ನಿಮ್ಮ ಮಗುವಿಗೆ ನೀವು ಮುತ್ತು ನೀಡಿದರೆ ಏನಾಗುತ್ತದೆ ಎಂದು ತಿಳಿದರೆ ಖಂಡಿತ ಆಶ್ಚರ್ಯಚಕಿತರಾಗುವಿರಿ!
ತನ್ನ ಮಗುವನ್ನು ಯಾವ ತಾಯಿ ತಾನೇ ಮುದ್ದಾಡುವುದಿಲ್ಲ, ಇದು ನೈಸರ್ಗಿಕವಾಗಿ ತಾಯಿ ಪ್ರೀತಿ ವ್ಯಕ್ತಪಡಿಸುವ ಒಂದು ವಿಧಾನವಾಗಿದೆ. ತಾಯಿಯು ಅವಳ ಮಗುವನ್ನು ಮುತ್ತಿಕ್ಕುತ್ತಾಳೆ, ಏಕೆಂದರೆ ಅವಳಿಗೆ ಮಗುವಿನ ಮೇಲಿರುವ ಪ್ರೀತಿಯಿಂದ. ಮುತ್ತು ನೀಡುವುದು ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕ ಸಂಬಂಧವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಮಗುವಿಗೆ ಚುಂಬಿಸುವುದರಿಂದ ಆಗುವ ದೀರ್ಘಕಾಲದ ಪ್ರಯೋಜನಗಳು ನಿಮಗೆ ತಿಳಿದಿವೆಯೇ? ನೀವು ಖಂಡಿತ ಆಶ್ಚರ್ಯ ಪಡುವಿರಿ, ಅವು ಏನು ಎಂದು ತಿಳಿಯಿರಿ.
ನಿಮ್ಮ ಚುಂಬನವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ನಿಮ್ಮ ಮಗುವಿಗೆ ನೀವು ಮುತ್ತು ನೀಡಿದಾಗ, ನಿಮ್ಮ ಮಗುವಿನ ಚರ್ಮದಲ್ಲಿ ಬೆಳೆಯುತ್ತಿರುವ ರೋಗಕಾರಕಗಳನ್ನು ನೀವು ತೆಗೆದುಕೊಳ್ಳಬಹುದು, ರೋಗಕಾರಕಗಳು ನಿಮ್ಮ ದ್ವಿತೀಯಕ ಲಿಂಫಾಯಿಡ್ ಅಂಗಗಳನ್ನು ತಲುಪುತ್ತವೆ, ಅಲ್ಲಿ ಆ ರೋಗಕಾರಕಗಳಿಗೆ ನಿರ್ದಿಷ್ಟವಾದ ಜೀವಕೋಶಗಳು ಮೆಮೊರಿ ಬಿ ಕೋಶಗಳಿಂದ ಅವುಗಳನ್ನು ನಿಶ್ಚಲವಾಗಿಸುತ್ತವೆ. ಎದೆಹಾಲುಣಿಸುವ ತಾಯಿಯು ಈ ಬಿ ಕೋಶಗಳನ್ನು ರೋಗನಿರೋಧಕಗಳಾಗಿ ಉಪಯೋಗಿಸುತ್ತಾರೆ, ಇವುಗಳನ್ನು ಮಗುವಿಗೆ ತಲುಪಿಸಿದಾಗ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ರೋಗಕಾರಕಗಳ ವಿರುದ್ಧ ಹೋರಾಡಲು ಸಹಾಯ ಆಗುತ್ತದೆ. ಅಗತ್ಯವಿದ್ದಾಗ ನಿಮ್ಮ ಮಗುವಿನ ನಿರೋಧಕಶಕ್ತಿಯನ್ನು ಹೆಚ್ಚಿಸಲು ಸಿಹಿಯಾದ ಚುಂಬನವು ತುಂಬಾ ಸಹಾಯವಾಗುತ್ತದೆ.
ನಿಮ್ಮ ಮಗುವಿಗೆ ಚುಂಬನ ನೀಡುವುದು ಮಗುವಿನ ಬುದ್ದಿವಂತಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ
ತಾಯಿಯ ಪ್ರೀತಿಯ ಚುಂಬನ ಮಗುವಿನ ಮೆದುಳಿನ ಬೆಳವಣಿಗೆಗೆ ತುಂಬಾ ಸಹಾಯಕಾರಿ ಆಗಿದೆ ಎಂದು ಇತ್ತೀಚಿಗೆ ನಡೆಸಿದ ಅಧ್ಯಯನ ಒಂದು ಬಹಿರಂಗ ಪಡಿಸಿದೆ. ರೂಪವಿಜ್ಞಾನದ ಪ್ರಕಾರ ಮೆದುಳಿನ ಚಿತ್ರವನ್ನು ವೀಕ್ಷಿಸಿ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್, ನಡೆಸಿದ ಅಧ್ಯಯನದ ಪ್ರಕಾರ ತಾಯಿಯ ಪ್ರೀತಿಯ ಚುಂಬನದಿಂದ ಮಗುವಿನ ಮೆದುಳಿನಲ್ಲಿ ಬದಲಾವಣೆಯನ್ನು ಕಾಣಬಹುದಂತೆ. ಇವರು ನಡೆಸಿದ ಅಧ್ಯಯನದ ಪ್ರಕಾರ ಸರಿಯಾದ ಪ್ರೀತಿ ಪೋಷಣೆ ಇರುವ ಮಕ್ಕಳಲ್ಲಿ ಸರಿಯಾದ ಪ್ರೀತಿ ಸಿಗದೇ ಇರುವ ಮಕ್ಕಳಿಗಿಂತ ಶೇಕಡಾ ೧೦ ರಷ್ಟು ಹೆಚ್ಚು ಬುದ್ದಿಯನ್ನು ಮತ್ತು ಮೆದುಳಿನ ಶಕ್ತಿಯನ್ನು ಪಡೆಯುತ್ತಾರೆ.
ಮಗುವನ್ನು ಪ್ರೀತಿಸುವುದು ಅವರ ಬೆಳವಣಿಗೆಗೆ ಹೇಗೆ ಸಹಾಯ ಆಗುತ್ತದೆ ಎಂಬುದಕ್ಕೆ ಕೆಳಗಿನವುಗಳನ್ನು ಗಮನಿಸಿ,
೧.ನಿಮ್ಮ ಮಗುವನ್ನು ಪ್ರೀತಿಸುವುದು ಮತ್ತು ಅದನ್ನು ಸ್ಪರ್ಶದ ಮೂಲಕ ಅಥವಾ ಮಗುವಿನ ಸನ್ನೆಗಳಿಗೆ ಪ್ರತಿಕ್ರಿಯೆ ನೀಡುವುದರ ಮೂಲಕ ವ್ಯಕ್ತಪಡಿಸುವುದರಿಂದ ಮಗುವು ಯಾವುದೇ ಒತ್ತಡಕ್ಕೆ ಒಳಗಾಗದೆ ಮೆದುಳಿನ ವೃದ್ಧಿಯನ್ನು ಪಡೆಯಲು ಸಹಾಯ ಆಗುತ್ತದೆ.
೨.ಮಗುವು ನಾನು ಸುರಕ್ಷಿತ ಎಂದು ಭಾವಿಸುತ್ತದೆ, ಮತ್ತು ಇದರಿಂದ ಮಗುವು ಮೆದುಳಿನ ಚುರುಕುತನವನ್ನು ಮತ್ತು ವೃದ್ಧಿಯನ್ನು ಪಡೆಯಲು ಸಹಾಯವಾಗುತ್ತದೆ.
೩.ನಿಮ್ಮ ಮಗುವು ದೃಢವಾದ ಒತ್ತಡದ ಪ್ರತಿಕ್ರಿಯೆಯನ್ನು ಬೆಳೆಸಿಕೊಳ್ಳುತ್ತದೆ.
೪.ಮುತ್ತು ಕೊಡುವುದರಿಂದ ಮಗುವು ಧನಾತ್ಮಕವಾಗಿ ಚಿಂತಿಸಲು ಮತ್ತು ಪ್ರತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಆಗುತ್ತದೆ.
ನಿಮ್ಮ ಪ್ರೀತಿಯನ್ನು ಮಗುವಿಗೆ ಚುಂಬನ ನೀಡುವ ಮೂಲಕ, ಸ್ಪರ್ಶದ ಮೂಲಕ, ಅಥವಾ ಮುದ್ದಾಡುವ ಮೂಲಕ ವ್ಯಕ್ತಪಡಿಸುವುದರಿಂದ ನಿಮ್ಮ ಮಗುವು ವಿಭಿನ್ನ ಮತ್ತು ಅನನ್ಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಇದು ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಭಾವನಾತ್ಮಕವಾಗಿ ಆರೋಗ್ಯವನ್ನು ಪಡೆಯಲು ಸಹಾಯ ಆಗುತ್ತದೆ.
