Link copied!
Sign in / Sign up
12
Shares

ಕಾಂಡೊಮ್ ಬಗೆಗಿನ ಈ 10 ಮಜವಾದ ಬಿಸಿ ಬಿಸಿ ಸಂಗತಿಗಳನ್ನ ನೀವು ಓದಲೇ ಬೇಕು!

ಕಾಂಡೋಮ್ಸ್ ನಿಜವಾಗಲೂ ಒಂದು ಅದ್ಭುತವಾದ ಆವಿಷ್ಕಾರ. ಇವುಗಳು ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ಮತ್ತು ಬೇಡವಾದ ಗರ್ಭಧಾರಣೆಯಿಂದ ರಕ್ಷಣೆ ನೀಡಿ ಸುರಕ್ಷಿತ ಸೆಕ್ಸ್ ಅನ್ನು ಪ್ರೋತ್ಸಾಹಿಸುತ್ತವೆ. ಇಷ್ಟೇ ಅಲ್ಲದೆ ಇವುಗಳು ನಿಮ್ಮ ಅನುಕೂಲಕ್ಕಾಗಿ ವಿವಿಧ ಗಾತ್ರಗಳಲ್ಲಿ, ವಿವಿಧ ವಿನ್ಯಾಸಗಳಲ್ಲಿ ಹಾಗು ಇವಾಗ ವಿವಿಧ ಫ್ಲೇವರ್ ಗಳಲ್ಲಿಯೂ ಲಭ್ಯವಾಗಿವೆ. ಇವುಗಳೇನು ಇತ್ತೀಚಿನ ಆವಿಷ್ಕಾರ ಅಲ್ಲ, ಇವುಗಳು ಬಹಳ ವರ್ಷಗಳ ಹಿಂದೆ ಇಂದಲು ಬಳಕೆಯಲ್ಲಿ ಇದ್ದು, ಬದಲಾವಣೆಗಳನ್ನ ಹೊಂದುತ್ತಾ ಹೋಗುತ್ತಿವೆ. ಇಂತಹ ಕಾಂಡೋಮ್ಸ್ ಬಗ್ಗೆ ಚಿತ್ತಾಕರ್ಷಕ ಸಂಗತಿಗಳನ್ನ ನಾವು ಇಲ್ಲಿ ಕಲೆ ಹಾಕಿದ್ದೇವೆ ಓದಿ :

೧. ಇವುಗಳು ಕ್ರಿ.ಪೂ. ೧೦೦೦೦ ಇಂದಲೂ ಇವೆ

ಫ್ರಾನ್ಸ್ ದೇಶದ ಕಾಂಬರೆಲ್ಲೆಸ್ ಪ್ರಾಂತ್ಯದ ಗುಹೆಗಳಲ್ಲಿನ ಚಿತ್ರಗಳು ಜನರು ಕ್ರಿ.ಪೂ. 10000 - ಕ್ರಿ,.ಪೂ. 13000 ರ ಕಾಲದಲ್ಲಿ ಕಾಂಡೊಮ್ ಅನ್ನು ಬಳಸುತ್ತಿದ್ದರು ಎಂಬುದನ್ನು ತಿಳಿಸುತ್ತವೆ. ಅಲ್ಲಿನ ಚಿತ್ರಗಳು ಮಾನವನು ತನ್ನ ಶಿಶ್ನದ ತುದಿಯನ್ನು ಯಾವುದೋ ವಸ್ತುವಿನಿಂದ (ಬಹುಷಃ ಪ್ರಾಣಿಯ ನಾಳಗಳು, ಕರುಳು ಮತ್ತು ಚರ್ಮದಿಂದ ಮಾಡಿರುವುದು) ಮುಚ್ಚಿಕೊಳ್ಳುವುದನ್ನು ತೋರಿಸುತ್ತವೆ.

೨. ಇವುಗಳು 1-2 ಲೀಟರ್ ಅಷ್ಟು ನೀರನ್ನು ಹಿಡಿದಿಟ್ಟುಕೊಳ್ಳಬಹುದು

ನೋಡಿ ಎಲ್ಲಾದರೂ ಕ್ಯಾಂಪಿಂಗ್ ಅಂಥಾ ಹೋದಾಗ ನೀರಿನ ಚೀಲವಾಗಿ ಇವುಗಳನ್ನ ಬಳಸುತ್ತೀರೇನೋ !

೩. ಮೊದಲು ಬಾರಿ ನವಯುಗದ ಕಾಂಡೊಮ್ ಮಾಡಿದ್ದು ಗಾಡಿ ಟೈರ್ ತಾಯಾರಿಸುತ್ತಿದ್ದ ವ್ಯಕ್ತಿ

ಗುಡ್ಇಯರ್ ಟೈಯರ್ ಕಂಪನಿಯ ಮಾಲೀಕ ಚಾರ್ಲ್ಸ್ ಗುಡ್ಇಯರ್ 1844ರಲ್ಲಿ ಮೊದಲ ಬಾರಿಗೆ ಕಾಂಡೊಮ್ ಅನ್ನು ತಯಾರಿಸಿದ.

೪. ಟ್ರೋಜನ್ ಕಂಪನಿಯು ಕಾಂಡೊಮ್ ಪರೀಕ್ಷೆಗೆಂದೇ “ಬೆಡ್ರೂಮ್ ಪ್ಯಾನೆಲ್” ನೇಮಿಸಿದ್ದಾರೆ

ಟ್ರೋಜನ್ ಕಂಪನಿಯ ಮಾಲೀಕ ಮತ್ತು ಮುಖ್ಯ ವಿಜ್ಞಾನಿ ತಮ್ಮ ಕಂಪನಿಯ ಉತ್ಪನ್ನಗಳು ಸುಮಾರು 3 ವರ್ಷಗಳವರೆಗೆ ನೀಲಿನಕ್ಷೆ ಹಂತದಲ್ಲೇ ಇರುತ್ತವೆ ಹಾಗು ಇವುಗಳನ್ನು ಗ್ರಾಹಕರ ದೃಷ್ಟಿಕೋನದಿಂದ ಕೂಲಂಕುಷವಾಗಿ ಪರೀಕ್ಷಿಸಲಾಗುತ್ತದೆ ಎಂದು ಹೇಳುತ್ತಾರೆ. ಅಲ್ಲದೆ, ಇವರ ಉತ್ಪನ್ನಗಳಾದ ಕಾಂಡೊಮ್, ವೈಬ್ರೆಟರ್  ಗಳನ್ನ ಪರೀಕ್ಷಿಸಲು ೨೦ ರಿಂದ ೩೦ ದಂಪತಿಗಳ ಬೆಡ್ರೂಮ್ ಪ್ಯಾನೆಲ್ ಒಂದು ಇದೆ ಎಂದು ತಿಳಿಸಿದ್ದಾರೆ.

೫. ಒಂದಕ್ಕಿಂತ ಎರಡು ಕಾಂಡೋಮ್ಸ್ ಉತ್ತಮ ಅಲ್ಲ

ಕೆಲವು ಜನರು ಒಂದರ ಮೇಲೆ ಒಂದರಂತೆ ಎರಡು ಕಾಂಡೊಮ್ ಧರಿಸಿದರೆ, ಇನ್ನೂ ಹೆಚ್ಚು ಸುರಕ್ಷಿತವಾಗಿ ಕಾರ್ಯ ಮಾಡಬಹುದು ಎಂದುಕೊಳ್ಳುತ್ತಾರೆ. ಆದರೆ ವಾಸ್ತವ ಅದಕ್ಕೆ ವಿರುದ್ಧವಾಗಿದೆ. ಒಂದರ ಮೇಲೆ ಒಂದು ಕಾಂಡೊಮ್ ಧರಿಸಿದರೆ ಕಾರ್ಯದ ವೇಳೆ ಅವುಗಳೇ ಒಂದಕ್ಕೊಂದು ಉಜ್ಜಿಕೊಂಡು ಹರಿದು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

೬. ಯಾವ ಕಾಂಡೊಮ್ ಕೂಡ ನಿಮಗೆ ಚಿಕ್ಕದಾಗುವುದಿಲ್ಲ

ಕಾಂಡೊಮ್ ಅನ್ನು ಎಕ್ಸ್ಟ್ರಾ ಲಾರ್ಜ್ ಸೈಜ್ ಅಲ್ಲಿ ಮಾರುವುದು ಕೇವಲ ಮಾರ್ಕೆಟಿಂಗ್ ಉಪಾಯ ಅಷ್ಟೇ. ಒಬ್ಬ ವ್ಯಕ್ತಿಯು ಅಸಹಜ ಗಾತ್ರದ, ಅಸಾಧ್ಯ ಗಾತ್ರದ ಶಿಶ್ನ ಹೊಂದಿದ್ದರೆ ಮಾತ್ರ ಕಾಂಡೊಮ್ ಚಿಕ್ಕದಾಗಬಹುದು. ಹೀಗಾಗಿ ಯಾವ ಕಾಂಡೊಮ್ ಕೂಡ ಯಾವೊಬ್ಬ ವ್ಯಕ್ತಿಗೂ ಚಿಕ್ಕದಾಗುವುದಿಲ್ಲ.

೭. ಕಾಂಡೊಮ್ ಕೇವಲ ಗಂಡಸರಿಗೆ ಮಾತ್ರ ಲಭ್ಯವಿರುವುದಲ್ಲ

ಹೆಂಗಸರಿಗೂ ಕೂಡ ಕಾಂಡೊಮ್ ಲಭ್ಯವಿದೆ. ಈ ಕಾಂಡೊಮ್ ಒಂದು ಪೌಚ್ ರೀತಿಯಲ್ಲಿ ಇದ್ದು, ಇದನ್ನು ಯೋನಿಯ ಒಳಗೆ ಇಟ್ಟುಕೊಳ್ಳಬೇಕು. ಇದು ವೀರ್ಯವನ್ನು ಯೋನಿಯ ಒಳಗೆ ಹೋಗುವುದನ್ನು ತಡೆಯುತ್ತದೆ ಮತ್ತು ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ನಿಮಗೆ ರಕ್ಷಣೆ ನೀಡುತ್ತವೆ.

೮. ಇವುಗಳು ಯೋನಿಯ ಆರೋಗ್ಯವನ್ನು ವೃದ್ಧಿಸಬಹುದು

ಇವುಗಳು ಮೊದಲೇ ಗೊತ್ತಿರುವ ಹಾಗೆ ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ರಕ್ಷಣೆ ನೀಡುವುದಲ್ಲದೆ, ಯೋನಿಯ ಭಾಗದಲ್ಲಿ ಉಪಯುಕ್ತ ಬ್ಯಾಕ್ಟೀರಿಯಾಗಳನ್ನ ಹಿಂದೆ ಬಿಡುತ್ತವೆ. ಈ ಬ್ಯಾಕ್ಟೀರಿಯಾಗಳು ಆ ಭಾಗದಲ್ಲಿ ಸೋಂಕು ಆಗದಂತೆ ನೋಡಿಕೊಳ್ಳುತ್ತವೆ.

೯. ಅಮೆರಿಕಾದ ಸೇನೆ ಇದನ್ನು ಬಳಸುತ್ತದೆ…. ಆದರೆ ಕೇವಲ ಸೆಕ್ಸ್ ಗಾಗಿ ಅಲ್ಲ !

ಕಾಂಡೊಮ್ ಗಳು ಅನಿರೀಕ್ಷಿತವಾಗಿ ಸೇನೆಯಲ್ಲಿ ಉಪಯೋಗಗಳಿಗೆ ಬರುತ್ತವೆ : ಉದಾಹರಣೆಗೆ ರಕ್ತಸ್ರಾವ ನಿಲ್ಲಿಸಲು, ಗಾಯಕ್ಕೆ ಧೂಳು ಅಂಟದಂತೆ ನೋಡಿಕೊಳ್ಳಲು, ಸರ್ಜಿಕಲ್ ಗ್ಲೋವ್ಸ್ ಆಗಿ ಅವುಗಳನ್ನು ತುರ್ತು ಸಂದರ್ಭದಲ್ಲಿ ಉಪಯೋಗಿಸಲು, ಬಂದೂಕಿನ ಬಾಯಿ ಒಳಗೆ ಧೂಳು ಹೋಗದಂತೆ ಮುಚ್ಚಲು ಹಾಗು ತುರ್ತಾಗಿ ನೀರಿನ ಚೀಲವನ್ನಾಗಿ ಬಳಸಲು ಹಾಗು ಇನ್ನೂ ಅನೇಕ ಉಪಯೋಗಳಿಗೆ.

೧೦. ಕಾಂಡೊಮ್ ಅನ್ನು ನೀವು ೪ ವರ್ಷಗಳ ವರೆಗೆ ಹಾಗೆಯೇ ಇಡಬಹುದು

ಇವುಗಳನ್ನು ತಂಪಾದ, ಒಣ ಜಾಗದಲ್ಲಿ ಇಟ್ಟರೆ, ಇವುಗಳು ಸುಮಾರು 4 ರಿಂದ 5 ವರ್ಷಗಳವರೆಗೆ ಹಾಳಾಗದೆ ಹಾಗೆ ಇರುತ್ತವೆ. ಪ್ರತಿಯೊಂದು ಕಾಂಡೊಮ್ ಪ್ಯಾಕೆಟ್ ಮೇಲೆಯೂ ಅದರ ಜೀವಾವಧಿಯನ್ನು ಪ್ರಿಂಟ್ ಮಾಡಿರಲೇಬೇಕು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon