Link copied!
Sign in / Sign up
1
Shares

ಚಳಿಗಾಲದಲ್ಲಿ ಶಿಶುವಿನ ರಕ್ಷಣೆ ಮಾಡುವುದು ಹೇಗೆ?

ಈ ಚಳಿಗಾಲದಲ್ಲಿ ನಿಮಗೆ ಹೆರಿಗೆ ಆಗಿದೆಯೇ? ಅಥವಾ ನಿಮ್ಮ ಮನೆಯಲ್ಲಿ ಪುಟ್ಟ ಮಗು ಇದೆಯೇ? ಈ ಚಳಿಗಾಲದಲ್ಲಿ ಮಗುವನ್ನು ಹೇಗೆ ಪೋಷಿಸಬೇಕು ಎಷ್ಟು ಎಚ್ಚರಿಕೆ ವಹಿಸಬೇಕು, ಏನು ಮಾಡಬೇಕು ಏನು ಮಾಡಬಾರದು ಎಂಬ ಗೊಂದಲ ಇದೆಯೇ? ಚಿಂತಿಸಬೇಡಿ, ಈ ಚಳಿಗಾಲದಲ್ಲಿ ನಿಮ್ಮ ಮಗುವಿನ ರಕ್ಷಣೆ ಮಾಡಲು ಕೆಲವು ಸಲಹೆಗಳನ್ನು ನಾವು ಇಲ್ಲಿ ನಿಮಗಾಗಿ ಬರೆದಿರುವೆವು.

ಚಳಿಗಾಲದಲ್ಲಿ ನಿಮ್ಮ ಮಗುವನ್ನು ರಕ್ಷಣೆ ಮಾಡಲು ಕೆಲವು ಸಲಹೆಗಳು
೧.ನಿಮ್ಮ ಕೈಗಳನ್ನು ನಿರಂತರವಾಗಿ ತೊಳೆದುಕೊಳ್ಳಿ

ಚಳಿಗಾಲ ಜ್ವರ ಮತ್ತು ಶೀತವನ್ನು ಬೇಗನೆ ತರುವ ಸಮಯ. ನಿಮ್ಮ ಮಗುವನ್ನು ನೀವು ಸ್ಪರ್ಶಿಸುವ ಮೊದಲು ನಿಮ್ಮ ಕೈಗಳನ್ನು ನೀವು ತೊಳೆದುಕೊಂಡಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ, ನೀವು ನಿಮ್ಮ ಮಗುವಿಗೆ ಸ್ಪರ್ಶದ ಮೂಲಕ ಹರಡುವ ಸೂಕ್ಷ್ಮಜೀವಿಗಳಿಂದ ರಕ್ಷಣೆಯನ್ನು ನೀಡಬಹುದು. ನಿಮ್ಮ ಮಗುವನ್ನು ನೋಡಲು ಬರುವ ಎಲ್ಲಾ ವ್ಯಕ್ತಿಗಳಿಗೂ, ಮೊದಲು ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊಂಡು ಬರಲು ಸಲಹಿಸಿ.

೨.ಎದೆಹಾಲುಣಿಸಿ

ಮಗುವಿನ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಇರುವ ಸುಲಭ ಮಾರ್ಗ ಎಂದರೆ ಎದೆಹಾಲುಣಿಸುವುದು. ಇದರಿಂದ ಮಗುವು ಶೀತ ಮತ್ತು ಸೋಂಕಿನಿಂದ ದೂರವಿರಲು ಸಹಾಯವಾಗುತ್ತದೆ. ನೀವು ಕನಿಷ್ಠ ೭ತಿಂಗಳ ಕಾಲ ಮಗುವಿಗೆ ಎದೆಹಾಲುಣಿಸಲು ತಜ್ಞರು ಕೂಡ ಸಲಹೆ ನೀಡುತ್ತಾರೆ. ಎದೆಹಾಲುಣಿಸುವುದು ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದು.

೩.ವೇಳಾಪಟ್ಟಿಯಂತೆ ಲಸಿಕೆ ಹಾಕಿಸಿ

ನಿಮ್ಮ ಮಗುವು ಯಾವುದೇ ಲಸಿಕೆಯಿಂದ ತಪ್ಪಿಸಿಕೊಳ್ಳದಂತೆ ನೀವು ನೋಡಿಕೊಳ್ಳುವುದು ತುಂಬಾ ಮುಖ್ಯ. ಚಳಿಗಾಲದಲ್ಲಿ ಎದುರಾಗುವ ರೋಗ ಮತ್ತು ಸಮಸ್ಯೆಗಳಿಂದ ನಿಮ್ಮ ಮಗುವನ್ನು ರಕ್ಷಿಸಲು ಇದು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಮಗುವು ಲಸಿಕೆಯನ್ನು ತಪ್ಪಿಸಿಕೊಂಡರೆ, ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡಿ ಏನು ಮಾಡಬೇಕು ಎಂಬುದನ್ನು ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದು ಉತ್ತಮ.

೪.ಮಗುವಿನ ಕೋಣೆಯನ್ನು ಬೆಚ್ಚಗಿರಿಸಿ

ಈ ಚಳಿಗಾಲ ಮುಗಿಯುವ ತನಕ ನಿಮ್ಮ ಮಗುವು ಇರುವ ಕೋಣೆಯನ್ನು ಬೆಚ್ಚನೆಯ ವಾತಾವರಣದಿಂದ ಇರುವಂತೆ ನೋಡಿಕೊಳ್ಳಿ. ಸಂಜೆ ಮತ್ತು ರಾತ್ರಿವೇಳೆ ಎಲ್ಲಾ ಕಿಟಕಿ ಬಾಗಿಲುಗಳನ್ನು ಹಾಕಿ ಶೀತ ಗಾಳಿ ಮಗುವನ್ನು ಮುಟ್ಟದಂತೆ ನೋಡಿಕೊಳ್ಳಿ. ಮಗುವಿಗೆ ಉಸಿರಾಡಲು ಅಗತ್ಯವಿರುವ ಗಾಳಿ ಬರಲು ಜಾಗ ಇದ್ದರೆ ಸಾಕು.

೫.ನಿಮ್ಮ ಮಗುವಿಗೆ ಆರಾಮದಾಯಕವಾಗಿರುವ ಮತ್ತು  ಚಳಿತಡೆಯುವ ಬಟ್ಟೆಯನ್ನು ತೊಡಿಸಿ

ನೆನಪಿರಲಿ ನಿಮ್ಮ ಮಗು ಇರುವ ಕೋಣೆಯನ್ನು ಬೆಚ್ಚಗೆ ಇರಿಸಿರುವಿರಿ, ಮತ್ತೆ ನೀವು ಮಗುವಿಗೆ ಶೀತ ಆಗದಿರಲಿ ಎಂದು ಹಲವು ಉಡುಪುಗಳನ್ನು ಮಗುವಿಗೆ ಧರಿಸಬೇಡಿ. ನಿಮ್ಮ ಮಗುವಿಗೆ ಆರಾಮದಾಯಕವಾಗಿರುವ ಉಡುಪುಗಳನ್ನು ಧರಿಸಿ. ಮಗುವಿನ ಕಾಲಿಗೆ ಕಾಲ್ಚಿಲವನ್ನು ಹಾಕಿ.

೬.ಭಾರವಾದ ಕಂಬಳಿ ಅಥವಾ ಹೊದಿಕೆಯನ್ನು ಹಾಕಬೇಡಿ

ರಾತ್ರಿ ಮಲಗುವ ಸಮಯ ಮಗುವು ಬೆಚ್ಚಗೆ ಆರಾಮದಾಯಕವಾಗಿ ನಿದ್ರಿಸಲಿ ಎಂದು ನೀವು ಭಾರವಾದ, ಅಥವಾ ದಪ್ಪವಾದ ಕಂಬಳಿ ಅಥವಾ ಹೊದಿಕೆಯನ್ನು ಹಾಕುವುದು ಮಗುವಿಗೆ ಕಷ್ಟಕರ ಆಗುತ್ತದೆ. ಮಗುವಿಗೆ ತೆಳುವಾದ ಹೊದಿಕೆಯನ್ನು ಹಾಕಿ ಮಗುವು ಕೈಯಿಂದ ಅದನ್ನು ತೆಗೆಯುವಂತಿರಬೇಕು ಅಂತಹ ಹೊದಿಕೆಯನ್ನು ಹಾಕಿ ಮಗುವು ಆರಾಮವಾಗಿ ನಿದ್ರಿಸಲು ಸಹಾಯವಾಗುತ್ತದೆ.

೭.ರಕ್ತಸಂಚಲನೆ ಸುಗಮವಾಗಿ ಆಗಲು ಮಸಾಜ್ ಮಾಡಿ

ಮಗುವಿನ ದೇಹದಲ್ಲಿ ರಕ್ತಪರಿಚಲನೆ ಸರಾಗವಾಗಿ ಆಗಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಾಗಲು ಮಗುವಿಗೆ ಮಸಾಜ್ ಮಾಡಿ ಮತ್ತು ಮಗುವನ್ನು ಮುದ್ದಾಡಿ. ನೀವು ಮಗುವಿಗೆ ಮಸಾಜ್ ಮಾಡುವಾಗ ನೀವು ಮತ್ತು ಮಗು ಇರುವ ಕೋಣೆಯು ಬೆಚ್ಚನೆಯ ವಾತಾವರಣವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಮಗುವಿಗೆ ಸ್ನಾನ ಮಾಡಿಸುವ ಮುನ್ನ ಮಸಾಜ್ ಮಾಡುವುದು ಉತ್ತಮ.

೮.ಹಲವು ಬಗೆಯ ಶಿಶು ಉತ್ಪನ್ನಗಳನ್ನು ಬಳಸಬೇಡಿ

ಚಳಿಗೆ ಚರ್ಮದಲ್ಲಿ ಬದಲಾವಣೆ ಕಾಣುವುದು ಸಹಜ, ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಬಗೆಯ ಶಿಶು ಉತ್ಪನ್ನಗಳನ್ನು ಉಪಯೋಗಿಸಬೇಡಿ, ನೈಸರ್ಗಿಕ ವಿಧಾನ ಉಪಯೋಗಿಸುವುದು ಉತ್ತಮ, ನಿಮಗೆ ಗೊಂದಲ ಇದ್ದರೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಶಿಶು ಸೋಪು ಮತ್ತು ಪೌಡರ್ ಗಳನ್ನು ಹೆಚ್ಚು ಬಳಸಬೇಡಿ. ಇದನ್ನು ಬಳಸುವುದರಿಂದ ನಿಮ್ಮ ಮಗುವಿನ ತ್ವಚೆಯಲ್ಲಿ ಒಣ ಅಂಶ ಹೆಚ್ಚಾಗಿ, ದದ್ದುಗಳನ್ನು ಕಾಣಬೇಕಾದ ಪರಿಸ್ಥಿತಿ ಬರಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon