Link copied!
Sign in / Sign up
15
Shares

ಚಂಡೀಗಢದಲ್ಲಿ ಜನಿಸಿದೆ ನೋಡಿ "ಪವಾಡ ಮಗು"!

ಒಂದು ನವಜಾತ ಶಿಶುವಿನ ಸಹಜವಾದ ಸರಾಸರಿ ತೂಕ 2.5ಕೆಜಿ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ. ಆದರೆ ಇಲ್ಲೊಂದು ಮಗುವನ್ನ ವೈದ್ಯರು “ಪವಾಡ ಮಗು” ಎಂದು ಕರೆದಿದ್ದಾರೆ. ಅದಕ್ಕೆ ಕಾರಣ ಏನೆಂದು ಓದಿದರೆ, ಬಹುಷಃ ನೀವೂ ಹಾಗೆಯೇ ಅನ್ನಬಹುದು.


ಮೂವತ್ತೈದು ವರ್ಷಗಳಿಂದ ಮದುವೆ ಆಗಿ ಮಕ್ಕಳಿರದ ದಂಪತಿಗೆ ಮೊದಲ ಬಾರಿಗೆ ಗರ್ಭತಾಳುವ ಅದೃಷ್ಟ ಒದಗಿ ಬಂತು. ಆದರೆ ಅದರ ಖುಷಿ ಬಹಳ ದಿನಗಳ ಕಾಲ ಉಳಿಯಲಿಲ್ಲ. ಗರ್ಭಿಣಿ ತಾಯಿಯು ನಿಯಂತ್ರಿಸಲು ಆಗದಷ್ಟು ಅಧಿಕ ರಕ್ತದೊತ್ತಡ ಅಂದರೆ ಮುಗಿಲೆತ್ತರದಷ್ಟು ಹೈ ಬಿಪಿ ಹೊಂದಿದ್ದಳು ಮತ್ತು ಸೊನೊಗ್ರಫಿ ಅಲ್ಲಿ ಆಕೆಯ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಸರಿಯಾಗಿ ರಕ್ತ ಸಂಚಾರವೇ ಆಗುತ್ತಿಲ್ಲ ಎಂಬುದು ತಿಳಿದು ಬಂತು. ಹೀಗಾಗಿ ಆಕೆಗೆ ಎಮರ್ಜೆನ್ಸಿ ಸಿಸೇರಿಯನ್ ಮಾಡಿ ಮಗುವನ್ನ ಹೊರತೆಗೆಯಬೇಕಾಗಿ ಬಂತು. ಆಗ ಜನಿಸಿದ ಮಗುವೇ ಸೀತಾ.


ಸೀತಾ ಹುಟ್ಟಿದಾಗ ಹೊಂದಿದ್ದು ಕೇವಲ 400 ಗ್ರಾಂ ಅಷ್ಟು ತೂಕ ಮಾತ್ರ! ಆಕೆಯ ಪಾದಗಳು ನಮ್ಮ ಕೈಬೆರಳಿನ ಉಗುರಿನಷ್ಟು ಅಷ್ಟೇ ಉದ್ದವಿತ್ತು. ಆಕೆ ಹುಟ್ಟಿದಾಗ ಆಕೆ ಉಸಿರೇ ಆಡುತ್ತಿರಲಿಲ್ಲ! ಆದರೆ ಆಕೆಯ ಕುಟುಂಬ ಅವಳನ್ನ ಉಳಿಸಿಕೊಳ್ಳಲೇಬೇಕು ಎಂದುಕೊಂಡರು. ವೈದ್ಯರು ಆ ಮಗುವನ್ನು ನಿಯೋನಾಟಲ್ ತೀವ್ರ ನಿಗಾ ಘಟಕದಲ್ಲಿ (NICU) ಇರಿಸಿದರು.

ಭಾರತದ ಇತಿಹಾಸದಲ್ಲಿ ಅತಿ ಕಡಿಮೆ ತೂಕ ಹೊಂದು ಬದುಕುಳಿದಿದ್ದ ಮಗು ಎಂದರೆ ಅದು 2012ರಲ್ಲಿ ಚಂಡೀಗಢದಲ್ಲಿ ಜನಿಸಿದ ಕೇವಲ 450 ಗ್ರಾಂ ತೂಕ ಹೊಂದಿದ್ದು ರಜನಿ ಎಂಬ ಮಗು. ಆದರೆ ಸೀತಾ ಅದಕ್ಕಿಂತ ಕಡಿಮೆ ತೂಕ ಹೊಂದಿದ್ದಳು. ವೈದ್ಯರ ಪ್ರಕಾರ ಇಂತಹ ಅಕಾಲಿಕ ಹೆರಿಗೆ ಇಂದ ಜನಿಸಿ ಇಷ್ಟು 600 ಗ್ರಾಂಗಿಂತ ಕಡಿಮೆ ತೂಕ ಹೊಂದಿರುವ ಮಕ್ಕಳು ಉಳಿಯುವ ಸಾಧ್ಯತೆಗಳು ಕೇವಲ 0.5%, ಅಂದರೆ ನೂರರಲ್ಲಿ ಒಂದು ಮಗು ಕೂಡ ಉಳಿಯುವುದು ಡೌಟ್. ಆದರೆ ಸೀತಾ ಇವೆಲ್ಲವುಗಳನ್ನ ಮೀರಿ, ವೈದ್ಯರಿಗೆ ಅಚ್ಚರಿ ತರಿಸುವ ರೀತಿಯಲ್ಲಿ ಬದುಕುಳಿದಳು.


ಜನಿಸಿದ ಮೊದಲ ಕೆಲವು ದಿನಗಳು ಆಕೆಯ ತೂಕದಲ್ಲಿ ಮತ್ತಷ್ಟು ಇಳಿಕೆಯಾಯಿತು. ಆದರೆ ಆಕೆ ಎದೆಹಾಲು ಸೇವಿಸಿ, ಅದನ್ನ ಜೀರ್ಣಿಸಿಕೊಳ್ಳುವುದನ್ನ ಕಲಿಯಲು 4 ವಾರಗಳು ಬೇಕಾಯಿತು. ಆನಂತರವಷ್ಟೇ ಆಕೆ ಸ್ವಲ್ಪ ತೂಕ ಗಳಿಸಿಕೊಂಡಳು. ಈಗ ಆಕೆಗೆ ನಾಲ್ಕೂವರೆ ತಿಂಗಳಾಗಿದ್ದು, ಸ್ಪೂನ್ ಇಂದ ಆಕೆಗೆ ತಿನ್ನಿಸಬಹುದು. ಎಲ್ಲಾ ಅಡಚಣೆಗಳು, ಸಾಧ್ಯತೆಗಳನ್ನ ಮೀರಿ, ಸಾವನ್ನ ಗೆದ್ದ ಮಗು ಇದು.  ನಮ್ಮ ದೇಶದ ಅತ್ಯಂತ ಕಡಿಮೆ ತೂಕ ಹೊಂದು ಬದುಕುಳಿದ ಮಗುವು ಇದೆ. ಈಗ ತಿಳಿಯಿತೇ ಏಕೆ ವೈದ್ಯರು ಈಕೆಯನ್ನ “ಪವಾಡ ಮಗು” ಎಂದು ಕರೆದರು ಎಂದು?

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon