Link copied!
Sign in / Sign up
39
Shares

ಭ್ರೂಣದಿಂದ ಮಗುವಾಗುವ ವರೆಗೆ ಸಂಪೂರ್ಣ ಚಿತ್ರಣ

ನೀವು ಗರ್ಭಿಣಿಯೇ, ಅಭಿನಂದನೆಗಳು! ನಿಮ್ಮ ಮಗು ಉದರದಲ್ಲಿ ಹೇಗೆ ಬೆಳೆಯುತ್ತದೆ ಎಂದು ತಿಳಿಯಲು ತುಂಬಾ ಉತ್ಸುಕರಾಗಿದ್ದೀರಾ, ನಿಮ್ಮ ಮಗು ನಿಮ್ಮ ಗರ್ಭದೊಳಗೆ ಹೇಗೆ ಕಾಣುತ್ತದೆ ಎಂಬುದನ್ನು ನೋಡಲು ಕಾತುರರಾಗಿರುವಿರಾ, ಮತ್ತು ನಿಮ್ಮ ಮಗು ಹೊಟ್ಟೆಯಲ್ಲಿ ಆಡುವುದನ್ನು ನೀವು ಯಾವಾಗ ಅನುಭವಿಸುವಿರಿ? ನಿಮ್ಮ ಈ ಎಲ್ಲಾ ಕಾತುರಗಳನ್ನು ನೋಡಲು ತಿಳಿಯಲು ಈ ಲೇಖನವನ್ನು ಓದಿ.

ಗರ್ಭಧಾರಣೆ

ವೀರ್ಯವು ಒಳನುಗ್ಗಿ ಸಂಭೋಗಗೊಂಡು ಮೊಟ್ಟೆಯ ಒಳಗೆ ತೂರಿಕೊಂಡಾಗ ಫಲವಂತಿಕೆಯಾಗುತ್ತದೆ. ಇದನ್ನು ಗರ್ಭ ನಿಂತಿದೆ ಎಂದು ಹೇಳುತ್ತಾರೆ. ಈ ಕ್ಷಣದಲ್ಲಿ, ಮಗುವಿನ ಲಿಂಗದ ಜೊತೆಗೆ, ಅನುವಂಶಿಕತೆ ಸಂಪೂರ್ಣವಾಗಿ ನಡೆಯುತ್ತದೆ. ಗರ್ಭ ನಿಂತ ಮೂರು ದಿನದೊಳಗಡೆ, ಫಲವತ್ತಾದ ಮೊಟ್ಟೆಯು ಅನೇಕ ಕೋಶಗಳಾಗಿ ಅತಿ ಬೇಗನೆ ವಿಭಜನೆಗೊಳ್ಳುತ್ತದೆ. ಇದು ಫಾಲೋಪಿಯನ್ ಟ್ಯೂಬ್ ಮೂಲಕ ಗರ್ಭಾಕೋಶಯದೊಳಗೆ ಹಾದುಹೋಗಿ, ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುತ್ತದೆ. ಜರಾಯು, ಮಗುವಿನ ರಕ್ಷಣೆಯನ್ನು ಮಾಡುತ್ತದೆ ಮತ್ತು ಮಗುವನ್ನು ರೂಪಿಸಲು ಪ್ರಾರಂಭಿಸುತ್ತದೆ.

೪ ವಾರಗಳಲ್ಲಿ ಬೆಳವಣಿಗೆ

ಈ ಹಂತದಲ್ಲಿ ಶಿಶುವು ತನ್ನ ಮುಖ ಮತ್ತು ಕತ್ತನ್ನು ಅಭಿವೃದ್ಧಿ ಮಾಡಿಕೊಂಡು, ತನ್ನ ರಚನೆಯ ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತದೆ. ಹೃದಯ ಮತ್ತು ರಕ್ತನಾಳಗಳ ಬೆಳವಣಿಗೆ ಮುಂದುವರೆಯುತ್ತದೆ, ಮತ್ತು ಶ್ವಾಸಕೋಶ, ಹೊಟ್ಟೆ ಮತ್ತು ಯಕೃತ್ತು(ಲಿವರ್) ಅಭಿವೃದ್ಧಿಯಾಗಲು ಪ್ರಾರಂಭಿಸುತ್ತವೆ.

೮ ವಾರಗಳ ಬೆಳವಣಿಗೆ

ಶಿಶುವು ಈಗ ಸ್ವಲ್ಪ ಮಟ್ಟಿಗೆ, ಅರ್ಧ ಇಂಚಿನ ಗಾತ್ರದಲ್ಲಿ ಬೆಳೆದಿರುತ್ತದೆ. ಕಣ್ಣುರೆಪ್ಪೆಗಳು ಮತ್ತು ಕಿವಿಗಳು ಅಭಿವೃದ್ಧಿಯಾಗಲು ಪ್ರಾರಂಭಿಸುತ್ತದೆ ಮತ್ತು ಮೂಗಿನ ತುದಿಯನ್ನು ನಾವು ಕಾಣಬಹುದು. ಕೈ ಮತ್ತು ಕಾಲುಗಳು ಬೆಳೆದಿರುತ್ತವೆ. ಕೈ ಬೆರಳುಗಳು, ಪಾದಗಳು ಬೆಳೆಯಲು ಆರಂಭಿಸುತ್ತದೆ.

೧೨ನೇ ವಾರದಲ್ಲಿ ಬೆಳವಣಿಗೆ

ಶಿಶುವು ಈಗ ೨ ಇಂಚು ಗಾತ್ರ ಬೆಳೆದಿದ್ದು, ತಾನಾಗಿ ತನ್ನ ಕೈ, ಕಾಲುಗಳನ್ನು ಆಡಿಸಲು ಶುರುಮಾಡುತ್ತದೆ. ನಿಮ್ಮ ಮಗುವು ಆಡುವುದನ್ನು ಸ್ವಲ್ಪ ಮಟ್ಟಿಗೆ ನೀವು ಈಗ ಅನುಭವಿಸಬಹುದು. ವಿಶೇಷ ಉಪಕರಣಗಳಿಂದ ನಿಮ್ಮ ಮಗುವಿನ ಹೃದಯ ಬಡಿತವನ್ನು ವೈದ್ಯರು ಕೇಳಬಹುದು. ಮಗುವಿನ ಲೈಂಗಿಕ ಅಂಗಗಳು ಈಗ ಸ್ಪಷ್ಟವಾಗಿ ಗೋಚರಿಸುತ್ತವೆ.

೧೬ನೇ ವಾರ

ಶಿಶುವು ಈಗ ೪.೩ ಇಂದ ೪.೬ ಇಂಚು ಇರಬಹುದು ಮತ್ತು ಶಿಶುವು ೮೦ ರಿಂದ ೯೦ ಗ್ರಾಂ. ತೂಕವನ್ನು ಹೊಂದಿರುತ್ತದೆ. ನಿಮ್ಮ ಗರ್ಭಾಶಯದ ಮೇಲಿನಿಂದ ನಿಮ್ಮ ಸೊಂಟದ ಕೆಳಗಿನವರೆಗೆ ಮಗು ಇರುವುದನ್ನು ನೀವು ಅನುಭವಿಸಬಹುದು. ಮಗುವು ಕಣ್ಣನ್ನು ಮಿಟುಕಿಸಬಹುದು. ಹೃದಯ ಮತ್ತು ರಕ್ತನಾಳಗಳು ಸಂಪೂರ್ಣವಾಗಿ ಬೆಳೆವಣಿಗೆ ಆಗಿರುತ್ತದೆ.

೨೦ನೇ ವಾರ

ಶಿಶುವು ೨೮೦ ಗ್ರಾಂ. ನಷ್ಟು ತೂಕ ಹೊಂದಿ, ೬ ಇಂಚಿನಷ್ಟು ಉದ್ದ ಬೆಳೆಯುತ್ತದೆ. ಈ ಸಮಯದಲ್ಲಿ ಮಗುವು ತನ್ನ ಬೆರಳನ್ನು ಚೀಪುತ್ತದೆ, ಆಕಳಿಸುತ್ತದೆ, ತನ್ನ ಚಲನವಲನಗಳನ್ನು ಮಾಡುತ್ತದೆ. ಮಗುವು ಆಡುತ್ತಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಮತ್ತು ಮಗುವು ಒದೆಯುದನ್ನು ನೀವು ಅನುಭವಿಸಬಹುದು.

೨೪ನೇ ವಾರ

ಶಿಶುವು ಈಗ ೬೮೦ಗ್ರಾಂ. ತೂಕ ಹೊಂದಿದ್ದು, ಶಬ್ದಕ್ಕೆ ಕೈ, ಕಾಲು ಆಡಿಸುವ ಅಥವಾ ಚಲನವಲನ  ಮಾಡುವ ಮೂಲಕ ತನ್ನ ಪ್ರತಿಕ್ರಿಯೆಯನ್ನು ನೀಡುತ್ತದೆ. ಶಿಶುವು ಬಿಕ್ಕಳಿಸಿದಾಗ ನಿಮಗೆ ಹೊಟ್ಟೆಯೊಳಗಡೆ ಅಲುಗಾಡಿಸಿದ ಅನುಭವವನ್ನು ಕಾಣಬಹುದು.

೨೮ನೇ ವಾರ

ಶಿಶುವು ಈಗ ಹತ್ತಿರ ೧ಕೆ.ಜಿ. ತೂಕ ಹೊಂದಿ, ತನ್ನ ಸ್ಥಾನವನ್ನು ಬದಲಿಸಿಕೊಳ್ಳಲು ಶುರು ಮಾಡುತ್ತದೆ. ನೀವು ಈಗ ಅಕಾಲಿಕವಾಗಿ ಮಗುವಿಗೆ ಜನ್ಮ ನೀಡಬೇಕಾದರೆ, ಮಗುವು ಬದುಕುಳಿಯುವ ಸಾಧ್ಯತೆ ಇದೆ. ಇಲ್ಲಿಂದ ಮುಂದಕ್ಕೆ ನೀವು ಹೆರಿಗೆ ಸಮಯಕ್ಕೆ ಸಜ್ಜಾಗಬೇಕು.

೩೨ನೇ ವಾರ

ಮಗುವು ಈಗ ೧.೯ ಕೆ.ಜಿ. ತೂಕವನ್ನು ಪಡೆದುಕೊಳ್ಳುತ್ತದೆ. ಈಗಿನಿಂದ ಮತ್ತು ಹೆರಿಗೆಯ ಸಮಯದೊಳಗೆ, ನಿಮ್ಮ ಮಗುವು ಜನನದ ಅರ್ಧದಷ್ಟು ತೂಕವನ್ನು ಗಳಿಸುತ್ತದೆ. ಈ ಸಮಯದಲ್ಲಿ ಕೆಲವರಿಗೆ ಸ್ವಲ್ಪ ಹಳದಿಯುಕ್ತ ದ್ರವ ಮೊಲೆಯಿಂದ ಬರಬಹುದು. ಅದು ಕೊಲೆಸ್ಟ್ರಮ್, ಇದು ಮೊಲೆಯಲ್ಲಿ ಹಾಲು ಉತ್ತ್ಪತಿಯಾಗುತ್ತಿರುವುದನ್ನು ಸೂಚಿಸುತ್ತದೆ.

೩೬ನೇ ವಾರ

ಅನೇಕ ಅಂಶಗಳನ್ನು ಅವಲಂಭಿಸಿ, ಮಗುವಿನ ಗಾತ್ರದಲ್ಲಿ ಭಿನ್ನವಾಗಿರುತ್ತವೆ, ಅದು ಲಿಂಗ, ಹೊಟ್ಟೆಯಲ್ಲಿ ಎಷ್ಟು ಮಗುವಿದೆ, ಇತ್ಯಾದಿ ಅಂಶಗಳಿಂದ. ಸರಾಸರಿ, ಈ ಸಮಯದಲ್ಲಿ, ೧೮.೫ ಇಂಚಿನಷ್ಟು ಉದ್ದ, ಮತ್ತು ೨.೫ ಇಂದ ೩ ಕೆ.ಜಿ. ಯಷ್ಟು ತೂಕವಿರುತ್ತವೆ. ತಲೆಯು ಹೆರಿಗೆಗೆ ಸುಲಭವಾಗುವಂತೆ ಕೆಳಗಡೆಗೆ ತಿರುಗುತ್ತದೆ. ಈ ಸಮಯದಿಂದ ನಿಮಗೆ  ಯಾವಾಗ ಬೇಕಾದರೂ ಹೆರಿಗೆ ನೋವು ಕಾಣಿಸಿಕೊಳ್ಳಬಹುದು.

ಹೆರಿಗೆ ಸಮಯ

ಹೆರಿಗೆ ದಿನಾಂಕವನ್ನು ಅವಳ ಕೊನೆಯ ಋತುಚಕ್ರದ ಮೊದಲ ದಿನವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಇದರ ಆಧಾರದ ಮೇಲೆ, ಹೆರಿಗೆಯೂ ೩೮-೪೦ನೇ ವಾರದಲ್ಲಿ ಯಾವಾಗ ಬೇಕಾದರೂ ಆಗಬಹುದು. ೪೦ವಾರಗಳ ನಂತರದ ಹೆರಿಗೆಯನ್ನು ತಡವಾದ ಜನನ ಎಂದು ಹೇಳುವರು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon