Link copied!
Sign in / Sign up
6
Shares

ದಕ್ಷಿಣ ಭಾರತೀಯ ಮಗುವು ತಿನ್ನಲೇಬೇಕಾದ ೫ ದಕ್ಷಿಣ ಭಾರತೀಯ ಆಹಾರಗಳು

ನೀವು ದಕ್ಷಿಣ ಭಾರತೀಯರೇ ?ಹಾಗಿದ್ದಲ್ಲಿ ನಿಮ್ಮ ಮಗುವು ತಿನ್ನಲೇ ಬೇಕಾದ ೫ ದಕ್ಷಿಣ ಭಾರತೀಯ ಆಹಾರಗಳು .

ದಕ್ಷಿಣ ಭಾರತದ ಮಗುವಿಗೆ ೫ ದಕ್ಷಿಣ ಭಾರತೀಯ ಆಹಾರಗಳು

ಒಮ್ಮೆ ನಿಮ್ಮ ಮಗುವು ದ್ರವ ಆಹಾರದಿಂದ  ಹೊರಬಂದು ಗಟ್ಟಿಯಾದ ಆಹಾರವನ್ನು ಸೇವಿಸುವ ಹಂತ ತಲುಪಿದಾಗ ಹಲವು ರೀತಿಯ ರುಚಿಗಳನ್ನು ,ಮಸಾಲೆಗಳನ್ನು ಮಗುವಿಗೆ ಪರಿಚಯಿಸುವ ಸಂಭ್ರಮದಲ್ಲಿ ನೀವಿರುತ್ತೀರಿ.ಅದರಲ್ಲೂ ನೀವು ದಕ್ಷಿಣ ಭಾರತೀಯ ಅಮ್ಮನಾಗಿದ್ದಲ್ಲಿ ನಿಮ್ಮ ಮಗುವಿಗೆ ಆ ಭರ್ಜರಿಯಾದ ,ರುಚಿಕರ ದಕ್ಷಿಣ ಭಾರತೀಯ ತಿನಿಸುಗಳನ್ನು ಪರಿಚಯಿಸಲು ತುದಿಗಾಲಿನಿಂದ ನಿಂತಿರುತ್ತೀರಿ .ಇದೆಲ್ಲದರ ಜೊತೆ ಯಾವ ತಿನಿಸಿನಿಂದ ಶುರು ಮಾಡಬೇಕು ,ಅದು ಆರೋಗ್ಯಕರ ಹೌದೋ ಅಲ್ಲವೋ ಹೀಗೆ   ಹಲವಾರು ಗೊಂದಲಗಳು ನಿಮ್ಮೆದುರು ಇರಬಹುದು .ಆದ್ದರಿಂದ ನಾವು ನಿಮಗಾಗಿ ,ನಿಮ್ಮ ಪುಟ್ಟ ಮಗುವಿಗಾಗಿ ಆರೋಗ್ಯಕರ ಮತ್ತು ರುಚಿಕರವಾದ ಕೆಲವು ಆಹಾರಗಳ ಪಟ್ಟಿಯನ್ನು ನೀಡುತ್ತಿದ್ದೇವೆ .ಇದನ್ನು  ಖಂಡಿತವಾಗಿಯೂ ನಿಮ್ಮ ಮಗುವು ಇಷ್ಟ ಪಡಬಹುದು .ಸೂಚನೆ  -ನಿಮ್ಮ ಮಗುವಿಗೆ  ಸರಿಹೊಂದುವ ರೀತಿಯಲ್ಲಿ ಮಸಾಲೆಗಳನ್ನು ಬಳಸಿ.ತುಂಬಾ ಮಸಾಲೆಯಿಂದ ಕೂಡಿರದಂತೆ ನೋಡಿಕೊಳ್ಳಿ .

೧.ಇಡ್ಲಿ

ದಕ್ಷಿಣ  ಭಾರತದಲ್ಲಿ  ಅತ್ಯಂತ ಪ್ರಖ್ಯಾತವಾದ ,ಮನೆ ಮಾತಾಗಿರುವ ಬೆಳಗ್ಗಿನ ಉಪಹಾರ ,ಮಧ್ಯಾಹ್ನದ ಊಟ ರಾತ್ರಿಯ ಊಟದಲ್ಲೂ ಸ್ಥಾನ ಪಡೆದಿರುವ ಆಹಾರ ಇಡ್ಲಿ.ಕೊಬ್ಬಿನಂಶ,ಪರಿಷ್ಕರಿಸಿದ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಇಲ್ಲದ ಈ ಭಕ್ಷ್ಯವು ಮಾಡಲು ಸುಲಭ ಮತ್ತು ಆರೋಗ್ಯಕರವಾಗಿದೆ .ಇದು ಮೃದುವಾಗಿದ್ದು ಮಗುವು ಜೀರ್ಣಿಸಿಕೊಳ್ಳಲು ಅನುಕೂಲಕರವಾಗಿದೆ .ಇದನ್ನು ಇನ್ನೂ ಸತ್ವಯುತ ಗೊಳಿಸಲು  ತುರಿದ ಬೀಟ್ರೂಟ್ ಅಥವಾ ಕ್ಯಾರಟ್ ಗಳನ್ನೂ ಸಹ ತಯಾರು ಮಾಡುವಾಗ ಸೇರಿಸಿಕೊಳ್ಳಬಹುದು .

೨.ಮೊಸರನ್ನ

ಮೊಸರನ್ನವು ನಿಮ್ಮ ಮಗುವಿಗೆ ಹೇಳಿ ಮಾಡಿಸಿದ ಆಹಾರ .ಇದು ಮಗುವಿನ ಜೀರ್ಣಶಕ್ತಿಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .ಇದರಲ್ಲಿ ತಂಪುಗೊಳಿಸುವ ಶಕ್ತಿ ಇದ್ದು  ನಿಮ್ಮ ಮಗುವಿನ ಹೊಟ್ಟೆ ಕೆಟ್ಟಾಗ ಇದನ್ನು ತಿನ್ನಿಸುವುದು  ಬಹಳ ಒಳ್ಳೆಯದು . ಜ್ವರದ ಆರಂಭಿಕ ಹಂತದಲ್ಲಿ ಪ್ರೋಬಿಯೋಟಿಕ್ ಮತ್ತು ಪ್ರತಿಜೀವಕಗಳ [ಆಂಟಿಬಯೋಟಿಕ್ ]ಬದಲಾಗಿ  ಮೊಸರನ್ನವನ್ನು ತಿನ್ನಿಸುವುದರಿಂದ ಬೇರೆ ಆಹಾರಗಳಲ್ಲಿನ ಜೀವಸತ್ವ ಮತ್ತು ಖನಿಜಗಳ ಪಚನವು ಹೆಚ್ಚಾಗುವಂತೆ ಮಾಡುತ್ತದೆ .ಆದ್ದರಿಂದ ನಿಮ್ಮ ಕಂದನಿಗೆ ರುಚಿಕರವಾದ ತಂಪಾದ ಮೊಸರನ್ನವನ್ನು ತಿನ್ನಿಸಿ .

೩.ಉಪ್ಪಿಟ್ಟು

ದಕ್ಷಿಣ ಭಾರತೀಯ ತಿನಿಸುಗಳ ಸವಿಭಕ್ಷ್ಯಗಳ ಸಾಲಿನಲ್ಲಿರುವ ಇನ್ನೊಂದು ತಿನಿಸು ಉಪ್ಪಿಟ್ಟು .ಇದು ಆರೋಗ್ಯಕರ ಹಾಗೂ ರುಚಿಕರ .ಇದರಲ್ಲಿ ಕಬ್ಬಿಣಂಶ ಹೇರಳವಾಗಿದ್ದು ಅತಿ ಹೆಚ್ಚಿನ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ .ಇದಕ್ಕೆ ಕೊಚ್ಚಿದ ತರಕಾರಿಗಳನ್ನು ಸೇರಿಸುವುದರಿಂದ ಮತ್ತಷ್ಟು ಆರೋಗ್ಯಯುತವಾಗುತ್ತದೆ .

೪.ಪೊಂಗಲ್

ಈ ತಿನಿಸು ಸಿಹಿಯಾಗಿಯೂ ,ಖಾರವಾಗಿಯೂ ತಯಾರಿಸಬಹುದು , ಎರಡೂ ಬಗೆಯು ಕೂಡ ಪೋಷಕಾಂಶಗಳಿಂದ ಕೂಡಿವೆ ಇದನ್ನು ತಯಾರಿಸುವುದು  ಸುಲಭವಾಗಿದೆ  .ಇದು ರುಚಿಯಾಗಿದ್ದು ಸುಲಭವಾಗಿ ಜೀರ್ಣವಾಗುವ ನಾರಿನಂಶವನ್ನು ಒಳಗೊಂಡಿದೆ .ಪೊಂಗಲ್ ಸಂಪೂರ್ಣವಾಗಿ ಪ್ರೋಟೀನ್ ನಿಂದ ತುಂಬಿದ್ದು ,ಹೆಚ್ಚು ನಾರಿನ ಪ್ರಮಾಣವನ್ನು ಒಳಗೊಂಡಿದೆ ಜೊತೆಗೆ ನೈಸರ್ಗಿಕವಾಗಿ ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ .ಇದು ದಕ್ಷಿಣ ಭಾರತೀಯ ಪಾಕ ಪದ್ಧತಿಯಲ್ಲಿ ಅತ್ಯಂತ ಪುರಾತನವಾದ    ಮತ್ತು ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದಾಗಿದೆ .

೫.ಪುಟ್ಟು

ಈ ಸಾಂಪ್ರದಾಯಿಕ ದಕ್ಷಿಣ ಭಾರತೀಯ ತಿನಿಸು  ತಯಾರಿಸಲು ಸುಲಭ ಮತ್ತು ರುಚಿಕರ .ಇದನ್ನು ಬಾಳೆಹಣ್ಣಿನಂಥ ಹಣ್ಣುಗಳೊಂದಿಗೆ ,ಆಲೂಗಡ್ಡೆಯಂಥ  ತರಕಾರಿಗಳೊಂದಿಗೆ ,ಇಲ್ಲವೇ ಸ್ವಲ್ಪವೇ ಖಾರವಿರುವ ಸಾಂಬಾರಿನೊಂದಿಗೆ ಮಗುವಿಗೆ ತಿನ್ನಿಸಬಹುದು .ಇದನ್ನು ಹಬೆಯಲ್ಲಿ ಬೇಯಿಸುವ ಕಾರಣ ಇದರಲ್ಲಿ ಎಣ್ಣೆಯ  ಅಂಶಇರುವುದಿಲ್ಲ ಮತ್ತು ಇದು ಪ್ರೋಟೀನ್ ,ಕಾರ್ಬೋಹೈಡ್ರೇಟ್ ನಿಂದ  ತುಂಬಿದ್ದು  ಶಕ್ತಿಯನ್ನು ಹೆಚ್ಚಿಸುವಲ್ಲಿ ಶಕ್ತವಾಗಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon