Link copied!
Sign in / Sign up
8
Shares

ಸೆಕ್ಸ್ ಬಗ್ಗೆ ದಂಪತಿಗಳು ಚರ್ಚಿಸಬೇಕಾದ 5 ವಿಷಯಗಳು

ನಿಮ್ಮ ಸಂಗಾತಿಯೊಂದಿಗೆ ರಸಮಯ ಕ್ಷಣಗಳನ್ನ ಕಳೆಯಲು ನಿಮಗೆ ಇಷ್ಟ ಎನ್ನುವುದನ್ನು ಹೇಳುವುದೇನು ಬೇಡ ; ಆದರೂ, ಹೆಚ್ಚು ಕಡಿಮೆ ಲೈಂಗಿಕ ಕ್ರಿಯೆಯ ಪ್ರತಿಯೊಂದು ಅಂಶಕ್ಕೂ ಮಾತುಕತೆ ಅತ್ಯಗತ್ಯ ಆಗಿದೆ. ಇದಕ್ಕೆ ಕಾರಣ - ಸಂಕೋಚದ ವಿಷಯಗಳನ್ನು ಪರಿಣಾಮಕಾರಿಯಾಗಿ ಚರ್ಚಿಸುವ ದಂಪತಿಗಳು ಸಂತೋಷದಿಂದ ಕೂಡಿದ ಸಂಬಂಧವನ್ನು ಕಾಪಾಡಿಕೊಳ್ಳುವ ಸಾಧ್ಯತೆಗಳು ಇತರರಿಗಿಂತ 10 ಪಟ್ಟು ಹೆಚ್ಚಿರುತ್ತದೆ.

ತಜ್ಞರ ಪ್ರಕಾರ ಕೇವಲ ಕೆಲವೇ ಕೆಲವು ವಿಷಯಗಳನ್ನ ಚರ್ಚಿಸುವುದರ ಮೂಲಕ ನಾವು ಸಂಬಂಧವನ್ನು ಬಹಳಷ್ಟು ಗಟ್ಟಿ ಮಾಡಿಕೊಳ್ಳಬಹುದು. ಲೆಂಗಿಕ ಅನ್ಯೋನ್ಯತೆಯ ಬಗ್ಗೆ ಮಾತನಾಡುವುದೇ ಅವುಗಳಲ್ಲಿ ಎಲ್ಲದಕ್ಕಿಂತ ಮುಖ್ಯವಾದದ್ದು. ಇಲ್ಲಿವೆ ನೋಡಿ ನೀವು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಲೇಬೇಕಾದ ಸೆಕ್ಸ್ ಬಗೆಗಿನ ಕೆಲವು ವಿಷಯಗಳು :


೧. ಚೌಕಟ್ಟುಗಳು

“ಅಯ್ಯೋ! ನಾನು ಏನ್ ಮಾಡ್ತಿದೀನಿ?!” ಎಂದು ಅಂದುಕೊಳ್ಳುವ ಸಂದರ್ಭಕ್ಕೆ ನೀವು ಸಿಲುಕಬಾರದು ಎಂದರೆ, ಚೌಕಟ್ಟುಗಳನ್ನು, ಮಿತಿಗಳನ್ನು ಚರ್ಚಿಸಿ. ಮುಂಚೆಯೇ ಮಾತಾಡಿಕೊಳ್ಳದೆ ಏನೋ ಒಂದು ಹೊಸತನ್ನು ಪ್ರಯತ್ನಿಸುವುದು ತುಂಬಾ ಸೆಕ್ಸಿ ಎಣಿಸಬಹುದು ಮತ್ತು ತುಂಬಾ ಮಜಾ ನೀಡಬಹುದು, ಆದರೆ ಅದು ದೊಡ್ಡ ವಿಫಲತೆಯನ್ನು ಕೂಡ ಕಾಣಬಹುದು. ಹೀಗಾಗಿ ಮೊದಲೇ ನೀವು ಏನೆಲ್ಲಾ ಮಾಡಬಹುದು, ನಿಮ್ಮ ಮಿತಿಗಳು ಎಷ್ಟು ಎಂಬುದರ ಬಗ್ಗೆ ಮಾತನಾಡಿ. “ಬೇಡ” ಎನ್ನುವ ಪದಕ್ಕೆ ಪರ್ಯಾಯವಾಗಿ ಇನ್ಯಾವುದಾದರೂ ಕೋಡ್ ವರ್ಡ್ ಅನ್ನು ಇಬ್ಬರೂ ಉಪಯೋಗಿಸಿ. ಆಗ, ಒಬ್ಬರು ತಿರಸ್ಕರಿಸಿದಾಗಲೂ ಇನ್ನೊಬ್ಬರು ಬೇಸರವಾಗುವುದಿಲ್ಲ. ನಿಮ್ಮ ಮಿತಿಗಳನ್ನ ಚರ್ಚಿಸಲು ಆರಂಭಿಸುವ ಮುನ್ನ, ನೀವು ಅನುಭವಿಸಬೇಕೆಂದಿರುವ ವಿಷಯವನ್ನು ಮೊದಲು ಹೇಳಿ, ಅದರ ನಂತರ ನಿಮ್ಮ ಮಿತಿಗಳನ್ನ ಹೇಳಿ. ಆಗ, ನಿಮ್ಮ ಸಂಗಾತಿಯೂ ಸಕಾರಾತ್ಮಕವಾಗಿ ತೆಗೆದುಕೊಳ್ಳುವರು.


೨. ಸಹಜ ಯಾವುದೆಂದು ತಿಳಿಯಿರಿ

ಒಂದು ವೇಳೆ ನಿಮ್ಮಲ್ಲಿ ಅಥವಾ ನಿಮ್ಮ ಸಂಗಾತಿಯಲ್ಲಿ ಸೆಕ್ಸ್ ಎನ್ನುವುದು ಹೀಗೆಯೇ ಇರಬೇಕು ಎಂಬ ಪೂರ್ವಗ್ರಹಪೀಡಿತ ಯೋಚನೆಗಳು ಇದ್ದು, ಸೆಕ್ಸ್ ಬಗ್ಗೆ ಬಹಳ ಕಡಿಮೆ ಅರಿವು ಇದ್ದರೆ, ನೀವು ಸಂಪೂರ್ಣವಾಗಿ ಸೆಕ್ಸ್ ಅನ್ನು ಅನುಭವಿಸಲು ಆಗುವುದಿಲ್ಲ. ನಿಮ್ಮ ಯೋಚನೆಗೆ ಮೀರಿದ ಯಾವುದಾದರೂ ಹೊಸ ಮಾದಕ ಆಯ್ಕೆ ನಿಮ್ಮ ಮುಂದೆ ಇದ್ದರು, ಅದನ್ನ ನೀವು ಅಸಹ್ಯ್ಯ ಎಂದು ತಿರಸ್ಕರಿಸುತ್ತೀರಿ. ಹೀಗಾಗಿ ಸೆಕ್ಸ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪತ್ರಿಕೆ ಲೇಖನಗಳು, ಇಂಟರ್ನೆಟ್ ಅಲ್ಲಿನ ಲೇಖನಗಳು, ಮ್ಯಾಗಜಿನ್ ಓದಿ ತಿಳಿಯಿರಿ. ಒಂದಂತೂ ಅರ್ಥ ಮಾಡಿಕೊಳ್ಳಿ,, ಸೆಕ್ಸ್ ಅಲ್ಲಿ ಯಾವುದಾದರು ಹೊಸ ವಿಷಯ ಇದ್ದರೆ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಇಷ್ಟಪಡುವಂತದ್ದು ಇದ್ದರೆ, ಅದು ಅಸಹ್ಯ್ಯಕರ ವಿಷಯ ಅಲ್ಲವೇ ಅಲ್ಲ.


೩. ಸಾಮರ್ಥ್ಯದ ತೊಂದರೆಗಳು


ಗಂಡಸರಲ್ಲಿ ಶಿಶ್ನ ನಿಮಿರುವಿಕೆ ಆಗದೆ ಇರುವುದು ಅಥವಾ ಬಹುಬೇಗನೆ ವಿಸರ್ಜಿಸುವುದು ತುಂಬಾ ಸೂಕ್ಷ್ಮವಾದ ವಿಷಯಗಳು. ಬಹಳಷ್ಟು ಗಂಡಸರು ಇದರ ಬಗ್ಗೆ ಮಂಚದ ಮೇಲೆ ಮಾತಾಡಲು ಹಿಂದೇಟು ಹಾಕುವರು. ನಿಮ್ಮ ಪತಿಯೇನಾದರೂ ವೇಗವಾಗಿ ವಿಸರ್ಜಿಸುವ ತೊಂದರೆ ಹೊಂದಿದ್ದನ್ನು ನೀವು ಗುರುತಿಸಿದ್ದಲ್ಲಿ, ನೀವೇ ಬಾಯಿ ಬಿಟ್ಟು ನಿಮಗೆ ಸುಖ ನೀಡಲು ಮುಂದವರೆಸಲು ಅವರಿಗೆ ಹೇಳಿ. ಅದು ಅವರ ಮೇಲಿನ ಒತ್ತಡವನ್ನು ಇಳಿಸುತ್ತದೆ. ಇದರೊಂದಿಗೆ ನೀವು ನಿಮಗೆ ಅವರು ಮೆಲ್ಲನೆ ಮಾಡುವುದೇ ಇಷ್ಟ ಎಂದು ಹೇಳಬಹುದು ಅಥವಾ ನೀವೇ ಆ ಜಾಗದಲ್ಲಿ ಅಷ್ಟು ಒದ್ದೆ ಆಗಿಲ್ಲದಿರುವುದು ಕಾರಣ ಇರಬಹುದು ಬಿಡಿ ಎನ್ನಬಹುದು. ಒಂದು ವೇಳೆ ನಿಮ್ಮ ಪತಿಯಲ್ಲಿ ನಿಮಿರುವಿಕೆಯ ತೊಂದರೆ ಇದ್ದರೆ, ಅದರ ಬಗ್ಗೆ ರೂಮಿನ ಆಚೆ ಚರ್ಚಿಸಿ. ಮಂಚದ ಮೇಲೆ ಆ ವಿಷಯವನ್ನು ಮಾತಾಡಬೇಡಿ. ಅದರ ಬಗ್ಗೆ ಕೇವಲ ಒಂದು ಸುಳಿವು ಮಾತ್ರ ನೀಡಿ. ಹೆಚ್ಚೇನು ಹೇಳಬೇಡಿ.


೪. ಟೈಮಿಂಗ್

ಒಂದು ವೇಳೆ ಒಬ್ಬರು ಲೈಂಗಿಕ ಪ್ರಚೋದನೆ ಹೊಂದಿದ್ದು, ಇನ್ನೊಬ್ಬರಿಗೆ ಆ ಸಮಯದಲ್ಲಿ ಮೂಡ್ ಇರಲಿಲ್ಲವೆಂದರೆ, ಸೆಕ್ಸ್ ಅಲ್ಲಿ ತೊಡಗಿಸಿಕೊಂಡರೂ ದೈಹಿಕ ತೃಪ್ತಿ ಹೊಂದುವುದು ಆಗಲಿ ಅಥವಾ ಭಾವನಾತ್ಮಕ ಬಾಂಧವ್ಯ ಹೊಂದುವುದಾಗಲಿ ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಸಂಗಾತಿಯ ಮನಸ್ಸಿಗೆ ಬೇಸರ ಮೂಡಿಸದಂತೆ ನೀವು ಇಲ್ಲ ಎನ್ನಬೇಕು. ಒಂದೇ ಸಲ ಅವರನ್ನು ದೂರ ತಳ್ಳುವ ಬದಲು, ಅವರ ಮೇಲೆ ಒರಗಿಕೊಂಡು, ಮಂದಹಾಸ ಬೀರುತ್ತಲೇ, “ಈಗ ಬೇಡ, ಇನ್ನೊಂದು ಸಲ ಯಾವಾಗಾದರೂ ಮಾಡೋಣ” ಎಂದು ಹೇಳಿ. ಇದು, ನಿಮಗೆ ಅವರೊಂದಿಗೆ ರಸಮಯ ಕ್ಷಣಗಳನ್ನ ಕಳೆಯಲು ಇಷ್ಟವಿದೆ, ಆದರೆ ಈ ಸಮಯದಲ್ಲಿ ಮಾತ್ರ ಬೇಡ ಎಂಬುದನ್ನು ಅವರಿಗೆ ತಿಳಿಸುತ್ತದೆ.


೫. ಯೋಜನೆ

ಇದು ಅಷ್ಟೊಂದು ರೋಮ್ಯಾಂಟಿಕ್ ಅನಿಸದೇ ಇರಬಹುದು, ಆದರೆ ದಂಪತಿ ತಮ್ಮ ದೈನಂದಿನದ ಕಾರ್ಯನಿರತ ವೇಳಾಪಟ್ಟಿಯಲ್ಲಿ, ಸೆಕ್ಸ್ ಅನ್ನು ಸಹ ಅಳವಡಿಸಿಕೊಳ್ಳಬೇಕು. ನಮ ಕೆಲಸ ಕಾರ್ಯಗಳಲ್ಲಿ ನಾವು ಅವಿಶ್ರಾಂತವಾಗಿ ತೊಡಗಿಸಿಕೊಳ್ಳುವ ಕಾರಣ, ದೈಹಿಕವಾಗಿಯೂ ಅಥವಾ ಮಾನಸಿಕವಾಗಿಯೂ ನಮ್ಮ ಸಂಗಾತಿಗೆ ಸಮಯ ನೀಡಲು ಕಷ್ಟವಾಗುತ್ತದೆ. ಇದು ಸಂಬಂಧವನ್ನು ಹಾಳು ಮಾಡಬಾರದು. ನೀವು ವಾರದಲ್ಲಿ ಎಷ್ಟು ಬಾರಿ ಸೇರಬೇಕೆಂದು ಅಥವಾ ಎಷ್ಟು ದಿನಕ್ಕೊಮ್ಮೆ ಸೇರಬೇಕೆಂದು ಕೂತು ಮಾತನಾಡಿದರೆ, ಇಬ್ಬರೂ ಅದನ್ನು ಪಾಲಿಸಲು ಪ್ರಯತ್ನಿಸುತ್ತಾರೆ. ಆಗ, ಒಬ್ಬರ ಸಮಯಕ್ಕೆ ಇನ್ನೊಬ್ಬರು ಪೈಪೋಟಿ ಮಾಡುವುದು ಬೇಡವಾಗುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon