬಂದರೆ, ಅದು ಕೇವಲ ಚಿಕ್ಕಪುಟ್ಟ ಭಿನಾಭಿಪ್ರಾಯವಷ್ಟೇ, ಸ್ವಲ್ಪ ಸಮಯದಲ್ಲಿ ಸರಿ ಹೋಗುತ್ತದೆ ಎಂದು ಮನವರಿಕೆ ಮಾಡಿ. ಇಲ್ಲವಾದಲ್ಲಿ ಮಗು ಒಬ್ಬ ಪೋಷಕರನ್ನು ಇಷ್ಟ ಪಟ್ಟು, ಮತ್ತೊಬ್ಬರನ್ನು ದ್ವೇಷಿಸಲು ಪ್ರಾರಂಭ ಮಾಡುತ್ತದೆ. ನಿಮ್ಮ ಮಗುವಿನ ಬೆಳವಣಿಗೆ ಹಾಗು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ಧಾರಿ ನಿಮ್ಮ ಕೈಯಲ್ಲಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon