Link copied!
Sign in / Sign up
4
Shares

ಇಂದಿನ ಖಗ್ರಾಸ ಚಂದ್ರಗ್ರಹಣ ಯಾವ ರಾಶಿಗಳಿಗೆ ಒಳ್ಳೆಯದು,ಮತ್ತು ಪರಿಹಾರ


150 ವರ್ಷಗಳ ನಂತರದ ಖಗ್ರಾಸ ಚಂದ್ರಗ್ರಹಣದ ಕಾರಣ ಪುಷ್ಯ,ಆಶ್ಲೇಷ, ಮಘ, ಜ್ಯೇಷ್ಠ, ರೇವತೀ, ಚಿತ್ತಾ, ವಿಶಾಖ ನಕ್ಷ ತ್ರದವರಿಗೆ ಹಾಗೂ ಕರ್ಕಾಟಕ, ಸಿಂಹ, ಧನು ರಾಶಿಯವರಿಗೆ ಅನಿಷ್ಟಕಾರಕವಾಗುತ್ತದೆ. ಆಶ್ಲೇಷ ಹಾಗೂ ಕರ್ಕಾಟಕ ರಾಶಿಯವರಿಗೆ ಗ್ರಹಣ ತೀವ್ರ ದೋಷಕಾರಿಯಾಗಿದೆ. ಹಗಲು ಭೋಜನ ನಿಷಿದ್ಧ ವಾಗಿದೆ. ಆದರೆ ಮಕ್ಕಳು, ಮುದುಕರು, ಅಶಕ್ತರು, ರೋಗಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲವಾಗಿದೆ.

ಚಂದಿರ ಹೊಳೆಯುತ್ತಾನೆ

ಮೇಲೆ ತಿಳಿಸಿದ ರಾಶಿ ಹಾಗೂ ನಕ್ಷತ್ರದ ಹೊರತಾಗಿ ಗ್ರಹಣದ ಅಡ್ಡ ಪರಿಣಾಮಗಳು ಅಷ್ಟಾಗಿ ಇರುವುದಿಲ್ಲ. ಆದರೂ ಗ್ರಹಣದ ನಂತರ ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸಿಕೊಳ್ಳುವುದು ಒಳ್ಳೆಯದು. ಗ್ರಹಣ ದೋಷ ಇರುವವರು ಪರಿಹಾರಕ್ಕಾಗಿ ಮಾಶ (ಉದ್ದು ) ಮತ್ತು ತಂಡುಲ (ಅಕ್ಕಿ) ಯನ್ನು ದಾನ ಮಾಡುವುದು ಶ್ರೇಷ್ಠ. ಮುಖ್ಯವಾಗಿ ಗ್ರಹಣ ಕಾಲದಲ್ಲಿ ಜಪ ಮಾಡುವುದು, ಗೋಸೇವೆ, ಗೋ ಪ್ರದಕ್ಷಿಣೆ ಮಾಡುವುದರಿಂದ ದೋಷ ಪರಿಹಾರವಾಗುತ್ತದೆ.

ಸುಮಾರು  ದೇವಾಲಯಗಳಿಗೆ ಇಂದು ಬಾಗಿಲು ಹಾಕಲಾಗುತ್ತದೆ  ಏಕೆಂದರೆ ಇಂದು ದೇವಾಲಯಗಳಲ್ಲಿ ಮಡಿ ಇಂದ ಪೂಜೆ ಮತ್ತು ಅಭಿಷೇಕ ಮಾಡಲಾಗುತ್ತದೆ.

ಗ್ರಹಣ ಕಾಲದಲ್ಲಿ ದರ್ಭಾ ಬಂಧನ ಮಾಡಬೇಕು. ದರ್ಭಾ ಬಂಧನ ಎಂದರೆ ಗ್ರಹಣ ಕಾಲದಲ್ಲಿ ದರ್ಭೆ ಮತ್ತು ತುಳಸಿಯನ್ನು ಆಹಾರ ಪದಾರ್ಥಗಳ (ಹಾಲು, ಮೊಸರು, ತುಪ್ಪ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಇತ್ಯಾದಿ) ಮೇಲೆ ಇಡಬೇಕು. ಹೀಗೆ ಮಾಡುವುದುದರಿಂದ ಗ್ರಹಣ ಆಹಾರಪದಾರ್ಥಗಳಿಗೆ ಆಗುವುದಿಲ್ಲವೆಂದು ಹೇಳಲಾಗುತ್ತದೆ.

ಗ್ರಹಣದ ಸಮಯ

ಸ್ಪರ್ಶಕಾಲ: ಸಂಜೆ 5.22

ಸಮ್ಮಿಲನ ಕಾಲ: ಸಂಜೆ 6.24

ಮಧ್ಯಕಾಲ: ರಾತ್ರಿ 7.04

ಉನ್ಮೀಲನ ಕಾಲ: ರಾತ್ರೆ 7.42

ಮೋಕ್ಷ ಕಾಲ: ರಾತ್ರಿ 8.45

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon