Link copied!
Sign in / Sign up
8
Shares

ಈ 7 ಅಂಶಗಳನ್ನ ತಿಳಿದಿದ್ದರೆ ನೀವು ಸಿಸೇರಿಯನ್ ಸರ್ಜರಿಗೆ ಸಿದ್ಧವಾಗಿರಬಹುದು!

ಹೆಂಗಸರು ತುಂಬಾ ಮುಂಚಿನಿಂದಲೇ ಹೆರಿಗೆಯ ಎಲ್ಲಾ ಪ್ಲಾನ್ಸ್ ಅನ್ನು ಸುಮ್ಮನೆ ಮಾಡಿಕೊಂಡಿರುವುದಿಲ್ಲ. ನಿಮ್ಮ ಹೆರಿಗೆ ಹೇಗಾಗಬೇಕು ಎಂಬ ದೂರದೃಷ್ಟಿ ಇರುತ್ತದೆ ಮತ್ತು ಅದು ಹಾಗೆಯೇ ಆಗಲು ಏನೇನು ಬೇಕೋ ಅವೆಲ್ಲವನ್ನೂ ಮಾಡೇ ಮಾಡುತ್ತೀರಾ. ನೀವು ಗರ್ಭಧಾರಣೆಯ ಮಧ್ಯದಲ್ಲಿ ಯಾವುದಾದರೂ ಕಾರಣಕ್ಕೆ ನಾರ್ಮಲ್ ಡೆಲಿವರಿ ಬೇಡವೆಂದು ನಿರ್ಧರಿಸಿಕೊಳ್ಳಬಹುದು ಅಥವಾ ಏನಾದರೂ ತೊಂದರೆ ಉದ್ಭವ ಆಗಿದ್ದಲ್ಲಿ ವೈದ್ಯರೇ ಇದನ್ನು ನಿರ್ಧರಿಸಬಹುದು.

C-ಸೆಕ್ಷನ್ ಅಥವಾ ಸಿಸೇರಿಯನ್ ಸುರಕ್ಷಿತ ಹೆರಿಗೆಗೆ ಕೀಲಿ ಕೈ ಆಗಿದ್ದರೂ, ಅದರೊಂದಿಗೆ ಕೆಲವೊಂದು ಅಪಾಯಗಳು ಕೂಡ ಬರುತ್ತವೆ. ಸಿಸೇರಿಯನ್ ಸರ್ಜರಿ ಅನ್ನು ಒಳಗೊಂಡಿರುವ ಕಾರಣ, ತೊಂದರೆಗಳು ಉಂಟಾಗುವ ಅಪಾಯಗಳು ಇದ್ದೇ ಇರುತ್ತವೆ : ರಕ್ತಸ್ರಾವ, ಸೋಂಕು, ಅನೆಸ್ತೇಷಿಯಾ ಇಂದ ತೊಂದರೆ ಮತ್ತು ಇತ್ಯಾದಿ. ಇವೆಲ್ಲಾ ಅಲ್ಲದೆ - ಸಿಸೇರಿಯನ್ ಎನ್ನುವುದು ಹೊಟ್ಟೆಯ ಮೇಲೆ ಮಾಡುವ ಸರ್ಜರಿ ಆಗಿದ್ದು, ಇದು ಅಪಾರ ನೋವನ್ನು ಕೂಡ ಒಳಗೊಂಡಿರುತ್ತದೆ.

ಬಹಳಷ್ಟು ಪ್ರಕರಣಗಳಲ್ಲಿ ಹೆಂಗಸರಿಗೆ ತಮಗೆ ಸಿಸೇರಿಯನ್ ಕಾಯುತ್ತಿದ್ದೆ ಎಂಬುದರ ಅರಿವೇ ಇರುವುದಿಲ್ಲ. ನೀವು ನಿಮ್ಮ ಹೆರಿಗೆಗೆ ಮತ್ತು ಅದರೊಂದಿಗೆ ಉಂಟಾಗಬಹುದಾದ ತೊಂದರೆಗಳಿಗೆ ತಯಾರಾಗಿರಲು, ನೀವು ಅನುಭವಿಸಬಹುದಾದ ತೊಂದರೆಗಳು ಯಾವುದೆಂದು ನಾವಿಲ್ಲಿ ಪಟ್ಟಿ ಮಾಡಿದ್ದೇವೆ ಓದಿ :

 

೧. ಅರ್ಧಕ್ಕೆ ನಿಂತ ಲೇಬರ್ (ಹೆರಿಗೆ ನೋವು)

ನಿಮ್ಮ ಸಂಕೋಚನಗಳು ಕ್ಷೀಣಿಸುತ್ತಾ ಹೋದರೆ ಅಥವಾ ಅವುಗಳು ಅಷ್ಟೊಂದು ತೀವ್ರವಾಗಿಲ್ಲ ಎಂದರೆ ನಿಮ್ಮ ಗರ್ಭಕಂಠವು ಅಂದುಕೊಳ್ಳುವಷ್ಟು ಬೇಗ ಹಿಗ್ಗಿಕೊಳ್ಳುವುದಿಲ್ಲ. ಹೀಗಾದರೆ ವೈದ್ಯರು ನಿಮಗೆ ಔಷಧಿಯನ್ನು ನೀಡುತ್ತಾರೆ. ಉದಾಹರಣೆಗೆ  IV ಆಕ್ಸಿಟೋಸಿನ್. ಇದು ನಿಮ್ಮ ಸಂಕೋಚನಗಳ ಸಂಖ್ಯೆ, ತೀವ್ರತೆ ಮತ್ತು ಅವಧಿಯನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ನಿಮಗೆ ಸಂಕೋಚನಗಳು ಉಂಟಾಗುತ್ತಿದ್ದರು ಮಗುವು ಜನನನಾಳದ ಮೂಲಕ ಹೊರಬರುವುದೇ ಇಲ್ಲ. ಇದಕ್ಕೆ ಕಾರಣ ಗರ್ಭಕೋಶದಲ್ಲಿರುವ ಮಗುವಿನ ಭಂಗಿ ಆಗಿರಬಹುದು ಅಥವಾ CPD (ಸೆಫಲೋಪೆಲ್ವಿಕ್ ಡಿಸ್ಪ್ರೊಪೋಷನ್) ಎಂಬ ಸಂಕೀರ್ಣತೆ ಉಂಟಾಗಿರಬಹುದು.

 

೨. ನಿಮ್ಮ ಹಳೆಯ ಸಿಸೇರಿಯನ್ ಸರ್ಜರಿಗಳು

90% ಅಷ್ಟು ಹೆಂಗಸರು ಮೊದಲ ಬಾರಿಗೆ ಸಿಸೇರಿಯನ್ ಹೊಂದಿದ ನಂತರ ಎರಡನೇ ಹೆರಿಗೆಯು ನಾರ್ಮಲ್ ಆಗುವ ಸಾಧ್ಯತೆಗಳು ಹೊಂದಿರುತ್ತಾರೆ. ಅಲ್ಲದೆ ಬಹುತೇಕ ಪ್ರಸೂತಿತಜ್ಞರು ಮತ್ತು ಹೆರಿಗೆ ತಜ್ಞರ ಪ್ರಕಾರ ಒಂದು (ಕೆಲವೊಮ್ಮೆ ಎರಡು) ಬಾರಿ ಸಿಸೇರಿಯನ್ ಆದ ನಂತರವೂ ಸುರಕ್ಷಿತವಾಗಿ ನಾರ್ಮಲ್ ಡೆಲಿವರಿಯನ್ನು ಹೊಂದಬಹುದು. ಆದರೂ, ಎರಡು ಬಾರಿ ಸಿಸೇರಿಯನ್ ಆದಮೇಲೆ ಗರ್ಭಕೋಶವು ಹರಿಯುವ ಅಪಾಯ ಇರುವ ಕಾರಣ ನೀವು ಸಿಸೇರಿಯನ್ ಅನ್ನು ಪುನರ್ವರ್ತಿಸಬೇಕಾಗುತ್ತದೆ. ವೈದ್ಯರು ನಿಮ್ಮ ಹೆರಿಗೆಯು ಯಾವ ರೀತಿ ಆಗಬೇಕು ಎಂಬುದನ್ನು ನಿಮಗೆ ಹಿಂದೆ ಎಷ್ಟು ಬಾರಿ ಸಿಸೇರಿಯನ್ ಆಗಿ ಎಂದು ಕೇಳುವುದರ ಜೊತೆಗೆ ಇನ್ನಷ್ಟು ಹಲವು ಪ್ರಶ್ನೆಗಳನ್ನು ಕೇಳಿ, ಪರಿಶೀಲಿಸಿ, ನಿರ್ಧರಿಸುತ್ತಾರೆ.

 

೩. ಭ್ರೂಣದ ಮೇಲೆ ಒತ್ತಡ

ಒಂದು ವೇಳೆ ನಿಮ್ಮ ಮಗುವಿಗೆ ಏನಾದರೂ ತೊಂದರೆ ಆಗುತ್ತಿದ್ದರೆ, ಸಿಸೇರಿಯನ್ ಅತ್ಯಂತ ಸುರಕ್ಷಿತವಾದ ದಾರಿಯಾಗುತ್ತದೆ. ಒಂದು ವೇಳೆ ಮಗುವಿನ ನಾಡಿಬಡಿತದಲ್ಲಿ ಏನಾದರೂ ತೊಂದರೆ ಆದರೆ ಅಥವಾ ಕರುಳು ಬಳ್ಳಿಯು ಸಡಿಲಗೊಂಡು ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದರೆ, ಸಿಸೇರಿಯನ್ ಅವಶ್ಯಕವಾಗುತ್ತದೆ. ಕರುಳು ಬಳ್ಳಿಯು ಮಗುವಿಗಿಂತ ಮೊದಲೇ ಗರ್ಭಕಂಠದ ಹೊರಬಿದ್ದು, ಮಡಚಿಕೊಂಡರೆ, ಮಗುವಿಗೆ ರಕ್ತಹರಿವು ಸರಿಯಾಗಿ ಉಂಟಾಗುವುದಿಲ್ಲ. ಇದನ್ನು ಕಾರ್ಡ್ ಪ್ರೊಲಾಪ್ಸ್ ಎನ್ನುತ್ತಾರೆ.

 

೪. ಮಗುವು ಬ್ರೀಚ್ ಭಂಗಿಯಲ್ಲಿ ಇದ್ದಾರೆ

ಗರ್ಭಧಾರಣೆ ಸಮಯದಲ್ಲಿ ಮಗುವು ಗರ್ಭಕೋಶದ ಒಳಗೆ ಚಲನೆ ಮಾಡುತ್ತಿರುತ್ತದೆ. ಆದರೆ, 36ನೇ ವಾರದಲ್ಲಿ ಅದು ತಲೆಕೆಳಗೆ ಮಾಡಿರುವ ಭಂಗಿಯಲ್ಲಿ ಇರಬೇಕು. ಆದರೆ, 4% ಅಷ್ಟು ಭ್ರೂಣಗಳು ಈ ಭಂಗಿ ಹೊಂದುವುದೇ ಇಲ್ಲ. ಇದನ್ನು ಬ್ರೀಚ್ ಎನ್ನುತ್ತಾರೆ. ಇದಕ್ಕೆ ಕಾರಣವನ್ನು ಯಾವಾಗಲೂ ತಿಳಿಯಲು ಆಗುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಹೆರಿಗೆಗೆ ಮುಂದಾದರೆ ತೊಂದರೆಗಳನ್ನು ಉಂಟುಮಾಡಬಹುದು.

 

೫. ಜರಾಯು ತೊಂದರೆಗಳು

ನೀವು ಜರಾಯು ಅಡಚಣೆಯನ್ನು ಅನುಭವಿಸಿದರೆ, ಅಪಾಯಕಾರಿ ಹೆರಿಗೆಯನ್ನು ತಪ್ಪಿಸಲು ಸಿಸೇರಿಯನ್ ಸರ್ಜರಿಗೆ ಮುಂದಾಗಬೇಕು. ಮಗುವು ಹೊರಬರುವ ಮುನ್ನವೇ ಗಾರ್ಬ್ಹೊಕೋಶದ ಒಳಗೋಡೆಗಳಿಗೆ ಅಂಟಿಕೊಂಡ ಜರಾಯು ಬಿಡಿಸಿಕೊಳ್ಳಲು ಶುರು ಮಾಡಿದರೆ, ಅದನ್ನು ಜರಾಯು ಅಡಚಣೆ ಎನ್ನುತ್ತಾರೆ. ಇದು ತುಂಬಾನೇ ನೋವಿಗೆ ಮತ್ತು ರಕ್ತಸ್ರಾವಕ್ಕೆ ಕಾರಣ ಆಗಬಹುದು. ಈ ಸಮಯದಲ್ಲಿ ಮಗುವಿನ ಆಮ್ಲಜನಕ ಪೂರೈಕೆಗೆ ತೊಂದರೆ ಉಂಟಾಗಬಹುದಾದ ಕಾರಣಕ್ಕೆ ಸಿಸೇರಿಯನ್ ಅನ್ನು ಆಯ್ದುಕೊಳ್ಳಬೇಕಾಗಬಹುದು.

 

೬. ಪ್ಲಾಸೆಂಟಾ ಪೆರ್ವಿಯ

ಪ್ಲಾಸೆಂಟಾ (ಜರಾಯು) ಪೆರ್ವಿಯ ಎಂದರೆ ಜರಾಯುವು ಗರ್ಭಕೋಶದ ಸೈಡ್ ಅಲ್ಲಿರುವ ಗೋಡೆಗಾಗಲಿ ಅಥವಾ ಮೇಲಿನ ಗೋಡೆಗಾಗಲಿ ಅಂಟಿಕೊಳ್ಳುವುದರ ಬದಲು ಗರ್ಭಕೋಶದ ಕೆಳಭಾಗದ ಗೋಡೆಗೆ ಅಂಟಿಕೊಂಡಿರುವುದು. ಇದು ಮಗುವು ಗರ್ಭಕಂಠದ ಮೂಲಕ ಹೊರಬರಾವುದಕ್ಕೆ ಅಡ್ಡವಾಗಿ ನಿಲ್ಲುತ್ತದೆ. ಇಂತಹ ಸಮಯದಲ್ಲಿ ನಾರ್ಮಲ್ ಡೆಲಿವರಿಗೆ ಮುಂದಾದರೆ ಅತಿಯಾದ ರಕ್ತಸ್ರಾವ, ಮಗು ಮತ್ತು ತಾಯಿಗೆ ದೊಡ್ಡ ಅಪಾಯಗಳು ಉಂಟಾಗಬಹುದು.

 

೭. ಹಲವಾರು ಜನನಗಳು

ಒಂದು ವೇಳೆ ನಿಮಗೆ ಅವಳಿ ಅಥವಾ ತ್ರಿವಳಿ (ಅಥವಾ ಅದಕ್ಕಿಂತಲೂ ಹೆಚ್ಚು) ಮಗುವನ್ನು ಹೊಟ್ಟೆಯೊಳಗೆ ಇಟ್ಟುಕೊಂಡಿದ್ದರೆ, ನಿಮಗೆ ಸಿಸೇರಿಯನ್ ಅವಶ್ಯಕವಾಗುತ್ತದೆ. ಮಕ್ಕಳ ಭಂಗಿಗಳು, ಅಂದಾಜು ತೂಕ, ಗರ್ಭದೊಳಗಿನ ವಯಸ್ಸು ಇವೆಲ್ಲವುಗಳ ಆಧಾರದ ಮೇಲೆ ಅವಳಿ ಮಕ್ಕಳನ್ನು ಜನನನಾಳದ ಮೂಲಕ ನಾರ್ಮಲ್ ಡೆಲಿವರಿ ಮಾಡಬಹುದು. ಆದರೆ 3ರ ಅಪವರ್ತನೆಗಳು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು ಇದ್ದರೆ, ನಾರ್ಮಲ್ ಡೆಲಿವರಿ ಮಾಡುವುದು ಕಷ್ಟಕರ ಆಗುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon