Link copied!
Sign in / Sign up
9
Shares

ಈ 7 ಮನೆಮದ್ದುಗಳಿಂದ ಜೋತುಬಿದ್ದ ಚರ್ಮವನ್ನು ಪುನಃ ಮೊದಲಿನಂತೆ ಮಾಡಿಕೊಳ್ಳಿ!

ಜೋತುಬಿದ್ದ ಚರ್ಮವೆಂದರೆ ಎಲ್ಲರಿಗೂ ತಲೆ ನೋವೇ. ಇದು ನಿಮ್ಮ ಅಂದವನ್ನು ಕಡಿಮೆ ಮಾಡುವಂತಹ ಸಮಸ್ಯೆ. ಸಾಮಾನ್ಯವಾಗಿ ಇದಕ್ಕೆ ಕಾರಣ ವಯಸ್ಸಾಗಿ ಸ್ನಾಯುಗಳು ದುರ್ಬಲಗೊಳ್ಳುವುದು. ಇನ್ನೊಂದು ಕಾರಣ ಎಂದರೆ ಅದು ತೂಕ ಕಳೆದುಕೊಳ್ಳುವುದು ಆಗಿರಬಹುದು. ಒಂದು ವೇಳೆ ನೀವು ತುಂಬಾ ದಪ್ಪಗಿದ್ದು, ತೂಕವನ್ನು ಕಡಿಮೆ ಮಾಡಿಕೊಂಡಿರಿ ಎಂದರೆ ನಿಮಗೆ ಇನ್ನೊಂದು ಸಂಕಟ ಕಾಡುತ್ತದೆ - ಅದುವೇ ಜೋತುಬಿದ್ದ ಚರ್ಮ. ಹೀಗೆ ತೂಕ ಕಳೆದುಕೊಂಡು ಜೋತುಬಿದ್ದ ಚರ್ಮವನ್ನು ಪಡೆದುಕೊಂಡಿರುವವರಿಗೆ, ಇವುಗಳನ್ನೂ ಕಳೆದುಕೊಳ್ಳಲು ಸಹಾಯ ಮಾಡುವಂತಹ ಮನೆಮದ್ದುಗಳನ್ನು ನಾವು ತಿಳಿಸುತ್ತೇವೆ ಓದಿ.

 

೧. ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯನ್ನು ಒಡೆದು, ಅದರ ಬಿಳಿ ಭಾಗವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ನೊರೆ ಬರುವವರೆಗೂ ಸ್ಪೂನ್ ಅಲ್ಲಿ ಚೆನ್ನಾಗಿ ಕಲಿಸಿಕೊಳ್ಳಿ . ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ.

ಇನ್ನೊಂದು ಆಯ್ಕೆ ಎಂದರೆ ಮೊಟ್ಟೆಯ ಬಿಳಿ ಭಾಗದೊಂದಿಗೆ ಗಟ್ಟಿ ಮೊಸರನ್ನು ಬೆರೆಸಿ ಚೆನ್ನಾಗಿ ಕಲಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು, 20-30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಲ್ಲಿ ತೊಳೆದುಕೊಳ್ಳಿ

ಈ ವಿಧಾನಗಳನ್ನ ನೀವು ವಾರಕ್ಕೆ ಎರಡು ಬಾರಿ ಮಾಡಬೇಕು.



೨. ನಿಂಬೆ ಹಣ್ಣು

ನಿಂಬೆ ರಸವನ್ನು ನಿಮ್ಮ ಮುಖ ಮತ್ತು ಕತ್ತಿಗೆ ಲೇಪಿಸಿಕೊಂಡು 10 ನಿಮಿಷಗಳ ನಂತರ ನೀರಿನಲ್ಲಿ ತೊಳೆದುಕೊಳ್ಳಿ. ನೀವು ಇದನ್ನು ದಿನಕ್ಕೆ 2-3 ಬಾರಿ ಮಾಡಿ ಮತ್ತು ಇದನ್ನು ಮಾಡಿದ ನಂತರ ಒಳ್ಳೆಯ ಮೊಯಿಶ್ಚರೈಸರ್ ಅನ್ನು ಬಳಸಿ.

ಅಥವಾ ಪರ್ಯಾಯವಾಗಿ ನೀವು ಒಂದು ಲೋಟ ತಣ್ಣೀರಿನಲ್ಲಿ ಸ್ವಲ್ಪ ನಿಂಬೆಹಣ್ಣನ್ನು ಬೆರೆಸಿ, ಅದರಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ನಂತರ ಅದನ್ನು ಟವೆಲ್ ಇಂದ ಒರೆಸಿಕೊಳ್ಳುವ ಬದಲು, ಹಾಗೆಯೇ ಒಣಗಲು ಬಿಡಿ. ಇದನ್ನು ಕೂಡ ನೀವು ದಿನಕ್ಕೆ 1-2 ಬಾರಿ ಮಾಡಬೇಕು.

 

೩. ಲೋಳೆಸರ (ಆಲೋ ವೆರಾ)

ಆಲೋ ವೆರಾದ ಜೆಲ್ ಅನ್ನು ಹೊರತೆಗೆದು, ಅದನ್ನು ನಿಮ್ಮ ಮುಖ, ಕತ್ತು ಮತ್ತು ಇತರೆ ಹಾನಿಯಾದ ಭಾಗಗಳಿಗೆ ಹಚ್ಚಿಕೊಳ್ಳಿ. ಅದನ್ನು ಹಾಗೆಯೇ 15-20 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದನ್ನು ನೀವು ವಾರದಲ್ಲಿ ಹಲವು ಬಾರಿ ಮಾಡಬಹುದು.

ಇನ್ನೊಂದು ವಿಧಾನ ಎಂದರೆ ಜೇನುತುಪ್ಪ, ಮಯೋನೈಸ್ ಮತ್ತು ಆಲೋ ವೆರಾದ ಜೆಲ್ ಅನ್ನು ಚೆನ್ನಾಗಿ ಬೆರೆಸಿ, ಆ ಮಿಶ್ರಣವನ್ನು ಕತ್ತು, ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಿಂದ ತೊಳೆದುಕೊಳ್ಳಿ. ಇದನ್ನು ನೀವು ವಾರಕ್ಕೆ ಒಂದು ಬಾರಿ ಮಾಡಬಹುದು.

 

೪. ಸೌತೆಕಾಯಿ

ಸೌತೆಕಾಯಿಯನ್ನು ಚೆನ್ನಾಗಿ ತುರಿದುಕೊಂಡು, ಅದನ್ನು ಹಿಂಡಿ, ಅದರ ರಸವನ್ನು ತೆಗೆದುಕೊಳ್ಳಿ. ಈ ರಸವನ್ನು ನಿಮ್ಮ ಮುಖ ಮತ್ತು ಕತ್ತಿಗೆ ಹಚ್ಚಿಕೊಂಡು ಅದು ಒಣಗುವವರೆಗೆ ಹಾಗೆಯೇ ಬಿಡಿ. ಒಣಗಿದ ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಇದನ್ನು ನೀವು ದಿನಕ್ಕೆ ಒಂದು ಬಾರಿ ಮಾಡಬಹುದು.

 

೫. ಎಣ್ಣೆಯೊಂದಿಗೆ ಮಸಾಜ್ ಮಾಡಿ

ಜೋತುಬಿದ್ದ ಚರ್ಮವನ್ನು ಸರಿಯಾಗಿಸಲು ಒಳ್ಳೆಯ ವಿಧಾನ ಎಂದರೆ ಎಣ್ಣೆಯೊಂದಿಗೆ ಮಸಾಜ್ ಮಾಡುವುದು. ಆಲಿವ್ ಆಯಿಲ್ ಅಲ್ಲಿರುವ ವಿಟಮಿನ್ A ಮತ್ತು ವಿಟಮಿನ್ E ಚರ್ಮಕ್ಕೆ ತೇವಾಂಶ ನೀಡುತ್ತವೆ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತವೆ.

ಆಲಿವ್ ಆಯಿಲ್ ಅನ್ನು ಸ್ವಲ್ಪವೇ ಬಿಸಿ ಮಾಡಿಕೊಳ್ಳಿ

ಈ ಆಯಿಲ್ ಅನ್ನು ನಿಮ್ಮ ಕತ್ತು ಅಥವಾ ಮುಖಕ್ಕೆ ಹಚ್ಚಿಕೊಳ್ಳಿ

ಆ ಭಾಗವನ್ನು 10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ

ಪ್ರತಿದಿನ ಮಲಗುವ ಮುನ್ನ ನೀವು ಇದನ್ನು ಮಾಡಿ ಮಲಗಬಹುದು

 

೬. ಜೇನುತುಪ್ಪ

ಆಲಿವ್ ಆಯಿಲ್, ನಿಂಬೆ ರಸ, ಕೆಲವು ಸ್ಪೂನ್ ಅಷ್ಟು ಜೇನುತುಪ್ಪ - ಈ ಮೂರನ್ನೂ ಬೆರೆಸಿಕೊಂಡು ಅದನ್ನು ಕುತ್ತಿಗೆಗೆ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಅದರ ಮೇಲೆ ಬೆರಳುಗಳಿಂದ ಮೆಲ್ಲನೆ ತಟ್ಟಿಕೊಳ್ಳುತ್ತ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದನ್ನು ನೀವು ದಿನಕ್ಕೆ 1-2 ಬಾರಿ ಮಾಡಬಹುದು.

 

೭. ದಾಲ್ಚಿನ್ನಿ

ಅರಿಶಿನ ಪುಡಿ, ದಾಲ್ಚಿನ್ನಿ , ಆಲಿವ್ ಆಯಿಲ್, ಸಕ್ಕರೆ ಅಥವಾ ಉಪ್ಪನ್ನು ಚೆನ್ನಾಗಿ ಕಲಿಸಿಕೊಳ್ಳಿ

ಈ ಮಿಶ್ರಣವನ್ನು ಕುತ್ತಿಗೆ ಅಥವಾ ಮುಖಕ್ಕೆ ಕೆಲವು ನಿಮಿಷಗಳ ಕಾಲ ಹಚ್ಚಿಕೊಂಡು ಹಾಗೆಯೇ ಬಿಡಿ

ನಂತರ ನೀವು ನಿಮ್ಮ ಮುಖವನ್ನು ಮತ್ತು ಕುತ್ತಿಗೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ

ಇದನ್ನು ನೀವು ವಾರಕ್ಕೆ 1-2 ಬಾರಿ ಮಾಡಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon