Link copied!
Sign in / Sign up
2
Shares

ಚರ್ಮಕ್ಕಾಗಿ ಅಲೋವೆರಾ: ಪ್ರಯೋಜನಗಳು, ಅಡ್ಡಪರಿಣಾಮಗಳು ಮತ್ತು ಬಳಕೆಗಳು (Aloe Vera For Skin: Benefits, Side Effects and Uses In Kannada)

ಅಲೋ ವೆರಾ ಎಂಬುದು "ಅಲೋ" ಕುಲದ ಒಂದು ರಸವತ್ತಾದ ಸಸ್ಯ ಜಾತಿಯಾಗಿದೆ. ಇದು ಲಿಲಿಯೆಸಿ ಕುಟುಂಬಕ್ಕೆ ಸೇರಿದ ಕಳ್ಳಿ ಸಸ್ಯವಾಗಿದೆ. ಅಲೋ ವೆರಾ ಸಸ್ಯದ ಪ್ರಯೋಜನಗಳನ್ನು ಪರೀಕ್ಷಿಸಲು ಹಲವಾರು ಅಧ್ಯಯನಗಳು ನಡೆಸಲ್ಪಟ್ಟಿದ್ದು, ವಿವಿಧ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಮತ್ತು ಅರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಅಲೋ ವೆರಾವು ಹಲವಾರು ಪ್ರಯೋಜನಕಾರಿ ಗುಣಗಳನ್ನು ಹೊಂದಿರುವುದಾಗಿ ಸಾಬೀತಾಗಿದೆ. ಅಲೋ ವೆರಾ ಜೆಲ್ ಮತ್ತು ಅಲೋ ವೆರಾ ರಸವನ್ನು ಚರ್ಮಕ್ಕೆ ಬಹಳ ಪ್ರಯೋಜನಕಾರಿ ಎಂದು ತಿಳಿಯಲ್ಪಟ್ಟಿದೆ. ಇದು ತನ್ನ ಅದ್ಭುತ ಔಷಧೀಯ ಬಳಕೆಗಳಿಗೆ ಹೆಸರುವಾಸಿಯಾಗಿದೆ. ಪ್ರಯೋಜನಗಳನ್ನು ಹೊರತುಪಡಿಸಿ, ಅಲೋ ವೆರಾ ಸಹ ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿದೆ.

ಪರಿವಿಡಿ:

೧. ಚರ್ಮಕ್ಕೆ ಅಲೋವೆರಾದ ೧೦ ಪ್ರಯೋಜನಗಳು  (10 Benefits Of Aloe Vera For Skin in Kannada)

೨. ಚರ್ಮಕ್ಕೆ ಅಲೋವೆರಾವನ್ನು ಹೇಗೆ ಬಳಸಬೇಕು? (೪ ಫೇಸ್ ಪ್ಯಾಕ್) (How to Use Aloe Vera for Skin aloe vera for skin in Kannada)

೩. ಚರ್ಮಕ್ಕೆ ಅಲೋವೆರಾದಿಂದಾಗುವ ೫ ಅಡ್ಡಪರಿಣಾಮಗಳು (5 Side Effects Of Aloe Vera For Skin in Kannada)

೪. ನಿರ್ಣಯ (Conclusion In Kannada)

೧. ಚರ್ಮಕ್ಕೆ ಅಲೋವೆರಾದ ೧೦ ಪ್ರಯೋಜನಗಳು (10 Benefits Of Aloe Vera For Skin in Kannada):

ಅಲೋವೆರಾದ ಪ್ರಯೋಜನಗಳು ಅಸಂಖ್ಯಾತ. ಅಲೋವೆರಾ ಜೆಲ್ ಹಾಗೂ ಅಲೋವೆರಾ ರಸ ಕೂಡಾ ನಿಮ್ಮ ಚರಾಮಕ್ಕೆ ಹಲವಾರು ಬಗೆಗೆಳಲ್ಲಿ ಬಳಸಬಹುದು. ಅಲೋವೆರಾದಿಂದ ನಿಮ್ಮ ಚರ್ಮಕ್ಕೆ ಬಹುಪ್ರಯೋಜನಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಿದ್ದೇವೆ.

೧. ಸನ್-ಬರ್ನ್ ಚಿಕಿತ್ಸಿಸುತ್ತದೆ: ಅಲೋವೆರಾ ತನ್ನ ಗುಣಪಡಿಸುವ ಶಕ್ತಿಯಿಂದ ಸೂರ್ಯನ ಕಿರಣಗಳಿಂದಾಗಿರುವ ಸನ್-ಬರ್ನ್ ಅನ್ನು ಕೂಡಾ ಚಿಕಿತ್ಸಿಸುತ್ತದೆ. ಎಪಿಥೆಲಿಯಲ್ ಎಂಬ ಜೀವಕೋಶಗಳ ಪದರದಲ್ಲಿ ತನ್ನ ಚಿಕಿತ್ಸಿಸುವ ಚಟುವಟಿಕೆಯನ್ನು ನಡೆಸುತ್ತದೆ. ಆಲೋ ವೆರಾ ನಿಮ್ಮ ಚರ್ಮದ ರಕ್ಷಣಾ ತವಚವಾಗಿ ವರ್ತಿಸಿ, ನಿಮ್ಮ ಚರ್ಮವಾನ್ನಿ ಪುನರ್ಜಲೀಕರಿಸುವುದರಲ್ಲಿ ಸಹಾಯ ಮಾಡುತ್ತದೆ. 

೨. ಆರ್ಧ್ರಕ: ಅಲೋವೆರಾ ಜಿಡ್ಡಿನ ಭಾವನೆ ನೀಡದೆ, ಒಂದು ಪರಿಪೂರ್ಣ ಅರ್ಧರಾಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಣ್ಣೆಯುಕ್ತ ಚರ್ಮದವರಿಗೂ ಸೂಕ್ತ. ಅಲೋವೆರಾ ಚರ್ಮದ ಒಣಗುವಿಕೆಯನ್ನೂ ತಡೆಗಟ್ಟುತ್ತದೆ. ಅಲೆಯೋವೇರಾ ಜೆಲ್ ಅನ್ನು ಆಫ್ಟರ್-ಶೇವ್ ಕ್ರೀಮ್ ಆಗಿ ಬಳಸುವುದರಿಂದ ನಿಮ್ಮ ಚರ್ಮದ ಮೇಲೆ ಆಗಿಡುವ ಸಣ್ಣಪುಟ್ಟ ಗಾಯಗಳನ್ನು ನಿವಾರಿಸುತ್ತದೆ. 

೩. ಮೊಡವೆ-ಮುಕ್ತ ತ್ವಚೆಗೆ: ಅಲೋವೆರಾ ಜೆಲ್ ನಲ್ಲಿ ಎರಡು ಬಗೆಯ ಹಾರ್ಮೋನ್ ಗಳಿವೆ - ಆಕ್ಸಿನ್ ಮತ್ತು ಗಿಬ್ಬೆರೆಲ್ಲಿನ್ಸ್. ಈ ಹಾರ್ಮೋನ್ ಗಳು ಗಾಯ್ ಗುಣಪಡಿಸುವ ಗುಣವನ್ನು ಹೊಂದಿದ್ದು, ಉರಿಯೂತದ ವಿರೋಧಿ ಗುಣವನ್ನೂ ಹೊಂದಿದೆ. ಇದರಿಂದಾಗಿ ನಿಮ್ಮ ಚರ್ಮದ ಉರಿತ ಕಡಿಮೆಯಾಗಬಹುದು. ಅಳೋರ್ವರೆಯಾದಲ್ಲಿರುವ ಗಿಬ್ಬೆರೆಲ್ಲಿನ್ಸ್ ಬೆಳವಣಿಗೆಯ ಹಾರ್ಮೋನ್ ಗಳಾಗಿ ವರ್ತಿಸಿ, ಹೊಸ ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗಾಗಿ, ನಿಮ್ಮ ಚರ್ಮದ ಮೇಲೆ ಆಗಿರುವ ಯಾವುದೇ ಗಾಯಗಳನ್ನು, ಚಿಕಿತ್ಸಿಸಿ, ವೇಗವಾಗಿ ಗುಣವಾಗುವಂತೆ ಮಾಡುತ್ತದೆ. ಆಯುರ್ವೇದದಲ್ಲಿ, ಅಲೋವೆರಾವನ್ನು ದೀರ್ಘಕಾಲದ ಚರ್ಮ-ಸಂಬಂಧಿತ ಖಾಯಿಲೆಗಳನ್ನು ನಿವಾರಿಸಲು ಉಪಯೋಗಿಸಲಾಗುತ್ತದೆ. 

೪. ಮುಪ್ಪಿನ ವಿರುದ್ಧ ಹೋರಾಡುತ್ತದೆ: ಆಯುರ್ವೇದದಲ್ಲಿ, ಹಲವಾರು ಚರ್ಮ ಸಂಬಂಧಿತ ದೀರ್ಘಕಾಲದ ಸಮಸ್ಯೆಗಳನ್ನು (ಉದಾಹರೆಣೆಗೆ ಮೊಡವೆ, ಎಕ್ಸಿಮಾ, ಇತ್ಯಾದಿ) ಗುಣಪಡಿಸುವಲ್ಲಿ ಅಲೋವೆರಾವನ್ನು ಬಳಸಲಾಗುತ್ತಿತ್ತು. 

೫. ಪೆರಿಯೋಡೋನ್ಟ್ಲ್ ರೋಗದ ಬೇನೆ ತಗ್ಗಿಸುತ್ತದೆ: ಅಲೋವೆರಾ ಒಸಡಿಗೆ ಸಂಬಂಧಿತ ರೋಗಗಳನ್ನು (ಉದಾಹರೆಣೆಗೆ: ಜಿಂಜಿವೈಟಿಸ್, ಪ್ರಿಯೊದೊಂಟಿಟಿಸ್)  ಚಿಕಿತ್ಸೆ ಮಾಡುವಲ್ಲಿ ಸಹಾಯ ಮಾಡುತ್ತದೆ. ರಕ್ತಸ್ರಾವ, ಉರಿ ಮತ್ತು ಬಾವನ್ನು ಕಡಿಮೆಗೊಳಿಸುತ್ತದೆ. ಇದು ಪ್ರಬಲವಾದ ನಂಜುನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. 

೬. ಚರ್ಮದ ಕಲೆಗಳನ್ನು ಕಡಿಮೆಗೊಳಿಸುತ್ತದೆ: ಅಲೋವೆರಾ ರಸವನ್ನು ಕುಡಿಯುವುದರಿಂದ ಮೊಡವೆಗಳನ್ನು ಕಡಿಮೆಗೊಳಿಸುತ್ತದೆ. ಅದರೊಂದಿಗೆ ಯಾವುದಾದರೂ ಚರ್ಮ ತೊಂದರೆಗಳಿದ್ದರೆ ಅವುಗಳನ್ನು ಚಿಕಿತ್ಸಿಸುವಲ್ಲಿ ಸಹಾಯಮಾಡುತ್ತದೆ. 

೭. ಜೀವಕೋಶಗಳನ್ನು ಚಿಕಿತ್ಸಿಸುತ್ತದೆ: ಚರ್ಮದ ಎಪಿಥೆಲಿಯಲ್ ಮಟ್ಟದ ಜೀವಕೋಶಗಳನ್ನು ಚಿಕಿತ್ಸಿಸಿ, ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮಕ್ಕೆ ಆಗಿರುವ ಕಂಡುಬಣ್ಣವನ್ನು ತಗ್ಗಿಸಿ, ಸ್ಟ್ರೆಚ್ ಮಾರ್ಕ್ಸ್ ಗಳನ್ನೂ ಕಡಿಮೆಗೊಳಿಸುವಲ್ಲಿ ಉಪಯೋಗಕಾರಿ. 

೮. ಗಾಯಗಳನ್ನು ಚಿಕಿತ್ಸಿಸುತ್ತದೆ: ಅಲೋವೆರಾವನ್ನು ಗಾಯಗಳನ್ನು ಚಿಕಿತ್ಸಿಸುವಲ್ಲಿ ಉಪಯೋಗಿಸಲಾಗುತ್ತದೆ. ಅಲೋವೆರಾ ತನ್ನ ಹುಣದಿಂದ ಗಾಯಗಳನ್ನು ವೇಗವಾಗಿ ಗುಣಪಡಿಸಿ, ಅದರಿಂದ ಉಂಟಾಗಿರುವ ಕಲೆಯನ್ನು ಮಾಯವಾಗುವಂತೆ ಮಾಡುತ್ತದೆ. 

೯. ಗಾಯಗಳು ವೇಗವಾಗಿ ಗುಣಪಡುತ್ತವೆ: ನಿಮ್ಮ ಚರ್ಮದ ಮೇಲೆ ಆಗಿರುವ ಸಣ್ಣಪುಟ್ಟ ಗಾಯಗಳು, ಸುಟ್ಟ ಗಾಯ ಅಥವಾ ಬೇರೆ ಯಾವುದೇ ರೀತಿಯ ಗಾಯವಾಗಿದ್ದರೂ, ಅವುಗಳನ್ನು ವೇಗವಾಗಿ ಗುಣಪಡಿಸಲು ಅಲೋವೆರಾ ಸಹಾಯ ಮಾಡುತ್ತದೆ. 

೧೦. ಸೋಂಕುಗಳನ್ನು ತಗ್ಗಿಸುತ್ತದೆ: ಅಲೋವೆರಾದ ಉರಿಯೂತದ ವಿರೋಧಿ ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಗುಣದಿಂದ ನಿಮ್ಮ ಚರ್ಮಕ್ಕೆ ಆಗಿರುವ ಸೋಂಕನ್ನು ತಗ್ಗಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. 

[Back To Top]

೨. ಚರ್ಮಕ್ಕೆ ಅಲೋವೆರಾವನ್ನು ಹೇಗೆ ಬಳಸಬೇಕು? (೪ ಫೇಸ್ ಪ್ಯಾಕ್) (How to Use Aloe Vera for Skin aloe vera for skin in Kannada):

ಎಲ್ಲಾ ರೀತಿಯ ಫೇಸ್ ಪ್ಯಾಕ್ ಗಳಲ್ಲಿ ಅಲೋವೆರಾ ಮುಖ್ಯ ಸಾಮಗ್ರಿಯಾಗಿದೆ. ಇದರಲ್ಲಿ ಗ್ಲಿಸರಿನ್, ಸೋಡಿಯಂ ಪಲ್-ಮೇಟ್, ಇತ್ಯಾದಿ ತರಹದ  ಪೌಷ್ಟಿಕಾಂಶಕಗಳಿವೆ. ಅಲೋವೆರಾ ಇಂದ ತಯಾರಿಸಿದ ಮೊಯಿಸ್ಟರೈಸಿಂಗ್ ಪ್ಯಾಕ್ ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಅಲೋವೆರಾವನ್ನು ನಿಮ್ಮ ಮುಖಕ್ಕೆ ಪ್ರತಿದಿನ ಹಚ್ಚಿಕೊಂಡಲ್ಲಿ. ನಿಮ್ಮ ಮುಖದಲ್ಲಿರುವ ಎಲ್ಲ ರೀತಿಯ ಕಪ್ಪು ಕಲೆಗಳನ್ನು, ಚುಕ್ಕೆಗಳನ್ನು ಮತ್ತು ಗಾಯಗಳನ್ನು ನಿವಾರಿಸುತ್ತದೆ. ಅಲೋವೆರಾ ಟೋನರ್ಸ್ ಮತ್ತು ಹೈಡ್ರಾಲ್ಸ್ ಗಳಲ್ಲಿ ಪ್ರಮುಖ ಸಾಮಗ್ರಿಯಾಗಿ ಉಪಯೋಗಿಸಲಾಗುತ್ತದೆ. ಅದಕ್ಕೆ ಕಾರಣ ಅಲೋವೆರಾದಲ್ಲಿರುವ ಆಂಟಿಓಕ್ಸಿಡಾಂಟ್ಸ್, ಆರ್ಧ್ರಕತೆಯನ್ನು ವರ್ಧಿಸುವ ಮತ್ತು ಉರಿಯೂತವನ್ನು ತಗ್ಗಿಸುವ ಗುಣ. ನಿಮ್ಮ ಚರ್ಮಕ್ಕೆ ಇದು ಅತ್ಯಂತ ಉಪಯೋಗಕಾರಿ. 

ಅಲೋವೆರಾ ಹಲವಾರು ಬಗೆಯಲ್ಲಿ ನಿಮ್ಮ ಚರ್ಮಕ್ಕೆ ಬಳಸಬಹುದು:

೧. ಅಲೋವೆರಾ - 

ಒಂದು ಅಲೋವೆರಾ ಎಲೆಯನ್ನು ತೆಗೆದುಕೊಳ್ಳಿ. ಒಂದು ಚಮಚ ಅಥವಾ ಓನು ಚಾಕು ಬಳಸಿ ಈ ಎಲೆಯಿಂದ ಜೆಲ್ ಅನ್ನು ತೆಗೆದು ನಿಮ್ಮ ಮುಖದ ಮೇಲಿರುವ ಕಪ್ಪು ಚುಕ್ಕೆಗಳು, ಕಲೆಗಳ ಮೇಲೆ ಹಚ್ಚಿಕೊಳ್ಳಿ. ಅಲೋವೆರಾ ಜೆಲ್ವ ಅನ್ನು ಮಾರುಕಟ್ಟೆಯಿಂದ ಕೊಂಡುತಂದಿದ್ದರೆ, ನೇರವಾಗಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ನಂತರ, ಅದನ್ನು ತೊಳೆದುಕೊಳ್ಳಿ. ಅದರ ಪರಿಣಾಮವನ್ನು ಕೆಲವೇ ದಿನಗಳಲ್ಲಿ ಕಾಣಬಹುದು. 

೨. ನಿಂಬೆ ರಸದೊಂದಿಗೆ ಅಲೋವೆರಾ

೨ ಚಮಚ ಅಲೋವೆರಾವನ್ನು ೨ ಹನಿ ನಿಂಬೆ ರಸದೊಂದಿಗೆ ಸೇರಿಸಿ. ಇದರಿಂದ ನಿಮ್ಮ ಚರ್ಮದ pH ನಿಭಾಯಿಸಲು ಸಹಾಯವಾಗುತ್ತದೆ. ಈ ಮಿಶ್ರಣವನ್ನು ಕಳಿಸಿ ನಿಮ್ಮ ಮುಖದಲ್ಲಿರುವ ಚುಕ್ಕೆಗಳಿಗೆ ಲೇಪಿಸಿರಿ. ನಂತರ ಬೆಚ್ಚನೆಯ ನೀರಿನೊಂದಿಗೆ ತೊಳೆದುಕೊಳ್ಳಿ. ವಾರದಲ್ಲಿ ಇದನ್ನು ೩ ಬಾರಿ ಮಾಡಿದರೆ, ಅದರ ಪರಿಣಾಮವನ್ನು ನೀವೂ ಕಾಣಬಹುದು. 

೩. ಜೇನುತುಪ್ಪದೊಂದಿಗೆ ಅಲೋವೆರಾ: 

೨ ಚಮಚ ಅಲೋವೆರಾ ಜೆಲ್ ಮತ್ತು ೧ ಚಮಚ ಜೇನುತುಪ್ಪವನ್ನು ಕಲಿಸಿರಿ. ಇದನ್ನು ನಿಮ್ಮ ಚರ್ಮಕ್ಕೆ ಲೇಪಿಸಿರಿ. ರಾತ್ರಿ ಕಳೆದ ನಂತರ, ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ. 

೪. ಅರಿಶಿನದೊಂದಿಗೆ ಅಲೋವೆರಾ: 

ಒಂದು ಚಮಚ ಅರಿಶಿನ ಮತ್ತು ನೀರಿನಲ್ಲಿ ೩ ಚಮಚ ಅಲೋವೆರಾ ಜೆಲ್ ಅನ್ನು ಸೇರಿಸಿ ಕಲಿಸಿಟ್ಟುಕೊಳ್ಳಿ. ಇದನ್ನು ಸನ್-ಬರ್ನ್ ಆಗಿರುವ ಸ್ಥಳಕ್ಕೆ ಹಚ್ಚಿದರೆ, ಇದು ಗುಣಮುಖವಾಗುತ್ತದೆ. 

[Back To Top]

೩. ಚರ್ಮಕ್ಕೆ ಅಲೋವೆರಾದಿಂದಾಗುವ ೫ ಅಡ್ಡಪರಿಣಾಮಗಳು (5 Side Effects Of Aloe Vera For Skin in Kannada):

ಅಲೋವೆರಾ ಅಭೂತಪೂರ್ವ ಲಾಭಗಳನ್ನು ಹೊಂದಿದ್ದರೂ, ನಿಮ್ಮ ಆರೋಗ್ಯಕ್ಕೆ ಕೆಲವು ಅಡ್ಡಪರಿಣಾಮಗಳನ್ನು ಬೀರಬಹುದು. 

೧. ಅಲೋವೆರಾ ಎಳೆಗಳು ಲೇಟೆಕ್ಸ್ ಅನ್ನು ಹೊಂದಿದ್ದು, ಅದು ಸಸ್ಯದ ಚರ್ಮದ ಕೆಳಗಿನಿಂದ ಬರುತ್ತದೆ. ಈ ಲೇಟೆಕ್ಸ್ ಗೆ ಹಲವಾರು ಅಲರ್ಜಿ ಹೊಂದಿರುವುದರಿಂದ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚು. 

೨. ಹಲವರು ಅಲೋವೆರಗೆ ಚರ್ಮದ ಅಲರ್ಜಿಯನ್ನು ಹೊಂದಿದ್ದು, ಕೆನ್ನು ಕೆಂಪಾಗುವಿಕೆ, ಚರ್ಮದ ದದ್ದು,ಉರಿಯಂತಹ ತೊಂದರೆಗಳಿಂದ ಬಳಲುವ ಸಾಧ್ಯತೆ ಇರುತ್ತದೆ. 

೩. ಅಲೋವೆರಾದಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಯಕೃತ್ತಿನ ನಿರ್ವಿಷೀಕರಣ ಪ್ರಕ್ರಿಯೆಯಲ್ಲಿ ತೊಂದರೆಯನ್ನು ಉಂಟುಮಾಡಿ, ಅರೋಗ್ಯ ಸಮಸ್ಯೆಗೆ ಕಾರಣವಾಗಬಹುದು. 

೪. ಆಲೋ ವೆರಾ ರಸವು ದೇಹದ ಪೊಟ್ಯಾಸಿಯಂ ತಮಟ್ಟವನ್ನು ಕಡಿಮೆಗೊಳಿಸಿ, ನಿಮ್ಮ ಹೃದಯದ ಬಡಿತವನ್ನು ಏರುಪೇರು ಮಾಡಬಹುದು. ಇದರಿಂದ ಸುಸ್ತು, ದೌರ್ಬಲ್ಯ ಮತ್ತು ಆಯಾಸ ಉಂಟುಮಾಡಬಹುದು. 

೫. ಅಲೋವೆರಾದ ಲಕ್ಸಾಟಿವೆ ಪರಿಣಾಮಗಳು ನಿಮ್ಮ ದೇಹವನ್ನು ನಿರ್ಜಲೀಕರಿಸಬಹುದು. ಹಾಗಾಗಿ, ಗರ್ಭಿಣಿಯರು ಅಲೋವೆರಾವನ್ನು ದೂರವಿರಿಸುವುದು ಸೂಕ್ತ. 

ವಿಶೇಷವಾದ ಮುನ್ನೆಚ್ಚರಿಕೆ: ಗರ್ಭಾವಸ್ಥೆಯಲ್ಲಿ ಅಲೋವೆರಾವನ್ನು ಮಔಖಿಕವಾಗಿ ಸೇವಿಸಬಾರದು. ಇದು ಮಗುವಿನ ಜನ್ಮ ದೋಷಕ್ಕೆ ಕಾರಣವಾಗಬಹುದು. 

[Back To Top]

ನಿರ್ಣಯ (Conclusion in Kannada):

ಅಲೋವೆರಾದ ಅರೋಗ್ಯ ಪ್ರಯೋಜನಗಳು ಅಡ್ಡಪರಿಣಾಮಗಳಿಗಿಂತ ಹೆಚ್ಚಿವೆ. ಅಲೋವೆರಾ ಬಹುಮುಖಿ ಉಪಯೋಗಗಳನ್ನು ಹೊಂದಿದೆ. ಅಲೋವೆರಾವನ್ನು ಅಲೋವೆರಾ ಜೆಲ್ ಹಾಗೂ ಅಲೋವೆರಾ ರಸದ ರೂಪದಲ್ಲಿ ಹಲವಾರು ಸಂಗತಿಗಳಲ್ಲಿ ಬಳಸಬಹುದು. ಇದು ಮಾನವಕುಲಕ್ಕೆ ಬಹು ಉಪಯೋಗಕಾರಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon