Link copied!
Sign in / Sign up
0
Shares

ಬೆಂಗಳೂರಿನಲ್ಲಿ ತಾಯಿ ಮಗು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.


ಬೆಂಗಳೂರಿನಲ್ಲಿ ತಾಯಿ ಮಗು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.


ನೆನ್ನೆ ಬೆಂಗಳೂರಿನಲ್ಲಿ ನಡೆದ ಘಟನೆ ಎಲ್ಲರ ಮನ ಕಲುಕುತ್ತದೆ. ವೈಟ್ ಫೀಲ್ಡ್( Whitefiled) ನಲ್ಲಿ ನ ನಿವಾಸಿಗಳಾದ 30 ವಯಸ್ಸಿನ ನೇಹಾ ವರ್ಮ ಮತ್ತು ಅವರ 4 ವರ್ಷದ ಮಗು ಪರಮ್ ಸಾವಿಗೀಡಾದವರು.

ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದ ಇವರು ಸುಮಾರು 12.30 ವೇಳೆಗೆ ಹೊರಹೋಗಿದ್ದರು ಎಂದು ತಿಳಿದುಬಂದಿದೆ, ಹಿಂತಿರುಗಿದಾಗ ಅಪಾರ್ಟ್ಮೆಂಟ್ ಬೇಸ್ ಮೆಂಟ್ ನಲ್ಲಿ ತಮ್ಮ ಕಾರು ಮಾರುತಿ ರಿಟ್ಜ್ ಅನ್ನು ನಿಲ್ಲಿಸಿದರು. ಅಲ್ಲೇ ಇದ್ದ ಸೆಕ್ಯೂರಿಟಿಗೆ ಭಾರಿ ಶಬ್ದ ಕೇಳಿಸಿತು, ತಕ್ಷಣ ಸ್ಥಳಕ್ಕೆ ಬಂದ ಸೆಕ್ಯುರಿಟಿಗಳು ಕಾರ್ ನಲ್ಲಿನ ಹೋಗೆ ನೋಡಿದರು ,ನೀರನ್ನು ಎರಚಿ ಆರಿಸಲು ಪ್ರಯತ್ನಿಸಿದರು. ಆದರೆ ಕಾರ್ ನಲ್ಲಿ ಬೆಂಕಿ ಹೆಚ್ಚಾಗಿ ಕಾರ್ ತುಂಬ ಆವರಿಸಿತು. ತಕ್ಷಣ ಸೆಕ್ಯೂರಿಟಿ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದರು. ಅವರು ಬರುವಷ್ಟರಲ್ಲಿ ಕಾರ್ ಸಂಪೂರ್ಣ ಸುಟ್ಟುಹೋಗಿತ್ತು . 

ಯಾರಿಗೂ ಕಾರ್ ನ ಒಳಗೆ ತಾಯಿ ಮತ್ತು ಮಗು ಇರುವುದು ತಿಳಿದಿರಲಿಲ್ಲ 

ಬೆಂಕಿ ಆರುವ ವರೆಗೂ ಯಾರಿಗೂ ಕಾರ್ ನೊಳಗೆ ತಾಯಿ ಮಗು ಇರುವುದು ತಿಳಿದಿರಲಿಲ್ಲ. ನಂತರ ಕಾರ್ ಓಪನ್ ಮಾಡಿದ ಸಿಬ್ಬಂದಿಗಳಿಗೆ ಶಾಕ್ ಕಾದಿತ್ತು., ಮುಂದಿನ  ಸೀಟ್ ನಲ್ಲಿ ತಾಯಿ ಹಾಗು ಮಗು ಸುಟ್ಟು ಕಾರಕಲಾಗಿದ್ದರು. ಕಾರ್ ನಲ್ಲಿ ಬೆಂಕಿ ಆವರಿಸಿದ್ದು ಏಕೆಂದು ಯಾರಿಗೂ ತಿಳಿದಿಲ್ಲ.       

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon