Link copied!
Sign in / Sign up
6
Shares

ಕ್ರೌನಿಂಗ್ : ಯೋನಿಯಿಂದ ತಲೆ ಆಚೆ ಬರುವ ಕ್ಷಣ, ಹೇಗಿತ್ತು ಎಂದು ಈ 7 ತಾಯಂದಿರು ಹೇಳಿದ್ದಾರೆ!

ನಾನು ಒಮ್ಮೆ ಸಿಸೇರಿಯನ್ನಿಗೆ ಒಳಗಾಗಿ, ಎರಡನೆಯ ನಾರ್ಮಲ್ ಹೆರಿಗೆಗೆ ತಯಾರಿ ಮಾಡಿಕೊಳ್ಳುತ್ತಿದ್ದೆ. ಈ ಸಮಯದಲ್ಲಿ ನನ್ನ ಗಮನ ಸೆಳೆದದ್ದು “ಕ್ರೌನಿಂಗ್” ಪ್ರಕ್ರಿಯೆ. ಕ್ರೌನಿಂಗ್ ಎಂದರೆ ಮಗುವಿನ ತಲೆ ಯೋನಿಯ ನಾಳದಿಂದ ಆಚೆ ಬರುವುದು. ಈ ಪ್ರಕ್ರಿಯೆ ಬಗ್ಗೆ ತಿಳಿದಾಗ ನನ್ನಲ್ಲಿ ಹಲವಾರು ಭಾವನೆಗಳು, ಪ್ರಶ್ನೆಗಳು ಒಂದೇ ಸಲ ಹುಟ್ಟಿಕೊಂಡವು. ಅದಕ್ಕೆ  ಕಾರಣವಾದ ಮೂರು ಯೋಚನೆಗಳು ಇವೆ : ಮೊದಲಿಗೆ, “ಕೇವಲ ಮಗುವಿನ ತಲೆ ಮಾತ್ರ ಯೋನಿಯಿಂದ ಹೊರಗಿದೆ, ಉಳಿದ ಭಾಗವೆಲ್ಲಾ ಇನ್ನೂ ಒಳಗಡೆಯೇ ಇದೆಯೇ? ಎಂಥ ಅದ್ಭುತ!” ಎರಡನೆಯದಾಗಿ “ಇದನ್ನು ನಾನು ಹಿಂದೆಂದೂ ಅನುಭವಿಸಿಲ್ಲ, ಈ ಕ್ರೌನಿಂಗ್ ಅನ್ನುವುದು ನಿಜಕ್ಕೂ ಹೇಗಿರುತ್ತದೆ”, ಮೂರನೇಯದು, “ಎಲ್ಲರೂ ಹೇಳುವ ಪ್ರಕಾರ ಹೆರಿಗೆಯಲ್ಲಿ ಎಲ್ಲದಕ್ಕಿಂತ ಹೆಚ್ಚು ನೋವಾಗುವ ಹಂತ ಅಂದರೆ ಇದೆ ಅಂತೇ!”. ಆದರೆ ಈ ಮೂರೂ ಯೋಚನೆಗಳು ನನಗೆ ನನ್ನನ್ನು ಸಿದ್ಧಪಡಿಸಿಕೊಳ್ಳಲು ಸಹಾಯ ಮಾಡಿದವು.

ಹೀಗಾಗಿ ನಾನು ನನ್ನ ಬ್ಲಾಗ್ ಓದುವ ತಾಯಂದಿರ ಮುಂದೆ ಈ ಪ್ರಕ್ರಿಯೆ ಹೇಗಿರುತ್ತದೆ ಎಂಬ ಪ್ರಶ್ನೆ ಇಟ್ಟೆ. ಅವರೆಲ್ಲರೂ ಹೆಚ್ಚು ಕಮ್ಮಿ ಒಂದೇ ರೀತಿಯ ಅನುಭವ ಹಂಚಿಕೊಂಡರು. ಆ ಅಭಿಪ್ರಾಯಗಳು ಅವರ ಬಾಯಲ್ಲೇ ಹೇಗಿತ್ತು ಎಂಬುದನ್ನು ಇಲ್ಲಿ ಓದಿ

೧. ಗಾನವಿ

“ಸಾವು. ಹೌದು, ಘೋರ ಸಾವಿನ ರೀತಿ! “

ಲೇಖಕಿ ಟಿಪ್ಪಣಿ : ಹೌದು, ಇದು ಈ ರೀತಿನೂ ಅನಿಸಬಹುದು. ಆದರೆ ಅಂತದ್ದು ಒಂದು ದೊಡ್ಡ ವಸ್ತು ಅಷ್ಟು ಚಿಕ್ಕ ದ್ವಾರದಿಂದ ಹೊರಗೆ ಬಂದರೂ, ಆ ದ್ವಾರಕ್ಕೆ ಏನು ಆಗದೆ ಇರುವುದೇ ಒಂದು ಅಚ್ಚರಿ!.

೨. ಸನಿಹ

“ಈ ಸೋಡಾ ಬಾಟಲಿ ಓಪನ್ ಮಾಡಿದಾಗ ಹೇಗೆ ಫಟ್ ಅಂತ ಒತ್ತಡ ರಿಲೀಸ್ ಆಗುತ್ತೋ, ಸೇಮ್ ಹಾಗೆ ಅನಿಸಿತು. ಆ ಸಮಯದಲ್ಲಿ ಎಷ್ಟೊಂದು ಪ್ರೆಷರ್ ಇರುತ್ತೆ ಎಂದರೆ... ! ನನ್ನ ಮಗುವಿನ ತಲೆ ಹೊರಗೆ ಬಂದಿದೆ ತಕ್ಷಣ ನಿಟ್ಟುಸಿರು ಬಿಟ್ಟೆ! “.

೩. ರಮ್ಯಾ

“ಇದಕ್ಕಿದ್ದ ಹಾಗೆ ನನಗೆ ಯಾವದೋ ದೊಡ್ಡ ಫುಟ್ಬಾಲ್ ಒಂದನ್ನು ನುಂಗಿ ಈಗ ಅದನ್ನು ಆಚೆ ಹಾಕುತ್ತಿದ್ದೇನೆ ಅಂತ ಅನಿಸ್ತು!”

ಲೇಖಕಿ ಟಿಪ್ಪಣಿ : ಆದರೆ ನಿಮಗೆ ಅದು ಏನೆಂದು ತಿಳಿಯುವ ಮುನ್ನವೇ, ನಿಮ್ಮ ದೊಡ್ಡ ಫುಟ್ಬಾಲ್, ನಿಮ್ಮ ಅಕ್ಕರೆಯ ಮುದ್ದಿನ ಪುಟ್ಟ ಬಾಲ್ ಆಗುತ್ತದೆ!

೪. ಕೀರ್ತಿ

“ಪ್ರತಿ ಬಾರಿನೂ ಬೇರೆ ಬೇರೆ ರೀತಿ ಅನಿಸ್ತಿತ್ತು, ಒಂದು ಕ್ಷಣ ಆರಾಮ (ಏಕೆಂದರೆ ಆ ಕ್ಷಣಕ್ಕೆ ಕಷ್ಟಕರ ಕಾಂಟ್ರಾಕ್ಷನ್ ಗಳು ಮುಗಿದಿದ್ದವು)ಇಂದ ಇನ್ನೊಂದು ಕ್ಷಣ ನನ್ನ ಯೋನಿಯ ಬಳಿ ಇರುವ ಮೂಳೆಗಳು ಸೀಳಿ ಛಿದ್ರ ಆಗುತ್ತವೇನೋ ಅನ್ನುವ ವರೆಗೂ… ಆದರೆ ಹೆರಿಗೆಯ ಅತ್ಯಂತ ಕಷ್ಟಕರ ಹಂತ ಇದೇ ಎಂದು ನನಗೆ ಅನಿಸಲಿಲ್ಲ”.

ಲೇಖಕಿ ಟಿಪ್ಪಣಿ : ಅಲ್ಲಾ ಯೋನಿಯ ಸುತ್ತಲಿನ ಮೂಳೆಗಳು ಸೀಳಿ ಛಿದ್ರ ಆಗುವಂತೆ ಅನಿಸುವುದು ಕೂಡ ನಿಮಗೆ ಅತ್ಯಂತ ಕಷ್ಟಕರ ಹಂತ ಅನಿಸಲಿಲ್ಲವಾ?! ನಿಮ್ಮನ್ನು ನೋಡಿ ನನಗೆ ಹೊಟ್ಟೆ ಉರಿ ಉಂಟಾಗುತ್ತಿದೆ!

೫. ಅಂಜನಾ

“ಒಳ್ಳೆ 10,000 ಚಿಕ್ಕ ಚಿಕ್ಕ ಬ್ಲೇಡ್ ಗಳಿಂದ ನನ್ನನ್ನು ಒಂದಾದ ಮೇಲೆ ಒಂದರಿಂದ ಕೊಯ್ಯುತ್ತಿರುವಂತೆ ಅನಿಸ್ತು!, ಆದರೆ ತಲೆ ಹೊರಗಡೆ ಬಂದಮೇಲೆ ಸ್ವಲ್ಪ ನಿರಾಳ ಭಾವ ”

೬. ಜಾನಕೀ

“ನನ್ನ ಆ ಭಾಗವೇ ಬೆಂಕಿ ಹತ್ತಿ ಉರಿಯುತ್ತಿರುವಂತೆ ಅನಿಸಿತು. ಆದರೆ ಮಗುವನ್ನು ಸಂಪೂರ್ಣ ಹೊರ ತೆಗೆದಮೇಲೆ, ಯಪ್ಪಾ  ಒಂದೇ ಸಮನೆ ಜೀವ ವಾಪಸ್ಸು ಬಂದಂತೆ ಆಯಿತು!”

೭. ಅಮ್ರಿನ್ ಬೇಗ್

“ನಾನು ನೋವಿನಲ್ಲಿ ಅಳುತಿದ್ದೆ ಮತ್ತು ಅದರೊಂದಿಗೆ ನನ್ನ ತಲೆಯಲ್ಲಿ ಓಡುತಿದ್ದ ಇನ್ನೊಂದು ಯೋಚನೆ ಎಂದರೆ ಅದು ನಾನು ನನ್ನ ಯೋನಿಯನ್ನ ಸರಿ ಪಡಿಸಲೂ ಆಗದಷ್ಟು ಹಾನಿ ಮಾಡಿಕೊಳ್ಳುತ್ತಿದ್ದೇನೆ ಎಂಬುದು. ಅದು ಹರಿದು ಹೋಗುತ್ತದೆ ಎಂದೆನಿಸುತು. ಆದರೆ, ಸಣ್ಣ ಹರಿತವಷ್ಟರಲ್ಲಿ ಹೆರಿಗೆ ಮುಗಿಯಿತು”.

ಲೇಖಕಿ ಟಿಪ್ಪಣಿ : ಯೋನಿಯು ಎಷ್ಟು ಬೇಕಾದರೂ ಹಿಗ್ಗಿ, ನಂತರ ತನ್ನ ಮೊದಲ ಸ್ಥಿತಿಗೆ ವಾಪಾಸ್ ಆಗುತ್ತದೆ ಎನ್ನುವುದಷ್ಟೆ ಈ ಪ್ರಕ್ರಿಯೆಯ ಒಂದು ಸಮಾಧಾನಕರ ಸಂಗತಿ ಇರಬೇಕು!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon