Link copied!
Sign in / Sign up
116
Shares

ನಿಮ್ಮ ಮಗು ಗಂಡೋ ಅಥವಾ ಹೆಣ್ಣೋ? ಈ ಚೀನಿ ಚಾರ್ಟ್ ನೋಡಿ ತಿಳಿಯುತ್ತದೆ!

ಪ್ರಾಚೀನ ಚೀನಿ ರಹಸ್ಯ? ಹೌದು, ಮಗುವಿನ ಲಿಂಗ ಊಹಿಸುವ ವಿಷಯದಲ್ಲಿ, ಇದು ಒಂದು ರಹಸ್ಯವೇ. ಈ ಚೀನಿ ಲಿಂಗ ಚಾರ್ಟ್ “ಬುಕ್ ಆಫ್ ಚೇಂಜಸ್” ಎಂಬ ಪುಸ್ತಕದ ಮೇಲೆ ಆಧಾರಿತವಾಗಿದೆ. ಅಲ್ಲದೆ ಇದು ಪಂಚಭೂತಗಳ ಮೇಲೆಯೂ ಅವಲಂಬಿತವಾಗಿದೆ.

ಈ ಚಾರ್ಟ್ ಹೇಗೆ ಕೆಲಸ ಮಾಡುತ್ತದೆ?

ಈ ಚೀನಿ ಚಾರ್ಟ್ ನಿಮ್ಮ ಮಗುವಿನ ಲಿಂಗ ಯಾವುದೆಂದು ಊಹಿಸುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲವೆ ನಿಮಗೆ? ಇದನ್ನು ಬಳಸುವುದು ತುಂಬಾನೇ ಸುಲಭ. ಇದನ್ನು ಬಳಸಲಿಕ್ಕೆ ನಿಮಗೆ ತಿಳಿದಿರಬೇಕಾದದ್ದು ಎರಡೇ ವಿಷಯ :

೧. ಗರ್ಭತಾಳಿದ ತಿಂಗಳು

೨. ಗರ್ಭತಾಳಿದ ಸಮಯದಲ್ಲಿನ ತಾಯಿಯ ವಯಸ್ಸು

ಅಡ್ಡಡ್ಡ ಇರುವ ಸಾಲುಗಳು ತಿಂಗಳುಗಳ ಹೆಸರುಗಳನ್ನ ಹೊಂದಿವೆ ಹಾಗು ಉದ್ದುದ್ದ ಇರುವ ಸಾಲುಗಳು ತಾಯಿಯ ವಯಸ್ಸನ್ನು ಹೊಂದಿವೆ

ನೀವು ಗರ್ಭತಾಳಿದಾಗಿನ ವಯಸ್ಸು ಹಾಗು ತಿಂಗಳು ಯಾವುದೆಂದು ಸರಿಯಾಗಿ ಹೊಂದಿಸಿ, ಆ ಸಾಲುಗಳು ಎಲ್ಲಿ ಸೇರುತ್ತವೆ ಎಂದು ನೋಡಿ. ಸೇರಿದ ಪಾಯಿಂಟ್ ಅಲ್ಲಿ ಇರುವ ಚೌಕದಲ್ಲಿ B ಅಕ್ಷರ ಇದ್ದರೆ ಗಂಡು ಮಗು ಎಂದು ಹಾಗು G ಅಕ್ಷರ ಇದ್ದರೆ ಹೆಣ್ಣು ಮಗು ಎಂದು 

ಈ ವಿಧಾನವು ಎಷ್ಟು ನಿಖರ ಎಂಬುದಕ್ಕೆ ಪ್ರಮಾಣಿತ ಉತ್ತರವಾದ ೫೦/೫೦ ಎನ್ನಬಹುದು. ಕೆಲವರು ಹೇಳುವ ಪ್ರಕಾರ ಚೀನಿ ಚಾರ್ಟ್ ೯೦% ನಿಖರ ಎಂದು, ಆದರೆ ಸಂಖ್ಯೆಗಳು ಬೇರೆಯದ್ದೇ ಹೇಳುತ್ತವೆ. ಹಾಗಾಗಿ ಇದು ನಿಮ್ಮ ನಂಬಿಕೆಗೆ ಬಿಟ್ಟದ್ದು ಮತ್ತು ಇದು ಯಾವಾಗಲು ಸರಿಯಾಗಿ ಇರಲೇಬೇಕೆಂದು ಇಲ್ಲ. ನಿಮ್ಮ ಗರ್ಭಧಾರಣೆ ಸುಖಕರವಾಗಿರಲಿ !

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon