Link copied!
Sign in / Sign up
6
Shares

ಸಿಸೇರಿಯನ್ ನಂತರ ಈ 10 ಕೆಲಸಗಳನ್ನ ಏನೇ ಆದರೂ ಮಾಡಬೇಡಿ!

ನೀವು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ ಮೇಲೆ ನೀವು ಕಡ್ಡಾಯವಾಗಿ ಮಾಡಲೇಬಾರದ ೨೦ ವಿಷಯಗಳ ಪಟ್ಟಿ ಇಲ್ಲಿವೆ ನೋಡಿ.


೧. ಗ್ಯಾಸ್ ಉಂಟುಮಾಡುವ ಆಹಾರ ಸೇವಿಸಬೇಡಿ : ನೀವು ನಿಮ್ಮ ಆಹಾರದ ಬಗ್ಗೆ ಮೊದಲ ಕೆಲವು ದಿನಗಳು ಕಾಳಜಿ ವಹಿಸುವುದು ತುಂಬಾನೇ ಮುಖ್ಯ. ಗ್ಯಾಸ್ ಉತ್ಪತ್ತಿ ಮಾಡುವಂತಹ ಯಾವುದೇ ಆಹಾರವನ್ನ ನೀವು ಸೇವಿಸಬಾರದು.

೨. ಹೊಟ್ಟೆ ಕಟ್ಟುವಂತಹ ಆಹಾರ ಸೇವಿಸಬೇಡಿ : ಗಟ್ಟಿಯಾದ, ಹೊಟ್ಟೆ ಕಟ್ಟುವಂತಹ ಆಹಾರದಿಂದ ದೂರವಿರಿ. ಇಲ್ಲವಾದಲ್ಲಿ ನಿಮ್ಮ ಹೊಟ್ಟೆ, ಕರುಳಿನ ಮೇಲೆ ಒತ್ತಡ ಬೀಳುತ್ತದೆ ಮತ್ತು ಮಲ ವಿಸರ್ಜನೆಗೆ ತೊಂದರೆ ಆಗುತ್ತದೆ.

೩. ತುಂಬಾ ನಗಬೇಡಿ : ತುಂಬಾ ನಕ್ಕರೆ, ನಿಮ್ಮ ಹೊಟ್ಟೆಯನ್ನು ಕುಯ್ದಿರುವ ಜಾಗದಲ್ಲಿ ತುಂಬಾನೇ ನೋವಾಗುತ್ತದೆ. ಹೀಗಾಗಿ ನಿಮ್ಮ ಸುತ್ತಮುತ್ತ ಇರುವವರಿಗೆ ನಗಿಸಬೇಡಿ ಎಂದು ಹೇಳಿ. ಇದು ಒಂದು ರೀತಿ ಅತಿರೇಕ ಎನಿಸಿದರೂ, ನಿಮ್ಮ ಕಾಳಜಿ ನೀವು ವಹಿಸಲೇಬೇಕು.


೪. ಕೆಮ್ಮಬೇಡಿ : ಸಣ್ಣ ಕೆಮ್ಮು ಕೂಡ ನಿಮ್ಮ ಹೊಲಿಗೆ ಹಾಕಿರುವ ಜಾಗದಲ್ಲಿ ಚಿತ್ರಹಿಂಸೆ ಆಗುವಷ್ಟು ನೋವನ್ನು ಉಂಟು ಮಾಡಬಹುದು. ಹೀಗಾಗಿ ನಿಮಗೆ ಕೆಮ್ಮು ಉಂಟು ಮಾಡುವಂತದ್ದು ಏನನ್ನು ಸೇವಿಸಬೇಡಿ.

೫. ಹೊಲಿಗೆ ಹಾಕಿದ ಜಾಗವನ್ನ ಸುಮ್ಮನೆ ಮುಟ್ಟಿಕೊಳ್ಳಬೇಡಿ : ನೀವು ಅದರ ಮೇಲೆ ಬೆರಳಾಡಿಸುವುದೆಲ್ಲ ಕಡ್ಡಾಯವಾಗಿ ನಿಲ್ಲಿಸಬೇಕು. ನೀವು ಅದನ್ನು ನೋಡಿಕೊಳ್ಳದಿದ್ದರೆ ಇನ್ನೂ ಒಳ್ಳೆಯದು. ನಿಮ್ಮ ನರ್ಸ್ ಅಥವಾ ನಿಮ್ಮ ಪತಿ ಅದರ ಆರೈಕೆ ಮಾಡಲಿ.

೬. ಜಡತ್ವ ಹಾಗೆ ಮಾಯವಾಗುತ್ತದೆ ಎಂದುಕೊಳ್ಳಬೇಡಿ : ಕೆಲವು ಹೆಂಗಸರು ತಮಗೆ ಹೆರಿಗೆ ಆಗಿ 3 ವರ್ಷ ಆದ ನಂತರವೂ ಆ ಭಾಗವು ಜಡತ್ವ ಹೊಂದಿದೆ ಎಂದು ಹೇಳುತ್ತಾರೆ!


೭. ಮೆಟ್ಟಿಲು ಹತ್ತುವುದು : ನಿಮಗೆ ಸಿಸೇರಿಯನ್ ಆಗಿದೆ ಎಂದರೆ, ನೀವು ದೂರವಿಡಬೇಕಾದ ಇನ್ನೊಂದು ವಿಷಯ ಎಂದರೆ ಅದು ಮೆಟ್ಟಿಲು ಹತ್ತುವುದು.

೮. ನೀವೊಬ್ಬರೇ ಮಗುವನ್ನ ಎತ್ತಿಕೊಳ್ಳಲು ಹೋಗಬೇಡಿ : ಮೊದಲ ಕೆಲವು ದಿನಗಳು ಮಗುವನ್ನು ಎತ್ತಿಕೊಳ್ಳುವುದು ತುಂಬಾನೇ ನೋವು ಉಂಟುಮಾಡಬಹುದು. ಹೀಗಾಗಿ ಹೆರಿಗೆ ನಂತರದ ಕೆಲವು ದಿನಗಳವರೆಗೆ ನೀವೊಬ್ಬರೇ ಮಗುವನ್ನು ಎತ್ತಿಕೊಂಡು ಆಡಿಸುವುದಕ್ಕೆ ಮುಂದಾಗಬೇಡಿ.

೯. ಆರು ವಾರಗಳವರೆಗೆ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳಬೇಡಿ : ನೀವು ಸಹಜ ಮನಸ್ಥಿತಿಗೆ ಮರಳಿ, ನಿಮ್ಮ ಗಾಯಗಳು ವಾಸಿ ಆಗುವವರೆಗೆ ನೀವು ಸೆಕ್ಸ್ ಇಂದ ದೂರವಿರಬೇಕು.


೧೦. ಅತಿಯಾದ ನೋವನ್ನು ಸುಮ್ಮನೆ ಸಹಿಸಿಕೊಳ್ಳಬೇಡಿ : ಅತಿಯಾದ, ತಡೆಯಲಾಗದಂತಹ ನೋವಿದ್ದರೆ, ಅದನ್ನು ಸುಮ್ಮನೆ ಅನುಭವಿಸಬೇಡಿ. ವೈದ್ಯರು ನೀಡಿರುವ ಪೈನ್ ಕಿಲ್ಲರ್ ಟ್ಯಾಬ್ಲೇಟ್ಸ್ ಅನ್ನು ಸೇವಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon