Link copied!
Sign in / Sign up
44
Shares

ಬಾಯಲ್ಲಿ ನೀರಿಳಿಸುವ ಕ್ಯಾರಟ್ ಹಲ್ವಾ ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ತಯಾರಿಸಿ ಹೀಗೆ !

ಕ್ಯಾರಟ್ ಹಲ್ವಾ ಎಲ್ಲರು ಇಷ್ಟಪಡುವ ಸಿಹಿ ತಿನಿಸು. ಸಿಹಿ ಎಂದರೆ ಸಾಮಾನ್ಯವಾಗಿ ಎಲ್ಲರಿಗು ಇಷ್ಟ, ಮಕ್ಕಳು ಕೇಳುವುದು ಸಿಹಿಯನ್ನೇ, ನಿಮಗೆ ಮನೆಯಲ್ಲಿ ಏನಾದರು ಸಿಹಿ ಮಾಡಬೇಕು ಅನಿಸಿದರೆ ನಿಮ್ಮ ಮನಸ್ಸಿನಲ್ಲಿ ಹಲವು ಬಗೆಯ ಸಿಹಿ ತಿನಿಸುಗಳು ಬರುತ್ತವೆ. ಆದರೆ ಸುಲಭವಾಗಿ ರುಚಿಯಾಗಿ ಎಲ್ಲರು ಇಷ್ಟಪಡುವ ತಿನಿಸನ್ನು ಮಾಡುವುದು ನಿಮ್ಮ ಚಾಣಾಕ್ಷತನವನ್ನು ತೋರಿಸುವ ಜೊತೆಗೆ ನಿಮ್ಮ ಮೇಲಿನ ಪ್ರೀತಿಯನ್ನು ನೀವು ಮತ್ತಷ್ಟು ಹೆಚ್ಚಿಸಿಕೊಳ್ಳುವಿರಿ. ಮನೆಯಲ್ಲೇ ಇರುವ ಪದಾರ್ಥಗಳಿಂದ ಕೇವಲ ೨೦-೩೦ ನಿಮಿಷದಲ್ಲಿ ತಟ್ಟಂತೆ ಸವಿಯಾದ ರುಚಿಕರವಾದ ಕ್ಯಾರಟ್ ಹಲ್ವಾವನ್ನು ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ.


ಇದನ್ನು ಮಾಡಲು ಬೇಕಾಗಿರುವ ಪದಾರ್ಥಗಳು

೧.ಒಂದೂವರೆ ಕೆ.ಜಿ ಕ್ಯಾರಟ್

 

೨.ಏಲಕ್ಕಿ - 10

 

೩.ದಾಲ್ಚಿನ್ನಿ - 2

 

೪.ಸಕ್ಕರೆ - 500 ಗ್ರಾಂ

 

೫.ಹಸುವಿನ ತುಪ್ಪ - 250 ಗ್ರಾಂ

 

೬.ಹಾಲು - ಅರ್ಧ ಲೀಟರ್ (ಅಥವಾ ಕೋಯ - 400 ಗ್ರಾಂ

 

೭.ಸ್ವಲ್ಪ ಬಾದಾಮಿ

ಮೇಲಿನ ಪ್ರಮಾಣ ಪೂರ್ಣ ೬ ಜನರಿಗೆ ನೀಡಬಹುದು, ನಿಮಗೆ ಎಷ್ಟು ಪ್ರಮಾಣ ಬೇಕು ಅದರ ಆಧಾರದಮೇಲೆ ಪ್ರಮಾಣವನ್ನು ನಿರ್ಧರಿಸಿಕೊಳ್ಳಿ.


ಮಾಡುವ ವಿಧಾನ

೧.ಕ್ಯಾರಟ್ ಅನ್ನು ತುರಿದುಕೊಳ್ಳಿ, ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ, ಇದಕ್ಕೆ ತುರಿದುಕೊಂಡಿರುವ ಕ್ಯಾರಟ್ ಅನ್ನು ಹಾಕಿ ಒಲೆಯಮೇಲೆ ಇಡಿ, ನೀರನ್ನು ಕ್ಯಾರಟ್ ಇರಿಕೊಳ್ಳುವವರೆಗೂ ಅದನ್ನು ತಿರುಗಿಸುತ್ತಿರಿ.

೨.ನಂತರ ಇದಕ್ಕೆ ಏಲಕ್ಕಿ (ಪುಡಿ/ಅಥವಾ ಬೀಜಗಳು), ದಾಲ್ಚಿನ್ನಿ, ಮತ್ತು ಸಕ್ಕರೆಯನ್ನು ಸೇರಿಸಿ, ಬೇಯಲು ಬಿಡಿ. ನಂತರ ಇದಕ್ಕೆ ತುಪ್ಪವನ್ನು ಹಾಕಿ ೬-೮ ನಿಮಿಷ ಬೇಯಲು ಬಿಡಿ.

೩.ನಂತರ ಇದಕ್ಕೆ ಹಾಲು ಅಥವಾ ಕೊಯವನ್ನು ಸೇರಿಸಿ.

೪.ಚೆನ್ನಾಗಿ ಮಿಶ್ರಿಸಿ, ಬೆಂದ ನಂತರ ಇದರ ಮೇಲೆ ಬಾದಾಮಿ ಬೀಜಗಳಿಂದ ಮತ್ತು ದ್ರಾಕ್ಷಿ ಗೋಡಂಬಿಯಿಂದ ಅಲಂಕರಿಸಿ.

೫.ನಿಮ್ಮ ಮನೆಯವರಿಗೆ ಸವಿಯಲು ನೀಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon