Link copied!
Sign in / Sign up
5
Shares

ಕಾಂಡೋಮ್ ಇತಿಹಾಸ!

ಕಾಂಡೋಮ್ ಅನ್ನೋದು ಕೇವಲ ಆಧುನಿಕ ಆವಿಷ್ಕಾರ ಇರಬಹುದು ಎಂದುಕೊಂಡರೆ ಅದು ದೊಡ್ಡ ತಪ್ಪು. ಜನನ ನಿಯಂತ್ರಣಕ್ಕೆ ಹಿಂದಿನ ಕಾಲದ, ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ ಶತಶತಮಾನಗಳಿಂದಲೂ ಮಾನವರು ವಿವಿಧ ತಂತ್ರಗಳು ಹಾಗು ದಾರಿಗಳನ್ನ ಹುಡುಕುತ್ತಾ ಬಂದಿದ್ದಾರೆ. ನಾವು ಈಗಿನ ಕಾಲದಲ್ಲಿ ಉಪಯೋಗಿಸುತ್ತಿರುವ ಕಾಂಡೋಮ್ ಗಳು ಕೇವಲ ನವೀಕರಣಗೊಂಡಿರುವ ಕಾಂಡೋಮ್ ಗಳಾಗಿದ್ದು, ಇದರ ಮೊದಲ ಮಾದರಿಯನ್ನ ಪ್ರಾಚೀನ ಕಾಲದ ಜನರು ಉಪಯೋಗಿಸುತ್ತಿದ್ದಕ್ಕೆ ಪುರಾವೆ ಎಂಬಂತೆ ಎಷ್ಟೊಂದು ಪ್ರಾಚೀನ ಕಾಲದ ಗುಹೆಗಳಲ್ಲಿನ ಚಿತ್ರಗಳಲ್ಲಿ ಅವರು ಕಾಂಡೋಮ್ ಆಗಿ ಉಪಯೋಗಿಸುತ್ತಿದ್ದ ವಸ್ತುವನ್ನು ಕಾಣಬಹುದು. ಕಾಂಡೋಮ್ ನ ಇತಿಹಾಸದ ಬಗ್ಗೆ ನಾವು ಇಲ್ಲಿ ಬರೆದಿದ್ದೇವೆ, ಓದಿ :

ಪ್ರಾಚೀನ ಪೊರೆ, ಕ್ರಿ.ಪೂ. 1000

ಹೊರಗೆಳೆಯುವ ತಂತ್ರ ಬಿಟ್ಟರೆ, ಪ್ರಾಚೀನ ಈಜಿಪ್ಷಿಯನ್ನರು ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನ ತಡೆಗಟ್ಟಲು ಲಿನಿನ್ ಬಟ್ಟೆಯನ್ನು ಉಪಯೋಗಿಸುತ್ತಿದ್ದರು. ಇದರೊಂದಿಗೆ ಹೆಂಗಸರು ಸಗಣಿ ಮತ್ತು ಜೇನುತುಪ್ಪವನ್ನ ವೀರ್ಯನಾಶಕಗಳಾಗಿ ಬಳಸುತ್ತಿದ್ದರು. ಆದರೆ ಶಿಲೀಂದ್ರ(ಫಂಗಲ್) ಸೋಂಕು ಉಂಟಾದರೆ ಏನು ಮಾಡುತ್ತಿದ್ದರು ಎಂಬುದು ಗೊತ್ತಿಲ್ಲ!

ನೋವಿನ ರಕ್ಷಣೆ, 1400

ಸ್ವಲ್ಪ ಮುಂದೆ ಈ ಯುಗಕ್ಕೆ ಬಂದರೆ, ಜನರು ನಮ್ಮ ಆಧುನಿಕ-ಜಗತ್ತಿನ ಕಾಂಡೋಮ್ ಗಳನ್ನ ಅಣಕು ಮಾಡುತ್ತಿದ್ದಂತೆ ಗೋಚರಿಸುತ್ತದೆ. ಹೇಗೆಂದರೆ ಚೀನಾದಲ್ಲಿ ಶಿಶ್ನವಿನ ತುದಿಯನ್ನ ಮೇಕೆಯ ಕರುಳಿನಿಂದ ಮುಚ್ಚುತ್ತಿದ್ದರು ಅಥವಾ, ಎಣ್ಣೆ ಸಾರಿಸಿದ ರೇಷ್ಮೆ ಪೇಪರ್(ಇದು ಆಧುನಿಕ ಕಾಂಡೋಮ್ ಅಂತೆಯೇ ಆಯಿತಲ್ಲವೇ?!) ಆದರೆ ಜಪಾನಿಗರು ಮಾತ್ರ ಗ್ಲಾನ್ ಎಂಬ ರಕ್ಷಾ ಕವಚ ಉಪಯೋಗಿಸುತ್ತಿದ್ದರು. ಇದನ್ನು ಪ್ರಾಣಿಗಳ ಕೊಂಬುಗಳು, ತೆಳುವಾದ ಚರ್ಮ ಮತ್ತು ಆಮೆಯ ಕವಚದಿಂದ ಮಾಡುತ್ತಿದ್ದರಂತೆ!

ರಬ್ಬರ್, 1839

ಗುಡ್ಇಯರ್  ಟೈರ್ಸ್ ಕಂಪನಿಯ ಮಾಲೀಕ ಚಾರ್ಲ್ಸ್ ಗುಡ್ಇಯರ್ ಅವರ ಆವಿಷ್ಕಾರದಿಂದ ಸದ್ಯ ನಾವುಗಳು ಶಿಶ್ನದ ಮೇಲೆ ಮೇಕೆ ಕರುಳು ಧರಿಸುವುದು ತಪ್ಪಿತು! ಇವರ ಆವಿಷ್ಕಾರವು ಹಿಂದಿನ ಎಲ್ಲಾ ತಂತ್ರಗಳಿಗಿಂತ ಹೆಚ್ಚು ಪರಿಣಾಮಕಾರಿ ಆಗಿತ್ತು. ಇವರು ತಾಯರಿಸಿದ ಕವಚವು ವಾಸನೆಯಲ್ಲಿ ರಬ್ಬರ್ ಅನ್ನು ಹೋಲುತಿತ್ತು ಹಾಗು ಟೈರ್ ಮೇಲೆ ಇರುವಂತೆ ಇದರ ಮೇಲೆಯೂ ಹೊಲಿಗೆಯ ಗೆರೆಗಳು ಇದ್ದವು. ಇಲ್ಲಿಂದಾನೆ “ರಬ್ಬರ್” ಎಂದು ಕಾಂಡೋಮ್ ಗೆ ಹೆಸರು ಬಂದಿದ್ದು !

ಲ್ಯಾಟೆಕ್ಸ್ ಸಂರಕ್ಷಕ, 1912

ಪೋಲೆಂಡಿನ ಜೂಲಿಯಸ್ ಫ್ರಾಂ ಗುಡ್ಇಯರ್ ಅವರ ಕಾಂಡೋಮ್ ಮಾದರಿಯನ್ನ ಇಟ್ಟುಕೊಂಡು ಅದನ್ನು ಮತ್ತಷ್ಟು ನವೀಕರಿಸಿದರು. ಅವರು ಶಿಶ್ನವನ್ನ ಹೋಲುವಂತ ಒಂದು ಗ್ಲಾಸ್ ಆಕೃತಿಯನ್ನ ಮಾಡಿ ಅದನ್ನ ಕರಗಿಸಿದ ರಬ್ಬರಿನಲ್ಲಿ ಅದ್ದುತ್ತಿದ್ದರು. ನಂತರ ಅದನ್ನ ಕುಲುಮೆಯಲ್ಲಿ ಬಿಸಿ ಮಾಡುತ್ತಿದ್ದರು.

ಮಜವಾದ ಕಾಂಡೋಮ್, 2014

ಇವಾಗ ಕಾಂಡೋಮ್ ಗಳು ಜೆಮ್ಸ್ ಚಾಕಲೇಟ್ ಥರ ಆಗಿವೆ. ವಿಧವಿಧ ಬಣ್ಣ ,ವಿಧವಿಧ ಮೇಲ್ಮೈ, ವಿಧವಿಧ ಫ್ಲೇವರ್ ಅಲ್ಲಿ ಲಭ್ಯವಿದೆ. ಸ್ಟ್ರಾಬೆರಿ ಇಂದ ಹಿಡಿದು ಬದನೇಕಾಯಿವರೆಗೂ ಎಲ್ಲಾ ಫ್ಲೇವರ್ ಗಳಲ್ಲೂ ಇದು ಲಭ್ಯ. ಗೆರೆಗಳು ಇರುವುದು, ಚುಕ್ಕಿಗಳು ಇರುವುದು ಹಾಗು ಮತ್ತಷ್ಟು ಹೊಸ ಹೊಸ ವಿನ್ಯಾಸಗಳು ಹೆಚ್ಚೆಚ್ಚು ಹಿತ ನೀಡುವಂತ ಕಾಂಡೋಮ್ ಗಳು ಈಗ ಲಭ್ಯವಿದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon