Link copied!
Sign in / Sign up
3
Shares

ನಿಮ್ಮ ಈ 5 ಕೆಲಸಗಳು ಮಗುವಿನ ಬುದ್ದಿವಂತಿಕೆ ಮತ್ತು ನೆನಪಿನ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ!

ಗರ್ಭಧಾರಣೆಯು ಘಟನೆಗಳಿಂದಲೇ ಕೂಡಿರುತ್ತದೆ, ಅದರ ಬಗ್ಗೆ ಯಾವುದೇ ಸಂಶಯ ಬೇಡ, ಆದರೆ ಈ ಸಮಯದಲ್ಲಿ ನೀವು ಏನಾಗುತ್ತಿದೆ, ಏನೆಲ್ಲಾ ಮಾಡಬೇಕು, ಏನೆಲ್ಲಾ ಉಂಟಾಗುತ್ತಿದೆ ಎನ್ನುವುದನ್ನು ಗಮನಿಸುವುದರಲ್ಲೇ - ಈಗ ಮಾಡುವ ಕೆಲವು ಕೆಲಸಗಳಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಯೋಚಿಸುವುದೇ ಇಲ್ಲ. ನೀವು ಗರ್ಭಧಾರಣೆ ವೇಳೆ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಮತ್ತು ನಿಮಗೆ ಉಂಟಾಗುವ ಕೆಲವು ಸಂಗತಿಗಳು ಗರ್ಭಧಾರಣೆಯ ನಂತರವೂ ನಿಮ್ಮ ಮೇಲೆ ಪರಿಣಾಮಗಳನ್ನ ಬೀರಬಹುದು.

ನಿಮ್ಮ ಮಗುವಿನ ನಡವಳಿಕೆ ಮತ್ತು ಅದರ ಬುದ್ಹಿವಂತಿಕೆಯ ಮೇಲೆ ಗರ್ಭಧಾರಣೆಯಲ್ಲಿ ನಿಮಗೆ ಉಂಟಾಗುವ ಕೆಲವೊಂದು ವಿಷಯಗಳು ಹೇಗೆ ಪ್ರಭಾವ ಬೀರುತ್ತವೆಂದು ನಾವು ತಿಳಿಸುತ್ತೇವೆ ಓದಿ.

 

೧. ನೀವು ಮಗುವಿಗೆ ಜನ್ಮ ಕೊಡುವ ಸಮಯ

ನಿಮ್ಮ ಮಗು ಹೇಗೆ ಮತ್ತು ಯಾವಾಗ ಹೊರಬರುತ್ತದೆ ಎಂಬುದರ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣ ಇರಬಹುದು ಅಥವಾ ಇಲ್ಲದೆ ಇರಬಹುದು, ಆದರೆ ನೀವು ಎಷ್ಟು ತಿಂಗಳ ಗರ್ಭಿಣಿ ಆಗಿದ್ದಾಗ ನಿಮ್ಮ ಮಗುವಿಗೆ ಜನ್ಮ ನೀಡುತ್ತೀರಾ ಎನ್ನುವುದು ಭವಿಷ್ಯದಲ್ಲಿ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು. 2012 ರಲ್ಲಿ ಪೀಡಿಯಾಟ್ರಿಕ್ಸ್ ಅಲ್ಲಿ ಪ್ರಕಟಗೊಂಡ ಅಧ್ಯಯನವನ್ನು ನ್ಯೂ ಯಾರ್ಕ್ ಡೈಲಿ ಪತ್ರಿಕೆ ವರದಿ ಮಾಡಿದ್ದು, ಇದರ ಪ್ರಕಾರ 41 ವಾರಗಳ ಪ್ರೆಗ್ನನ್ಸಿ ನಂತರ ಹೊರಬಂದು ಮಕ್ಕಳು 37ನೇ ವಾರಕ್ಕೆ ಹೊರಬಂದ ಮಕ್ಕಳಿಗಿಂತ ಓದುವುದರಲ್ಲಿ ಮತ್ತು ಗಣಿತದಲ್ಲಿ ಹೆಚ್ಚಿನ ಪರಿಣಿತಿ ತೋರಿಸುತ್ತಾರೆ ಎಂಬುದು ತಿಳಿದು ಬಂದಿದೆ.

ಇದು ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ, ಆದರೂ ಇದು ನಿಮ್ಮ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಕುತೂಹಲಕಾರಿ ಮತ್ತು ಮುಖ್ಯವಾಗಿದೆ.

 

೨. ಒತ್ತಡ

ನೀವು ಗರ್ಭಿಣಿ ಆಗಿದ್ದಾಗ ಎಷ್ಟು ಮಾನಸಿಕ ಒತ್ತಡವನ್ನು ಅನುಭವಿಸಿದ್ದೀರಿ ಎಂಬುದು ಕೂಡ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ನಿಮ್ಮ ಮೆದುಳು ನಿಮ್ಮ ದೇಹದಲ್ಲಿ ಸ್ಟ್ರೆಸ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳಿಗೆ ನಿಮ್ಮ ಮಗು ತೆರೆದುಕೊಂಡಾಗ, ನೀವು ಅಂದುಕೊಂಡಿದ್ದಕಿಂತಲೂ ದೀರ್ಘಾವಧಿಯವರೆಗೆ ಅದರ ಮೇಲೆ ಪರಿಣಾಮಗಳು ಉಂಟಾಗುತ್ತವೆ. ಇಂತಹ ಮಕ್ಕಳ ಸ್ವಲ್ಪ ಬೆಳೆದಾಗ ಅವರ ಮೆದುಳುಗಳಲ್ಲಿ ಭಾವನೆಗಳನ್ನು ನಿಯಂತ್ರಿಸುವ ಭಾಗವು ತೆಳುವಾಗಿರುತ್ತದೆ ಎಂದು ಸಂಶೋಧಕರು ಎಲಿಸಿಯಾ ಡೇವಿಸ್ ಮತ್ತು ಪಿಲ್ಯಂಗ್ ಕಿಮ್ ಕಂಡು ಹಿಡಿದಿದ್ದಾರೆ.

 

೩. ವ್ಯಾಯಾಮ ಮಾಡುವುದು

ಗರ್ಭಿಣಿ ಆಗಿದ್ದಾಗ ತಿಳಿ ವ್ಯಾಯಾಮ ಮಾಡುವುದು ಒಳ್ಳೆಯದು ಎಂದು ಹೇಳುವುದನ್ನು ನೀವು ಕೇಳೇ ಇರುತ್ತೀರಿ. ಆದರೆ, ನಿಮಗೆ ಗೊತ್ತಿರದ ವಿಷಯ ಎಂದರೆ ಅದು ವ್ಯಾಯಾಮ ಮಾಡುವುದು ಕೇವಲ ನಿಮ್ಮ ಗರ್ಭಧಾರಣೆಗೆ ಅಷ್ಟೇ ಅಲ್ಲದೆ, ನಿಮ್ಮ ಮಗುವಿಗೂ ಒಳ್ಳೆಯದನ್ನು ಮಾಡುತ್ತದೆ. ಸಂಶೋಧಕರ ಪ್ರಕಾರ ಮಗುವಿನ ಮೆದುಳಲ್ಲಿ ಓದುವುದು ಮತ್ತು ನೆನಪಲ್ಲಿ ಇಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ ಭಾಗವಾದ ಹಿಪೋಕ್ಯಾಂಪಸ್ ಅಲ್ಲಿನ ನರಕೋಶಗಳನ್ನು 40% ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. 40% ಎಂದರೆ ಅದು ಸಣ್ಣ ಪ್ರಮಾಣವಲ್ಲ.ಆದರೆ, ಸಂಶೋಧಕರು ಈ ಪ್ರಯೋಗವನ್ನು ಇಲಿಗಳ ಮೇಲೆ ಮಾಡಿದ್ದು, ಮನುಷ್ಯರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಆದರೂ, ಗರ್ಭಿಣಿ ಆಗಿದ್ದಾಗ ಅಮ್ಮ ವ್ಯಾಯಾಮ ಮಾಡಿದರೆ,ಅದು ಮಗುವಿನ ಮೇಲೆ ಸಕಾರಾತ್ಮಕ ಪ್ರಭಾವಗಳನ್ನು ಬೀರುತ್ತದೆ ಎಂಬುದನ್ನು ಇತರೆ ಸಂಶೋಧನೆಗಳು ಸೂಚಿಸುತ್ತವೆ.

 

೪. ಬೆಳಗಿನ ಬೇನೆ (ಮಾರ್ನಿಂಗ್ ಸಿಕ್ನೆಸ್)

ಈ ಬೆಳಗಿನ ಬೇನೆ ಅಥವಾ ಮಾರ್ನಿಂಗ್ ಸಿಕ್ನೆಸ್ ಅನ್ನು ಯಾವ ತಾಯಿಯೂ ಇಷ್ಟಪಡುವುದಿಲ್ಲ, ಆದರೆ ಇದರ ಹಿಂದೆ ಒಂದು ಕುತೂಹಲಕಾರಿ ವಿಷಯವಿದೆ. 2009ರಲ್ಲಿ ಕೆನಡಾದ ಸಂಶೋಧಕರು ಅಮ್ಮನಿಗೆ ಉನ್ನತಾಗುವ ಬೆಳಗಿನ ಬೇನೆ ಮತ್ತು ಮಗುವಿನ ಬುದ್ದಿವಂತಿಕೆ ಹಾಗು ಮಾನಸಿಕ ಬೆಳವಣಿಗೆ ನಡುವೆ ಇರುವ ಸಂಬಂಧ ಇರಬಹುದು ಕಂಡು ಹಿಡಿದಿದ್ದಾರೆ. ಸಂಶೋಧಕರು ಬೆಳಗಿನ ಬೇನೆ ಹೆಚ್ಚು ಅನುಭವಿಸುತ್ತಿದ್ದ ಅಮ್ಮಂದಿರಿಗೆ ಜನಿಸಿದ ಮಕ್ಕಳು ಎಲ್ಲಾ ಮಕ್ಕಳಿಗೂ ಕೊಡುವ ಸಾಮಾನ್ಯ ಬುದ್ಧಿವಂತಿಕೆಯ ಪರೀಕ್ಷೆಯಲ್ಲಿ ಇತರರಷ್ಟೇ ಅಂಕಗಳನ್ನು ಗಳಿಸಿದರೂ, ಇವೆರೆಲ್ಲರೂ ಕೆಲವೊಂದು ನಿರ್ದಿಷ್ಟ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದರು. ಇದು ಬೆಳಗಿನ ಬೇನೆ ಮತ್ತು ಮಾನಸಿಕ ಬೆಳವಣಿಗೆ ನಡುವೆ ಸಂಬಂಧ ಇರಬಹುದು ಎಂಬ ಊಹೆಗೆ ಪುಷ್ಟಿ ಕೊಟ್ಟಿದೆ.

 

೫. ಹೆಚ್ಚು ಒಮೇಗಾ-3 ಫ್ಯಾಟಿ ಆಸಿಡ್ಸ್ ಸೇವಿಸುವುದು

ಗರ್ಭಿಣಿ ಆಗಿದ್ದಾಗ ನೀವು ಸೇವಿಸುವ ಆಹಾರ, ಪಾಲಿಸುವ ಆಹಾರಕ್ರಮ ಮುಖ್ಯವಾಗಿರುತ್ತದೆ. ಆದರೆ ನೀವು ಸೇವಿಸುವ ಆಹಾರಗಳು ಕೆಲವಷ್ಟು ಕಾರಣಗಳಿಗೆ ಮತ್ತಷ್ಟು ಮುಖ್ಯವಾಗುತ್ತವೆ. BBC ಸಂಸ್ಥೆಯು ಒಮೇಗಾ-3 ಫ್ಯಾಟಿ ಆಸಿಡ್ (ಕೊಬ್ಬಿನಾಮ್ಲ) ಇತರೆ ಆಹಾರಗಳಿಗಿಂತ ಹೆಚ್ಚು ಮುಖ್ಯವಾಗಿದೆ ಎಂದು ತಿಳಿಸಿದೆ. ಇದಕ್ಕೆ ಕಾರಣ ಕೂಡ BBCನೇ ನೀಡಿದೆ. ಅದೇನೆಂದರೆ ಸಂಶೋಧನೆ ಪ್ರಕಾರ ಒಮೇಗಾ-3 ಫ್ಯಾಟಿ ಆಸಿಡ್(ಕೊಬ್ಬಿನಾಮ್ಲ) ಮಾನಸಿಕ ಬೆಳವಣಿಗೆಯನ್ನು ವೃದ್ಧಿಸುತ್ತದೆ ಎಂಬುದು ತಿಳಿದು ಬಂದಿರುವುದು. ನೀವು ಸರಿಯಾದ ಆಹಾರವನ್ನು ಸೇವಿಸುತ್ತಿರುವಿರಾ ಎಂಬುದರ ಮೇಲೆ ಗಮನವಹಿಸಿ - ನಿಮ್ಮ ವೈದ್ಯರೊಡನೆ ಮಾತನಾಡಿ ಕೇಳಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon