Link copied!
Sign in / Sign up
14
Shares

ಚಳಿಗಾಲದ ಸೆಕ್ಸ್ : ಇತರೆ ಸಮಯಕ್ಕಿಂತ ಹೆಚ್ಚು ಈ ಕಾಲದಲ್ಲಿ ಸೆಕ್ಸ್ ಮಾಡುವುದು ಏಕೆ ಹೆಚ್ಚು ಸುಖಕರ

ಚಳಿಗಾಲವು ವರ್ಷದ ಒಂದು ಪ್ರಣಯಮಯ ಕಾಲ. ಈ ಕಾಲವು ಜೋಡಿಯನ್ನ ಸನಿಹ ತರುತ್ತದೆ ಮತ್ತು ಬೆಚ್ಚಗಿರಿಸಿಕೊಳ್ಳಲು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವಂತೆ ಮಾಡುತ್ತದೆ!

ನಿಮಗೆ ಈಗ ಮದುವೆಯಾಗಿದ್ದರೆ, ನೀವು ಚಳಿಗಾಲದಲ್ಲಿ ಗಂಡ-ಹೆಂಡತಿಯ ನಡುವಿನ ಅಂತರ ಕಡಿಮೆ ಆಗಿ, ದೈಹಿಕ ಸಂಬಂಧವನ್ನು ಗಟ್ಟಿಗಾಗಿಸುತ್ತದೆ ಎಂಬುದು ತಿಳಿದಿರುತ್ತದೆ. ಆದರೆ ಚಳಿಗಾಲದಲ್ಲಿ ನಿಮ್ಮ ಪತಿಗೆ ನಿಮ್ಮನ್ನು ನೋಡಿದರೆ ತಡಿಯಲಾರದಷ್ಟು ಆಕರ್ಷಣೆ ಹುಟ್ಟಿ, ನಿಮ್ಮನ್ನು ಬಿಟ್ಟಿರಲಾರದಂತೆ ಇರುವಂತೆ ಆಗಲು ಕಾರಣವೇನು? ನಿಮ್ಮ ಪತಿಯು ಚಳಿಗಾಲದಲ್ಲಿ ಸೆಕ್ಸ್ ಬಗ್ಗೆ ಇತರೆ ಸಮಯಗಳಿಗಿಂತ ಹೆಚ್ಚು ಆಸಕ್ತಿ ತೋರಿಸುವುದು, ಬಯಕೆ ತೋರಿಸುವುದು ಏಕೆ ಎಂದು ನೀವು ಯಾವಾಗಲಾದರೂ ಯೋಚಿಸಿದ್ದೀರಾ?

ಬಹಳ ಸಂಖ್ಯೆಯ ಸಂಶೋಧನೆಗಳ ಪ್ರಕಾರ, ಹೆಂಗಸರು ಮತ್ತು ಮುಖ್ಯವಾಗಿ ಗಂಡಸರು ಏಕೆ ಚುಮು ಚುಮು ಚಳಿಗಾಲದಲ್ಲಿ ಸೆಕ್ಸ್ ಕಡೆ ಹೆಚ್ಚು ವಾಲುತ್ತಾರೆ ಎಂಬುದನ್ನು ತಿಳಿಸಿಕೊಟ್ಟಿವೆ. ಹಾಗಿದ್ದರೆ ಆ ಕಾರಣಗಳು ಏನು ಎಂಬುದನ್ನು ನೋಡೋಣ ಬನ್ನಿ .

 

೧. ಸರಿಯಾದ ಮೂಡ್ ಸೆಟ್ ಆಗಿರುತ್ತದೆ

ಚಳಿಗಾಲವು ಹಲವಾರು ಬದಲಾವಣೆಗಳನ್ನ ತರುತ್ತದೆ. ಅದರಲ್ಲಿ, ನಿಮ್ಮ ಪತಿಯ ಮೂಡ್ ಅನ್ನು ತಿಳಿಯಾಗಿಸಿ, ಅವರು ಪುನಃ ನಿಮ್ಮ ಹಿಂದೆ ಓಡಿ ಬರುವಂತೆ ಮಾಡುವುದು ಕೂಡ ಒಂದು. ಈ ಚಳಿ ತಾಪಮಾನಕ್ಕೆ ಅವರ ಲೈಂಗಿಕ ಆಸಕ್ತಿ ಕೂಡ ಹೆಚ್ಚುತ್ತದೆ. ಅವರಲ್ಲಿ ಸೆಕ್ಸ್ ಬಗ್ಗೆ ಹೆಚ್ಚು ಬಯಕೆ ಮೂಡಿ, ಅವರು ಹೆಚ್ಚು ಉತ್ಸಾಹದಿಂದ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವುದು ಈ ಚಳಿಗಾಲದಲ್ಲೇ!


೨. ಚಳಿಯ ರಹಸ್ಯ

ಚಳಿಗಾಲ ಇವಾಗ ಶುರು ಆಗಿದ್ದು, ಎಲ್ಲರು ತಮ್ಮನ್ನು ತಾವು ಸ್ವೆಟರ್, ಜಾಕೆಟ್, ಮಫ್ಲರ್ ಇಂದ ಬೆಚ್ಚಗೆ ಇಟ್ಟುಕೊಳ್ಳಲು ಅವುಗಳನ್ನ ಧರಿಸುತ್ತಾರೆ. ಇದೇ ರೀತಿ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಇವುಗಳಲ್ಲಿ ಮುಳುಗಿಸಿಕೊಂಡಿರುತ್ತೀರಾ. ಇದು ಗಂಡಸರಲ್ಲಿ ಏನೋ ಒಂದು ರೀತಿಯ ಕುತೂಹಲ ಮೂಡಿಸುತ್ತದೆ. ಇದು ಮಾನವನ ಮನಶಾಸ್ತ್ರ. ಈ ಕಾರಣಕ್ಕೆ ಅವರು ಬಟ್ಟೆಯ ಇನ್ನೊಂದು ಬದಿಯಲ್ಲಿರುವುದನ್ನ ನೋಡಲು, ಅನುಭವಿಸಲು ಕಾತುರದಿಂದ ಇರುತ್ತಾರೆ.


೩. ಬೆಡ್ ಮೇಲೆ ಮುದ್ದಾಡಲು ಇನ್ನೊಂದು ಕಾರಣ ಸಿಕ್ಕಿತಲ್ಲಾ!

ಚಳಿಗಾಲ ಎಂದರೆ ರಾತ್ರಿಗಳು ದೊಡ್ಡದಿದ್ದು, ಹಗಲು ಸಮಯ ಕಡಿಮೆ ಇರುತ್ತದೆ. ಗಾಳಿಯಲ್ಲಿರುವ ಆ ತಂಡಿಯು ನಿಮಗೆ ಹೊದಿಕೆ ಅಡಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ದಿನವೆಲ್ಲಾ ಬೆಡ್ ಮೇಲೇನೆ ಕಳೆಯುವುದು ಬಿಟ್ಟು ಬೇರೇನೂ ಬೇಡ ಎಂದೆನಿಸುವಂತೆ ಮಾಡುತ್ತದೆ. ಇದು ಕೇವಲ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ನಿಮ್ಮ ದಾಂಪತ್ಯ ಜೀವನಕ್ಕೂ ಬೇಕಿದ್ದ ಅಗತ್ಯ ಉತ್ಸಾಹವನ್ನು ಪುನಃ ತುಂಬುತ್ತದೆ.


೪. ಲೈಂಗಿಕ ಪರಾಕಾಷ್ಠೆ ಹೊಂದಲು ಕಾಲುಚೀಲ ಧರಿಸಿ

ಕಾಲುಚೀಲ (ಸಾಕ್ಸ್) ಧರಿಸುವುದು ಕೇವಲ ನಿಮ್ಮನ್ನು ಬೆಚ್ಚಗೆ ಇರಿಸುವುದಷ್ಟೇ ಅಲ್ಲದೆ, ನೀವು ಲೈಂಗಿಕ ಪರಾಕಾಷ್ಠೆ ಹೊಂದಲೂ ಸಹಾಯ ಮಾಡುತ್ತದೆ! ಇದರಿಂದ ಲೈಂಗಿಕ ಸುಖ ದ್ವಿಗುಣವಾಗುತ್ತದೆ ಎಂದು ಹೇಳುತ್ತಾರೆ ಕೆಲವರು! ಒಂದು ಸಂಶೋಧನೆಯ ಪ್ರಕಾರ ಅವರ ಸಂಶೋಧನೆಯಲ್ಲಿ ಪಾಲ್ಗೊಂಡ ಜನರಲ್ಲಿ, ಸೆಕ್ಸ್ ವೇಳೆ ಕಾಲುಚೀಲ ಧರಿಸಿದವರೆಲ್ಲಾ ಕ್ಲೈಮಾಕ್ಸ್ ಹೊಂದಿ, ಅದ್ಭುತ ಲೈಂಗಿಕ ಪರಾಕಾಷ್ಠೆಯನ್ನು ಹೊಂದಿದರು ಎಂದು ತಿಳಿದುಬಂದಿದೆ.


೫. ಬಿಸಿ ಬಿಸಿ ಜಳಕ

ಚಳಿಗಾಲವು ನಿಮ್ಮ ಸಂಗಾತಿಯೊಂದಿಗೆ ನೀವು ಒಮ್ಮೆ ಆದರೂ ಬಿಸಿ ಬಿಸಿ ನೀರಿನ ಜಳಕ ಮಾಡದೇ ಇದ್ದರೆ ಮುಗಿದಂತೆ ಆಗುವುದಿಲ್ಲ! ಈ ಸಮಯದಲ್ಲಿ ದೈಹಿಕ ಅನ್ಯೋನ್ಯತೆಯು ಉತ್ತುಂಗದಲ್ಲಿ ಇರುತ್ತದೆ ಮತ್ತು ದೇಹದ ಎಲ್ಲಾ ಇಂದ್ರಿಯಗಳು ಸಕ್ರಿಯವಾಗಿರುತ್ತವೆ. ನೀರಿನ ಗುಳ್ಳೆಯು ನಿಮ್ಮ ಮೈ ಸ್ಪರ್ಶ ಮಾಡುವುದರಿಂದ ಹಿಡಿದು, ಸಂಗಾತಿಯ ಬೆರಳುಗಳ ಸ್ಪರ್ಷದವರೆಗೆ, ಎಲ್ಲವೂ ಮಾದಕ ಅನಿಸುತ್ತದೆ!

ಈಗ ನಿಮಗೆ ಇತರೆ ಸಮಯದ ಸೆಕ್ಸ್ ಮತ್ತು ಚಳಿಗಾಲದ ಸೆಕ್ಸ್ ನಡುವಿನ ವ್ಯತ್ಯಾಸಗಳು ಗೊತ್ತಾಗಿದ್ದು, ಈಗ ನೀವು ನಿಮ್ಮ ತುಂಟುತನವನ್ನ ಆದಷ್ಟು ಹೊರಹಾಕಲೇಬೇಕು! ಇದು ಕೇವಲ ನಿಮ್ಮ ಬಾಂಧವ್ಯವನ್ನ ಗಟ್ಟಿಗಾಗಿಸುವುದಷ್ಟೇ ಅಲ್ಲದೆ ನೀವು ಆರೋಗ್ಯಕರವಾಗಿ ಇರುವಂತೆಯೂ ಮಾಡುತ್ತದೆ. ೦೦೦೦೦೦

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon