Link copied!
Sign in / Sign up
28
Shares

ಚುಂಬನದ ಈ 6 ಆರೋಗ್ಯಕರ ಉಪಯೋಗಗಳನ್ನು ಓದಿದರೆ, ಚುಂಬಿಸುತ್ತಲೇ ಇರುತ್ತೀರಾ!

ಚುಂಬಿಸುವುದು ಒಂದು ಭಾವನಾತ್ಮಕ ಭಾಷೆ ಆಗಿದ್ದು, ಅದು ನಾವು ನಮ್ಮ ಪ್ರೀತಿ ಪಾತ್ರರಿಗೆ ಅಕ್ಕರೆ ತೋರಿಸುವ ಒಂದು ಬಗೆ. ಆದರೆ ಅದರೊಂದಿಗೆ ಇದಕ್ಕೆ ಇನ್ನಷ್ಟು ಮಹತ್ವವಿದೆ. ನಿಜ ಹೇಳಬೇಕೆಂದರೆ, ಚುಂಬಿಸುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಭಾವನೆಗಳು ಹುಟ್ಟಿಕೊಳ್ಳುತ್ತವೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳಿತನ್ನು ಉಂಟು ಮಾಡುತ್ತವೆ. ನಮ್ಮ ದೇಹ ಮತ್ತು ಮನಸ್ಸನ್ನು ಪುನರ್ಯೌವನಗೊಳಿಸುತ್ತದೆ ಮತ್ತು ತಾಜಾತನ ತರುತ್ತದೆ. ಆದರೆ ಚುಂಬನವು ಒಳ್ಳೆಯದು ಎಂದು ಜೀವಶಾಸ್ತ್ರ ಹೇಳುವುದು ಏಕೆ ಎಂಬುದಕ್ಕೆ ಇಲ್ಲಿವೆ ನೋಡಿ ಕಾರಣಗಳು :

೧. ಇದು ನಿಮ್ಮನ್ನು ಇನ್ನಷ್ಟು ಎಚ್ಚರಗೊಳಿಸುತ್ತದೆ

ಚುಂಬಿಸುವುದು ನೊರಾಡ್ರೆನಲಿನ್ ಮತ್ತು ಅಡ್ರಿನಲಿನ್ ಗಳ ಬಿಡುಗಡೆಯನ್ನು ವೃದ್ಧಿಸುತ್ತದೆ. ಇದು ನಿಮ್ಮ ನಾಡಿಬಡಿತ ಹೆಚ್ಚಿಸಿ ನೀವು ಹೆಚ್ಚು ಉತ್ಸುಕರಾಗಿ ಮತ್ತು ಎಚ್ಚರವಾಗಿ ಇರುವಂತೆ ಮಾಡುತ್ತದೆ.


೨. ಶ್ವಾಸಕೋಶದ ಅರೋಗ್ಯ ವೃದ್ಧಿಸುತ್ತದೆ

ಚುಂಬಿಸಿದ ನಂತರ ಸಾಮಾನ್ಯವಾಗಿ ನಮ್ಮ ಉಸಿರಾಟದ ವೇಗ ಹೆಚ್ಚುತ್ತದೆ. ಸಾಮಾನ್ಯವಾಗಿ ನಾವು ನಿಮಿಷಕ್ಕೆ 20 ಬಾರಿ ಉಸಿರಾಡುತ್ತಿದ್ದರೆ, ಚುಂಬಿಸುವಾಗ ಮತ್ತು ಅದರ ನಂತರದ ಕ್ಷಣಗಳಲ್ಲಿ 60 ಬಾರಿವರೆಗೂ ನಾವು ಉಸಿರಾಡಬಹುದು. ಉಸಿರಾಟದ ಬಗ್ಗೆ ನಡೆದ ಸಂಶೋಧನೆಗಳಲ್ಲಿ ಹೆಚ್ಚು ಬಾರಿ ಗಾಳಿಯನ್ನು ಸೇವಿಸಿ ಹೊರಬಿಡುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಇಡಬಹುದು ಎಂಬುದು ತಿಳಿದುಬಂದಿದೆ.


೩. ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ

ನೀವು ಪ್ರತಿ ಬಾರಿ ಚುಂಬಿಸಿದಾಗ ನಿಮ್ಮ ಮೆದುಳು ನಿಮ್ಮ ದೇಹದಲ್ಲಿ ಆಕ್ಸಿಟೋಸಿನ್ ಹಾರ್ಮೋನಿನ ಪ್ರಮಾಣ ಹೆಚ್ಚಿಸುತ್ತದೆ. ಈ ಹಾರ್ಮೋನಿಗೆ ಶಾಂತಗೊಳಿಸುವ ಶಕ್ತಿ ಇದ್ದು, ಇದು ದಂಪತಿಯ ನಡುವಿನ ಬಾಂಧವ್ಯ ಮತ್ತು ನಂಬಿಕೆ ಹೆಚ್ಚಿಸುತ್ತದೆ. ಇತರೆ ಸಂಶೋಧನೆಗಳು ಆಕ್ಸಿಟೋಸಿನ್ ಏರಿಕೆಯಿಂದ ಸಹಾನುಭೂತಿ, ಸಂಬಂಧದ ಆಯಸ್ಸು ಮತ್ತು ಬೆಂಬಲ ಹೆಚ್ಚಿಸುತ್ತದೆ ಎಂದು ತಿಳಿಸಿವೆ.


೪. ನಿಮ್ಮ ಹಲ್ಲುಗಳನ್ನು ಬಿಳಿಯಾಗಿ ಇಡುತ್ತದೆ

ಇತ್ತೀಚಿಗಷ್ಟೇ ಚುಂಬನದಿಂದ ಮೌಖಿಕ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗೆಗಿನ ಸಂಶೋಧನೆಯಲ್ಲಿ ಚುಂಬನವು ಒಂದು ರೀತಿಯ ಉಗುಳು/ಲಾಲಾರಸ/ಸಲೈವಾ ಉತ್ಪತ್ತಿ ಮಾಡುವುದು ಹಾಗು ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಇದು ಕ್ರಮೇಣ ನಿಮ್ಮ ಹಲ್ಲುಗಳಲ್ಲಿ ಕ್ಯಾವಿಟಿ ಆಗುವುದನ್ನು ಮತ್ತು ದುರ್ವಾಸನೆ ಉಂಟು ಮಾಡುವುದನ್ನು ನಿಲ್ಲಿಸುತ್ತದೆ.


೫. ಹೃದಯ ರೋಗಗಳನ್ನು ದೂರ ಇಡುತ್ತದೆ

ಚುಂಬಿಸುವುದು ನಿಮ್ಮ ಹೃದಯದ ಆರೋಗ್ಯವನ್ನು ನೈಸರ್ಗಿಕವಾಗಿ ಮತ್ತು ಪರಿಣಾಮಕಾರಿಯಾಗಿ ವೃದ್ಧಿಸಲು ಒಂದು ಒಳ್ಳೆಯ ವಿಧಾನ. ಏಕೆಂದರೆ ಈ ಭಾವನಾತ್ಮಕ ಕ್ರಿಯೆಯು ನಿಮ್ಮ ಬೊಜ್ಜು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಚುಂಬಿಸಿದಾಗ ಬಿಡುಗಡೆ ಆಗುವ ಅಡ್ರಿನಲಿನ್ ಹೃದಯವು ಹೆಚ್ಚೆಚ್ಚು ರಕ್ತವನ್ನು ಪಂಪ್ ಮಾಡುವಂತೆ ಪ್ರಚೋದಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.


೬. ಅಲರ್ಜಿಗಳನ್ನೂ ದೂರ ಇಡುತ್ತದೆ

ಚುಂಬಿಸುವುದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಗಟ್ಟಿ ಮಾಡುತ್ತದೆ ಮತ್ತು ಮೈನೂರತೆಗಳನ್ನೂ ದೂರ ಇಡುತ್ತದೆ. ಸಾಮಾನ್ಯವಾಗಿ ದೇಹದಲ್ಲಿ ಕಾಣಿಸಿಕೊಳ್ಳುವ IgE ಪ್ರತಿಕಾಯಗಳು ಹಿಸ್ಟಾಮೈನ್ ಅನ್ನು ಬಿಡುಗಡೆ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳುವಂತೆ ಮಾಡುತ್ತವೆ. ಆದರೆ ಚುಂಬಿಸುವುದರಿಂದ ದೇಹದಲ್ಲಿ ಈ ಪ್ರತಿಕಾಯಗಳೇ ಕಡಿಮೆ ಆಗುತ್ತವೆ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon