Link copied!
Sign in / Sign up
1
Shares

ಈ ಚಳಿಗೆ ನಿಮ್ಮ ತ್ವಚೆಯ ರಕ್ಷಣೆಗೆ ಸಲಹೆಗಳು

ಚಳಿ ಶುರುವಾಯಿತು ನಿಮ್ಮ ತ್ವಚೆಯು ಚಳಿಗೆ ವ್ಯತ್ಯಾಸವನ್ನು ಕಾಣಬಹುದು, ಕೆಲವರ ತ್ವಚೆ ಒಡೆದುಕೊಂಡರೆ ಕೆಲವರ ಚರ್ಮ ಬಿರುಕು ಬಿಟ್ಟುಕೊಳ್ಳಬಹುದು, ಮತ್ತು ಕೆಲವರಿಗೆ ಬಿಗಿಯಾದ ಅನುಭವವಾಗುವುದು. ಚಳಿಗೆ ನಿಮ್ಮ ತ್ವಚೆ ಯಾವುದೇ ವ್ಯತ್ಯಾಸ ಕಂಡರೂ ಚರ್ಮದ ಹೊಳಪನ್ನು ಮತ್ತು ಆರೋಗ್ಯವನ್ನು ಹೆಚ್ಚಿಸುವ ಪದಾರ್ಥಗಳು ನಿಮ್ಮ ಮನೆಯಲ್ಲೇ ಇವೆ. ಅದನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಂಡು ನಿಮ್ಮ ಸೌಂದರ್ಯವನ್ನುಹೆಚ್ಚಿಸಿಕೊಳ್ಳಿ.

೧.ಹಾಲಿನ ಕೆನೆ ಅಥವಾ ಮಿಲ್ಕ್ ಕ್ರೀಮ್ ಮತ್ತು ಜೇನುತುಪ್ಪ

೧.ಒಂದು ಚಮಚ ಮಿಲ್ಕ್ ಕ್ರೀಮ್(ಮಲಾಯ್) ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ.

೨.ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ.

೩.೧೫ ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ನಂತರ ತಣ್ಣೀರನ್ನು ಮುಖಕ್ಕೆ ಸಿಂಪಡಿಸಿ ಚೌಕದಲ್ಲಿ ಒರೆಸಿಕೊಳ್ಳಿ.

೨.ಬಾದಾಮಿ ಎಣ್ಣೆ ಮತ್ತು ಹಾಲು

೧.ಬಾದಾಮಿಯನ್ನು ರುಬ್ಬಿ ಒಂದು ಚಮಚ ಅದರ ಎಣ್ಣೆಯನ್ನು ತೆಗೆದುಕೊಂಡು ಒಂದು ಚಮಚ ಹಾಲಿನ ಜೊತೆ ಮಿಶ್ರಣ ಮಾಡಿ.

೨.ಈ ಮಿಶ್ರಣವನ್ನು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ, ಸ್ವಲ್ಪ ಸಮಯದ ನಂತರ ಇದನ್ನು ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ.

೩.ಇದು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವ ಜೊತೆಗೆ ತ್ವಚೆಯು ತೇವಾಂಶದಿಂದ ಇರಲು ಸಹಾಯ ಮಾಡುತ್ತದೆ.

೩.ಗುಲಾಬಿ ರಸ ಮತ್ತು ಸ್ಟ್ರಾಬೆರ್ರಿ

೧.ಸಮ ಪ್ರಮಾಣದ ಗುಲಾಬಿ ರಸ ಮತ್ತು ಸ್ಟ್ರಾಬೆರ್ರಿ ರಸವನ್ನು ಮಿಶ್ರಣ ಮಾಡಿ ನಿಮ್ಮ ತ್ವಚೆಗೆ ಹಚ್ಚಿ.

೨.೨೦ ನಿಮಿಷಗಳ ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಂಡು ನಿಮ್ಮ ಮೈಬಣ್ಣವನ್ನು ಗಮನಿಸಿ.

ಇದು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

೪.ಬಾಳೆಹಣ್ಣು ಮತ್ತು ಹಾಲಿನ ಪುಡಿ/ಗುಲಾಬಿ ರಸ

೧.ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅದಕ್ಕೆ ಸ್ವಲ್ಪ ಹಾಲಿನ ಪುಡಿ ಅಥವಾ ಹಾಲನ್ನು ಸೇರಿಸಿ ಮಿಶ್ರಣ ಮಾಡಿ.

೨.ನಿಮ್ಮ ಎಣ್ಣೆಯುಕ್ತ ತ್ವಚೆ ಆಗಿದ್ದರೆ ಗುಲಾಬಿ ರಸವನ್ನು ಇದಕ್ಕೆ ಸೇರಿಸಿ.

೩.ಇದಕ್ಕೆ ನಾಲ್ಕೈದು ಹನಿ ಜೇನುತುಪ್ಪವನ್ನು ಸೇರಿಸಿ.

೪.ಇದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿ ೨೦ ನಿಮಿಷಗಳ ಬಿಟ್ಟು ತೊಳೆಯಿರಿ.

ಇವುಗಳು ನೈಸರ್ಗಿಕ ವಿಧಾನಗಳಾಗಿದ್ದು, ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಮತ್ತು ಇವುಗಳು ತ್ವಚೆಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೊಳಪನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon