Link copied!
Sign in / Sign up
2
Shares

ಚಂದ್ರಗ್ರಹಣದ ವೇಳೆ ಗರ್ಭಿಣಿಯರಿಗೆ ಏನಾಗುತ್ತದೆ ಗೊತ್ತ? : ನಂಬಿಕೆಗಳು

ಭಾರತದ ದೇಶದಲ್ಲಿ ನಂಬಿಕೆಗಳು ಹಾಗು ಮೂಡನಂಬಿಕೆಗಳಿಗೆ ಕೊರತೆ ಇಲ್ಲ. ತಲತಲಾಂತರದಿಂದ ಬಂದ ಪದ್ದತಿಗಳಿಗೆ, ನಂಬಿಕೆಗಳಿಗೆ ನಾವು ಪ್ರಶ್ನೆ ಮಾಡದಂತೆ ಕಿವಿಗೊಡುತ್ತೇವೆ. ಚಂದ್ರಗ್ರಹಣದ ಬಗ್ಗೆಯೂ ಅನೇಕಾನೇಕ ನಂಬಿಕೆಗಳು ಇವೆ. ಇವುಗಳು ಕೇಳಲು ನಿಮ್ಮಲ್ಲಿ ಕೆಲವರಿಗೆ ಹಾಸ್ಯಾಸ್ಪದ ಅನಿಸಬಹುದು ಆದರೆ ಬಹಳಷ್ಟು ಭಾರತೀಯ ಮನೆಗಳಲ್ಲಿ ಇವುಗಳನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇದನ್ನ ಓದುವ ಮೊದಲು ನೀವು ತಿಳಿದುಕೊಳ್ಳಬೇಕಾದ ವಿಷಯ ಅಂದರೆ ಇಲ್ಲಿ ನಾವು ಹೇಳಿರುವ ಯಾವ ನಂಬಿಕೆಯೂ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಅಂತಹ ಕೆಲವು ನಂಬಿಕೆಗಳನ್ನ ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿ :

೧. “ಆಚೆ ಕಾಲಿಡಬೇಡ!”

ಹೌದು, ಗರ್ಭಧಾರಣೆ ವೇಳೆ ಗರ್ಭಿಣಿಯರು ಮನೆ ಆಚೆ ಬಂದರೆ, ಅವರಿಗೆ ಹುಟ್ಟುವ ಮಗು ವಿಕಾರವಾಗಿ ಹುಟ್ಟುತ್ತವೆ ಅಂತೆ!

೨. ಊಟ ಬಿಸಾಡುವುದು

ನಿಜ! ಕೆಲವು ಜನರ ನಂಬಿಕೆಯ ಪ್ರಕಾರ ಗ್ರಹಣದ ಮುಂಚೆ ಮಾಡಿದ ಅಡುಗೆಯು ಸೇವಿಸಲು ಸರಿಯಾದುದಲ್ಲ ಹಾಗು ಸೇವಿಸಿದ್ದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಗ್ರಹಣದ ಮುಂಚೆ ಮಾಡಿದ ಅಷ್ಟೂ ಆಹಾರವನ್ನ ಬಿಸಾಡುವರು.

೩. “ತರಕಾರಿ ಕತ್ತರಿಸ ಬೇಡ! “

ಗ್ರಹಣದ ವೇಳೆ ಗರ್ಭಿಣಿಯು, ತರಕಾರಿ ಕತ್ತರಿಸುವ ಹಾಗಿಲ್ಲ. ಇನ್ನು ಸರಿಯಾಗಿ ಹೇಳಬೇಕಂದರೆ ಚಾಕು, ಕತ್ತರಿ ಅಥವಾ ಇನ್ನ್ಯಾವುದೇ ಚೂಪಾದ ವಸ್ತುಗಳನ್ನ ಬಳಸುವ ಹಾಗಿಲ್ಲ. ಏನಾದರು ಬಳಸಿದರೆ ಮಗುವಿನ ಮುಖದ ಮೇಲೆ ಜನ್ಮಗುರುತು ಉಂಟಾಗುತ್ತದೆ ಅಂತೆ.

೪. “ಪಿನ್ ಇಟ್ಟುಕೋ, ಇಲ್ಲ ಮಗುವಿಗೆ ಸೀಳುತುಟಿ ಆಗುತ್ತೆ”

ಹೌದು, ಕೆಲವು ಮನೆಗಳಲ್ಲಿ ಗರ್ಭಿಣಿ ಹೆಂಗಸರಿಗೆ ಸೇಫ್ಟಿ ಪಿನ್ ಅಥವಾ ಯಾವುದಾದರು ಲೋಹದ ವಸ್ತುವನ್ನು ಗ್ರಹಣದ ವೇಳೆ ಇಟ್ಟುಕೊಂಡೇ ಇರಲು ಹೇಳುತ್ತಾರೆ. ಅವರ ಪ್ರಕಾರ ಇದು ಮಾಡದೆ ಇದ್ದರೆ, ಮಗುವಿಗೆ ಸೀಳುತುಟಿ ಆಗುತ್ತದೆ ಅಂತೆ.

೫. ಸ್ನಾನ ಮಾಡುವುದು

ಕೆಲವು ಮನೆಗಳಲ್ಲಿ ಗ್ರಹಣದ ವೇಳೆಗಿನ ಕಿರಣಗಳು ಮನೆಯನ್ನ ಹಾಗು ಮನೆಯವರ ದೇಹಗಳನ್ನ ಅಶುದ್ಧಿ ಮಾಡಿವೆ ಎಂದು ಹಾಗು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೆಂದು ಗ್ರಹಣ ಮುಗಿದೊಡನೆ ಸ್ನಾನ ಮಾಡಲು ಹೇಳುವರು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon