Link copied!
Sign in / Sign up
18
Shares

ಕಾಪರ್ ಟಿ ಎಷ್ಟು ಫಲಕಾರಿ?

ಕಾಂಡೋಮ್ ಗಳನ್ನು ಹೊರತುಪಡಿಸಿ ಕಾಪರ್ -ಟಿ ಭೌತಿಕ ಅಡೆತಡೆಗಳಲ್ಲಿ ಒಂದಾಗಿದೆ.ಇದು ನೀವು ಅಸುರಕ್ಷಿತ ಲೈಂಗಿಕ ಸಂಪರ್ಕವನ್ನು ಹೊಂದಿದ್ದರೂ ಕೂಡ ಗರ್ಭಧಾರಣೆ ಹೊಂದುವ  ಅವಕಾಶವನ್ನು ವಿಳಂಬಗೊಳಿಸುವಲ್ಲಿ ಅಥವಾ ಇಲ್ಲವಾಗಿಸುವಲ್ಲಿ ಉಪಯೋಗಿಸಲ್ಪಡುವ ಇಂಟ್ರಾಯುಟರೈನ್ (ಐಯುಟಿ) ಆಗಿದೆ .ಕೆಲವು ಐಯುಟಿ ಸಾಧನಗಳು ಅನಗತ್ಯ ಗರ್ಭಧಾರಣೆಯ ವಿರುದ್ಧ 5 ವರ್ಷಗಳವರೆಗೆ ರಕ್ಷಣೆ ನೀಡುತ್ತವೆ.

ಆದರೆ ವ್ಯಾಪಕವಾಗಿ ನಂಬಲಾಗಿರುವ ಮಿಥ್ಯಾ ಕಲ್ಪನೆಯನ್ನು  ಒಳಗೊಂಡಿರುವ  ಈ ರೀತಿಯ ಗರ್ಭನಿರೋಧಕ ವಿಧಾನವನ್ನು ವೈದ್ಯರು ಸಾಮಾನ್ಯವಾಗಿ ಶಿಶುಗಳನ್ನು ಹೊಂದಿದ ಮಹಿಳೆಯರಿಗೆ ಇದನ್ನು ಶಿಫಾರಸು ಮಾಡುತ್ತಾರೆ.

ಕಾಪರ್-ಟಿ ಹೇಗೆ ಕಾರ್ಯನಿರ್ವಹಿಸುತ್ತದೆ?

ಇದು ದೈಹಿಕವಾಗಿ ಸೇರಿಸುವ  ನಿಮ್ಮ ಗರ್ಭಾಶಯದೊಳಗೆ ಲಗತ್ತಿಸಲ್ಪಡುವ ಸಣ್ಣ ಟಿ ಆಕಾರದ ಸಾಧನವಾಗಿದೆ.ಇದು ತಾಮ್ರದಿಂದ ಲೇಪನ ಮಾಡಲ್ಪಟ್ಟಿದೆ ಮತ್ತು ಇದು ತಾಮ್ರವನ್ನು ಬಿಡುಗಡೆ ಮಾಡುತ್ತದೆ, ಇದು ಲೈಂಗಿಕ ಸಂಪರ್ಕದ  ಸಂದರ್ಭದಲ್ಲಿ ಯೋನಿಯೊಳಗೆ ಪ್ರವೇಶಿಸುವ ವೀರ್ಯಾಣುಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಾಮ್ರ ವೀರ್ಯದ ಜೀವವನ್ನು ಕೊಲ್ಲುತ್ತದೆ ಮತ್ತು ಗರ್ಭಾವಸ್ಥೆಯ ಯಾವುದೇ ಅವಕಾಶವನ್ನು ರದ್ದುಗೊಳಿಸುತ್ತದೆ.

ಕಾಪರ್- T ಅನಗತ್ಯ ಅಥವಾ ಆಕಸ್ಮಿಕ ಗರ್ಭಧಾರಣೆಗಳಿಂದ 99% ರಕ್ಷಣೆಯನ್ನು ಖಾತರಿಪಡಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.ಆದಾಗ್ಯೂ ನೀವು ಲೈಂಗಿಕ ಸಂಪರ್ಕ ಹೊಂದಲು  ಅಥವಾ ಟ್ಯಾಂಪೂನ್ ಸೇರಿಸಲು ಆರಂಭಿಸುವ ಮೊದಲು ಸುಮಾರು 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ.

ಇದನ್ನು  ಯಾವಾಗ ಬಳಸಬೇಕು?

ನಿಮ್ಮ ದೇಹಕ್ಕೆ ಸೇರಿಸಲಾದ ಕ್ಷಣದಿಂದ ಈ ಸಾಧನವು ಕಾರ್ಯನಿರ್ವಹಿಸುತ್ತದೆ. ಈ ಸಾಧನದ ಸಹಾಯದಿಂದ, ಅಸುರಕ್ಷಿತ ಲೈಂಗಿಕ ಸಂಪರ್ಕವನ್ನು  ಹೊಂದಿದ 5 ದಿನಗಳ ನಂತರ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಸಾಧ್ಯವಿದೆ.

ನಿಮಗೆ ತಿಳಿದಿದೆಯೇ, ಸುಮಾರು 9-11 ವರ್ಷಗಳು  ಗರ್ಭಧಾರಣೆಯಾಗುವುದನ್ನು ತಪ್ಪಿಸಲು ನೀವು ಈ ವಿಧಾನವನ್ನು ಬಳಸಬಹುದು!

ಐಯುಡಿಯ ಬಗ್ಗೆ ನಿಮ್ಮ ದೇಹಕ್ಕೆ ಹೇಗೆ ಅನಿಸುತ್ತದೆ?

ಐಯುಡಿ ನಿಮ್ಮ ದೇಹದಲ್ಲಿ ನೇರವಾಗಿ ಹೋಗುವ  ಮತ್ತು ಅಲ್ಲಿ ಸ್ಥಿರಗೊಳ್ಳುವ  ಒಂದು ಸಣ್ಣ ಸಾಧನವಾಗಿದೆ.ಇದರ ಸಣ್ಣ ಗಾತ್ರದ ಕಾರಣ, ನಿಮ್ಮ  ದೇಹದಲ್ಲಿ ಇದು ಇರುವ ಉಪಸ್ಥಿತಿಯನ್ನು ಸಹ ನೀವು ಅನುಭವಿಸಲು ಸಾಧ್ಯವಿಲ್ಲ .

ನಿಮ್ಮ ಋತುಚಕ್ರ ಸ್ವಲ್ಪ ವಿಭಿನ್ನವಾಗಿರಬಹುದು. ಸರಳವಾಗಿ ಹೇಳುವುದಾದರೆ, ನೀವು ಗಾಢವಾದ ಸ್ರಾವ  ಅಥವಾ ನೋವಿನ ಸ್ನಾಯುವಿನ ಸೆಳೆತವನ್ನು ಹೊಂದಿರುತ್ತೀರಿ.

ನಿಮ್ಮ ಋತುಚಕ್ರವು  ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ನೋವಿನಿಂದ ಕೂಡಬಹುದು .ನಿಮ್ಮ ಹೊಟ್ಟೆಯ ಮೇಲೆ ಅಥವಾ ಸ್ನಾಯು ನೋವಿನ  ಸ್ಥಳದಲ್ಲಿ ಬಿಸಿ ನೀರಿನ ಬಾಟಲಿಯನ್ನು ಇರಿಸಿ. ಈ ವಿಷಣವನ್ನು  ಬಳಸಿಕೊಂಡು ನೀವು ಪರಿಹಾರವನ್ನು ತ್ವರಿತವಾಗಿ ಕಾಣಬಹುದು .

ಒಳಗಿರುವ ಐಯುಡಿಯ ಮೇಲೆ ನಿಗಾ ಇರಿಸುವುದು ಹೇಗೆ ?

ತಡೆಗಟ್ಟುವಿಕೆ ಗುಣಪಡಿಸುವುದಕ್ಕಿಂತ  ಉತ್ತಮವಾಗಿರುತ್ತದೆ, ಆದ್ದರಿಂದ ಅನಗತ್ಯವಾದ ಅಪಾಯವನ್ನು ತೆಗೆದುಕೊಂಡು ಅದನ್ನು ಎಲ್ಲವನ್ನೂ ಸೇರಿಸಿಕೊಂಡು  ದೊಡ್ಡ ಅಪಾಯಕ್ಕೋಸ್ಕರ ಕಾಯುವುದೇತಕೆ ?ನಿಮ್ಮ ಋತುಚಕ್ರದ  ನಂತರ ವಿಶೇಷವಾಗಿ ನಿಮ್ಮ ಸಾಧನದಲ್ಲಿ ನೀವು ಗಮನವಿರಿಸುವುದು ಮುಖ್ಯ, ಏಕೆಂದರೆ ಈ ಸಮಯದಲ್ಲಿ ನೀವು ಗರ್ಭಿಣಿಯಾಗುವುದರ ಸಾಧ್ಯತೆ ಹೆಚ್ಚು ಇರುತ್ತದೆ.

ಇದನ್ನು  ಪರಿಶೀಲಿಸಲು, ನಿಮ್ಮ ಯೋನಿಯೊಳಗೆ ಬೆರಳನ್ನು ಸೇರಿಸಿ ಮತ್ತು ನಿಮ್ಮ ಗರ್ಭಕಂಠವನ್ನು(ಸರ್ವಿಕ್ಸ್ ) ಅನುಭವಿಸಲು ಪ್ರಯತ್ನಿಸಿ.ನಿಮ್ಮ ದೇಹದ ಒಳಗೆ  ಕಾರ್ಟಿಲ್ಯಾಜೆನಸ್ ರೂಪಗಳನ್ನು ನೀವು ಅನುಭವಿಸುವಿರಿ ಮತ್ತು ನೀವು ಅಲ್ಲಿಯೇ ಸ್ಟ್ರಿಂಗ್ ಅನ್ನು ಕಂಡುಕೊಳ್ಳುವಿರಿ. ಇದನ್ನು ಅನುಭವಿಸಿ, ಆದರೆ ಅದನ್ನು ಎಳೆಯಬೇಡಿ.

ಕಾಪರ್- ಟಿ  ಅನ್ನು ಬಳಸುವುದರ ಧನಾತ್ಮಕ ಪ್ರಯೋಜನಗಳು

-ಕಾಂಡೋಮ್ ಗಳನ್ನು ಖರೀದಿಸಲು ನೀವು ನಿರಂತರವಾಗಿ ವೈದ್ಯಕೀಯ ಅಂಗಡಿಗೆ ಓಡಬೇಕಾಗಿಲ್ಲ.

--ನೀವು ಅಸಮರ್ಪಕ ಕಾಂಡೋಮ್ ಹೊಂದಿರುವ ಬಗ್ಗೆ ಯೋಚಿಸಬೇಕಾಗಿಲ್ಲ.

-ಮೌಖಿಕ ಮಾತ್ರೆಗಳ ಆಘಾತಕಾರಿ ಬಳಕೆಯ ಮೂಲಕ ನಿಮ್ಮ ದೇಹವನ್ನು ನೀವು ಕಳಪೆ ಮಾಡಬೇಕಾಗಿಲ್ಲ .

-ನಿಮ್ಮ ಗರ್ಭನಿರೋಧಕಗಳ ದಾಸ್ತಾನನ್ನು (ಕಾಂಡೋಮ್ ಮತ್ತು ಮೌಖಿಕ ಗರ್ಭನಿರೋಧಕ ಎರಡೂ) ಪುನಃ ನೀವು ಭರ್ತಿ ಮಾಡಬೇಕಿಲ್ಲ .

-ನೀವು ಹಾಲುಣಿಸುವ ಸಮಯದಲ್ಲಿ ಸಹ-ಕಾಪರ್-ಟಿ ಅನ್ನು ಸುಲಭವಾಗಿ ಬಳಸಬಹುದು.

-ಇದು ಕಡಿಮೆ  ಖರ್ಚಿನ  ಮತ್ತು ಜನನ ನಿಯಂತ್ರಣದ ಸುರಕ್ಷಿತ ವಿಧಾನವಾಗಿದೆ.

ಕಾಪರ್ ಟಿ ಯನ್ನು ಬಳಸುವಾಗ ಆಗುವ  ಅಪಾಯಗಳು

ಮಾನವಕುಲಕ್ಕೆ ತಿಳಿದಿರುವ ಗರ್ಭನಿರೋಧಕ ಸುರಕ್ಷಿತ ವಿಧಾನವೆಂದರೆ ಕಾಪರ್-ಟಿ. ತೀವ್ರ ಸಮಸ್ಯೆಗಳು ಬಹುತೇಕ ಅಪರೂಪ ಅಥವಾ ಎಂದಿಗೂ ಕಂಡುಬರುವುದಿಲ್ಲ .ಆದರೆ ನೀವು ಈ ಕೆಳಗಿನ ಲಕ್ಷಣಗಳನ್ನು ಎದುರಿಸಿದರೆ, ಸಾಧ್ಯವಾದಷ್ಟು ಬೇಗ ನಿಮ್ಮ ಸ್ತ್ರೀರೋಗತಜ್ಞರೊಡನೆ ನೀವು ಪರೀಕ್ಷೆಗೆ ಒಳಗಾಗಬೇಕು .

-ಜ್ವರ ಮತ್ತು ಶೀತ

-ನಿಮ್ಮ ದೇಹದಲ್ಲಿ ನೋವು ಉಂಟಾಗುವುದು

-ಗರ್ಭವತಿಯಾಗುತ್ತಿರುವಂತಹ ಅನುಭವಗಳು -ಕೋಮಲ ಮತ್ತು ಊದಿಕೊಂಡ ಸ್ತನಗಳು, ನೋಯುತ್ತಿರುವ ಮೊಲೆತೊಟ್ಟುಗಳು ವಾಕರಿಕೆ ಮತ್ತು ವಾಂತಿ ಮುಂತಾದ ದೈಹಿಕ ಸೂಚನೆಗಳು .

-ಧನಾತ್ಮಕ ಗೃಹ ಗರ್ಭಧಾರಣೆಯ ಪರೀಕ್ಷೆ

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon