Link copied!
Sign in / Sign up
2
Shares

ಚರ್ಮಕ್ಕಾಗಿ ಆಪಲ್ ಸೈಡರ್ ವಿನೆಗರ್ನ 10 ಅದ್ಭುತ ಪ್ರಯೋಜನಗಳು (10 Amazing Benefits Of Apple Cider Vinegar For Skin In Kannada)

ವಿವಿಧ ಬಳಕೆಗಳಿಗಾಗಿ ವಿವಿಧ ಉತ್ಪನ್ನಗಳನ್ನು ಹಲವು ವರ್ಷಗಳಿಂದ ನಿಸರ್ಗದ ಅದ್ಭುತಗಳನ್ನು ಸಂಶೋಧಿಸಲಾಗುತ್ತಿದೆ. ಆ ರೀತಿಯ ಒಂದು ಉತ್ಪನ್ನ ಆಪಲ್ ಸೈಡರ್ ವಿನೆಗರ್ (ACV). ಇದು ಅತಿಯಾಗಿ ಪ್ರಖ್ಯಾತಿ ಪಡೆದಿರುವ ಉತ್ಪನ್ನಗಳಲ್ಲಿ ಒಂದು. ಈ ಉತ್ಪನ್ನವನ್ನು ನೂರಾರು ವರ್ಷಗಳಿಂದ ಔಷಧಿಯಾಗಿ ಬಳಸುತ್ತಿದ್ದರೂ, ಕಳೆದ ೩-೪ ವರ್ಷಗಳಲ್ಲಿ ಇದರ ಜನಪ್ರಿಯತೆ ಹೆಚ್ಚಿದೆ. ಈ ಲೇಖನದಲ್ಲಿ ಆಪಲ್ ಸೈಡರ್ ವಿನೆಗರ್ ಎಂದರೇನು? ಅದರ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ. 

ಪರಿವಿಡಿ:

೧. ಆಪಲ್ ಸೈಡರ್ ವಿನೆಗರ್ ಎಂದರೇನು? (What Is Apple Cider Vinegar?In Kannada)

೨. ಆಪಲ್ ಸೈಡರ್ ವಿನೆಗರ್ ಲಾಭಗಳು (Apple Cider Vinegar Benefits In Kannada)

೩. ಆಪಲ್ ಸೈಡರ್ ವಿನೆಗರ್ ಇಂದ ಚರ್ಮಕ್ಕೆ ಆಗುವ ಪ್ರಯೋಜನಗಳು  (Benefits Of Apple Cider Vinegar For Skin In Kannada)

೪. ಆಪಲ್ ಸೈಡರ್ ವಿನೆಗರ್ ಇಂದ ಕೂದಲಿಗೆ ಆಗುವ ಪ್ರಯೋಜನಗಳು (Apple Cider Vinegar Benefits For Hair In Kannada)

೫. ಆಪಲ್ ಸೈಡರ್ ವಿನೆಗರ್ ಬಗ್ಗೆ ಮುನ್ನೆಚ್ಚರಿಕೆ (Safety Of Apple Cider Vinegar In Kannada)

೧. ಆಪಲ್ ಸೈಡರ್ ವಿನೆಗರ್ ಎಂದರೇನು?(What Is Apple Cider Vinegar?In Kannada)

ಆಪಲ್ ಸೈಡರ್ ಅಥವಾ ACV ಎಂದು ಕೂಡಾ ಕರೆಯಲ್ಪಡುವ ಆಪಲ್ ಸೈಡರ್ ವಿನೆಗರ್, ಸೇಬು ಹಣ್ಣನ್ನು ಹಿಂಡಿ ತೆಗೆದ ರಸದಿಂದ ತಯಾರಿಸಲಾಗುತ್ತದೆ. ಅದಾದ ನಂತರ ಈ ಸೇಬು ಹಣ್ಣಿನ ರಸಕ್ಕೆ ಒಳ್ಳೆಯ ಬ್ಯಾಕ್ಟೀರಿಯಾ ಮತ್ತು   ಈಸ್ಟ್ ಗಳನ್ನು ಸೇರಿಸಿ, ರಸ ಹುದುಗುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಇದರಿಂದ ಹಣ್ಣಿನ ರಸ ಮದ್ಯಸಾರವಾಗಿ ಬದಲಾಗುತ್ತದೆ. ಈ ಮದ್ಯಸಾರವನ್ನು ವಿನೆಗರ್ ಆಗಿ ಸಂಸ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಹುಳಿಯಾದ ರುಚಿಯನ್ನು  ಪಡೆಯುತ್ತದೆ.

೨. ಆಪಲ್ ಸೈಡರ್ ವಿನೆಗರ್ ಲಾಭಗಳು: (Apple Cider Vinegar Benefits In Kannada)

ಆಪಲ್ ಸೈಡರ್ ವಿನೆಗರ್ ನ ಲಾಭಗಳು ಹಲವಾರು. ಹಾಗಾಗಿ, ಇದು ಪ್ರತಿ ಅರೋಗ್ಯ ಸಮಸ್ಯೆಯನ್ನು ತೀರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಅತಿ ನಂಬಿಕೆ ಗಳಿಸಿರುವ ದ್ರವಪದಾರ್ಥವಾಗಿದ್ದು, ಹೆಚ್ಚಿನ ಅರೋಗ್ಯ ಲಾಭಗಳನ್ನು ಹೊಂದಿದೆ. 

೧. ಹೊಟ್ಟೆಗೆ ಆಪಲ್ ಸೈಡರ್ ವಿನೆಗರ್ ಇಂದ ಆಗಬಹುದಾದ ಲಾಭಗಳು: ಅಜೀರ್ಣತೆ, ಭೇದಿ - ಹೊಟ್ಟೆಗೆ ಸಂಬಂಧಿಸಿರುವ ಏನೇ ತೊಂದರೆ ಇದ್ದರೂ, ಆಪಲ್ ಸೈಡರ್ ವಿನೆಗರ್ ನಲ್ಲಿರುವ  ಸೀರಳಿಕ ಅಥವಾ ಆಂಟಿಬಯೋಟಿಕ್ ಗುಣ ಈ ತೊಂದರೆಗಳನ್ನು ಚಿಕಿತ್ಸಿಸುವಲ್ಲಿ ಬಹಳ ಸಹಾಯಕಾರಿ. 

೨. ಗಂಟಲಿಗೆ ಆಪಲ್ ಸೈಡರ್ ವಿನೆಗರ್: ೧೦೦ ಮಿಲಿಲೀಟರ್ ನಷ್ಟು ಬೆಚ್ಚಗಿನ ನೀರಿನಲ್ಲಿ, ೧೦೦ ಮಿಲಿಲೀಟರ್ ನಷ್ಟು ACV ಯನ್ನು ಸೇರಿಸಿ ಸೇವಿಸಿದ್ದೇ ಆದಲ್ಲಿ, ನಿಮ್ಮ ಗಂಟಲಿನ ತೊಂದರೆಯನ್ನು ನಿವಾರಿಸುತ್ತದೆ. 

೩. ದೇಹದ ಕೊಬ್ಬಿನ ಅಂಶ  ನಿಯಂತ್ರಿಸುವಲ್ಲಿ ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ನಲ್ಲಿರುವ ಅಸಿಟಿಕ್ ಆಸಿಡ್, ನಿಮ್ಮ  ಕೊಬ್ಬಿನಂಶವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. 

೪. ತೂಕ ನಿಯಂತ್ರಿಸುವಲ್ಲಿ ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ನಲ್ಲಿರುವ ಅಸಿಟಿಕ್ ಆಸಿಡ್ ನಿಮ್ಮ ಹಸಿವನ್ನು ಕಡಿಮೆ ಮಾಡಿ, ನೀರಿನ್ನು ಹಿಡಿದು ಇಟ್ಟುಕೊಳ್ಳುವ ಸಾಮರ್ಥ್ಯವನ್ನು  ಕಡಿಮೆಗೊಳಿಸುತ್ತದೆ. 

೫. ದೇಹದ ಶಕ್ತಿ ಹೆಚ್ಚಿಸುತ್ತದೆ: ಆಪಲ್ ಸೈಡರ್ ವ್ವಿನೆಗರ್ ನಲ್ಲಿರುವ ಅಮೈನೋ ಆಸಿಡ್ ಗಳು ನಿಮ್ಮ ದೇಹ ವಿಶ್ರಮಿಸುವಂತೆ ಮಾಡಿ, ನಿರಾಯಾಸಗೊಳಿಸುತ್ತದೆ. ಇದರಿಂದ ನಿಮ್ಮ ದೇಹದ ಶಕ್ತಿ ಹೆಚ್ಚುತ್ತದೆ.

[Back To Top]

೩. ಆಪಲ್ ಸೈಡರ್ ವಿನೆಗರ್ ಇಂದ ಚರ್ಮಕ್ಕೆ ಆಗುವ ಪ್ರಯೋಜನಗಳು: (Benefits Of Apple Cider Vinegar For Skin In Kannada)

ಆಪಲ್ ಸೈಡರ್ ವಿನೆಗರ್ ನಿಂದ ಕೇವಲ ದೇಹಕ್ಕಷ್ಟೇ ಅಲ್ಲದೆ ಚರ್ಮಕ್ಕೂ ಹಲವಾರು ಪ್ರಯೋಜನಗಳಿವೆ. 

೧. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ಮೋಡವೆಯನ್ನು ತೊಡೆದುಹಾಕುತ್ತದೆ 

ಆಪಲ್ ಸೈಡರ್ ವಿನೆಗರ್ ನಿಂದ ನಿಮ್ಮ ಮುಖಕ್ಕೆ ಹಲವಾರು ಉಪಯೋಗಗಳಿವೆ. ಇದು ನಿಮಗೆ ಸ್ವಚ್ಛಂದ  ತ್ವಚೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ನಲ್ಲಿ ಅಸಿಟಿಕ್ ಆಸಿಡ್, ಲ್ಯಾಕ್ಟಿಕ್ ಆಸಿಡ್, ಸಿಟ್ರಿಕ್ ಆಸಿಡ್, ಇತ್ಯಾದಿಗಳಿದ್ದು, ಇವುಗಳು ನಿಮ್ಮ ಚರ್ಮದ ಆಮ್ಲತೆಯನ್ನು  ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಚರ್ಮದ ಮೇಲೆ ಮೊಡವೆಯನ್ನು ಹುಟ್ಟುಹಾಕುವ ಸೂಕ್ಶ್ಮಾಣುಜೀವಿಗಳನ್ನು  ತಡೆಗಟ್ಟಬಹುದು. ಹಲವಾರು ಸಂಶೋಧನೆಗಳಲ್ಲಿ ಆಪಲ್ ಸೈಡರ್ ವಿನೆಗರ್ ನ ಈ ಪ್ರಯೋಜನ ಸಾಬೀತಾಗಿದೆ. 

೪ ಚಮಚದಷ್ಟು ನೀರಿನಲ್ಲಿ, ನಾಲ್ಕು ಚಮಚದಷ್ಟು ಆಪಲ್ ಸೈಡರ್ ವಿನೆಗರ್ ಸೇರಿಸಿ, ಒಂದು ಹತ್ತಿ ಉಂಡೆ ಯಿಂದ ಅದನ್ನು ನಿಮ್ಮ ಮುಖಕ್ಕೆ ಲೇಪಿಸಿ. ಹತ್ತು ನಿಮಿಷದ ನಂತರ ಅದನ್ನು ತೊಳೆದುಕೊಳ್ಳಿ. ಈ ರೀತಿ ದಿನಕ್ಕೆ ಎರಡು ಬಾರಿ ಮಾಡುವುದರಿಂದ ನಿಮ್ಮ ಮುಖದ ಮೊಡವೆಗಳು ಕಡಿಮೆಯಾಗುತ್ತದೆ. 

೨. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ಸೂರ್ಯನ ಕಿರಣಗಳಿಂದಾಗುವ ಕಂಡುಬಣ್ಣವನ್ನು ತೊಡೆದುಹಾಕುತ್ತದೆ.

ಸೂರ್ಯನ ಕಿರಣಗಳು ತಾಗುವ ಚರ್ಮಕ್ಕೆ ಮತ್ತು ಮುಖದ ತ್ವಚೆಗೆ ಆಪಲ್ ಸೈಡರ್ ವಿನೆಗರ್  ಹಚ್ಚಿದರೆ, ಸೂರ್ಯನ ಕಿರಣಗಳಿಂದ ಸುತ್ತಿರುವ ನಿಮ್ಮ ಚರ್ಮಕ್ಕೆ ಹಿತವನ್ನು ನೀಡಿ, ಕಂದುಬಣ್ಣಕ್ಕೆ ತಿರುಗಿರುವ ನಿಮ್ಮ ಚರ್ಮವನ್ನು ಸಂರಕ್ಷಿಸುತ್ತದೆ. ಒಂದು ಬಟ್ಟಲಲ್ಲಿ ಅರ್ಧ ಬಟ್ಟಲಿನಷ್ಟು ಆಪಲ್ ಸೈಡರ್ ವಿನೆಗರ್, ಅರ್ಧ ಬಟ್ಟಲಿನಷ್ಟು ಕೊಬ್ಬರಿ ಎಣ್ಣೆ ಮತ್ತು ೨ ಚಮಚದಷ್ಟು ಲ್ಯಾವೆಂಡರ್ ಎಣ್ಣೆ ಕಳಿಸಿ ಕಳಿಸಿ, ನಿಮ್ಮ ಚರ್ಮಕ್ಕೆ ಹಚ್ಚಿರಿ. ಅರ್ಧ ಗಂಟೆಯ ನಂತರ ತಣ್ಣೀರಿನಲ್ಲಿ ತೊಳೆದುಕೊಂಡರೆ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. 

೩. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ದೇಹದ ನಿರ್ವಿಷೀಕರಣ  

ಆಪಲ್ ಸೈಡರ್ ವಿನೆಗರ್ ಎರಡು ರೀತಿಯಲ್ಲಿ ದೇಹವನ್ನು ನಿರ್ವಿಷೀಕರಣಗೊಳಿಸುತ್ತದೆ. ಆಪಲ್ ಸೈಡರ್ ವಿನೆಗರ್ ನಿಮ್ಮ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಬಿಡುಗಡೆಗೊಳಿಸಿ, ರಕ್ತ ಸಂಚಲನವನ್ನು  ಉತ್ತಮಗೊಳಿಸುತ್ತದೆ. ಇದರಿಂದ ನಿಮ್ಮ ತ್ವಚೆ ಪ್ರಖರಯುತವಾಗುತ್ತದೆ. ಆಪಲ್ ಸೈಡರ್ ವಿನೆಗರ್ ನ ಆಂಟಿಆಕ್ಸಿಡೆಂಟ್ ಗುಣವು ಚರ್ಮಕ್ಕೆ ದೇಹದಲ್ಲಿರುವ ವಿಷಗಳಿಂದ ಹಾನಿಯಾಗುವುದನ್ನು ತಡೆಗಟ್ಟುತ್ತದೆ. ಅಡರೊಂದಿಗೆ ನಿಮ್ಮ ದೇಹ ಎಲ್ಲ ರೀತಿಯ  ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಎಲ್ಲರಿಗೂ ತಿಳಿದಿರುವಂತೆ ದೇಹದಲ್ಲಿ ಕಡಿಮೆ ವಿಷಾದ ಅಂಶವಿದ್ದರೆ, ತ್ವಚೆ ಪ್ರಖರವಾಗಿ ಹೊಳೆಯುತ್ತದೆ. 

೪. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ಚರ್ಮದ ಎಕ್ಸ್-ಫೋಲಿಯೇಟರ್:

 ಇತ್ತೀಚಿನ ದಿನಗಳಲ್ಲಿ ಆಪಲ್ ಸೈಡರ್ ವಿನೆಗರ್ ಅತಿಯಾದ  ಬೇಡಿಕೆಯಲ್ಲಿವೆ.ಅದಕ್ಕೆ ಕಾರಣ ಏಕ್ಚ್-ಫೋಲಿಯೇಟರ್ ಆಗಿ ಕಾರ್ಯ ನಿರ್ವಹಿಸುವ ಅದರ ಸಾಮರ್ಥ್ಯ. ಒಂದು ಚಮಚದಷ್ಟು ಆಪಲ್ ಸೈಡರ್ ವಿನೆಗರ್ ಅನ್ನು ಮೂರು ಚಮಚದಷ್ಟು ನೀರಿನಲ್ಲಿ ಸೇರಿಸಿ, ಹತ್ತಿಯ ಉಂಡೆಯಿಂದ ನಿಮ್ಮ ಮುಖಕ್ಕೆ ಹಚ್ಚಿಕೊಂಡು, ೩೦ ನಿಮಿಷಗಳ ನಂತರ ತೊಳೆದುಕೊಳ್ಳಿ. 

೫. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ಚರ್ಮದ ಟೋನರ್ ಟೋನರ್

ದುಬಾರಿಯಾಗಿರುವ ರಾಸಾಯನಿಕ ಟೋನರ್ ಗಳನ್ನು ಬಳಸುವ ಬದಲಿಗೆ, ಆಪಲ್ ಸೈಡರ್ ವಿನೆಗರ್ ಅನ್ನು ಸಮ ಪ್ರಮಾಣದ ನೀರಿನಲ್ಲಿ ಸೇರಿಸಿ ಬಳಸಿದರೆ, ನಿಮ್ಮ ಚರ್ಮದ ಬಣ್ಣ ಸಮನಾಗುತ್ತದೆ. ಈ ರೀತಿ ತಯಾರಿಸಿದ ಟೋನರ್ ಅನ್ನು ಫ್ರಿಡ್ಜ್ ಅಲ್ಲಿ ಇಟ್ಟುಕೊಂಡು ದಿನದಲ್ಲಿ ಹಲವು ಬಾರಿ  ಬಳಸಬಹುದು.

೬.  ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ನೈಸರ್ಗಿಕ ವಾಸನೆ ನಾಶಕ 

ನಿಮಗೆ ಮಾರುಕಟ್ಟೆಯಲ್ಲಿ ದೊರೆಯುವ ವಾಸನೆನಾಶಕಗಳು ಇಷ್ಟವಿಲ್ಲದಿದ್ದರೇ, ಆಪಲ್ ಸೈಡರ್ ವಿನೆಗರ್ ಅನ್ನು ಅದೇ ಕಾರ್ಯಕ್ಕೆ ಬಳಸಬಹುದು. ಸ್ನಾನದ ನಂತರ ಹಸಿಯಾಗಿರುವ ನಿಮ್ಮ ಕಂಕುಳಲ್ಲಿ ಹಚ್ಚಿಕೊಳ್ಳಿ. 

೭. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ಬೆಳ್ಳಗಿನ ಹಲ್ಲುಗಳಿಗಾಗಿ 

ನಿಮಗೆ ಹಳದಿ ಹಲ್ಲುಗಳಿದ್ದರೆ ಅದು ನಿಮ್ಮನ್ನು ಪೇಚಿಗೊಳಪಡಿಸಬಹುದು. ರಾಸಾಯನಿಕ ಕಾರ್ಯವಿಧಾನಗಳನ್ನು ಬಳಸಿ, ನಿಮ್ಮ ಹಲ್ಲನ್ನು ಬಿಳುಪಾಗಿಸಿಕೊಳ್ಳುವ ಬದಲಿಗೆ ಆಪಲ್ ಸೈಡರ್ ವಿನೆಗರ್ ನ ಲಾಭಗಳನ್ನು ಉಪಯೋಗಿಸಿಕೊಳ್ಳಿ. ಇದರಲ್ಲಿರುವ ಸೂಕ್ಷ್ಮಜೀವಿ ಪ್ರತಿರೋಧ ಗುಣವು ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿ ಕೂಡಾ ಇರಿಸುತ್ತದೆ. 

೮. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ಕ್ಯಾಂಡಿಡಾ ಚಿಕಿತ್ಸೆ:

ಕ್ಯಾಂಡಿಡಾ ಒಂದು ಬಗೆಯ ಶಿಲೀಂದ್ರಗಳ ಸೋಂಕು. ಇದನ್ನು ಚಿಕಿತ್ಸಿಸಲು ದೇಹದ pH ಅನ್ನು ನಿಯಂತ್ರಿಸಬೇಕು. ಆಪಲ್ ಸೈಡರ್ ವಿನೆಗರ್ ಆ ಕಾರ್ಯವನ್ನು ನಿರ್ವಹಿಸುತ್ತದೆ. ಇದರಿಂದ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಿ, ಕ್ಯಾಂಡಿಡಾ ರೋಗವನ್ನು ಚಿಕಿತ್ಸಿಸುವಲ್ಲಿ ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಕಿಣ್ವಗಳಲ್ಲಿಯೂ ಹೆಚ್ಚಾಗಿದ್ದು, ಕ್ಯಾಂಡಿಡಾವನ್ನು ನಿಯಂತ್ರಿಸುತ್ತದೆ.

೯. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ಅಕಾಲಿಕ ಮುಪ್ಪಡರುವುದನ್ನು ತಪ್ಪಿಸುತ್ತದೆ.

ಹಿಪ್ಪೊಕ್ರಾಟ್ಸ್, ಫಾದರ್ ಆ ಮೆಡಿಸಿನ್, ಆಪಲ್ ಸೈಡರ್ ವಿನೆಗರ್ ಅನ್ನು ಅಮೃತವೆಂದು ಕರೆದಿದ್ದಾರೆ. ಅದಕ್ಕೆ ಕಾರಣ, ಆಪಲ್ ಸೈಡರ್ ವಿನೆಗರ್ ನಲ್ಲಿರುವ ನಿಮ್ಮ ಯವ್ವನವನ್ನು ಕಾಪಾಡುವ ಗುಣ. ಬೇರೆ ರೀತಿಯಲ್ಲಿ ಹೇಳಬೇಕೆಂದರೆ, ಅಕಾಲಿಕ ಮುಪ್ಪಡರದಂತೆ ಕಾಪಾಡುವುದು. 

೧೦. ನಿಮ್ಮ ತ್ವಚೆಗೆ ಆಪಲ್ ಸೈಡರ್ ವಿನೆಗರ್: ನರೂಲಿಯನ್ನು ನಿವಾರಿಸುತ್ತದೆ

ಕೆಲವು ಬಾರಿ ವೈರಸ್ಗಳಿಂದಾಗಿ ನಿಮ್ಮ ಚರ್ಮದಲ್ಲಿ ಅನಗತ್ಯ ಗುಳ್ಳೆ ಅಥವಾ ಬೆಳೆವಣಿಗೆಯಾಗಬಹುದು. ಅವುಗಳನ್ನು ನರೂಲಿ ಎಂದು ಕರೆಯುತ್ತಾರೆ. ಆಪಲ್ ಸೈಡರ್ ವಿನೆಗರ್ ಅನ್ನು ಈ ನರೂಲಿಗೆ ಹಚ್ಚಿ, ಅದರ ಮೇಲೆ ಬ್ಯಾಂಡ್-ಎಡ್ ಹಚ್ಚಿಕೊಂಡು, ರಾತ್ರಿಯಿಡಿ ಬಿಡಬೇಕು. ಈ ರೀತಿ ಹಲವು ದಿನಗಳು ಮಾಡಿದರೆ, ನೀವು ವ್ಯತ್ಯಾಸವನ್ನು ಕಾಣಬಹುದು. 

[Back To Top]

೪. ಆಪಲ್ ಸೈಡರ್ ವಿನೆಗರ್ ಇಂದ ಕೂದಲಿಗೆ ಆಗುವ ಪ್ರಯೋಜನಗಳು:(Apple Cider Vinegar Benefits For Hair In Kannada)

ಕೂದಲಿಗೆ ಆಪಲ್ ಸೈಡರ್ ವಿನೆಗರ್ ನ ಹಲವಾರು ಪ್ರಯೋಜನಗಳಿವೆ. ಇದನ್ನು ಕೂದಲಿನ ರಕ್ಷಕ ಎಂದೂ ಕರೆಯಬಹುದು. ಕೂದಲಿಗೆ ಇದರಿಂದ ಆಗುವ ಲಾಭಗಳ ಪಟ್ಟಿ ಇಲ್ಲಿದೆ:

೧. ಹೊಟ್ಟಿನ ನಿವಾರಣೆ: ಆಪಲ್ ಸೈಡರ್ ವಿನೆಗರ್ ನ ಅತ್ಯದ್ಭುತ ಉಪಯೋಗಗಳಲ್ಲಿ, ಹೊಟ್ಟು ನಿವಾರಿಸುವುದು ಕೂಡಾ ಒಂದು. ನಿಮ್ಮ ಕೂದಲಿಗೆ ಶ್ಯಾಂಪೂ ಹಚ್ಚುವ ಮುನ್ನ, ಸಮ ಪ್ರಮಾಣದ ನೀರು ಮತ್ತು ಆಪಲ್ ಸೈಡರ್ ವಿನೆಗರ್ ಇಂದ ತಯಾರಿಸಿರುವ ಮಿಶ್ರಣವನ್ನು ಹಚ್ಚಿಕೊಳ್ಳಿ. ವಾರದಲ್ಲಿ ಈ ಮಿಶ್ರಣವನ್ನು ಎರಡು ಬಾರಿ ಹಚ್ಚಿದರೆ, ನಿಮ್ಮ ತಲೆಯ ಹೊಟ್ಟು ಕಡಿಮೆಗೊಳ್ಳುತ್ತದೆ. 

೨. ನಿಸ್ತೇಜತನವನ್ನು ನಿವಾರಿಸುತ್ತದೆ: ನಿಮ್ಮ ಕೂದಲಿಗೆ ಶ್ಯಾಂಪೂ ಹಚ್ಚಿದ ನಂತರ, ಒಂದು ಕಪ್ ನಷ್ಟು ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೀಟರ್ ನೀರಿನಲ್ಲಿ ಸೇರಿಸಿ, ನಿಮ್ಮ ಕೂದಲಿನ ಎಲ್ಲಾ ಭಾಗಕ್ಕೂ ಸುರಿದುಕೊಳ್ಳಿ. ಇದರಿಂದ ನಿಮ್ಮ ಕೂದಲಿನ ನಿಸ್ತೇಜತನ ನಿವಾರಣೆಯಾಗಿ, ಹೊಳಪು ಮರಳುತ್ತದೆ. 

೩. ಕೂದಲನ್ನು ನಯವಾಗಿಸುತ್ತದೆ: ಎರಡು ಕಪ್ ನೀರಿನಲ್ಲಿ, ಒಂದು ಕಪ್ ಆಪಲ್ ಸೈಡರ್ ವಿನೆಗರ್ ಸೇರಿಸಿ, ನಿಮ್ಮ ಕೂದಲಿಗೆ ಲೇಪಿಸಿರಿ. ಇದರಿಂದ ನಿಮ್ಮ ಕೂದಲು ನಯವಾಗುತ್ತದೆ. 

[Back To Top]

೫. ಆಪಲ್ ಸೈಡರ್ ವಿನೆಗರ್ ಬಗ್ಗೆ ಮುನ್ನೆಚ್ಚರಿಕೆ:(Safety Of Apple Cider Vinegar In Kannada)

ಈಗಾಗಲೇ ತಿಳಿಸಿರುವಂತೆ, ಆಪಲ್ ಸೈಡರ್ ವಿನೆಗರ್ ಅಲ್ಲಿ ಹಲವಾರು ಆಮ್ಲಗಳಿವೆ. ಹಲವರಿಗೆ ಇದರಿಂದ ಯಾವುದೇ ರೀತಿಯ ತೊಂದರೆ ಆಗದಿದ್ದರೂ, ನಿಮ್ಮ ಚರ್ಮ ಸೂಕ್ಷ್ಮವಾಗಿದ್ದರೆ, ಆಪಲ್ ಸೈಡರ್ ವಿನೆಗರ್ ಅನ್ನು ನಿಮ್ಮ ಚರ್ಮಕ್ಕೆ ಲೇಪಿಸುವ ಅಥವಾ ಈ ದ್ರವವನ್ನು ಸೇವಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯುವುದು ಉತ್ತಮ. 

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon